Friday 3rd, May 2024
canara news

ಕ್ರಿಸ್ಮಸ್ ಆಚರಣೆಗೆ ಕಡಲನಗರಿಯಲ್ಲಿ ಭರದ ಸಿದ್ಧತೆ

Published On : 17 Dec 2017   |  Reported By : Canaranews network

ಮಂಗಳೂರು: ಕ್ರಿಸ್ಮಸ್ ಆಚರಣೆಗೆ ಮಂಗಳೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.ಕ್ರಿಸ್ಮಸ್ ಆಚರಣೆಯ ಮೊದಲ ಹಂತದ ಆಗಮ ಕಾಲ ಪೂರ್ಣಗೊಳ್ಳುತ್ತಿದ್ದು, ಚರ್ಚ್ ಆವರಣದೊಳಗೆ ನಕ್ಷತ್ರಗಳು ಆಕಾಶಕ್ಕೆ ಏರಿದೆ. ಬಲೂನ್ಗಳ ಚಿತ್ತಾರ, ಹಚ್ಚ ಹಸುರಿನ ಎತ್ತರದ ಕ್ರಿಸ್ಮಸ್ ಟ್ರೀಗಳು ಕಂಗೊಳಿಸುತ್ತಿದೆ.

ಪ್ರಭು ಏಸುವನ್ನು ಬರಮಾಡಿಕೊಳ್ಳಲು ವಿಭಿನ್ನ ವಿನ್ಯಾಸದ ಗೋದಲಿಗಳ ತಯಾರಿ, ಸಾಂತಾಕ್ಲಾಸ್ನ ಪ್ರತಿಬಿಂಬ, ಗಂಟೆ ಹೀಗೆ ನಾನಾ ತಯಾರಿಗಳ ಮೂಲಕ ಸಡಗರ, ಸಂಭ್ರಮದಿಂದ ಏಸುವಿನ ಜನ್ಮ ದಿನವನ್ನು ಆಚರಿಸಲು ತಯಾರಿಗಳು ಸಾಗಿವೆ.ಮಂಗಳೂರು ನಗರದ ನಾನಾ ಕಡೆ ಫ್ಯಾನ್ಸಿ ಸ್ಟೋರ್ಗಳಲ್ಲಿ ಮೇರಿ ಕ್ರಿಸ್ಮಸ್ ಸಂದೇಶದ ಕ್ರಿಸ್ಮಸ್ ಕಾರ್ಡ್ಗಳು, ಉಡುಗೊರೆಗಳು, ಏಸು ಕ್ರಿಸ್ತ ಮತ್ತು ಮೇರಿಮಾತೆಯ ಭಾವಚಿತ್ರಗಳು, ವಿಭಿನ್ನ ವಿನ್ಯಾಸದ ಕ್ಯಾಂಡಲ್ಗಳು, ಸಾಂತಾಕ್ಲಾಸ್ನ ಪ್ರತಿಬಿಂಬ, ಗೃಹಾಲಂಕಾರಕ್ಕೆ ಅಗತ್ಯವಾದ ತೋರಣಗಳ ಖರೀದಿ ಭರಾಟೆ ಜೋರಾಗಿ ನಡೆದಿದೆ.

More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here