Saturday 4th, May 2024
canara news

ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲಾ ವಾರ್ಷಿಕೋತ್ಸವ

Published On : 17 Dec 2017   |  Reported By : Bernard D'Costa


ಕುಂದಾಪುರ,ಡಿ.17: ಕುಂದಾಪುರದ ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವವು ಶಾಲಾ ಮೈದಾನದಲ್ಲಿ ನೆಡೆಯಿತು. ಇದರ ಅಧ್ಯಕ್ಷತೆಯನ್ನು ಕಾರ್ಮೆಲ್ ಶಿಕ್ಶಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸಿಸ್ಟರ್ ಕೀರ್ತನ ಇವರು ವಹಿಸಿ ‘ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆ, ಸಾಂಸ್ಕ್ರತಿಕ ಮತ್ತು ಇತರ ವಿಷಯಗಳಿಗೆ ಕೂಡ ಪ್ರಾಧ್ಯನತೆ ನೀಡಿದರೆ, ಮಕ್ಕಳ ಸರ್ವಾಂಗಿಣ ಅಭಿವ್ರದ್ದಿ ಆಗುತ್ತದೆ’ ಎಂದು ಸಂದೇಶ ನೀಡಿದರು.

ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವ|ಅನಿಲ್ ಡಿಸೋಜಾರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ‘ಈ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ಮಾತ್ತು ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಟ್ಟು ಸರ್ವೊತ್ತಮ ಅಭಿವ್ರದ್ದಿಗೆ ಶ್ರಮಿಸುತ್ತದೆ’ ಎನ್ನುತ್ತಾ ವಾರ್ಷೀಕೋತ್ಸವಕ್ಕೆ ಆಶಿರ್ವಚನ ನೀಡಿ ಶುಭ ಕೋರಿದರು. ರೋಜರಿ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ‘ಮಕ್ಕಳು ವಿಧ್ಯೆಯ ಜೊತೆ ಸುಸಂಸ್ಕ್ರತಿಯನ್ನು ಬೆಳೆಸಿಕೊಳ್ಳ ಬೇಕು, ವಿಧ್ಯೆ ಪಡೆದರೆ ಮಾತ್ರ ಸಾಲದು, ಸಮಾಜ ಸೇವೆ ಮಾಡುವ ಗುಣವನ್ನು ಕೂಡ ಬೆಳಿಸಿಕೊಳ್ಳ ಬೇಕು’ ಎಂದು ನುಡಿದರು. ಮತ್ತೋರ್ವ ಅತಿಥಿ ಶ್ರೀ ಪ್ರಸನ್ನ ಕುಮಾರ್ ಮಾತಾಡಿ ‘ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಸಾಂಸ್ಕ್ರತಿಕ, ಸಮಾಜದ ಇತರ ಚಟುವಟಿಕೆಗಳಿಗೆ ಉತ್ತಮ ವೇದಿಕೆ, ಸಭಾ ಕಂಪನವನ್ನು ಹೋಗಲಾಡಿಸುತ್ತದೆ, ಮಾತಾಡಾಲು ಧೈರ್ಯ ಬರುತ್ತೆ, ಸಮಾಜ ಸೇವೆಗೆ ಅಣಿಯಾಗಲು ಸಹಾಯಕವಾಗುತ್ತದೆ’ ಎಂದು ನುಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸತೀಶ್ ಮೇಸ್ತಾ ಶುಭ ಕೋರಿದರು.

ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಾಯ್ಲೆಟ್ ತಾವ್ರೊ ಶಾಲ ವರದಿಯನ್ನು ವಾಚಿಸಿದರು. ಸಿಸ್ಟರ್ ಸಿಲ್ವಿಯಾ ಸ್ವಾಗತ ಕೋರಿದರು. ಅತಿಥಿಗಳು ಆಟ ಪಾಠಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಶಿಕ್ಷಕಿ ಸರ್ಸವತಿ ವಂದಿಸಿದರು, ಶಿಕ್ಷಕ ಮೈಕಲ್ ಪುಟಾರ್ಡೊ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಮಕ್ಕಳಿಂದ ವೈವಿಧ್ಯಮಯ ನ್ರತ್ಯ, ಕಿರು ನಾಟಕ, ರೂಪಕಗಳ ಪ್ರದರ್ಶನ ನೆಡೆಯಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here