Friday 3rd, May 2024
canara news

ಕಟೀಲಿನಲ್ಲಿ "ಕ೦ಬಳಬೆಟ್ಟು ಭಟ್ರೆನ ಮಗಲ್" ತುಳು ಸಿನೆಮಾಗೆ ಮೂಹೋರ್ತ

Published On : 18 Dec 2017   |  Reported By : Roshan Kinnigoli


ಕಂಬಳಬೆಟ್ಟು ಭಟ್ರೆನ ಮಗಲ್ ತುಳು ಸಿನಿಮಾ ಕೇವಲ ಕಾಮೆಡಿಗೆ ಮಾತ್ರ ಸೀಮಿತವಾಗಿರದೆ ಧನಾತ್ಮಕ ಚಿಂತನೆಯ ಕಥೆಯಿಂದ ಕೊಡಿದೆ ಎಂದು ಚಿತ್ರದ ನಿರ್ದೇಶಕ ಶರತ್ ಹೇಳಿದರು ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಕಂಬಳಬೆಟ್ಟು ಭಟ್ರೆನ ಮಗಲ್ ಚಿತ್ರದ ಮೂಹೋರ್ತ ಸಮಾರಂಭದಲ್ಲಿ ಮಾತನಾಡಿದರು, ತುಳು ಸಂಸ್ಕ್ರತಿ ಸಂಸ್ಕಾರ ಸಿನಿಮಾದಲ್ಲಿ ಮೂಡಿ ಬರಲ್ಲಿದ್ದು ಮೈಸೂರು ಬೆಂಗಳೂರು, ಪಾಂಡವಪುರ, ಕಳಸ, ಚಿಕ್ಕಮಂಗಳೂರು ಮತ್ತಿರರ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲ್ಲಿದ್ದು, ಪಮುಖ ಪಾತ್ರದಲ್ಲಿ ಐಶ್ವರ್ಯ ಎಂಬ ಯುವತಿ ಪ್ರಥಮ ಬಾರಿಗೆ ಕ್ಯಾಮಾರ ಎದುರಿಸಲಿದ್ದಾಳೆ.

ಉಳಿದಂತೆ ಅರವಿಂದ ಬೋಳಾರ್, ಬೋಜರಾಜ ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ಶಂಕರ್ ಭಟ್ ಮತ್ತಿತರರು ಅಬಿನಯಿಸಲಿದ್ದಾರೆ, ಸಿನಿಮಾದಲ್ಲಿ ಒಟ್ಟು 5 ಹಾಡುಗಳಿದ್ದು, ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳಲ್ಲಿದೆ, ಸುಮಾರು 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಮಾ ನಿರ್ಮಾಣಗೊಳ್ಳಲಿದೆ, ಚಿತ್ರಕ್ಕೆ ಶಿನಾಯಿ ಜೋಸೆಪ್ ಅವರ ಸಂಗೀತವಿದ್ದು , ಎಲ್ದೂಸ್ ಅವರ ಸಹ ನಿರ್ದೇಶನ, ಯೋಗೀಶ್ ಉಪ್ಪೂರು ಕಲಾ ನಿರ್ದೆಶನವಿದೆ, ಪ್ರಕಶ್ ಗಟ್ಟಿಯವರ ಸಂಪೂರ್ಣ ನಿರ್ವಹಣೆಯಿದೆ, 2018 ರ ಎಪ್ರೀಲ್ ಅಥವಾ ಮೇ ಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದರು. ಕಟೀಲು ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ ಮಾತನಾಡಿ ತುಳು ಚಿತ್ರರಂಗ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು.

ಈ ಚಿತ್ರ ನಿರ್ವಿಘ್ನತೆಯಿಂದ ಚಿತ್ರೀಕರಣಗೊಂಡು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು, ಕಟೀಲು ದೇವಳದ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಕ್ಲಾಪ್ ತೋರಿಸಿ ಶುಭಾಶಂಸನೆಗೈದರು, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಕ್ಯಾಮಾರ ಚಾಲನೆ ಮಾಡಿದರು. ತುಳು ಲಿಪಿಯಲ್ಲಿದ್ದ ಚಿತ್ರದ ಟೈಟಲ್ ಕನ್ನಡಕ್ಕೆ ಅನುವಾದಿಸಿದ ವಿಂದ್ಯಾ ಶೆಟ್ಟಿ ಹಾಗೂ ಗುರು ಪ್ರಸಾದ್ ಅವರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಸಂದರ್ಭ ನಿರ್ಮಾಪಕ ಸುಬ್ರಮಣ್ಯ ಸಾಲಿಯಾನ್, ನಿರ್ದೇಶಕ ಶರತ್, ದೇವಪ್ಪ ಗಟ್ಟಿ ರಮೆಶ್ ರೈ ಕುಕ್ಕುವಳ್ಳಿ, ಪ್ರಕಾಶ್ ಪೂಂಜ, ಚಿದಾನಂದ, ಶಂಕರ್ ಭಟ್, ವಿಕ್ರಮ್ ಮಾಡ, ಮತ್ತಿತರರು ಇದ್ದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here