Saturday 4th, May 2024
canara news

ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

Published On : 19 Dec 2017   |  Reported By : Bernard J Costa


ಮಕ್ಕಳ ಸಮಸ್ಯೆಗೆ ಹೆತ್ತವರು ಪ್ರೀತಿಯಿಂದ ಸ್ಪಂದಿಸ ಬೇಕು

ಕುಂದಾಪುರ, ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಕಥೋಲಿಕ್ ಶಿಕ್ಷಣ ಮಂಡಳಿಯ ಜಂಟಿ ಕಾರ್ಯದರ್ಶಿ ರೆ|ಫಾ|ಅನಿಲ್ ಡಿಸೋಜಾರವರ ಅಧ್ಯಕ್ಷೆತೆಯಲ್ಲಿ ನೆಡೆಯಿತು ‘ವಿದ್ಯಾರ್ಥಿಗಳಿಗೆ ತಮ್ಮದೆ ಆದ ಸಮಸ್ಯೆಗಳಿರುತ್ತವೆ, ಆ ಸಮಸ್ಯೆಗೆ ಹೆತ್ತವರು ಪೆÇೀಷಕರು ಪ್ರೀತಿಯಿಂದ ಸ್ಪಂದಿಸ ಬೇಕು. ಶಿಸ್ತು ನೆಡತೆ ಒಳ್ಳೆಯ ಗುಣಗಳು ಮನುಷ್ಯನಿಗೆ ಅಗತ್ಯ, ಇದನ್ನು ಹೆತ್ತವರು ಅಳವಡಿಸಿಕೊಂಡಲ್ಲಿ ಮಕ್ಕಳು ಅದನ್ನು ಜೀವನದಲ್ಲಿ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ, ಶಾಲೆಯಲ್ಲಿ ಕೂಡ ಉತ್ತಮ ಶಿಕ್ಷಣ ಮತ್ತು ನೀತಿ ಪಾಠಗಳಿಂದ ಮಕ್ಕಳನ್ನು ಮುಂದಿನ ಉತ್ತಮ ನಾಗರಿಕನನ್ನಾಗಿ ಮಾಡಲು ಶ್ರಮಿಸುತ್ತದೆ’ ಎಂದು ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಮುಖ್ಯೊಪಾಧ್ಯರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ‘ಅಂಕಗಳು ಹೇಗೆ ಮುಖ್ಯವೋ, ಹಾಗೆ ಒಳೇಯ ನೆಡತೆ ಕೂಡ ವಿದ್ಯಾರ್ಥಿಗೆ ಮುಖ್ಯ. ಮಕ್ಕಳಿಗೆ ಹೆತ್ತವರಾದ ನಾವು ಪ್ರೀತಿಯನ್ನು ನೀಡುವ. ಇತರರ ಮಕ್ಕಳನ್ನು ನಿಮ್ಮ ಮಕ್ಕಳಿಗೆ ಹೊಲಿಸ ಬೇಡಿ’ ಎಂದು ನುಡಿದರು. ಮತ್ತೊರ್ವ ಅತಿಥಿ ಪ್ರಕಾಶ ಚಂದ್ರ ಶೆಟ್ಟಿ ‘ನಾವು ಸಮಾಜ ಗುರುತಿಸುವಂತ ಕೆಲಸ ಕಾರ್ಯಗಳನ್ನು ಮಾಡ ಬೇಕು, ಇದಕ್ಕೆ ಶಿಕ್ಷಕರು ಹಾಗೂ ಪೆÇೀಷಕರು ಇದಕ್ಕೆ ಮಾರ್ಗದರ್ಶನ ನೀಡಬೇಕು. ಮಕ್ಕಳು ತಮ್ಮ ತಪ್ಪನ್ನು ತಿದ್ದಿಕೊಳಲು, ಪ್ರೀತಿಯಿಂದ ನೀಡುವ ಶಿಕ್ಷೆ ಅದು ತಪ್ಪಲ್ಲಾ ಎಂದು ನನ್ನ ಭಾವನೆ, ಅದಕ್ಕೆ ಪೆÇೀಷಕರು ಸಹಕರಿಸ ಬೇಕು’ ಎಂದು ಅವರು ನುಡಿದರು.

ಗೌರ್ವಾನಿತ ಅತಿಥಿಯಾಗಿ ರೆ|ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮತ್ತು ಇತರರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದರು. ಮುಖ್ಯೊಪಾಧ್ಯಯಿನಿ ಸಿಸ್ಟರ್ ಜೊಯ್ಸ್‍ಲಿನ್ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ರೆ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್, ರೋಜರಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ತರು ಹಾಗೂ ಶಾಲಾ ನಾಯಕ ಶ್ವಾನ್ ಪಾವ್ಲ್ ವೇದಿಕೆಯಲ್ಲಿ ಹಾಜರಿದ್ದರು. ವಿಧ್ಯಾರ್ಥಿಗಳು ಗಾಯನ, ನ್ರತ್ಯ, ಮತ್ತು ನಾಟಕಗಳನ್ನು ಪ್ರದರ್ಶಿಸಿದರು ಶಿಕ್ಷಕಿ ಸಿಸ್ಟರ್ ವೀಣಾ ವಂದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here