Saturday 4th, May 2024
canara news

ಬ್ಯಾರಿ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Published On : 20 Dec 2017   |  Reported By : Rons Bantwal


ದೇರಳಕಟ್ಟೆಯ ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ)ಯು ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಬ್ಯಾರಿ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವು ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‍ನ ಸಭಾಂಗಣದಲ್ಲಿ ಶನಿವಾರ ಜರಗಿತು.

ಕಥಾ ಸ್ಪರ್ಧೆಯ ವಿಜೇತರಾದ ಇಬ್ರಾಹೀಂ ಬಾತಿಷ್ ಗೋಳ್ತಮಜಲ್, ಶಮೀಮಾ ಕುತ್ತಾರ್, ಮುಹಮ್ಮದ್ ನಾಸಿರ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಸ್ವೀಕರಿಸಿದರು. `ಮೇಲ್ತೆನೆ'ಯ ಅಧ್ಯಕ್ಷ ಆಲಿಕುಂಞÂ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಉದ್ಯಮಿ ಬಿ.ಕೆ. ನಿಸಾರ್ ಅಹ್ಮದ್, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‍ನ ನಿರ್ದೇಶಕ ಅಮೀರ್ ಶಾಫಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಸದಸ್ಯ ಬಶೀರ್ ಅಹ್ಮದ್ ಕಿನ್ಯ ಅವರನ್ನು ಸನ್ಮಾನಿಸಲಾಯಿತು. ಅಕಾಡಮಿಯ ಸದಸ್ಯರಾದ ಬಶೀರ್ ಬೈಕಂಪಾಡಿ, ಹಸನಬ್ಬ ಮೂಡುಬಿದಿರೆ ಉಪಸ್ಥಿತರಿದ್ದರು.

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಯುವ ಕವಿಗಳಾದ ಬಾಪು ಅಮ್ಮೆಂಬಳ, ನೌಫಾಲ್ ಅಡ್ಕರೆ, ಸೈಫ್ ಕುತ್ತಾರ್, ಶಮ್ಮಿ ಪಾಣೇಲ, ಮುಆದ್ ಗೋಳ್ತಮಜಲು, ಝುಲೇಖಾ ಮುಮ್ತಾಝ್, ಮೇಲ್ತೆನೆ ಪದಾಧಿಕಾರಿಗಳಾದ ಟಿ. ಇಸ್ಮಾಯೀಲ್ ಮಾಸ್ಟರ್, ರಫೀಕ್ ಪಾಣೇಲ, ಬಶೀರ್ ಕಲ್ಕಟ್ಟ, ಆರೀಫ್ ಕಲ್ಕಟ್ಟ ಕವನ ವಾಚಿಸಿದರು.
ಮೇಲ್ತೆನೆ ಉಪಾಧ್ಯಕ್ಷ ಇಸ್ಮತ್ ಪಜೀರ್ ಸ್ವಾಗತಿಸಿದರು. ಸದಸ್ಯರಾದ ನಿಯಾಝ್ ಪಿ. ವಂದಿಸಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here