Wednesday 1st, May 2024
canara news

ಕೊಲ್ಲರಕೋಡಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಬೆಳ್ಳಿಹಬ್ಬ-ಗುರುವಂದನೆ

Published On : 21 Dec 2017   |  Reported By : Rons Bantwal


ಉಳ್ಳಾಲ. ಕೊಲ್ಲರಕೋಡಿ ಶಾಲಾ ಪರಿಸರದ ಹಿರಿಯರ ಬಹುದೊಡ್ಡ ಕನಸಾಗಿದ್ದ ಪ್ರೌಢಶಾಲೆ ಈಗಾಗಲೇ ಆರಂಭವಾಗಿದ್ದು ಆ ಮೂಲಕ ಐದಾರು ಕಿ. ಮೀ. ನಡೆದು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಈಗಿನ ವಿದ್ಯಾರ್ಥಿಗಳಿಗೆ ಇಲ್ಲ. ಶಿಕ್ಷಣವೇ ಬದುಕಿನ ಶಕ್ತಿಯಾಗಿದ್ದು ಬಡತನ ನಿವಾರಣೆ ಸ್ವಾಭಿಮಾನದ ಬದುಕು ಬಾಳಬೇಕಾದರೆ ಶೈಕ್ಷಣಿಕವಾಗಿ ಬೆಳೆದರೆ ಮಾತ್ರ ಸಾಧ್ಯ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.

ಕೊಲ್ಲರಕೋಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸಂಘದ ಬೆಳ್ಳಿ ಹಬ್ಬದ ಸಮಾರೋಪ ಪ್ರಯುಕ್ತ ಭಾನುವಾರ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಪ್ರೇಮ ಬಾಯಿಯಲ್ಲಿ ಹೇಳಿದರೆ ಸಾಲದು. ದೇಶದ ಬಗ್ಗೆ ಕಿಂಚಿತ್ತು ಪ್ರೇಮ ಇದ್ದರೆ ನಾವು ಆಡುವ ಮಾತು, ನಾವು ಮಾಡುವ ಕೆಲಸ ಎಲ್ಲವೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಲಿ ಹೊರತು ಮಾರಕವಾಗದಿರಲಿ ಎಂದು ನುಡಿದರು.

ಸಾಮಾಜಿಕ ಜಾಲತಾಣಗಳು ನಮ್ಮ ನಡುವೆ ಪ್ರೀತಿ ವಿಶ್ವಾಸ ನಂಬಿಕೆ ಹುಟ್ಟಿಸುವ ಕೆಲಸ ಮಾಡಬೇಕು. ಅದು ಮುಗ್ಧರ ಮಾನಹರಣಕ್ಕೆ ಕಾರಣವಾಗಬಾರದು. ನಾನು ಶಾಸಕ‌ ಸಚಿವನಾಗಿ ರಾಜ್ಯ ಮಟ್ಟಕ್ಕೆ ಸೀಮಿತವಾಗಿದಗದೆ. ಆದರೆ ಕೆಲವು ಸಂಘಟನೆಯ ಸದಸ್ಯರು ಸಾಮಾಜಿಕ‌ ಜಾಲತಾಣಗಳಲ್ಲಿ ತನ್ನ ಬಗ್ಗೆ ಟೀಕೆ ಮಾಡುತ್ತಾ ಟಿಪ್ಪಣಿ ಬರೆಯುತ್ತಾ ಇಡೀ ಪ್ರಪಂಚಕ್ಕೆ ಯು. ಟಿ. ಖಾದರ್ ಅವರನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದೀರಿ. ನನಗೆ ಬೇಸರವಿಲ್ಲ ಆದರೆ ವಾಸ್ತವ ಏನೆಂದು ಅವರಿಗೂ ಗೊತ್ತು ಎಂದರು.
ಪ್ರತಿ ಗ್ರಾಮದಲ್ಲೂ ಊರಿನ ಸಮಸ್ಯೆ ಪರಿಹರಿಸುತ್ತಾ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಸಂಘ ಸಂಸ್ಥೆಗಳ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.

ಹಳೆವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಸಿದ್ದಿಕ್ ಪಾರೆ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ,

ಯೇನೆಪೋಯ ಸಂಸ್ಥೆಯ ನಿರ್ದೇಶಕ ಜಾವೇದ್ ಯೇನೆಪೋಯ,

ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ

ಟಿ.ಜಿ. ರಾಜಾರಾಮ್ ಭಟ್, ದೇರಳಕಟ್ಟೆಯ

ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು

ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ

ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ ರಾದ ಅಬ್ದುಲ್ ಖಾದರ್ ಚೌಕ, ಸದಸ್ಯೆ ಸುಜಾತಾ, ಸದಸ್ಯ ಫಯಾಜ್ ಮೊಂಟೆಪದವು, ಲತೀಫ್ ಕಾಪಿಕಾಡು, ಮುರಳೀಧರ ಶೆಟ್ಟಿ ಮೋರ್ಲ, ಹರ್ಷದ್ ವರ್ಕಾಡಿ, ನಿಯಾಝ್, ಖಲೀಲ್, ಮಂಗಳೂರು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ.ಎಂ ,ಕಾರ್ಯದರ್ಶಿ ಸಮೀರ್ ಪಜೀರು ಅಶ್ರಫ್ ಮೈಸೂರು, ಗಂಗಾಧರ್, ಬಿಜೆಪಿ ಅಲ್ಪಸಂಖ್ಯಾತ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವಾ, ಯುವ ಕಾಂಗ್ರೆಸ್ ಕಾರ್ಯದರ್ಶಿ ನಾಸಿರ್ ಎಸ್ ಎ, ಉದ್ಯಮಿ ಅನ್ಸಾಫ್, ಡಿವೈಎಫ್ ಐ ಉಳ್ಳಾಲ ವಲಯ ಜೀವನ್ ರಾಜ್ ಕುತ್ತಾರು, ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ, ಮೊಹಿದ್ದಿನ್ ಸಿಯಾಬ್, ಖಾಸಿಂ ಮುಂಬಯಿ ಹಾಗೂ ಶಾಲಾ ಮುಖ್ಯಶಿಕ್ಷಕಿ ಶೀಲಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಕೊಲ್ಲರಕೋಡಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರುಗಳಾದ ರಾಜೇಶ್ವರಿ , ಮಹಮ್ಮದ್ ಐ ಕಲ್ಕಟ್ಟ,

ಕಾತ್ಯಾಯಿನಿ ಹಾಗೂ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಲೆಗೆ ಪ್ರಶಸ್ತಿ ಪಾತ್ರರನ್ನಾಗಿಸಿದ ದೈಹಿಕ ಶಿಕ್ಷಕಿ ಮಮತಾ ಅವರನ್ನು ಗುರುವಂದನೆ ಕಾರ್ಯಕ್ರಮದಡಿಯಲ್ಲಿ ಮತ್ತು ಪೋಲಿಸ್ ಅಧಿಕಾರಿ ಶೃತಿರವರನ್ನು ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವಾಝ್ ಸ್ವಾಗತಿಸಿ, ಬೆಳ್ಳಿಹಬ್ಬದ ಪ್ರಯುಕ್ತ ಕೆದಂಬಾಡಿ-ಮಂಜನಾಡಿ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ, ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೇನೆಪೋಯ ಆಸ್ಪತ್ರೆಯ ಸಹಕಾರದಿಂದ ಬೃಹತ್ ರಕ್ತದಾನ ಶಿಬಿರ ನಡೆಸಿರುವುದನ್ನು ನೆನಪಿಸಿದರು. ಶಿಕ್ಷಕ ಚಂದ್ರಹಾಸ ರೈ ಕಾರ್ಯಕ್ರಮ ನಿರೂಪಿಸಿದರು. ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ವಿವೇಕಾನಂದ ರೈ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಸ್ಮೈಲ್ ಇವೇನಂಟ್ಸ್ ತಂಡದಿಂದ ಸಾಂಸ್ಕ್ರತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here