Wednesday 1st, May 2024
canara news

ತೀಯಾ ಸಮಾಜ ಮುಂಬಯಿ ಇದರ ಮುಖವಾಣಿ `ತೀಯಾ ಬೆಳಕು' 15ನೇ ವಾರ್ಷಿಕೋತ್ಸವ-ವಿಚಾರಗೋಷ್ಠಿ-ಸನ್ಮಾನ ಕಾರ್ಯಕ್ರಮ

Published On : 21 Dec 2017   |  Reported By : Rons Bantwal


ಮುಂಬಯಿ, ಡಿ.21: ತೀಯಾ ಸಮಾಜ ಮುಂಬಯಿ ಸಂಸ್ಥೆಯ ಮುಖವಾಣಿ `ತೀಯಾ ಬೆಳಕು' ತನ್ನ 15ನೇ ವಾರ್ಷಿಕೋತ್ಸವವನ್ನು ವಿಚಾರಗೋಷ್ಠಿ-ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ವೈಭವದೊಂದಿಗೆ ಇದೇ ಡಿ.24ನೇ ಭಾನುವಾರ ಅಪರಾಹ್ನ 3.00 ಗಂಟೆಯಿಂದ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃ ಹದಲ್ಲಿ ವಿಜೃಂಭನೆಯಿಂದ ನೆರವೇರಿಸಲಿದೆ.

     

Dr. Ankush Gajaran                Rohidas Bangera                             Dr. Dayanand Kumble

       

Dr. Dayanand Kumble                  Nityananda Kotyan                   Chandrahas Palan

   

                   Chandrashekar Belchada          Shridhar S.Suvarna                        

ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡÀ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಡುವ ಭವ್ಯ ಸಮಾರಂಭವನ್ನು ನಿಖಿತಾ ಎಸ್.ಅವಿೂನ್ ಉದ್ಘಾಟಿಸುವರು. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಸುಧಾಕರ ದೊಡ್ದ ಅತಾರ್, ಉಳ್ಳಾಲ ಚೀರುಂಭ ಶ್ರೀ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನಾವರ್, ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಸಂತೋಷ್ ದಂಡ ಅತಾರ್ ಮತ್ತು ಪುರುಷೋತ್ತಮ ಗುರಿಕಾರ ಆಗಮಿಸಿ `ತೀಯಾ ಬೆಳಕು' ವಿಶೇಷ ಸಂಚಿಕೆ ಬಿಡುಗಡೆ ಗೊಳಿಸುವರು.

ಹಮ್ಮಿಕೊಳ್ಳಲಾದ ವಿಚಾರ ಗೋಷ್ಠಿಯಲ್ಲಿ ಮಹಾನಗರದಲ್ಲಿನ ಹಿರಿಯ ಪತ್ರಕರ್ತರುಗಳಾದ ಡಾ| ಈಶ್ವರ ಅಲೆವೂರು, ದಯಾಸಾಗರ್ ಚೌಟ, ಶ್ರೀನಿವಾಸ ಜೋಕಟ್ಟೆ ಮತ್ತು ವಾಮನ್ ಇಡ್ಯಾ ಪಾಲ್ಗೊಂಡು `ಪತ್ರಿಕಾ ಉದ್ಯಮ ವರ್ತಮಾನ ಸ್ಥಿತಿಗತಿ' ವಿಚಾರಿತ ಮಾಹಿತಿ ನೀಡುವರು. ಆಯೋಜಿಸಲಾಗಿರುವ ಕವಿ ಗೋಷ್ಠಿಯಲ್ಲಿ ಡಾ| ವಾಣಿ ಉಚ್ಚಿಲ್ಕರ್, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಶಿಮಂತೂರು ಚಂದ್ರಹಾಸ ಸುವರ್ಣ, ಪೆÇಳಲಿ ಮಹೇಶ್ ಹೆಗ್ಡೆ, ಶಾರದಾ ಅಂಚನ್, ಹೇಮಾ ಸದಾನಂದ ಅವಿೂನ್ ಭಾಗವಹಿಸಿ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸುವರು.

ಸಂಜೆ 5.00 ಗಂಟೆಗೆ ನಡೆಸಲ್ಪಡುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ದೆಹಲಿ ಅಲ್ಲಿನ ಸತ್ಯವಾದಿ ರಾಜ ಹರಿಶ್ಚಂದ್ರ ಆಸ್ಪತ್ರೆಯ ಡಾ| ಅಂಕುಷ್ ಗುಜರನ್, ಗೌರವ ಅತಿಥಿüಯಾಗಿ ತೀಯಾ ಸಮಾಜ ಮುಂಬಯಿ ಇದರ ವಿಶ್ವಸ್ಥ ಕಾರ್ಯಧ್ಯಕ್ಷ ರೋಹಿದಾಸ್ ಎಸ್. ಬಂಗೇರ, ನಗರದ ಹೆಸರಾಂತ ವೈದ್ಯಾಧಿಕಾರಿ ಡಾ| ದಯಾನಂದ ಕೆ.ಕುಂಬ್ಲ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾ ನ್, ಸಸಿಹಿತ್ಲು ಭಗವತೀ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಪಾಲನ್, ಉದ್ಯಮಿ ಪ್ರಕಾಶ್ ಶೆಟ್ಟಿ ಆಗಮಿಸಿ `ತೀಯಾ ಬೆಳಕು ವಾರ್ಷಿಕ ಕ್ಯಾಲೆಂಡರ್' ಬಿಡುಗಡೆ ಗೊಳಿಸುವರು.

ಕಾರ್ಯಕ್ರಮದಲ್ಲಿ ತೀಯಾ ಸಮಾಜದ ಮಾಸಿಕದ ಮಾಜಿ ಸಂಪಾದಕರುಗಳಾದ ರೂಪೇಶ್ ವೈ.ರಾವ್, ವಿಶ್ವನಾಥ್ ಯು.ಕೆ., ಉಮೇಶ್ ಬಿ.ಮಂಜೇಶ್ವರ, ಈಶ್ವರ್ ಎಂ.ಐಲ್ ಮತ್ತು ತೀಯಾ ಬೆಳಕು ಮಾಸಿಕದ ಹಾಲಿ ಸಂಪಾದಕ ಶ್ರೀಧರ್ ಎಸ್.ಸುವರ್ಣ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಮಹಾನಗರದ ಪತ್ರಕರ್ತರಾದ ಹೇಮ್‍ರಾಜ್ ಕರ್ಕೇರ, ವಾಣಿಪ್ರಸಾದ್ ಕರ್ಕೇರ, ಸುಭಾಶ್ ಶಿರಿಯಾ, ದಿನೇಶ್ ಕುಲಾಲ್, ದಿನೇಶ್ ಶೆಟ್ಟಿ ರೆಂಜಾಳ ಮತ್ತು ಮುದ್ರಕ ಜಯರಾಜ್ ಪಿ.ಸಾಲ್ಯಾನ್ ಮತ್ತಿತರ ಪತ್ರಕರ್ತ ಗಣ್ಯರನ್ನು ಗೌರವಿಸಲಾಗುವುದು.

ಅಸಲ್ಫಾದ ಗೀತಾಂಬಿಕಾ ದೇವಸ್ಥಾನದ ನೃತ್ಯಾಭಿನಯ ಕಲಾಕ್ಷೇತ್ರ ತಂಡವು ಸಾಂಸ್ಕೃತಿಕ ನೃತ್ಯ ಸಾದರ ಪಡಿಸಲಿದ್ದಾರೆ. ಮನೋರಂನಜಾ ಕಾರ್ಯಕ್ರಮವಾಗಿ ಅಭಿನಯ ಮಂಟಪ ಮುಂಬಯಿ ಇದರ ಕಲಾವಿದರು `ಪುರ್ಸೊತ್ತಿಜ್ಜಿ' ತುಳು ಹಾಸ್ಯ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ತೀಯಾ ಬೆಳಕು ಮಾಸಿಕದ ಜೊತೆ ಸಂಪಾದಕ ಕೃಷ್ಣಪ್ಪ ಬಿಲ್ಲವ ತಿಳಿಸಿದ್ದಾರೆ. ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ತೀಯಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸುವಂತೆ ಸಂಸ್ಥೆಯ ಗೌ| ಪ್ರ| ಕಾರ್ಯದರ್ಶಿ ಈಶ್ವರ್ ಎಂ.ಐಲ್ ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here