Wednesday 1st, May 2024
canara news

“ತುಳುನಾಡೋಚ್ಚಯ 2017”“ತುಳುನಾಡಿನಲ್ಲಿ ಜಾತಿ,ಮತ,ಧರ್ಮದ ಜನಮೈತ್ರಿ”

Published On : 21 Dec 2017   |  Reported By : Rons Bantwal


ಮಂಗಳೂರು : ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗದಾಮ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರುಇದರ ಸಹಯೋಗದೊಂದಿಗೆ ಸಹಕಾರದೊಂದಿಗೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ “ತುಳುನಾಡೋಚ್ಚಯ 2017”“ತುಳುನಾಡಿನಲ್ಲಿ ಜಾತಿ,ಮತ,ಧರ್ಮದ ಜನಮೈತ್ರಿ” ಎಂಬ ಬೃಹತ್ ಕಾರ್ಯಕ್ರಮವನ್ನು ಡಿಸಂಬರ್ 23 ಹಾಗೂ 24ರಂದು ಪಿಲಿಕುಳ ತುಳು ಸಂಸ್ಕøತಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಪ್ರಸ್ತುತ ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯತೆಯನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕøತಿಯನ್ನು ಇನ್ನಷ್ಟು ಬಲಪಡಿಸುವುದು “ತುಳುನಾಡೋಚ್ಚಯ 2017”ರÀ ಮೂಲ ಉದ್ದೇಶವಾಗಿದೆ. ಅಲ್ಲದೆ ಪಿಲಿಕುಳದ ತುಳುಸಂಸ್ಕøತಿ ಗ್ರಾಮದ ಅಭಿವೃದ್ಧಿ ಮತ್ತು ಹೆಚ್ಚಿನ ಜನಾಕರ್ಷಣೆ ಸೆಳೆಯಲು ಈ ಗ್ರಾಮವನ್ನು ಸಮ್ಮೇಳನ ನಗರಿಯನ್ನಾಗಿಸಿ ವಿವಿಧ ಕಡೆಗಳಲ್ಲಿ ದಿನಪೂರ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಡಿ. 23, 24ರಂದು ನಡೆಯುವ “ತುಳುನಾಡೋಚ್ಚಯ”ದಲ್ಲಿ ತುಳು ಭಾಷಾ ಸಂಸ್ಕøತಿಯ ಹಾಗೂ ಜಾತಿ,ಮತ,ಭಾಷಾ ಸೌಹಾರ್ದತೆಯನ್ನು ಮೇಳೈಸುವ ಹಾಗೂ ಜಾತಿ,ಮತ,ಭಾಷೆ ಒಗ್ಗಟ್ಟನ್ನು ಪ್ರದರ್ಶಿಸುವ ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆ ಅಲ್ಲದೆ ವಸ್ತು ಪ್ರದರ್ಶನ,ಜಾನಪದ ಪ್ರದರ್ಶನ, ಕೊಸ್ಟಲ್ ವುಡ್ ಸಿ£ಮಾ ಕೂಟ, ಕುಲ ಕಸುಬು ಪ್ರದರ್ಶನ, ತಿಂಡಿ ತಿನಸುಗಳ ಪ್ರದರ್ಶನ ಜರಗಲಿದೆ. ಅಲ್ಲದೆ ತುಳು ಬಾಷೆಯ ಸಂಸ್ಕøತಿಗೆ, ಹಾಗೂ ಜಾತಿ, ಮತ, ಬಾಸೆ ಒಗ್ಗಟ್ಟಿಗೆ ಹೆಗಲುಕೊಟ್ಟ ಗಣ್ಯರನ್ನು ಸನ್ಮಾನಿಸಲಾಗುತ್ತದೆ.

ತುಳುರತ್ನ ಬಿರ್ದ್: ಈ ಸಂದರ್ಭದಲ್ಲಿ ಹಿರಿಯ ಕಾದಂಬರಿಕಾರ,ನಾಟಕಗಾರ,ಸಾಹಿತಿ ಡಾ.ಡಿ.ಕೆ.ಚೌಟ, ಹಿರಿಯ ಬರಹಗಾರ್ತಿ ,ಸಂಘಟಕಿ ಡಾ.ಸುನೀತಾ ಎಂ ಶೆಟ್ಟಿ ಮುಂಬೈ, ಸಿರಿಪಾಡ್ದನ ಕಲಾವಿದ ಗೋಪಾಲ ನಾಯಕ್ ಮಾಚಾರ್ ಅವರಿಗೆ ಈ ಬಾರಿಯ ತುಳುರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಜನಮೈತ್ರಿ ಪ್ರಶಸ್ತಿ : ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್‍ನ ಆಡಳಿತ ನಿರ್ದೆಶಕ ಡಾ.ಎಂ.ಎನ್. ರಾಜೇಂದ್ರ ಕುಮಾರ್,ಎ.ಜೆ.ಶೆಟ್ಟಿ ಮಂಗಳೂರು, ಮಾರ್ಟಿನ್ ಅರಾನ್ಹಾ, ಸುಧೀರ್ ಕುಮಾರ್ ಶೆಟ್ಟಿ ಯು.ಎ.ಇ., ಎಂ.ಇ.ಮೂಳೂರು ಅವರಿಗೆ 2017ರ ಜನಮೈತ್ರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದ ವಿವರ: 23/12/2017 ಶನಿವಾರ

ಬೆಳಿಗ್ಗೆ ಗಂಟೆ 9-00ಕ್ಕೆ ಧ್ವಜಾರೋಹಣ ಜರಗಲಿದ್ದು 9-30 ಬಳಿಕ ಸಮ್ಮೇಳನ ನಗರಿಯಲ್ಲಿರುವ ವಸ್ತು ಪ್ರದರ್ಶನ, ತಿಂಡಿ ತಿನಿಸ್‍ಗಳ ಪ್ರದರ್ಶನ( ಆಹಾರೋತ್ಸವ) ಕೃಷಿ ವಸ್ತು ಪ್ರದರ್ಶನ ಕುಲಕಸುಬು ಪ್ರದರ್ಶನ, ಪುಸ್ತಕ ಪ್ರದರ್ಶನೊ,ಸಂಸ್ಕøತಿ ಪ್ರದರ್ಶನ, ವ್ಯಾಪಾರ ಮಳಿಗೆ ಪ್ರದರ್ಶನ, ಚಿತ್ರ ಹಾಗೂ ಛಾಯಾ ಚಿತ್ರ ಪ್ರದರ್ಶನ, ನಾಡಮದ್ದು ಪ್ರದರ್ಶನ, ಮಾಹಿತಿ-ಮಾಧ್ಯಮ -ವಿಕಿಪೀಡಿಯ ಕೇಂದ್ರ, ಯಂತ್ರೋಪಕರಣ ಪ್ರದರ್ಶನ, ಪುಷ್ಟೋದ್ಯಾನ ಪ್ರದರ್ಶನದೊಂದಿಗೆ ವಿವಿಧ ಪ್ರದರ್ಶನಗಳ ಉದ್ಘಾಟನೆ ಜರಗಲಿದೆ.

ಬೆಳಿಗ್ಗೆ 10 ಗಂಟೆಗೆ ವಾಮಂಜೂರುವಿನಿಂದ ಹೊರಟು ಪಿಲಿಕುಳದ ಸಮ್ಮೇಳನನಗರಿಗೆ ತುಳುನಾಡ ಜನಮೈತ್ರಿ ಜನಪದ ಸಿರಿ ಮೆರವಣಿಗೆ ವಿವಿಧ ಸಮುದಾಯದ ಸಂಸ್ಕøತಿ,ಉಡುಗೆ ತೊಡುಗೆಗಳ ಪ್ರದರ್ಶನ, ಜನಪದ ಕುಣಿತ, ತುಳುನಾಡಿನ ವಾದ್ಯೋಪಕರಣಗಳ ವಾದನ, ಸ್ತಬ್ದ ಚಿತ್ರ, ಗೊಂಬೆಯಾಟ, ಸಿಂಗಾರಿಮೇಳ, ಚೆಂಡೆಮೇಳ, ಪೂಕಾವಡಿ, ಪಂಚವಾದ್ಯಮೇಳ ,ಬೇರೆ ಬೇರೆ ರಾಜ್ಯಗಳ ಜನಪದ ಪ್ರದರ್ಶನ ಜನಪದ ಸಿರಿ ಮೆರೆವಣಿಗೆ ವಿಶೇಷ ಆಕರ್ಷಣೆಯಾಗಿರುತ್ತದೆ.ಮದ್ಯಾಹ್ನ 12 ಗಂಟೆಗೆ ತುಳುನಾಡೋಚ್ಚಯ 2017 ಉದ್ಘಾಟನೆ ಜರಗಲಿದ್ದು ಇದರಲ್ಲಿ ಸಾಹಿತ್ಯ,ಸಾಮಾಜಿಕ ರಾಯಭಾರಿಗಳು,ಕೇಂದ್ರ,ಹಾಗೂ ಕರ್ನಾಟಕದ ಸಚಿವರು ಭಾಗವಹಿಸುವರು. ತುಳು ಕಾಲಕೋಂದೆ, ವಿವಿಧ ಪುಸ್ತಕ,ಸಿಡಿಗಳ ಬಿಡುಗಡೆ ನಡೆಯಲಿದೆ.ಸಂಜೆ 4.00ಗೆ ದೇಶ ವಿದೇಶದ ತುಳುವರಿಗೆ ಒಂದೇ ವೇದಿಕೆಯಲ್ಲಿ ಪಾಲ್ಗೊಳ್ಳುವ ಹೊರದೇಶ- ಹೊರರಾಜ್ಯತುಳುವರ ಮಿನದನ ಸಮ್ಮೇಳನ ಹಾಗೂ ಹೊರ ದೇಶದಲ್ಲಿರುವ ಊರ ಸಾಧಕರಿಗೆ ಪ್ರಶಸ್ತಿ ಪ್ರದಾನ ಜರಗಲಿದೆ.ರಾತ್ರೆ 7-00ಗೆ ತುಳು,ಕನ್ನಡ,ಮಲಯಾಳ, ತಮಿಳು, ತೆಲುಗು ಭಾಷೆಗಳ ಜನಪದ ಪ್ರದರ್ಶನದ ದ್ರಾವಿಡೋತ್ಸವ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಕಲೆಗಳು ಪ್ರದರ್ಶನಗೊಳ್ಳಲಿದೆ.

ರಾತ್ರೆ 8.00ರಿಂದ ಸುಮನಸ ಕೊಡವೂರು ಇವರಿಂದ ಕೋಟಿಚೆನ್ನಯೆ ತುಳು ನಾಟಕ ಪ್ರದರ್ಶನಗೊಳ್ಳುವುದು.

24/12/2017 ರವಿವಾರ9-30ಗಂಟೆಯಿಂದ ತುಳುನಾಡಿನ ದೈವಾರಧನೆಯ ಬಗ್ಗೆ ವಿಚಾರಗೋಷ್ಠಿ,ದೈವಾರಾಧಕರಿಗೆ ಸನ್ಮಾನಗಳ ದೈವಾರಾಧಕೆರೆ ಕೂಟ ಎಂಬ ಕಾರ್ಯಕ್ರಮ ಜರಗಲಿದೆ.ಮಧ್ಯಾಹ್ನ 12 ಗಂಟೆಗೆ ಮೂರು ಮಂದಿ ಸಾಧಕರಿಗೆ ತುಳುರತ್ನ ಪ್ರಶಸ್ತಿ ಪ್ರದಾನ ಜತೆಗೆ ವಿವಿಧ ಸಾಧಕರಿಗೆ ಸನ್ಮಾನ,ಮಧ್ಯಾಹ್ನ 2 ಗಂಟೆಗೆ ತುಳುಭಾಷಾ ಪ್ರಾದೇಶಿಕ ವೈವಿಧ್ಯತೆಗಳ ಬಗ್ಗೆ ವಿಚಾರಗೋಷ್ಠಿ ಸಾರ ಎಸಳ್‍ದ ತಾಮರೆ ಜರಗಲಿದೆ.ಇದರಲ್ಲಿ ಕುಂದಾಪುರ, ಶಿವಳ್ಳಿ, ಉಡುಪಿ, ಮೂಡಬಿದ್ರೆ, ಬೆಳ್ತಂಗಡಿ, ಮಂಗಳೂರು, ಬಂಟ್ವಾಳ, ಸುಳ್ಯ,ಮಡಿಕೇರಿ, ಮಹಾರಾಷ್ಟ್ರ, ಕಾಸರಗೋಡು, ತುಳು ಭಾಷಾ ವೈವಿಧ್ಯತೆಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ. ಸಂಜೆ 3-00ಗಂಟೆಗೆ ಜನಮೈತ್ರಿ ಸಂಗಮ ಹಾಗೂ ಸಮಾರೋಪ ಸಮಾರಂಭ ತುಳುನಾಡಿನ ವಿವಿಧ ಸಮುದಾಯ, ಧರ್ಮ, ಭಾಷೆಗಳ ಜತೆ ಸೇರಿ ಐದು ಮಂದಿ ಜನಮೈತ್ರಿಗೆ ಪ್ರಸಿದ್ಧರಾದ ಗಣ್ಯರಿಗೆ ಜನಮೈತಿ ಪ್ರಶಸ್ತಿ ಅಲ್ಲದೆ ವಿವಿಧ ಸಮುದಾಯದ ಹಿರಿಯ ಸಾಧಕರಿಗೆ ಪುರಸ್ಕಾರವನ್ನು ಈ ಸಂದರ್ಭದಲ್ಲಿ ಪ್ರದಾನಿಸಲಾಗುವುದು.ಸಂಜೆ 6-00 ಗಂಟೆಯಿಂದ ಕೋಸ್ಟಲ್‍ವುಡ್ ಸಿನಿಮಾ ಹಬ್ಬ ತುಳು, ಕನ್ನಡ, ಕೊಂಕಣಿ, ಬ್ಯಾರಿ ಸಿನಿಮಾದ ಗಣ್ಯರು ಮೇಳೈಸುವ ವಿಶೇಷ ಸಮಾರಂಭ ಕೋಸ್ಟಲ್‍ವುಡ್ ಸಿನಿಮಾ ಬಗ್ಗೆ ವಿಚಾರಗೋಷ್ಠಿ, ಸಿನಿಮಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಮ್ಮೇಳನ ನಗರಿಯಲ್ಲಿ: ಇದೇ ಸಂದರ್ಭದಲ್ಲಿ ಸಮ್ಮೇಳನದ ಬಳಿ ಇರುವ ವಿವಿಧಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ತುಳು ಬಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ವಿಚಾರಗೋಷ್ಠಿ ಹಾಗೂ ಅಭಿಪ್ರಾಯ ಅವಲೋಕನ ಜರಗಲಿದೆ. ಮಕ್ಕಳ ಹಾಗೂ ಹಿರಿಯರ ಸಾಹಿತಿ-ಕವಿಗಳ ಸಹಭಾಗಿತ್ವದಲ್ಲಿ ಮಂಗಳೂರು ಆಕಾಶವಾಣಿ ಪ್ರಾಯೋಜಕತ್ವದಲ್ಲಿ ತುಳು ಸಾಹಿತ್ಯ ಐಸಿರಿ ಎಂಬ ಸಾಹಿತ್ಯ ಸಂಬಂಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತುಳುನಾಡ ತಿಂಡಿ ತಿನಸುಗಳ ಪ್ರದರ್ಶನ ಹಾಗೂ ಮಾರಾಟದ ಆಹಾರೋತ್ಸವ,ಪ್ರಾಚೀನ ತುಳುನಾಡ ಪರಂಪರಾಗತ ತುಳುನಾಡ ಕಳರಿ ಪ್ರಾತ್ಯಕ್ಷಿಕೆಯನ್ನು ಕಡತ್ತಾನಾಡ್ ಕಳರಿ ಸಂಘ ವಡಗರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದು ಯುವ ತಲೆಮಾರಿಗೆ ತುಳುನಾಡ ಕಳರಿಯನ್ನು ಪರಿಚಯಿಸಲು ಹಾಗೂ ಪ್ರದರ್ಶಿಸಲು ಅವಕಾಶ ನೀಡಲಾಗಿದೆ.ಇದೇ ಸಂದರ್ಭದಲ್ಲಿ ತೆರೆದ ವೇದಿಕೆಯಲ್ಲಿ ಬೊಳಿಕೆ ಜಾನಪದ ತಂಡ ಕನ್ಯಪ್ಪಾಡಿ ಇದರ ನೇತೃತ್ವದಲ್ಲಿ ಪಾಡ್ದನ ಮೇಳ ಹಮ್ಮಿಕೊಳ್ಳಲಾಗಿದ್ದು ಪುರಾತನ ಪಾಡ್ದನ,ಉರಲ್,ಸಂಧಿಗಳನ್ನು ಹಾಡುವುದಲ್ಲದೆ ಪ್ರಾಚೀನ ವಾದ್ಯೋಪಕರಣ ನುಡಿಸುವಿಕೆ ಇದರ ವಿಶೇಷತೆಯಾಗಿದೆ. ನಮ್ಮ ತುಳುನಾಡು ಟ್ರಸ್ಟ್ ರಿ ಮಂಗಳೂರು ಹಾಗೂ ವಿಶ್ವ ತುಳುವೆರೆ ಆಯನೋ ಸಹಯೋಗದಲ್ಲಿ ತುಳುಲಿಪಿ ಬಗ್ಗೆ ಪ್ರಾತ್ಯಕ್ಷಿಕೆ,ಕಲಿಕಾ ಮಾಹಿತಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತುಳು ಲಿಪಿ ಕಲಿಕೆ ಪುಸ್ತಕಗಳು,ಕ್ಯಾಲೆಂಡರ್‍ಗಳು,ಸಿಡಿಗಳ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ.

ಸಾಂಸ್ಕøತಿಕ ಕಾರ್ಯಕ್ರಮ: ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ಅನಂತ ಎಸ್ ಇರ್ವತ್ತಾಯ ರಚಿಸಿದ “ಚಿಲ್ಲರೆ ಕಾಸ್‍ದಾಯೆ” ತುಳು ನಾಟಕ ಪ್ರದರ್ಶನಗೊಳ್ಳಲಿದೆ.ಕರಾವಳಿಯ ಗಂಡು ಮೆಟ್ಟಿನ ಕಲೆ ಎಂದೇ ಜನ ಜನಿತವಾದ ಯಕ್ಷಗಾನದ ಬಗ್ಗೆ ಇರುವ ಗೊಂದಲದ ಬಗ್ಗೆ ಯಕ್ಷಗಾನ ಕಲಾವಿದರು,ಮೇಳದ ಯಜಮಾನರು,ಯಕ್ಷ ಪೋಷಕರು ಪಾಲ್ಗೊಳ್ಳುವ ವಿಚಾರಗೋಷ್ಠಿ,ಯಕ್ಷಗಾನ ಹಾಸ್ಯ,ರಸಗಾನ ವೈಭವದ ಯಕ್ಷಸಂಭ್ರಮ ಹಾಗೂ ಪ್ರಸಿದ್ದ ಕಲಾವಿದರಿಂದ ತಾಳ ಮದ್ದಳೆ ಜರಗಲಿದೆ.ಸ್ತ್ರೀ ಶಕ್ತಿ ಮಂಡಳಿ (ರಿ) ಥಾಣೆ, ಮುಂಬಯಿ ಇವರಿಂದ ಮದನಾಕ್ಷಿ ತಾರವಳಿ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಸಿದ್ಧತೆ ಪೂರ್ಣ: ಸಮ್ಮೇಳನ ನಗರಿಯಲ್ಲಿ ಬೃಹತ್ ಚಪ್ಪರದ ಕೆಲಸ ತ್ವರಿತಗತಿಯಲ್ಲಿ ಸಾಗಿದ್ದು . ಅತಿಥಿ ಅಭ್ಯಾಗತರನ್ನು ಸ್ವಾಗತಿಸಲು ಬೃಹತ್ ಕಮಾನುಗಳು ತಲೆಯೆತ್ತಿವೆ. ತುಳುನಾಡಿನ ನಾಡು-ನುಡಿ, ಸಂಸ್ಕøತಿಗೆ ಕನ್ನಡಿ ಹಿಡಿಯುವ ವೈವಿಧ್ಯಮಯ ತುಳುಗ್ರಾಮ ಸಿದ್ಧಪಡಿಸಲಾಗಿದೆ. ತುಳುನಾಡಿನ ವೈವಿಧ್ಯಮಯ ತಿಂಡಿ ತಿನಿಸುಗಳೊಂದಿಗೆ ಆಹಾರೋತ್ಸವ ಹಾಗೂ ವಿವಿಧ ವ್ಯಾಪಾರಗಳಿಗಾಗಿ 200ಕ್ಕಿಂತಲೂ ಹೆಚ್ಚು ಮಳಿಗೆಗಳು ತೆರೆಯಲಾಗುವುದು. ವಾಮಂಜೂರು ಮೂಡುಶೆಡ್ಡೆ ಪ್ರದೇಶದ ವಿವಿಧ ಸಂಘ ಸಂಸ್ಥೆಗಳು ಉತ್ಸವದ ಸಿದ್ಧತೆಗೆ ಸಹಕರಿಸಿದ್ದು ಪಿಲಿಕುಳ ನಿಸರ್ಗ ಗ್ರಾಮ ಉತ್ಸವದ ಕಳೆ ಕಂಡು ಬರುತ್ತಿದೆ. ಪಿಲಿಕುಳದ ಹಚ್ಚ ಹಸುರಿನ ತುಳುನಾಡ ಸಿಂಗಾರದ ತುಳು ಸಂಸ್ಕøತಿ ಗ್ರಾಮ, ಗುತ್ತಿನ ಮನೆ,ಪಿಲಿಕುಳ ವಿಜ್ಞಾನ ಕೇಂದ್ರ, ಕುಶಲಕರ್ಮಿ ಗ್ರಾಮ, ಪ್ರಾಣಿ ಸಂಗ್ರಹಾಲಯ, ಸಸ್ಯಕಾಶಿ, ಉದ್ಯಾನವನ, ಪಿಲಿಕುಳ ಬೋಟಿಂಗ್, ಮಕ್ಕಳ ತೊಟ್ಟಿಲು, ಸಂತೆ ಸಡಗರದ ವಿಶೇಷ ಆಕರ್ಷಣೆ.

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here