Wednesday 1st, May 2024
canara news

ಸಂತ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ವಾರ್ಷಿಕೋತ್ಸವ ಸಂಭ್ರಮ

Published On : 23 Dec 2017   |  Reported By : Bernard D'Costa


ಶಿಕ್ಷಣವೆಂದರೆ ಮಾನವನ ವಿಕಾಸ-ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಕುಂದಾಪುರ,ಡಿ.22: ‘ಶಿಕ್ಷಣ ಅಂದರೆ ಕೇವಲ ಜ್ಞಾನ ಅರಿವು, ಮಾಹಿತಿ ಮಾತ್ರವಲ್ಲಾ, ಮಾನವನಿಗೆ ವಿಕಾಸಗೊಳಿಸುವುದೇ ನೀಜವಾದ ಶಿಕ್ಷಣ. ಒದಿದ್ದು ಮರೆತರೆ ಅದು ಶಿಕ್ಷಣ ಪಡೆದುಕೊಂಡಿದ್ದಲ್ಲಾ, ಒದಿದ್ದು ನೆನಪಿನಲ್ಲಿಟ್ಟುಕೊಂಡರೆ, ಅದು ಗಳಿಸಿಕೊಂಡ ಶಿಕ್ಷಣ’ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಕುಂದಾಪುರ ಪ್ರತಿಶ್ಠೆಯ ಸಂತ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ವಾರ್ಷಿಕೋತ್ಸವದ ಸಂಭ್ರಮದಂದು ಅಧ್ಯಕ್ಷೆತೆಯನ್ನು ವಹಿಸಿ ಅವರು ಸಂದೇಶ ನೀಡಿದರು. ‘ಐವತ್ತು ವರ್ಷಗಳ ಹಿಂದೆ ಬಿತ್ತಿದ ಬೀಜ ಇವತ್ತು ಹೆಮ್ಮರವಾಗಿ ಬೆಳೆದಿದೆ, ಇದನ್ನು ಸ್ಥಾಪಿಸಲು ಕಾರಣರಾದವರು, ಸಂಚಾಲಕರು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತಾ, ಈ ಸಂಸ್ಥೆ ಇನ್ನಸ್ಟು ಬೆಳೆಯಲೆಂದು ಅವರು ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಈ ಶಾಲೆಯನ್ನು ಪ್ರಗತಿ ಪಥದಲ್ಲಿ ಸಾಗಲು ಕಾರಣ ಕರ್ತರಾದ ಪ್ರಥಮ ಮುಖ್ಯೋಪಾಧ್ಯಾಯರಾದ ವಂ. ಫಾ|ಅಲೆಕ್ಷಾಂಡರ್ ಲೋಬೊರನ್ನು ಸನ್ಮಾನಿಸಿಲಾಯಿತು, ಅವರು ಶಾಲೆಯ ಆರಂಭದ ದಿನಗಳ ಕಶ್ಟ, ತೊಂದರೆ, ಸಾಧನೆ ಬಗ್ಗೆ ವಿವರವಾಗಿ ವಿವರಿಸಿದರು. ಇನ್ನೊರ್ವ ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣ ಅಧಿಕಾರಿ ಅಶೋಕ್ ಕಾಮತ್ ‘ಇಂದು ಹೆತ್ತವರಲ್ಲಿ ಮಕ್ಕಳಿಗೆ ಇದನ್ನು ಮಾಡ ಬೇಡ ಎಂಬ ಪಟ್ಟಿ ಸಾಕಸ್ಟು ದೊಡ್ಡದಿದೆ, ಆದರೆ ಎನು ಮಾಡ ಬೇಕೆಂಬುದು ಅವರ ಪಟ್ಟಿಯಲ್ಲಿ ಇಲ್ಲಾ, ಅವರನ್ನು ಒಳ್ಳೆಯ ಕೆಲಸ ಮಾಡಲು ಪೆÇ್ರೀತ್ಸಾಹಿಸಿ, ಈ ಶಾಲೆ ಹಿಂದಿನಿಂದಲೂ ಶಿಸ್ತಿಗೆ, ಶಿಕ್ಷಣಕ್ಕೆ ಹೆಸರಾದುದು, ಈ ಶಾಲೆ ಇನ್ನೂ ಎಳಿಗೆಯತ್ತ ಸಾಗಲೆಂದು ಶುಭ ಕೋರಿದರು.

ಮತ್ತೊರ್ವ ಅತಿಥಿ ಪುರಸಭೆಯ ಉಪಾಧ್ಯಕ್ಷರು, ಹಳೆ ವಿಧ್ಯಾರ್ಥಿ ರಾಜೇಶ್ ಕಾವೇರಿ “ಶಿಕ್ಷಣ ಅಂದರೆ ಕೇವಲ, ಜ್ಞಾನಾರ್ಧನೆ, ದೊಡ್ಡ ದೊಡ್ಡ ಹುದ್ದೆ ಸಂಪಾದಿಸುವುದಲ್ಲಾ, ಸುಸಂಸ್ಕ್ರತರಾಗುವುದು ಮುಖ್ಯವೆಂದು’ ಶುಭ ಕೋರಿದರು. ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಸಂತ ಮೇರಿಸ್ ಸಮೂಹ ಸಂಸ್ಥೆಗಳ ಮುಖ್ಯಸ್ತರಾದ, ರೆ|ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್, ಸಿಸ್ಟರ್ ಜೊಯ್ಸ್‍ಲಿನ್, ಡೋರಾ ಸುವಾರಿಸ್, ಶೈಲಾ ಆಲ್ಮೇಡಾ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರನ್ನು, ದಾನಿ ಗಳನ್ನು, ಸಹಕರಿಸಿದವರನ್ನು ಬಿಷಪರಿಂದ ಸನ್ಮಾನಿಸಲಾಯಿತು. ಶಿಕ್ಷಕ ದಿನಮಣಿಯ ಸಂಪಾದಕತ್ವದಲ್ಲಿನ ‘ನೆನಪಿನ ಸಂಚಿಕೆ’ಯನ್ನು ಬಿಡುಗಡೆ ಮಾಡಲಾಯಿತು.

ಸಾಂಸ್ಕ್ರತಿಕ ಕಾರ್ಯಕ್ರಮಗಳಾಗಿ ನ್ರತ್ಯಗಳ ಜೊತೆಗೆ, ವಿನಾಯಕ ನೀನಾಸಂ ರಚಿಸಿದ ನ್ರತ್ಯ ರೂಪಕ ಕುಣಿ ಕುಣಿ ನೈದಿಲೆ, ಬರ್ನಾಡ್ ಡಿಕೋಸ್ತಾ ರಚಿಸಿದ ರೂಪಕ ‘ಕರುಣಾಮಯಿ ಮೇರಿ ಮಾತೆ’ ಶಾಲ ಮಕ್ಕಳಿಂದ ಪ್ರದರ್ಶಕೊಂಡವು. ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಸ್ವಾಗತಿಸಿದರು, ಶಿಕ್ಷಕರಾದ ಭಾಸ್ಕರ ಗಾಣಿಗ, ಸ್ಮಿತಾ, ಪ್ರೀತಿ, ಅಸುಂಪ್ತಾ, ಕಾರ್ಯಕ್ರಮಗಳಿಗೆ ಸಹಕರಿಸಿದರು, ಮುಖ್ಯ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ಚಂದ್ರ ಶೇಖರ ಬೀಜಾಡಿ ನೆಡೆಸಿಕೊಟ್ಟರು, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನ ಧನ್ಯವಾದಗಳನ್ನು ಅರ್ಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here