Wednesday 1st, May 2024
canara news

ಮುದ್ರಾಡಿ ಎಂಎನ್‍ಡಿಎಸ್‍ಎಂ ಪ್ರೌಢಶಾಲೆ: ರಜತ ಮಹೋತ್ಸವ ಸಂಭ್ರಮ

Published On : 23 Dec 2017   |  Reported By : Rons Bantwal


ಮುದ್ರಾಡಿಯ ವಿಶಿಷ್ಟ ಶಾಲೆ ಎಲ್ಲರಿಗೂ ಮಾದರಿ-ಡಾ|ಮಹಾಬಲೇಶ್ವರ ರಾವ್

ಮುಂಬಯಿ, ಡಿ.23: ಮುದ್ರಾಡಿಯ ಇಂತಹ ಶಾಲೆಯನ್ನು ನಾನು ಹಿಂದೆಂದೂ ನೋಡಿಲ್ಲ, ಇಂದೊಂದು ವಿಶಿಷ್ಟ ಶಾಲೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರತಿಷ್ಠಿತವಾದ ಮಾದರಿ ಶಾಲೆಯಾಗಿದೆ, ಊರಿನ ಎಲ್ಲರೂ ಸೇರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಂಡು ಮುನ್ನಡೆಸಬೇಕು, ಮುದ್ರಾಡಿ ಪ್ರೌಢಶಾಲೆಯಲ್ಲಿ ಕಲಿಯುವ ಮಕ್ಕಳು ಪುಣ್ಯವಂತರು, ಅವರ ಕಟುಂಬದವರು ಅದೃಷ್ಟಶಾಲಿಗಳು ಎಂದು ಶಿಕ್ಷಣ ತಜ್ಷರಾದ ಉಡುಪಿ ಟಿಎಂಎ ಪೈ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಮಹಾಬಲೇಶ್ವರ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮುದ್ರಾಡಿ ವಿದ್ಯಾಸಾಗರ ಎಜುಕೇಷನ್ ಟ್ರಸ್ಟ್‍ನ ಮೇಲ್ಮನೆ ನರಸಮ್ಮ ದುಗ್ಗಯ್ಯ ಶೆಟ್ಟಿ ಸ್ಮಾರಕ ಅನುದಾನಿತ ಪ್ರೌಢಶಾಲೆಯ ರಜತ ಮಹೋತ್ಸವ ಸಂಭ್ರಮದಲ್ಲಿ ಶುಕ್ರವಾರ ಮಕ್ಕಳ ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶೈಕ್ಷಣಿಕ ಉಪನ್ಯಾಸ ನೀಡಿ ರಾವ್ ಮಾತನಾಡಿದರು.

ಕನ್ನಡ ನಾಡಿನಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕದ ವಿಚಾರ, ಸರ್ಕಾರದ ಶಿಕ್ಷಣ ನೀತಿ ಘೋಷಣೆಗೆ ಸೀಮಿತವಾಗಿವೆ, ಇಂತಹ ಸಮಯದಲ್ಲಿ ಪ್ರೌಢಶಾಲೆಯನ್ನು ಕಟ್ಟಿ ನಾಡಿಗೆ ಸಮರ್ಪಿಸಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿ ಮತ್ತು ಅವರ ಕುಟುಂಬ ಎಲ್ಲರಿಗೂ ಆದರ್ಶರು. ಬಲಿಷ್ಠವಾದ ಆಡಳಿತ ಮಂಡಳಿ ಇದ್ದರೆ ಮಾತ್ರ ಸಂಸ್ಥೆಯು ಸಾಧನೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಡಾ. ಮಹಾಬಲೇಶ್ವರ ರಾವ್ ಹೇಳಿದರು.

ಶಾಲೆಯ ಸ್ಥಾಪಕರಾದ ಮುದ್ರಾಡಿ ಕೃಷ್ಣ ಡಿ. ಶೆಟ್ಟಿ ಮುಂಬಯಿ ಅವರ ತೈಲ ಚಿತ್ರವನ್ನು ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಅನಾವರಣ ಗೊಳಿಸಿ ಮಾತನಾಡಿ ಸಮಾಜಕ್ಕೆ ಆದರ್ಶವಾದ ಶಿಕ್ಷಣವನ್ನು ನೀಡುವ ಕೈಕಂರ್ಯವನ್ನು ವಿದ್ಯಾಸಾಗರ ಎಜ್ಯುಕೇಷನ್ ಟ್ರಸ್ಟ್ ಮೂಲಕ ಶಾಲೆ ಮತ್ತು ದಿವಾಕರ ಶೆಟ್ಟಿ ಅವರು ನಡೆಸುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ದಿವಾಕರ ಶೆಟ್ಟಿ ಕುಟುಂಬಸ್ಥರ ಸೇವೆ ದೊಡ್ಡದಿದೆ, ಊರಿಗೆ ಶಾಶ್ವತವಾದ ಕೊಡುಗೆಯನ್ನು ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದು ಅಭಿನಂದಿಸಿದರು.

ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಕೊಟ್ಯಾಂತರ ರೂಪಾಯಿ ವಾರ್ಷಿಕ ಆದಾಯ ಗಳಿಸುವ ಈ ಕಾಲದಲ್ಲಿ ತನಗೆ ಬಂದ ಆದಾಯದ ಬಹುಪಾಲನ್ನು ಶಿಕ್ಷಣ ಸಂಸ್ಥೆಗೆ ನೀಡುತ್ತಿರುವ ಅಪರೂಪದ ವ್ಯಕ್ತಿ ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿ ನಮಗೆಲ್ಲ ಹೆಮ್ಮೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ರಜತ ಸಂಭ್ರಮ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮುದ್ರಾಡಿ ವಿದ್ಯಾಸಾಗರ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮುಂಬೈ ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಎನ್. ಶೆಟ್ಟಿ ಮಾತನಾಡಿ ನಮ್ಮ ಕುಟುಂಬದವರು ಸ್ಥಾಪಿಸಿದ ಶಾಲೆಯಾದರೂ ನಮ್ಮೂರಿನ ಶಾಲೆ, ಎಲ್ಲರೂ ಸೇರಿ ಶಾಲೆಯನ್ನು ಮುನ್ನಡೆಸಬೇಕಾಗಿದೆ, ಶಾಲೆಯ ಸಮಗ್ರ ಅಭಿವೃದ್ಧಿಗೆ ಕಳೆದ 25 ವರ್ಷಗಳಿಂದ ಸಹಕರಿಸಿ ಮತ್ತು ರಜತ ಸಂಭ್ರಮದ ಯಶಸ್ವಿ ದುಡಿದ ಎಲ್ಲರನ್ನೂ ಸ್ಮರಿಸಿ ಅಭಿನಂದಿಸಿದರು.

ಶಿಕ್ಷಣಕ್ಕೆ ನಿರಂತರ ಪ್ರೋತ್ಸಾಹ ನೀಡುವ ದಿವಾಕರ ಶೆಟ್ಟಿಯವರು 8ನೇ ತರಗತಿಯ ವಿದ್ಯಾಥಿರ್üಗಳಿಗೆ ಉತ್ತೇಜನ ನೀಡಲು ತಲಾ 5 ಸಾವಿರ ರೂಪಾಯಿಗಳ ಠೇವಣಿ ಪತ್ರ, ಮುದ್ರಾಡಿಯ ಪಂಚಾಯಿತಿ ವ್ಯಾಪ್ತಿಯ 60 ಮಂದಿಯಲ್ಲಿ ಸಾಂಕೇತಿಕವಾಗಿ 27ಮಂದಿ ನವಜಾತ ಹೆಣ್ಣು ಶಿಶುಗಳ ಮುಂದಿನ ವಿದ್ಯಾರ್ಜಾನೆಗೆ ಮುದ್ರಾಡಿ ಗ್ರಾಮ ಪಂಚಾಯಿತಿ ಮೂಲಕ ತಲಾ 10 ಸಾವಿರ ರೂಪಾಯಿಗಳ ಪ್ರೋತ್ಸಾಹಕ ಠೇವಣಿ ಪತ್ರಗಳ ಹಸ್ತಾಂತರ, ಮುದ್ರಾಡಿ ಸರ್ಕಾರಿ ಮಾದರಿ ಶಾಲೆಯ ಗೌರವ ಶಿಕ್ಷಕಿಗೆ ಗೌರವಧನದ ಚೆಕ್ ಹಸ್ತಾಂತರ ಮತ್ತು 25 ಮಂದಿ ಶಿಕ್ಷಕ ಶಿಕ್ಷಕಿಯರಿಗೆ ಗುರುವಂದನೆ ಮತ್ತು ಸಂಸ್ಥೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದ್ದಿ ವರ್ಗ ಹಾಗೂ ವಿವಿಧ ಗಣ್ಯರಿಗೆ ಸನ್ಮಾನ ನಡೆಯಿತು.


ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೃಷ್ಣ ಡಿ.ಶೆಟ್ಟಿ ಅವರ ತೈಲಚಿತ್ರ ಅನಾವರಣ ಮಾಡಲಾಯಿತು. ರಜತ ಸಂಭ್ರಮದ ವೈಭವದ ಸವಿನೆನಪಿಗೆ ಶ್ರೀಗಂಧದ ಗಿಡಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.

ಸಮಾರಂಭ ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಡಿ.ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಮೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ, ಸ್ಥಳೀಯ ಪ್ರಮುಖರಾದ ಮುದ್ರಾಡಿ ವಾದಿರಾಜ ರಾವ್, ಮುದ್ರಾಡಿ ಮಂಜುನಾಥ ಕಾಮತ್, ಮುದ್ರಾಡಿ ಸದಾನಂದ ಶೆಟ್ಟಿ, ಹೆಬ್ರಿ ಭಾಸ್ಕರ ಜೋಯಿಸ್, ಹರಿದಾಸ ಬಿ.ಸಿ.ರಾವ್ ಶಿವಪುರ, ವರಂಗದ ವೃಷಭದೇವ ಅಧಿಕಾರಿ, ವಿದ್ಯಾಸಾಗರ ಎಜುಕೇಷನ್ ಟ್ರಸ್ಟ್ ಸದಸ್ಯರಾದ ಸಾಹಿತಿ ಅಂಬಾತನಯ ಮುದ್ರಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಮುಂಬಯಿಯ ಕೃಷ್ಣಕಾಂತ್ ಗುಪ್ತಾ, ದೀಪಕ್ ಜಂತ್ರಿ, ಹಳೇ ವಿದ್ಯಾಥಿರ್ü ಸಂಘದ ಅಧ್ಯಕ್ಷ ಹರಿಪ್ರಸಾದ್ ಹೆಬ್ಬಾರ್, ಕಾರ್ಯದರ್ಶಿ ಪ್ರಕಾಶ ಶೇರಿಗಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ರಾವ್, ವಿದ್ಯಾಥಿರ್ü ನಾಯಕ ದೀಪಕ್ ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಮತ್ತು ಪಿ.ವಿ.ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ ಸಿರಿಬೀಡು ದಿವಾಕರ ನಾರಾಯಣ ಶೆಟ್ಟಿ ಸ್ವಾಗತಿಸಿ ಅಶೋಕ ಕುಮಾರ ಶೆಟ್ಟಿ ವಂದಿಸಿದರು.

ಮುದ್ರಾಡಿ ಎಂಎನ್‍ಡಿಎಸ್‍ಎಂ ಪ್ರೌಢಶಾಲೆ-ರಜತ ಸಂಭ್ರಮ : ಕೊಡುಗೆಗಳ ಹಸ್ತಾಂತರ
ಮುದ್ರಾಡಿ ವಿದ್ಯಾಸಾಗರ ಎಜ್ಯುಕೇಷನ್ ಟ್ರಸ್ಟ್ ಸ್ಥಾಪಿಸಿದ ಮೇಲ್ಮನೆ ನರಸಮ್ಮ ದುಗ್ಗಯ್ಯ ಶೆಟ್ಟಿ ಸ್ಮಾರಕ ಅನುದಾನಿತ ಪ್ರೌಢಶಾಲೆಯ ರಜತ ಮಹೋತ್ಸವ ಸಂಭ್ರಮಕ್ಕೆ ಶುಕ್ರವಾರ ವೈಭವದ ಚಾಲನೆ ನೀಡಲಾಯಿತು. ಹೆಬ್ರಿ ವೃತ್ತದ ಶಿಕ್ಷಣ ಸಂಯೋಜಕ ಮಹಾಬಲ ನಾಯ್ಕ್ ಧ್ವಜಾರೋಹಣ ನೆರವೇರಿಸಿದರು. ಮುದ್ರಾಡಿ ವಿದ್ಯಾಸಾಗರ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷರಾದ ಶಿಕ್ಷಣ ಪ್ರೇಮಿ ಮುಂಬೈ ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಎನ್.ಶೆಟ್ಟಿ ಶಾಲೆಯ ಎಲ್ಲಾ ವಿದ್ಯಾಥಿರ್üಗಳಿಗೆ ತನ್ನ ಸ್ವಂತ ಖರ್ಚಿನಿಂದ ನೀಡಿದ ಸಮವಸ್ತ್ರವನ್ನು ವಿತರಿಸಲಾಯಿತು.

ಟ್ರಸ್ಟ್ ವತಿಯಿಂದ ಶಾಲೆಯಲ್ಲಿ ರಚಿಸಿದ ಸೈಕಲ್ ತಂಗುದಾಣವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಉದ್ಘಾಟಿಸಿದರು. ಮುದ್ರಾಡಿ ಪೇಟೆಯಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಪ್ರತಿಮೆಗೆ ಮುಂಬಯಿಯ ಕೃಷ್ಣಕಾಂತ್ ಗುಪ್ತಾ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಛದ್ಮವೇಷ ಸ್ಪರ್ಧೆ ನಡೆಯಿತು.

ವಿದ್ಯಾ ಸಾಗರ ಎಜ್ಯುಕೇಷನ್ ಟ್ರಸ್ಟ್ ಸದಸ್ಯ ಸಾಹಿತಿ ಅಂಬಾತನಯ ಮುದ್ರಾಡಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಮುಂಬಯಿಯ ದೀಪಕ್ ಜಂತ್ರಿ, ಮುದ್ರಾಡಿಯ ಮಂಜುನಾಥ ಕಾಮತ್, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಉಪಾಧ್ಯಕ್ಷ ರಾಘವೇಂದ್ರ ನಾಯ್ಕ್, ಸದಸ್ಯರಾದ ಕೃಷ್ಣ ಆಚಾರ್ಯ, ಸಂತೋಷ ಕುಮಾರ್ ಶೆಟ್ಟಿ, ಶುಭಧರ ಶೆಟ್ಟಿ, ವರಂಗದ ವೃಷಭದೇವ ಅಧಿಕಾರಿ, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ ಶೇರಿಗಾರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ರಾವ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ಆಶಾಲತಾ, ವಿದ್ಯಾರ್ಥಿ ನಾಯಕ ದೀಪಕ್, ಶಿಕ್ಷಕರಾದ ಚಂದ್ರಶೇಖರ ಭಟ್, ಪಿ.ವಿ.ಆನಂದ ಸಾಲಿಗ್ರಾಮ, ರಘುಪತಿ ಹೆಬ್ಬಾರ್, ಶ್ಯಾಮಲ ಕೊಠಾರಿ, ಮಹೇಶ ನಾಯ್ಕ್, ಅನಿತಾ, ಕಛೇರಿಯ ಸಿಬ್ಬಂದ್ದಿ ಮಹೇಶ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here