Sunday 28th, April 2024
canara news

ಸಂತ ಮೇರಿಸ್ ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಮ್ಮಿಲನ

Published On : 23 Dec 2017   |  Reported By : Bernard D'Costa


ಕುಂದಾಪುರ, ಡಿ.23: ಕುಂದಾಪುರದ ಸಂತ ಮೇರಿಸ್ ಪ್ರೌಢಶಾಲೆಗೆ ಐವತ್ತು ಸಂವಸ್ಸರಗಳು ತುಂಬಿ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಡಿಸೆಂಬರ್ 22 ರಂದು ಬೆಳ್ಳಿಗೆ ಹಳೆ ವಿದ್ಯಾರ್ಥಿಗಳ ಅಪೂರ್ವವದ ಸಮ್ಮಿಲನ ಕಾರ್ಯಕ್ರಮ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನೆಡೆಯಿತು.

 

ಈ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಅನಿಲ್ ಸುವರ್ಣ ಮಹೋತ್ಸವದ ನೆನೆಪಿಗಾಗಿ ಶಾಲಾ ಚಿತ್ರ ಇರುವ ಕಪ್ಪನ್ನು ಬಿಡುಗಡೆ ಮಾಡಿ ‘ಇವತ್ತು ನೀವು ಹಲವಾರು ಬ್ಯಾಚುಗಳ ಹಳೆ ವಿದ್ಯಾರ್ಥಿಗಳು ಸೇರಿದ್ದಿರಿ, ಎಸ್ಟೋ ಹಳೆ ನೆನಪುಗಳನ್ನು ಮೆಲುಕು ಹಾಕುವ ಸಂತೋಷದ ಕ್ಷಣಗಳಿವು. ಹೆಚ್ಚಿನ ಸಂಖ್ಯೆಯಲ್ಲಿ ನೀವು ಭಾಗವಹಿಸಿ ಶಾಲೆಯ ಮೇಲಿರುವ ಅಭಿಮಾನವನ್ನು, ಪ್ರೀತಿಯನ್ನು ತೋರಿದ್ದಿರಿ, ನಿಮ್ಮಿಂದ ಶಾಲೆಗೆ ಒಳಿತಾಗಲಿ, ನಿಮಗೂ ಒಳಿತಾಗಲೆಂದು’ ಅವರು ಶುಭ ಹಾರೈಸಿದರು.

ಹಳೆ ವಿದ್ಯಾರ್ಥಿಗಳಿಂದ ಹರಟೆ, ಹಳೆ ನೆನಪುಗಳ ಉದ್ಘಾರ, ಖುಷಿ ಕೊಡುವ ಆಟಗಳನ್ನು ನೆಡಸಲಾಯಿತು. ಕೆಲವರಂತೂ 45 ವರ್ಷಗಳ ನಂತರ ಪ್ರಥಮವಾಗಿ ಭೇಟಿಯಾದವರು, ವಿದೇಶದಿಂದ ಬಂದವರೂ ಸೇರಿ ಸುಮಾರು ಮೂರುವರೆ ಗಂಟೆಗಳ ಕಾಲ ಹಳೆ ವಿದ್ಯಾಥಿಗಳು, ಅನಂದಮಯವಾದ ಕ್ಷಣಗಳನ್ನು ಅನುಭವಿಸಿದರು, ಶಿಕ್ಷಕ ಭಾಸ್ಕರ ಗಾಣಿಗರು ತಾತ್ಕಲಿಕವಾಗಿದ್ದ ಈ ಹಳೆ ವಿದ್ಯಾರ್ಥಿಗಳ ಸಂಘಟನೆಯನ್ನು ಕಾಯಂ ಆಗಿ ಮುಂದುವರೆಸಬೇಕೆಂಬ ಸಲಹೆ ನೀಡಿದರು.

ತತ್ಕಾಲಿಕವಾದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಟಿ.ಪ್ರವೀಣ್ ಕುಮಾರ್ ಸ್ವಾಗತಿಸಿ, ತನಗೆ ಸಹಕಾರ ನೀಡಿದವರನ್ನು ಸ್ಮರಿಸಿದರು. ಮುಖ್ಯೊಪಾಧ್ಯಯಿನಿ ಸಿಸ್ಟರ್ ಚೇತನ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಪ್ರಸ್ತಾವಿಕ ನುಡಿಗಳನ್ನಾಡಿದುರು. ಚೇತನ ಕುಮಾರ್ ಶೆಟ್ಟಿ ಮತ್ತು ರಾಕೇಶ್ ಸೋನ್ಸ್ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಕಾರ್ಯದರ್ಶಿ ಕಿರಣ್ ಕುಮಾರ್ ನಾಯಕ್ ಧನ್ಯವಾದಗಳನು ಅರ್ಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here