Thursday 2nd, May 2024
canara news

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ `ಅನುವಾದ ಕಲೆ'ಉಪನ್ಯಾಸ

Published On : 14 Jan 2018   |  Reported By : Rons Bantwal


ಅನುವಾದ ಅಂದರೆ ಮರುಸೃಷ್ಠಿ ಇದ್ದಂತೆ: ಡಾ| ಬಿ.ಜನಾರ್ದನ ಭಟ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.14: ಅನುವಾದದ ಕೆಲಸ ಅಷ್ಟು ಸುಲಭದ ಕೆಲಸವಲ್ಲ. ಅನುವಾದವೆಂದರೆ ಮರುಸೃಷ್ಟಿ ಇದ್ದಂತೆ. ಅನುವಾದದಲ್ಲಿ ನಾಲ್ಕು ಕ್ರಿಯೆಗಳನ್ನು ಗುರುತಿಸಬಹುದು. ಮೂಲಕ್ಕೆ ನಿಷ್ಠನಾಗಿ ಅನುವಾದಿಸುವುದು, ರೂಪಾಂತರ, ಪ್ರೇರಣೆ, ಸಂಸ್ಕೃತಿಯ ಅನುವಾದ ಇವು ಆ ನಾಲ್ಕು ಪ್ರಮುಖ ಘಟಕಗಳನ್ನು ಅನುವಾದಕನು ತಿಳಿದುಕೊಳ್ಳಬೇಕಾದ ಸಂಗತಿಗಳು. ಯಾವುದೇ ಒಂದು ಕೃತಿ ಶಬ್ದದ ಅನುವಾದವಾಗಿರಬಾರದು. ಅದು ಒಂದು ಸಂಸ್ಕೃತಿಯ ಅನುವಾದವಾಗಿರಬೇಕು. ಓದುಗನ ಮನಸ್ಸು ತಟ್ಟುವಂತೆ ಅನುವಾದ ಇರಬೇಕು. ಅನುವಾದ ಕೈಗೊಳ್ಳುವಾಗ ನಾನಾ ಸಮಸ್ಯೆಗಳು ಎದುರಾಗುತ್ತವೆ. ಅವುಗಳೆಲ್ಲವನ್ನು ಬಗೆಹರಿಸಿಕೊಂಡು ಅನುವಾದಕ್ಕೆ ಮುಂದಾಗಬೇಕು. ಎರಡು ಭಾಷೆಯ ಜ್ಞಾನವುಳ್ಳವನೇ ಒಳ್ಳೆಯ ಅನುವಾದಕನಾಗಲು ಸಾಧ್ಯ. ಮೂಲಕ್ಕೆ ನಿಷ್ಠನಾಗಿಯೇ ಅನುವಾದದ ಕಾರ್ಯ ಕೈಗೊಂಡರೆ ಮಾತ್ರ ಅನುವಾದಕನು ನಿಜವಾದ ಯಶಸ್ಸು ಕಾಣಬಲ್ಲನು ಎಂದು ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕನ್ನಡ ವಿಭಾಗದ ವಿದ್ಯಾಥಿರ್üಗಳಿಗೆ ಆಯೋಜಿಸಿದ್ದ `ಅನುವಾದ ಕಲೆ' ವಿಷಯದಲ್ಲಿ ಉಪನ್ಯಾಸವನ್ನಿತ್ತು ಡಾ| ಜನಾರ್ದನ ನುಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಬೃಹನ್ಮುಂಬಯಿನ ಹಿರಿಯ ಪತ್ರಕರ್ತ, ಲೇಖಕ ಶ್ರೀನಿವಾಸ ಜೋಕಟ್ಟೆ ಅತಿಥಿüಯಾಗಿ ಉಪಸ್ಥಿತರಿದ್ದರು.

ಪತ್ರಿಕಾರಂಗದಲ್ಲಿ ಅನುವಾದಕ್ಕೆ ತುಂಬಾ ಬೇಡಿಕೆಯಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವವನಿಗೆ ಆ ಭಾಷೆಯ ಸಂಪೂರ್ಣ ಜ್ಞಾನ ಇರಬೇಕು. ಎರಡು ಭಾಷೆಗಳಲ್ಲಿ ಹಿಡಿತ ಸಾಧಿಸಬೇಕು. ಯಾವುದಾದರೂ ಒಂದು ಲೇಖನ ಸಮಾಜಕ್ಕೆ ಬೇಕಾಗುವಂತಹ ಲೇಖನವನ್ನು ಅನುವಾದಿತ ಪತ್ರಿಕೆಗಳಿಗೆ ನೀಡಲಾಗುತ್ತದೆ. ಸಮಾಜ ವಿರೋಧಿ ವಿಷಯಗಳನ್ನು ಕೈಬಿಟ್ಟು ಅನುವಾದ ಕೈಗೊಳ್ಳಬೇಕು. ಜನಪರವಾದ ಲೇಖನಗಳನ್ನು ಅನುವಾದ ಮಾಡಬೇಕು. ಜೀವ ವಿರೋಧಿ ನಿಲುವುಗಳ ಸಂಗತಿಗಳನ್ನು ಅನುವಾದಕನು ಅನುವಾದಿಸಬಾರದು. ಅನುವಾದ ಎಂದರೆ ತಿಳಿಯುವುದು ತಿಳಿಸುವುದು ಪತ್ರಿಕಾರಂಗದಲ್ಲಿ ಅನುವಾದಕನು ತುಂಬಾ ಜಾಗೃತನಾಗಿರಬೇಕು ಎಂದು ಶ್ರೀನಿವಾಸ ಜೋಕಟ್ಟೆ ತಿಳಿಸಿದರು.

ಡಾ| ಜಿ.ಎನ್ ಉಪಾಧ್ಯಾಯ ಪ್ರಸ್ತಾವಿಕ ನುಡಿಗಳನ್ನಾಡಿ ಅನುವಾದವು ದೇಶ, ಭಾಷೆಯನ್ನು ಒಂದುಗೂಡಿಸುವುದು. ದೇಶ ಕಾಲವನ್ನು ದಾಟುವಂತಹದು. ಕನ್ನಡದಲ್ಲಿ ಸಾಕಷ್ಟು ಅನುವಾದ ಸಾಹಿತ್ಯ ಬಂದಿದೆ. ಮುಂಬಯಿಯಲ್ಲಿ ಅನುವಾದ ಸಾಹಿತ್ಯವನ್ನು ಕನ್ನಡಕ್ಕೆ ತಂದಿದ್ದಾರೆ. ಮುಂಬಯಿಯಲ್ಲಿ ಅನೇಕ ಸಾಹಿತಿಗಳು ಕನ್ನಡ ಅನುವಾದ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಿಕೆ ನೀಡಿದ್ದಾರೆ. ಚುರ-ಮುರಿ ಶೇಷಗಿರಿ ನಾಯಕರ ಅಭಿಜ್ಞಾನ ಶಾಕುಂತಲ ನಾಟಕವು ಮುಂಬಯಿಯಲ್ಲಿ ಅನುವಾದಗೊಂಡು ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸುರೇಖಾ ಸುಂದರೇಶ್ ದೇವಾಡಿಗ, ರಮಾ ಉಡುಪ, ಕುಮುದಾ ಆಳ್ವ, ಅನಿತಾ ಪಿ.ಪೂಜಾರಿ ತಾಕೋಡೆ, ಸುರೇಖಾ ಹರಿಪ್ರಸಾದ್ ಶೆಟ್ಟಿ, ಎಸ್.ನಳಿನಾ ಪ್ರಸಾದ್, ಜ್ಯೋತಿ ಎನ್.ಶೆಟ್ಟಿ, ಉದಯ ಬಿ.ಶೆಟ್ಟಿ, ಜಯ ಪೂಜಾರಿ ಕೊಜಕೊಳ್ಳಿ, ಲಕ್ಷಿ ್ಮೀ ಪೂಜಾರ್ತಿ, ದುಗ್ಗಪ್ಪ ಕೋಟಿಯವರ್ ಉಪಸ್ಥಿತರಿದ್ದು ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಮಂಜುನಾಥ್ ವಂದಿಸಿದರು.

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here