Thursday 2nd, May 2024
canara news

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಐದು ಕೃತಿಗಳ ಬಿಡುಗಡೆ

Published On : 15 Jan 2018   |  Reported By : Rons Bantwal


ಸಾಹಿತಿಗೆ ಇರುವಂತಹ ತುಡಿತವೇ ಓರ್ವ ಕಲಾವಿದನಿಗೂ ಇರುತ್ತದೆ: ಮಾರ್ನಾಡ್

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.15: ಸಾಹಿತಿಗೆ ಇರುವಂತಹ ತುಡಿತವೇ ಓರ್ವ ಕಲಾವಿದನಿಗೂ ಇರುತ್ತದೆ. ಕನ್ನಡ ಭಾಷೆ ಕನ್ನಡದ ಬಗ್ಗೆ ಅಭಿಮಾನದ ನುಡಿಗಳನ್ನು ಮಾತನಾಡಿದರು. ಕಿರಿಯ ಬರಹಗಾರರನ್ನು ನಮ್ಮ ಸಮಾನವಾಗಿ ನೋಡಿಕೊಳ್ಳಬೇಕು. ಯುವ ಪ್ರತಿಭೆಗಳನ್ನು ಗುರುತಿಸಿ ಗೌರವ ಮಾಡೋದು ಅದಕ್ಕಿಂತ ಉತ್ತಮವಾದ ಕೆಲಸವಿಲ್ಲ. ಜನಾರ್ಧನ ಭಟ್ ಅವರ ಕಾದಂಬರಿಯ ಮಹತ್ವವನ್ನು ತಿಳಿಸಿದರು. ಮುಂಬಯಿಯಲ್ಲಿ ಓದುವ ಅಭ್ಯಾಸವಿಲ್ಲ ಆದರೆ ಡಾ| ಜಿ.ಎನ್ ಉಪಾಧ್ಯ ಅವರ ನೇತ್ರತ್ವದಲ್ಲಿ ಕನ್ನಡ ವಿಭಾಗವು ಬರಹಗಾರರನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿದ್ದು, ಓದುಗರಿಗೂ ಅವಕಾಶ ಕೊಟ್ಟಿದ್ದಾರೆ ಎಂದು ಪ್ರಸಿದ್ದ ರಂಗ ಕಲಾವಿದ ಮೋಹನ್ ಮಾರ್ನಾಡ್ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶನಿವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮೋಹನ್ ಮಾರ್ನಾಡ್ ಮಾತನಾಡಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್, ಕನ್ನಡ ಸೇನಾನಿ ಎಸ್.ಕೆ ಸುಂದರ್ ಉಪಸ್ಥಿತರಿದ್ದರು.

ಮಾರ್ನಾಡ್ ಮತ್ತು ಸುಂದರ್ ಅವರು ಡಾ| ಜಿ.ಡಿ ಜೋಶಿ ಅವರ `ಸಮಗ್ರ ಕನ್ನಡದ ಕಣ್ಮನಗಳು', ಡಾ| ಜಿ.ಎನ್ ಉಪಾಧ್ಯ ಅವರ `ಏಲೇಶ್ವರ ಕೇತಯ್ಯ' ಹಾಗೂ ಉಪಕ್ಷಿತ ವಚನಗಾರ, ರಾಜೀವ ನಾಯಕ ಅವರ `ಲಾಸ್ಟ್ ಲೋಕಲ್ ಮತ್ತು ಲೋಸ್ಟ್ ಲವ್' ಕಥಾ ಸಂಕಲನ, ಡಾ| ವಿಶ್ವನಾಥ ಕಾರ್ನಾಡ್ ಅವರ `ಪ್ರಸಿದ್ಧ ಅನುವಾದಕ ಡಾ| ವಾಸು ಬಿ.ಪುತ್ರನ್' ಸೇರಿದಂತೆ ಐದು ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿದರು.

ಡಾ| ವಿಶ್ವನಾಥ ಕಾರ್ನಾಡ್ ಮಾತನಾಡಿ ವಾಸು ಪುತ್ರನ್ ಓರ್ವ ಅನುವಾದಕನ್ನಾಗಿ ವಾಸು ಪುತ್ರನ್ ಅವರು ಅನುಭವಿಸಿದ ಭಾವನೆಗಳು ಸಂಸಾರ ತಾಪತ್ರಯಗಳನ್ನು ತಿಳಿಸಿ ಪುತ್ರನ್‍ರ ಬದುಕಿನ ನೋವಿನ ಮುಖಗಳನ್ನು ತೆರೆದಿಟ್ಟರು. ಅನುವಾದಕರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಯಾವುದೇ ಸ್ಥಾನಮಾನ ಸೌಲಭ್ಯವಿಲ್ಲವೆಂದು ವಿಷಾದ ವ್ಯಕ್ತ ಪಡಿಸಿದರು.

ವೈ.ವಿ ಮಧುಸೂದನ್ ರಾವ್, ಡಾ| ದಾಕ್ಷಾಯಣಿ ಯಡವಳ್ಳಿ, ಡಾ| ಈಶ್ವರ ಅಲೆವೂರು ಮತ್ತು ಡಾ| ಪೂರ್ಣಿಮಾ ಎಸ್.ಶೆಟ್ಟಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕೃತಿಕಾರರು ಸಂದರ್ಭೋಚಿತ ವಾಗಿ ತಮ್ಮ ಕೃತಿಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮೋಹನ್ ಮಾರ್ನಾಡ್, ರಾಜೀವ ನಾಯಕ, ಅಹಲ್ಯ ಬಳ್ಳಾಲ್ ಮತ್ತು ಅವಿನಾಶ್ ಶಾಸ್ತ್ರಿ ಅವರು `ಅಸಾಡದ ಒಂದು ದಿನ' ವಚನ ನಾಟಕ ಪ್ರಸ್ತುತ ಪಡಿಸಿದರು.

ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶ್ಯಾಮಆ ಪ್ರಕಾಶ್ ಕೃತಜ್ಞತೆ ಸಲ್ಲಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here