Thursday 2nd, May 2024
canara news

ಕನ್ನಡ ವಿಭಾಗದಿಂದ ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿ ಉಪನ್ಯಾಸ

Published On : 15 Jan 2018   |  Reported By : Ronida Mumbai


ದೂರದೃಷ್ಠಿತ್ವವುಳ್ಳ ಕಾರಂತರ ಮಕ್ಕಳ ಸಾಹಿತ್ಯದಲ್ಲಿ ತರತಮಗಳಿವೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.15: ಕಾರಂತರ ಬಾಲ ಸಾಹಿತ್ಯ ಕೃತಿಗಳು ವೈಶಿಷ್ಟ್ಯತೆವುಳ್ಳವು. ಮಕ್ಕಳ ಸಾಹಿತ್ಯದ ಅಗತ್ಯಗಳನ್ನು ಸರಳ ಭಾಷೆ, ಪದ್ಯಗಳ ಬಳಕೆ, ಕೋಡಂಗಿ ಶಬ್ದಗಳ ಮೂಲಕ ರಚಿಸಿದ್ದಾರೆ. ಮನಸ್ಪರ್ಶಿ ಶಬ್ದಗಳ ಬಳಕೆ ಕಾರಂತರ ಬರವಣಿಗೆಯ ಶ್ರೇಷ್ಠತೆಯಾಗಿದೆ. ಮಕ್ಕಳ ಸಾಹಿತ್ಯದಲ್ಲಿ ವಿವಿಧ ವಯೋಮಾನದವರಿಗೆ ತಕ್ಕ ಹಾಗೆ ಸಾಹಿತ್ಯ ರಚಿಸಬೇಕು ಎಂಬ ಚಿಂತನೆ ಮೂಡಿಸಿದ ದೂರದೃಷ್ಠಿ ಕಾರಂತರು. ಸ್ವಲ್ಪ ದೊಡ್ಡವರಾಗುತ್ತಾ ಹೋದ ಹಾಗೆ ಮಾಹಿತಿ, ಲೋಕಜ್ಞಾನ, ಚಿಂತನೆಗಳನ್ನು ಒಳಗೊಂಡ ಕಥಾನಕಗಳಿರಬೇಕು ಎಂಬ ಮಾರ್ಗದರ್ಶಿ ಸೂತ್ರವನ್ನು ಕಾರಂತರು ತಮಗೆ ತಾವೇ ಹಾಕಿಕೊಂಡಿದ್ದರು. ಆದುದರಿಂದ ಕಾರಂತರ ಮಕ್ಕಳ ಸಾಹಿತ್ಯದಲ್ಲಿ ತರತಮಗಳಿವೆ ಎಂದು ನಾಡಿನ ಹಿರಿಯ ಸಾಹಿತಿ, ವಿದ್ವಾಂಸ ಡಾ| ಜನಾರ್ದನ ಭಟ್ ತಿಳಿಸಿದರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಶನಿವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಸಭಾಗೃಹದಲ್ಲಿ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ಡಾ| ಶಿವರಾಮ ಕಾರಂತ ದತ್ತಿಯಾಗಿಸಿ ಡಾ| ಜನಾರ್ದನ ಭಟ್ `ಶಿವರಾಮ ಕಾರಂತರ ಸಣ್ಣ ಕಥೆಗಳು ಮತ್ತು ಕಾರಂತರ ಮಕ್ಕಳ ಸಾಹಿತ್ಯ' ವಿಷಯವಾಗಿ ಉಪನ್ಯಾಸವನ್ನಿತ್ತರು.

ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಸಾಹಿತಿಗಳಾದ ಡಾ| ಜಿ.ಡಿ ಜೋಶಿ, ಡಾ| ವಿಶ್ವನಾಥ ಕಾರ್ನಾಡ್, ಕನ್ನಡ ಸೇನಾನಿ ಎಸ್.ಕೆ ಸುಂದರ್, ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ| ಸುನೀತಾ ಎಂ.ಶೆಟ್ಟಿ, ರಾಜೀವ ನಾಯಕ, ವೈ.ವಿ ಮಧುಸೂದನ್ ರಾವ್, ಡಾ| ದಾಕ್ಷಾಯಣಿ ಯಡವಳ್ಳಿ, ಡಾ| ಈಶ್ವರ ಅಲೆವೂರು, ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಕೊಲ್ಯಾರು ರಾಜು ಶೆಟ್ಟಿ, ಮಿಇತ್ರಾ ವೆಂಕಟ್ರಾಜ್, ಓಂದಾಸ್ ಕಣ್ಣಂಗಾರ್, ಅವಿನಾಶ್ ಕಾಮತ್, ಸಾ.ದಯಾ, ಎ.ನರಸಿಂಹ ರಾವ್, ಪಿ.ಎಸ್ ಕಾರಂತ, ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆ ಗೈದರು. ಕನ್ನಡ ವಿಭಾಗದ ಸಹಾಯಕ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಶ್ಯಾಮಲಾ ಪ್ರಕಾಶ್ ಧನ್ಯವದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here