Thursday 2nd, May 2024
canara news

ಗಂಗೊಳ್ಳಿಯಲ್ಲಿ ರೋಜರಿ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಗ್ರಾಹಕರ ಸಮ್ಮಿಲನ

Published On : 15 Jan 2018   |  Reported By : Bernard Dcosta


ಕುಂದಾಪುರ,ಜ.15: ಇತ್ತೀಚೆಗೆ ಸ್ವರ್ಣ ಮಹೋತ್ಸವನ್ನು ಆಚರಿಸಿದ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪ್‍ರೇಟಿವ್ ಲಿ. ಸೊಸೈಟಿಯ ಗ್ರಾಹಕರ ಸಮ್ಮಿಲನವು ಭಾನುವಾರದಂದು ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಸಭಾಭವನದಲ್ಲಿ ಜರಗಿತು. ಇದರ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡ ವಹಿಸಿ ‘ನಾವು ಈ ಸೊಸೈಟಿಯ ಬೆಳವಣಿಗಾಗಿ ಶ್ರಮಿಸುತ್ತಾ ಇದ್ದೆವೆ, ಈ ಶ್ರಮದ ಫಲವಾಗಿ ಈ ಸೊಸೈಟಿಯ ಕಾರ್ಯವ್ಯಾಪ್ತಿಯನ್ನು ಕುಂದಾಪುರ ತಾಲೂಕಿನ ಗಡಿ ದಾಟಿ ಇತರಕಡೆ ವಿಸ್ತರಿಸುವತ್ತ ದಾವಿಸಿ ಈಗಲೇ 7 ಕಡೆ ನಮ್ಮ ಶಾಖೆಗಳನ್ನು ತೆರೆದಿದ್ದೆವೆ, ಹಾಗೆಯೆ ಗಂಗೊಳ್ಳಿಯ ಗ್ರಾಹಕರ ಸೇವೆಗೆ ಅನೂಕೂಲತೆಗಾಗಿ ನಾವು ಅತೀ ಶೀಘ್ರದಲ್ಲಿ ಗಂಗೊಳ್ಳಿಯಲ್ಲಿ  ಶಾಖೆಯನ್ನು ಉದ್ಘಾಟಿಸಲಿದ್ದೆವೆ, ಇತ್ತಿಚಿನ ಅದಿನಗಳಲ್ಲಿ ಸೊಸೈಟಿ ಬಹಳ ಪ್ರಗತಿಯನ್ನು ಕಂಡಿದ್ದು. ಪ್ರಸ್ತೂತ ವರ್ಷದಲ್ಲಿ ಸುಮಾರು ರೂ. 150 ಕೋಟಿಗೂ ಮಿಕ್ಕಿ ವ್ಯಹಹಾರವನ್ನು ಸಾಧಿಸಿ, ಸುಮಾರು ರೂ  35 ಕೋಟಿ ಠೇವಣಿ ಸಂಗ್ರಹಿಸಿ,  ರೂ. 31 ಕೋಟಿ ಸಾಲವನ್ನು ವಿತರಿಸಿದ್ದೆವೆ, ಹಾಗೇ ನಮ್ಮ ಸಿಂಬದಿ ಕಾರ್ಯ ದಕ್ಷತೆಯಿಂದ ತುಂಬ ಒಳ್ಳೆಯ ರೀತಿಯಲ್ಲಿ ಮರು ಪಾವತಿಯನ್ನು ಪಡೆದುಕೊಂಡ ಕೀತಿಗೆ ಈ ಸಂಸ್ಥೆ  ಭಾಜನವಾಗಿದೆ, ಮುಂದೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂಸ್ಥೆಯ ಪಾಲುಗಳನ್ನು ಪಡೆದು, ಠೇವಣಿಯಿಟ್ಟು ಸಹಕರಿಸ ಬೇಕೆಂದು’ ಅವರು ಸೊಸೈಟಿಯ ಕುರಿತಾಗಿ ಮಾಹಿತಿ ಕೊಟ್ಟು ವಿನಂತಿಸಿಕೊಂಡರು.

 

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ ‘ಎಲ್ಲಿ ಒಳಿತನ್ನು ಮಾಡುತ್ತಾರೊ, ಅಲ್ಲಿ ಒಳಿತಾಗುತ್ತೆ, ನೀವು ಈ ಸೊಸೈಟಿಯಲ್ಲಿ ಒಳಿತಾದ ಸೇವೆ ನೀಡಿದ್ದಿರಿ ಹಾಗಾಗಿ ಒಳಿತಾಗಿದೆ, ಇಲ್ಲಿ ಶಾಖೆ ಉದ್ಘಾಟನೆಗೊಂಡರೆ ಇಲ್ಲಿಯೂ ಒಳಿತಾಗುವುದು’ ಎಂದು ಅವರು ನುಡಿದರು. ಸೊಸೈಟಿಯ ಹಿರಿಯ ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ ‘ನಮ್ಮ ಸಂಸ್ಥೆ ಬೆಳೆಯಲು ಕಾರಣ ನಮ್ಮೇಲರ ನಿಸ್ವಾರ್ಥ ಸೇವೆ’ ಎಂದು ತಿಳಿಸಿದರು.

ನಿರ್ದೇಶಕರು ಮತ್ತು ಸಿಂಬದಿ ವರ್ಗ ಪ್ರಾರ್ಥನ ಗೀತೆಯನ್ನು ಹಾಡಿತು. ಸಂಸ್ಥೆಯ ನಿರ್ದೇಶಕ ಜೆರಾಲ್ಡ್ ಕ್ರಾಸ್ತಾ ಸ್ವಾಗತಿಸಿದರು, ನಿರ್ದೇಶಕರಾದ ಕಿರಣ್ ಲೋಬೊ, ಶಾಂತಿ ಕರ್ವಾಲ್ಲೊ, ಸ್ಟ್ಯಾನ್ಲಿ ಡಿಸೋಜಾ, ಡಾಯಾನಾ ಡಿಆಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು. ಶಾಖಾಧಿಕಾರಿ ಮೇಬಲ್ ಡಿಆಲ್ಮೇಡಾ ವಂದಿಸಿದರು. ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here