Wednesday 1st, May 2024
canara news

ಗುರುನಾರಾಯಣ ನೈಟ್ ಹೈಸ್ಕೂಲ್ ಸಂಭ್ರಮಿಸಿದ 57ನೇ ವಾರ್ಷಿಕೋತ್ಸವ

Published On : 15 Jan 2018   |  Reported By : Rons Bantwal


ರಾತ್ರಿ ಶಾಲಾಭ್ಯಾಸದ ಕೀಳರಿಮೆ ಸಲ್ಲದು : ಎಲ್.ವಿ ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.15: ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಬಿಲ್ಲವ ಸಮಾಜದ ಜಯ ಸುವರ್ಣರಂತಹ ಶಿಕ್ಷಣಾಭಿಮಾನಿಗಳು ಕನಿಷ್ಠ ರಾತ್ರಿ ಶಾಲೆ ಮೂಲಕವಾದರೂ ಮಕ್ಕಳನ್ನು ಓದಿಸಬೇಕು ಎಂದು ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿ ಕೊಂಡರು. ಅಂತಹದರಲ್ಲಿ ರಾತ್ರಿ ಶಾಲೆ ಓದಿ ಸಾಧನಾ ಶಿಖರಕ್ಕೇರಿ ಮೆರೆದ ವಿದ್ಯಾಥಿರ್üಗಳು ನಮ್ಮ ಸಂಸ್ಥೆಗೆ ಪ್ರತಿಷ್ಠೆಯನ್ನು ತಂದೊದಗಿಸಿದ್ದು ಅಭಿಮಾನ ತಂದಿದೆ. ಮಹಾರಾಷ್ಟ್ರ ರಾಜ್ಯದ 173 ರಾತ್ರಿ ಶಾಲೆಯಲ್ಲಿ ಗುರು ನಾರಾಯಣ ರಾತ್ರಿ ಶಾಲೆ ಪ್ರಥಮ ಸ್ಥಾನದಲ್ಲಿರುವುದಕ್ಕೆ ಶಿಕ್ಷಕರ ಪ್ರಾಮಾಣಿಕ ದುಡಿಮೆ ಒಂಡೆಡೆಯಾದರೆ ವಿದ್ಯಾಥಿರ್üಗಳ ಅವಿರತ ಶ್ರಮವೇ ಇದಕ್ಕೆ ಸಾಕ್ಷಿ ಎಣಿಸಿದೆ. ಹಗಲು ಶಾಲೆಕ್ಕಿಂತ ರಾತ್ರಿ ಶಾಲೆಗಳಲ್ಲಿ ಕಲಿಯುವುದು ಕೀಳು ಅಲ್ಲ ಎಂದು ಈ ಮೂಲಕ ಶಾಲಾ ಮಕ್ಕಳು ತೋರಿಸಿದ್ದಾರೆ. ಭವಿಷ್ಯತ್ತಿನಲ್ಲೂ ಉತ್ತಮವಾಗಿ ಕಲಿತು ದೇಶದ ಶ್ರೇಷ್ಠ ನಾಗರಿಕರು ಆಗುವಲ್ಲಿ ಇಂತಹ ಶಾಲೆಗಳು ಪೆÇ್ರೀತ್ಸಹವಾಗಲಿ ಎಂದು ಬಿಲ್ಲವರ ಅಸೋಸಿಯೇಶನ್‍ನ ನಿಕಟಪೂರ್ವಾಧ್ಯಕ್ಷ, ಕನ್ನಡ ಸಂಘ ಸಾಂತಾಕ್ರೂಜ್‍ನ ಅಧ್ಯಕ್ಷ ಎಲ್.ವಿ ಅವಿೂನ್ ಮಕ್ಕಳಿಗೆ ಹಿತನುಡಿಗಳನ್ನಾಡಿದರು.

ಬಿಲ್ಲವರ ಅಸೋಸಿಯೇಶನ್ ಸಂಚಾಲಕತ್ವದ ಗುರುನಾರಾಯಣ ನೈಟ್ ಹೈಸ್ಕೂಲ್ ತನ್ನ 57ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಪಾರಿತೋಷಕ ವಿತರಣಾ ಸಮಾರಂಭ ಇಂದಿಲ್ಲಿ ಶನಿವಾರÀ ಸಂಜೆ ಸಾಂತಾಕ್ರೂಜ್‍ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮಿಸಿದ್ದು ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ, ಭಾರತ್ ಬ್ಯಾಂಕ್‍ನ ನಿರ್ದೇಶಕ ಎಂ.ಬಿ ಕುಕ್ಯಾನ್ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದ್ದು ಮುಖ್ಯ ಅತಿಥಿü ಆಗಿದ್ದು ಎಲ್.ವಿ ಅವಿೂನ್ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿüಗಳಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಭಾಸ್ಕರ ಎಂ.ಸಾಲ್ಯಾನ್, ತುಳು ಚಿತ್ರರಂಗದ ನಟ, ತೌಳವ ಸೂಪರ್‍ಸ್ಟಾರ್ ಸೌರಭ್ ಸುರೇಶ್ ಭಂಡಾರಿ ಗೌರವ ಅತಿಥಿüಯಾಗಿ ಉಪಸ್ಥಿತರಿದ್ದರು.

ಅಸೋಸಿಯೇಶನ್‍ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಅವರನ್ನೊಳಗೊಂಡು ಅತಿಥಿüಗಳು ವಿವಿಧ ಸ್ಪರ್ಧೆಯಲ್ಲಿ ವಿಜೇತ ಮತ್ತು ಉತ್ತಮ ಅಂಕಗಳನ್ನು ಪಡೆದ ವಿದ್ಯಾಥಿರ್üಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಹಾಗೂ ಗತ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಲಾ ವಿದ್ಯಾಥಿರ್üನಿ ಕು| ಪ್ರೀತಿ ಮೂಲ್ಯ ಅವರಿಗೆ ಎಂ.ಬಿ ಕುಕ್ಯಾನ್ ಸ್ವಹಸ್ತದಲ್ಲಿ ಸ್ವರ್ಣ ಪದಕ ಪ್ರದಾನಿಸಿ ಅಭಿನಂದಿಸಿದರು.

ಸಂಸ್ಕಾರ ಮತ್ತು ಸಂಸ್ಕೃತಿ ಬೆಳಗಲು ಕಲೆ ಎಂಬುವುದು ಜ್ಯೋತಿ ಇದ್ದಂತೆ. ಇಂತಹ ಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಅನಾವರಣ ಗೊಳಿಸಿರುವ ರಾತ್ರಿ ಶಾಲಾ ಮಕ್ಕಳ ಪ್ರತಿಭೆಯನ್ನು ಕಂಡು ನನಗೆ ತುಂಬಾ ಖುಷಿ ತಂದಿದೆ ಹಾಗೂ ಅತೀವ ಅಭಿಮಾನವಾಗಿದೆ. ಕಲೆ ಮತ್ತು ಭವ್ಯ ಭಾರತದ ಸದ್ಪ್ರಜೆಗಳ ದೃಷ್ಟಿಯಿಂದ ನಾನು ಇಂತಹ ಮಕ್ಕಳಿಗೆ ಸಹಕಾರ ಪೆÇ್ರೀತ್ಸಾಹ ನೀಡಲು ಸಿದ್ಧ. ಮಕ್ಕಳೆಲ್ಲರೂ ಬದ್ಧತೆಯನ್ನು ಮೈಗೂಡಿಸಿ ಸುಶಿಕ್ಷಣ ಪಡೆದು ಕಲೆಯ ಮೂಲಕ ರಾಷ್ಟ್ರದ ಸಂಸ್ಕೃತಿ ಎತ್ತಿ ಹಿಡಿಯಬೇಕು ಎಂದÀು ಸೌರಭ್ ಭಂಡಾರಿ ತಿಳಿಸಿದರು.

ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಸ್ತಾವಿಕ ನುಡಿಗಳನ್ನಾಡಿ ಶಿಕ್ಷಕರು ಮಕ್ಕಳ ಪೆÇೀಷಕರೆಂದು ಭಾವಿಸಿ ವಿದ್ಯಾಭ್ಯಾಸ ನೀಡಿದಾಗ ಮಕ್ಕಳು ಸಂಸ್ಕಾರಯುತ ಬದುಕನ್ನು ಮೈಗೂಡಿಸಿ ಸರ್ವೋತ್ಕೃಷ್ಟ ಭವಿಷ್ಯ ರೂಪಿಸಲು ಸಾಧ್ಯ. ಇಂತಹ ಮಕ್ಕಳು ರಾಷ್ಟ್ರದ ಸದ್ಪ್ರಜೆಗಳಾಗ ಬಲ್ಲರು ಎನ್ನುತ್ತಾ ಶಿಕ್ಷಕರಿಗೆ ಹಿತನುಡಿಗಳನ್ನಾಡಿ ಶಿಕ್ಷಕರನ್ನು ಮತ್ತು ವಿದ್ಯಾಥಿರ್üಗಳನ್ನು ಹುರಿದುಂಬಿಸಿದರು.

ಶಿಸ್ತು ಶಿಕ್ಷಣದ ಅಡಿಗಲ್ಲು ಎಂಬುವುದು ಜೀವನದಲ್ಲಿ ರೂಡಿಸಿಕೊಳ್ಳಬೇಕು. ಶಿಸ್ತಿನ ಶಿಕ್ಷಣ ಉತ್ತಮ ಪ್ರಜೆಗಳಾಗಲು ಸಾಧ್ಯ. ಅಂತಹ ಶಿಸ್ತಿನಿಂದ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾಥಿರ್sಗಳು ತಮ್ಮ ಪ್ರತಿಭೆಯನ್ನು ಫಲಿತಾಂಶ ಮೂಲಕ ಬಿಲ್ಲವರ ಎಸೋಸಿಯೇಶನ್‍ಗೆ ಕೀರ್ತಿ ತಂದಿದ್ದಾರೆ ಎಂದÀು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಕೋಟ್ಯಾನ್ ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರುಗಳಾದ ಶಿವರಾಜ್ ಪಾಟೀಲ್, ಎಂ ಐ ಬಡಿಗೇರಾ, ಸಿದ್ಧರಾಮಯ್ಯ ದಶಮಣಿ, ಮೋಹಿನಿ ಪೂಜಾರಿ, ಹೇಮಾ ಗೌಡ, ನವಿತಾ ಎಸ್.ಸುವರ್ಣ, ವಿಮಲಾ ಡಿ.ಎಸ್, ಮಲ್ಲೇಶ್ ಗೌಡ, ಸುನೀಲ್ ಪಾಟೀಲ್ ವಿದ್ಯಾಥಿರ್s ಪ್ರತಿನಿಧಿ ಕಾಶಿನಾಥ್ ಎಲ್.ಮಾನ್ಕೋಜಿ, ಹಳೆ ವಿದ್ಯಾಥಿರ್s ಸಂಘದ ಅಧ್ಯಕ್ಷ ರವಿ ಬಂಗೇರ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.

ವಿದ್ಯಾಥಿರ್üನಿ ಬಳಗದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶಾಲಾ ಉಪ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಸ್ವಾಗತಿಸಿದರು. ಆನಂದ ಪೂಜಾರಿ ಅತಿಥಿsಗಳನ್ನು ಪರಿಚಯಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಎಂ.ಐ ಬಡಿಗೇರ ಧನ್ಯವಾದಗೈದರು. ವಿದ್ಯಾಥಿರ್üಗಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಾಗೂ ಶಿಕ್ಷಕ ಸಿದ್ಧರಾಮ ದಶಮನಿ ನಿರ್ದೇಶನದಲ್ಲಿ ಶಾಲಾ ಅಧ್ಯಾಪಕರ ರಚಿತ `ಅವಿವೇಕಿ ಅರಸ ಅಜ್ಞಾನಿ ಪ್ರಜೆಗಳು' ನಾಟಕ ವಿದ್ಯಾಥಿರ್sಗಳು ಪ್ರದರ್ಶಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here