Thursday 2nd, May 2024
canara news

ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ ಸಂಪ್ರದಾಯಿಕವಾಗಿ ಆಚರಿಸಲ್ಪಟ್ಟ ವಾರ್ಷಿಕ ಮಕರ ಸಂಕ್ರಮಣ

Published On : 16 Jan 2018   |  Reported By : Rons Bantwal


(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಸಂಪ್ರದಾಯಿಕವಾಗಿ ವಾರ್ಷಿಕ ಮಕರ ಸಂಕ್ರಮಣ ಸಂಭ್ರಮವನ್ನು ಅರಸಿನ ಕುಂಕುಮ ಕಾರ್ಯಕ್ರಮದೊಂದಿಗೆ ಆಚರಿಸಿತು.

ಆದಿಯಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳು ಭವನದಲ್ಲಿನ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ನೆರವೇರಿಸಿದ ಬಳಿಕ ಅಸೋಸಿಯೇಶನ್‍ನ ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಮಕರ ಸಂಕ್ರಮಣಕ್ಕೆ ಚಾಲನೆ ನೀಡಿದರು. ಬಳಿಕ ನಡೆಸಲ್ಪಟ್ಟ ಅರಸಿನ ಕುಂಕುಮ ಕಾರ್ಯಕ್ರಮವನ್ನು ಅಸೋಸಿಯೇಶನ್ ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿüಯಾಗಿ ಶನಿ ಮಂದಿರ ನೆರೂಲ್ ಇದರ ಮಹಿಳಾ ವಿಭಾಗಧ್ಯಕ್ಷೆ ವೀಣಾ ವಿಶ್ವನಾಥ್ ಪೂಜಾರಿ, ಗೌರವ ಅತಿಥಿüಗಳಾಗಿ ನಗರದ ಹೆಸರಾಂತ ವೈದ್ಯಾಧಿಕಾರಿ ಡಾ| ಅಧಿತಿ ಅಗರ್ವಾಲ್ ಮತ್ತು ವಿೂರಾರೋಡ್‍ನ ವಕೋಡಾ ಆಸ್ಪತ್ರೆಯ ಉನ್ನತಾಧಿಕಾರಿ ಮಾಧವ ಐಲ್ ಮತ್ತು ಸಮಾಜ ಸೇವಕಿ ಯಶೋಧ ಎನ್.ಟಿ ಪೂಜಾರಿ, ಅಸೋಸಿಯೇಶನ್‍ನ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಹಾಗೂ ಗೌ| ಪ್ರ| ಕೋಶಾಧಿಕಾರಿ ಮಹೇ ಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಕೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಲತಾ ವಿ.ಅವಿೂನ್, ಪೂಜಾ ಪಿ.ಕೋಟ್ಯಾನ್, ಗಿರಿಜಾ ಚಂದ್ರಶೇಖರ್ ಮತ್ತು ಬಳಗ ಪ್ರಾರ್ಥನೆಯನ್ನಾಡಿ ದರು. ಜಯಂತಿ ಎಸ್.ಕೋಟ್ಯಾನ್ ಮತ್ತು ವನಿತಾ ಎ.ಕುಕ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಲಕ್ಷಿ ್ಮೀ ಎಸ್. ಪೂಜಾರಿ ಅಭಾರ ಮನ್ನಿಸಿದರು. ಅರಸಿನ ಕುಂಕುಮ ಕಾರ್ಯಕ್ರಮ ಆಚರಣೆಗೈದ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಕೆ.ಬಂಗೇರ, ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್.ಸಾಲ್ಯಾನ್, ಸದಸ್ಯೆಯರುಗಳಾದ ಚಂದ್ರಕಲಾ ಆರ್.ಸುವರ್ಣ, ಸಬಿತಾ ಪೂಜಾರಿ, ಗಿರಿಜಾ ಬಿ.ಪೂಜಾರಿ, ವತ್ಸಲಾ ಕೆ.ಪೂಜಾರಿ, ಲೀಲಾ ಡಿ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯೆಯರುಗಳಾದ ಶೋಭಾ ಎಸ್.ಪೂಜಾರಿ, ಪ್ರೇಮಾ ಆರ್.ಕೋಟ್ಯಾನ್, ಭವಾನಿ ಸಿ.ಕೋಟ್ಯಾನ್, ವನಿತಾ ಎ.ಕುಕ್ಯಾನ್, ಪ್ರಭಾ ಸುವರ್ಣ, ರೇಖಾ ಎಸ್.ಪೂಜಾರಿ, ಹೀರಾ ಡಿ.ಕೋಟ್ಯಾನ್, ಸುಧಾ ಎಲ್.ಅವಿೂನ್, ಸವಿತಾ ಗಂಗಾಧರ್ ಪೂಜಾರಿ, ಧಯಶ್ರೀ ಸುರೇಂದ್ರ ಪೂಜಾರಿ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡು ಮಹಿಳಾ ಪದಾಧಿಕಾರಿಗಳು ಮಹಿಳೆಯರಿಗೆ ಬಾಗಿನ ನೀಡಿ, ಎಳ್ಳುಂಡೆಯನ್ನಿತ್ತು ಸಂಪ್ರದಾಯಿಕವಾಗಿ ಪುಣ್ಯಾಧಿ ಮಕರ ಸಂಕ್ರಮಣ ಆಚರಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here