Thursday 2nd, May 2024
canara news

ಫೆ.10-11: ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶ

Published On : 17 Jan 2018   |  Reported By : Rons Bantwal


ಮುಂಬಯಿನ ಕನ್ನಡ ಸಂಘ-ಸಂಸ್ಥೆಗಳ ನೋಂದಣಿಗೆ ಆಹ್ವಾನ

ಮುಂಬಯಿ, ಜ.17: ಮುಂಬಯಿಯಲ್ಲಿನ ಕನ್ನಡ ಸಂಘ-ಸಂಸ್ಥೆಗಳು ಒಗ್ಗೂಡಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಸಂಸ್ಥೆಯ ಸಹಯೋಗದಿಂದಿಗೆ ಬೃಹನ್ಮುಬಯಿಯಲ್ಲಿ ಇದೇ ಫೆಬ್ರವರಿ 10-11ನೇ ತೇದಿಯಂದು ಅಖಿಲ ಭಾರತ ಹೊರನಾಡ ಕನ್ನಡಿಗರ ಸಮಾವೇಶವನ್ನು ಆಯೋಜಿಸಿವೆ.

ಮುಂಬಯಿಯ ಮೊಟ್ಟ ಮೊದಲ ಕನ್ನಡ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗಳಿಸಿರುವ ಮೊಗವೀರ ಮ್ಯವಸ್ಥಾಪಕ ಮಂಡಳಿ ತಮ್ಮ ಅಂಧೇರಿ ಪಶ್ಚಿಮದ ವೀರಾ ದೇಸಾಯಿ ರಸ್ತೆಯಲ್ಲಿರುವ ಮೊಗವೀರ ಭವನದಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡಿರುವ ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಕನ್ನಡ ಸಂಸ್ಥೆಗಳು ಸಹಯೋಗ ನೀಡಲು ಮುಂದೆ ಬಂದಿದೆ. ಜೊತೆಗೆ ಮುಂಬೈಯ ಹೆಸರಾಂತ ಹಾಗೂ ಅತಿ ಹಳೆಯ ಕನ್ನಡ ಸಂಸ್ಥೆಗಳಾದ ಮೈಸೂರು ಅಸೋಸಿಯೇಷನ್, ಬಿಎಸ್‍ಕೆಬಿ ಅಸೋಸಿಯೇಶನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಕರ್ನಾಟಕ ಸಂಘ ಮುಂಬಯಿ, ಬಂಟರ ಸಂಘ ಮುಂಬಯಿ, ಕನ್ನಡ ಸಂಘ ಮುಂಬಯಿ ಹಾಗೂ ನವಿಮುಂಬಯಿ ಕನ್ನಡ ಸಂಘಗಳು ಈ ಸಮಾವೇಶದ ಯಶಸ್ವಿಗಾಗಿ ತಮ್ಮ ಸಹಯೋಗ ನೀಡಿದ್ದು ಈಗಾಗಲೇ ಸಮಾವೇಶದ ರೂಪರೇಷೆಗಳು ರೂಪುಗೊಂಡಿವೆ.

ಸಮಾವೇಶವು ಮುಂಬೈ ಕನ್ನಡ ಶಾಲಾ ಮಕ್ಕಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರೊಡಗೂಡಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ಪಾಂಡುರಂಗ ವಿಠ್ಠಲನ ಮೆರವಣಿಗೆಯೊಂದಿಗೆ ಮೊದಲಾಗಿ ಆನಂತರ ಸಮಾವೇಶದ ಉದ್ಘಾಟನಾ ಸಮಾರಂಭ. ಪ್ರತಿದಿನ 3 ವಿವಿಧ ವಿಚಾರ ಗೋಷ್ಠಿಗಳು ಮಧ್ಯೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೊನೆಗೆ ಸಮಾರೋಪದೊಂದಿಗೆ ಮುಕ್ತಾಯ ಕಾಣಲಿದೆÉ. ಸಮಾವೇಶದ ಅಂಗವಾಗಿ ಹೊರನಾಡ ಕನ್ನಡ ಸಂಘ ಸಂಸ್ಥೆಗಳ ನಡೆದು ಬಂದ ದಾರಿಯ ಬಗೆಗೆ ಛಾಯಾ ಚಿತ್ರಪ್ರದರ್ಶನ, ಹೊರನಾಡ ಸಾಹಿತಿಗಳ ಪುಸ್ತಕ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಮಾರಾಟ ಮಳಿಗೆ ಹಾಗೂ ನೆನಹೊತ್ತಿಗೆಯ ಬಿಡುಗಡೆ ಕಾರ್ಯಕ್ರಮ ಒಳಗೊಂಡಿವೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದ ಎಲ್ಲ ನಗರಗಳಿಂದ ಸುಮಾರು 300 ಕ್ಕೂ ಮಿಕ್ಕು ಕನ್ನಡ ಪ್ರತಿನಿಧಿಗಳು, ಖ್ಯಾತ ಸಾಹಿತಿಗಳು ವಿಚಾರವಂತರು ಬರಲಿದ್ದಾರೆ. ಕರ್ನಾಟಕದ ಒಳನಾಡಿನಿಂದಲೂ ಹಿರಿಯ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ನಗರದ 25ಕ್ಕೂ ಮಿಕ್ಕಿದ ಸಂಘಗಳು ಸಹಭಾಗಿಗಳಾಗಲು ಒಪ್ಪಿಕೊಂಡಿದ್ದು ಈ ವರೆಗೆ ಇನ್ನೂ ಸಹಭಾಗಿಗಳಾಗದ ಸಂಘ ಸಂಸ್ಥೆಗಳು ಕೂಡಲೇ ಸಮಿತಿಯನ್ನು ಸಂಪರ್ಕಿಸಿ ತಾವೂ ಈ ವಿಶೇಷ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂದೆ ಬರುವಂತೆ ಮುಂಬಯಿ ಸಮಾವೇಶ ಸಮಿತಿ ಪ್ರಕಟಣೆಯಲ್ಲಿ ವಿನಂತಿಸಿದೆ.

ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಡಾ| ಗಣಪತಿ ಶಂಕರಲಿಂಗ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೆ.ಎಲ್ ಬಂಗೇರ, ಬಿ.ಎಸ್.ಕೆ.ಬಿ ಎಓಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತಕುಮಾರ್ ಪೆÇಲಿಪು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದಡಿ.ಕೋಟ್ಯಾನ್ ಮತ್ತಿತರ ಸಂಸ್ಥೆಗಳ ಮುಖ್ಯಸ್ಥರು ಮುಂಬಯಿ ಸಮಾವೇಶ ಸಮಿತಿಯಲ್ಲಿದ್ದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸ್ಥಳೀಯ ಸಮಿತಿ :ಮೈಸೂರು ಅಸೋಸಿಯೇಷನ್, ಮುಂಬೈ, ನಂ-393, ಭಾವುದಾಜಿರಸ್ತೆ, ಮಾಟುಂಗಾ (ಪೂ), ಮುಂಬಯಿ-400 019. (ದೂರವಾಣಿ:24024647 ಯಾ 24037065) ಸಂಪರ್ಕಿಸುವಂತೆ ಈ ಮೂಲಕ ವಿನಂತಿಸಿದೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here