Wednesday 1st, May 2024
canara news

ವಿಶ್ವರ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿ ಅವಿರೋಧ ಆಯ್ಕೆ

Published On : 19 Jan 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.19: ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷರಾಗಿ ಹತ್ತಾರು ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿ ಸಾಧಕ ನಾಯಕ ಹೆಗ್ಗಳಿಕೆಗೆ ಪಾತ್ರರಾಗಿರುವ ಐಕಳ ಹರೀಶ್ 2011ನೇ ಸಾಲಿನ `ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಪುರಸ್ಕೃತರಾಗಿರುವ ಐಕಳ ಹರೀಶ್ ಶೆಟ್ಟಿ ವಿಶ್ವರ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಮಂಗಳೂರು ಅಲ್ಲಿನ ಬಂಟರ ಮಾತೃ ಸಂಘದ ಸಮಾಲೋಚನಾ ಸಭಾಗೃಹದಲ್ಲಿ ಇಂದಿಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ತನಕ ಸುಮಾರು ಹತ್ತು ವರ್ಷಗಳಲ್ಲಿ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಐಕಳ ಹರೀಶ್‍ಶೆಟ್ಟಿ ಅವರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಸಿತು.

ಜಗತ್ತಿನಾದ್ಯಾಂತದ ಪಸರಿಸಿಕೊಂಡು ಬಂಟ ಸಮುದಾಯದ ಸರ್ವೋನ್ನತಿಗಾಗಿ ಸೇವಾ ನಿರತ ನೂರಕ್ಕೂ ಮಿಕ್ಕಿದ ಬಂಟರ ಸಂಸ್ಥೆಗಳ ಸದಸ್ಯತ್ವ ಹೊಂದಿರುವ ಒಕ್ಕೂಟವು ಸುಮಾರು ಮೂವತ್ತು ವರ್ಷಗಳ ಸುದೀರ್ಘಾವಧಿಯ ಸೇವೆಯಲ್ಲಿ ಮುನ್ನಡೆಯುತ್ತಿದ್ದು, ಕಳೆದ ಸುಮಾರು ಹದಿಮೂರು ವರ್ಷಗಳಿಂದ ಅಜಿತ್‍ಕುಮಾರ್ ರೈ ಮಾಲಾಡಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಐಕಳ ಹರೀಶ್ ಶೆಟ್ಟಿ:
ಎಳತ್ತೂರುಗುತ್ತು ರಾಮಣ್ಣ ಶೆಟ್ಟಿ ಮತ್ತು ಐಕಳ ಕುರುಂಬಿಲ್‍ಗುತ್ತು ದೇೀವಕಿ ಶೆಟ್ಟಿ ದಂಪತಿ ಸುಪುತ್ರ. ಶಿಮಂತೂರು ಶಾರದಾ ಹೈಸ್ಕೂಲುನಲ್ಲಿ ಪ್ರೌಢಶಾಲಾಭ್ಯಾಸದ ಬಳಿಕ ಮೂಲ್ಕಿ ವಿಜಯಾ ಕಾಲೇಜ್‍ನಲ್ಲಿ ಬಿಎ ಪದವೀಧರ ಆಗಿದ್ದು, ಓರ್ವ ಪದವೀಧರ ಸೃಜನಶೀಲ ವ್ಯಕ್ತಿತ್ವವಳ್ಳವರು. 1981ರಿಂದ ಸತತ ಮೂರು ವರ್ಷಗಳಿಂದ ದೇಹದಾರ್ಡ್ಯ ಸ್ಪರ್ಧೆಯಲ್ಲಿ `ಮಿಸ್ಟರ್ ಮಂಗ್ಳೂರು ಯುನಿವರ್ಸಿಟಿ', 1982 ಸಾಲಿನಲ್ಲಿ `ಮಿಸ್ಟರ್ ದಕ್ಷಿಣ ಕನ್ನಡ', 1984ರಲ್ಲಿ `ಭಾರತ್ ಕಿಶೋರ್' ಪುರಸ್ಕೃತ ಸರ್ವೋತ್ತಮ ಕ್ರೀಡಾಪಟು. ಮಹಾನಗರ ಮುಂಬಯಿಯಲ್ಲಿನ ಸಮಾಜ ಸೇವಕ, ಚತುರ ಸಂಘಟಕ, ಮುಂಬಯಿಯಲ್ಲಿನ ಯುವ ಸಂಘಟಕ, ಪ್ರಭಾವಿ ನೇತಾರ ಐಕಳ ಹರೀಶ್ ಶೆಟ್ಟಿ ಅವರು ಪತ್ನಿ ಚಂದ್ರಿಕಾ ಹರೀಶ್, ಸುಪುತ್ರ ಅರ್ಜುನ್ ಶೆಟ್ಟಿ, ಸುಪುತ್ರಿ ಸನ್ನಿಧಿ ಶೆಟ್ಟಿ ಅವರನ್ನೊಳಗೊಂಡು ಮುಂಬಯಿ ಉಪನಗರದ ಬೋರಿವಿಲಿಯಲ್ಲಿ ಸುಖಸಂಸಾರ ನಡೆಸುತ್ತಿದ್ದಾರೆ.

ಬಂಟ ಸಮಾಜದ ಮುಂದಾಳುವಾಗಿದ್ದು, ಎಲ್ಲರಿಗೂ ಪೆÇ್ರೀತ್ಸಾಹಕರಾಗಿ ಜನಸಾಮಾನ್ಯರಲ್ಲಿ ತೋರಿದ ಪ್ರೀತಿ ವಿಶ್ವಾಸಗಳೇ ಸೇವೆಯನ್ನೇ ಅಸ್ತ್ರವಾಗಿಸಿ ಸಾಧಿಸಿದ ಸಾಧನೆಗಳೊಂದಿಗೆ ಸಾಮಾಜಿಕ ವಲಯದ ಜನಮನ ಮೆಚ್ಚುಗೆಯ ಧೀಮಂತ ಸಮಾಜ ಸೇವಕ ಎಣಿಸುತ್ತಾ ಕೇವಲ ಬಂಟ ಸಮುದಾಯ ಎಲ್ಲಾ ಸಮಾಜಗಳ ಹಿತಕ್ಕಾಗಿ ಶ್ರಮಿಸಿ ಜನಾನುರೆಣಿಸಿದ ಐಕಳ ಹರೀಶ್ ಸಾಮಾಜಿಕ ವಲಯದ ಜನಪ್ರಿಯ ಸಂಘಟಕರಾಗಿ ಜನಮನ ಮೆಚ್ಚುಗೆ ಪಡೆದಿರುವರು. ಮಹಾನಗರ ಸೇರಿದಂತೆ ರಾಷ್ಟ್ರದಾದ್ಯತ ಅಪಾರ ಹಿತೈಷಿ, ಅಭಿಮಾನಿ ಬಳಗ ಹೊಂದಿರುವ ಐಕಳ ಹರೀಶ್ ಯುವ ಶಕ್ತಿಯ ವರ್ಚಸ್ಸನ್ನು ಸಾಧನಾಶೀಲರಾಗಿ ಸಾಮಾಜಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಯುವ ಮುಂದಾಳು. ಸಾಹಸ, ಶ್ರದ್ಧೆಯಿಂದ ಬದುಕನ್ನು ಸಾಗಿಸಿ ತಮ್ಮ ಅಸಾಧಾರಣ ಸಾಮರ್ಥ್ಯಯುಳ್ಳ ಸಾಧನೆ ಸೇವೆಯಿಂದ ತಮಗೆ ಅದೆಷ್ಟೂ ಪುರಸ್ಕಾರಗಳು ಮುಡಿಗೇರಿಸಿ ಯುವ ಪೀಳಿಗೆಗೂ ಆದರನೀಯ, ಪೆÇ್ರೀತ್ಸಾಹಕರು.

ಸಾಯಿಸಂಧ್ಯಾ ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಇಂಡಿಯನ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ಸಂಸ್ಥೆಯ ಉಪಾಧ್ಯಕ್ಷರಾಗಿ, ಬಂಟರ ಸಂಘದ ಅಧ್ಯಕ್ಷರಾಗಿ, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿ ಸೊಸೈಟಿಯ ನಿರ್ದೇಶಕರಾಗಿ, ಎಸ್.ಎಂ ಶೆಟ್ಟಿ ಶಾಲಾ ಸಮುಚ್ಚಯ ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಬಂಟ್ಸ್ ನ್ಯಾಯ ಮಂಡಳಿ ಸದಸ್ಯರಾಗಿ ನೂರಾರು ಸಂಸ್ಥೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವೀಯಾಗಿ ನಿರ್ವಾಹಿಸಿ ಓರ್ವ ಸರ್ವೋತ್ಕೃಷ್ಟ ಸಂಘಟಕನೆಂದೇ ಗುರುತಿಸಿ ಕೊಂಡಿರುವ ಐಕಳ ಹರೀಶ್ ಯಶಸ್ವಿ ಹೊಟೇಲು ಉದ್ಯಮಿಯಾಗಿಯೂ ಸಂಘಟನಾ ಚತುರರು.

ಐಕಳ ಹರೀಶ್ ಆಯ್ಕೆ ಅಭಿಮಾನ ತಂದಿದೆ ಎಂದು ಅವರ ನಿಕಟವರ್ತಿಗಳು ಅಪಾರ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಐಕಳ ಆಯ್ಕೆಗೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಎಂ.ಡಿ ಶೆಟ್ಟಿ ಬಾಂದ್ರ, ಎರ್ಮಾಳ್ ಹರೀಶ್ ಶೆಟ್ಟಿ, ಸಂಸದ ಗೋಪಾಲ ಸಿ.ಶೆಟ್ಟಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರÀ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ), ಕರ್ನಿರೆ ವಿಶ್ವನಾಥ್ ಶೆಟ್ಟಿ, ಡಾ| ಪದ್ಮನಾಭ ವಿ. ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ, ಕೆ.ಎಂ ಶೆಟ್ಟಿ, ಪಾಂಡು ಎಸ್.ಶೆಟ್ಟಿ, ಸೇರಿದಂತೆ ನೂರಾರು ಗಣ್ಯರು, ಸಂಸ್ಥೆಗಳ ಮುಖ್ಯಸ್ಥರು ಐಕಳ ಆಯ್ಕೆಗೆ ಸಂತೋಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here