Wednesday 1st, May 2024
canara news

ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ನೆರವೇರಿಸಿದ ಕನ್ನಡ ಸಂಘ ಸಾಂತಕ್ರೂಜ್

Published On : 21 Jan 2018   |  Reported By : Rons Bantwal


ಮಕರಸಂಕ್ರಮಣ ಏಕತಾನತೆ ನೀಗಿಸುವ ಪರ್ವಕಾಲ : ಶಾರದಾ ಸೂರು ಕರ್ಕೇರ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.21: ಸಂಪ್ರದಾಯಸ್ಥ ಮಹಿಳೆಯರಿಗೆ ಹಳದಿಕುಂಕುಮ ಕಾರ್ಯಕ್ರಮ ಸಂಸ್ಕಾರ-ಸಂಸ್ಕೃತಿಯ ಧ್ಯೋತಕವಾಗಿದೆ. ನಮ್ಮಲ್ಲಿನ ಮಾನಸಿಕ, ದೈಹಿಕ, ದುಗುಡ ದುಮ್ಮಾನಗಳನ್ನು, ದೈನಂದಿನ ಏಕತಾನತೆ ನೀಗಿಸುವ ಪರ್ವಕಾಲ ಇದಾಗಿದ್ದು ನಮ್ಮನ್ನು ನಾವೇ ಸ್ವಚ್ಛಂದವಾಗಿಸುವ ಸಾಧನವಾಗಿದೆ. ಇಂತಹ ಆಚರಣೆಗಳಿಂದ ನಮ್ಮಲ್ಲಿನ ಜಾನಪದ ಆಚಾರ-ವಿಚಾರಗಳು, ಸಂಪ್ರದಾಯಿಕ ನಂಬಿಕೆಗಳು ಜೀವಂತಗೊಂಡು ಮನಗಳÀು ಪುನಶ್ಚೇತನ ಗೊಳ್ಳುವುದು. ಆದುದರಿಂದಲೇ ಮಕರ ಸಂಕ್ರಾಂತಿ ಮನಗಳನ್ನು ಪುನಶ್ಚೇತನಗೊಳಿಸುವ ಸಂಭ್ರಮವಾಗಿದೆ ಎಂದು ಮಹೇಶ್ ಲಂಚ್‍ಹೋಮ್ ಸಮೂಹದ ನಿರ್ದೇಶಕಿ, ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ತಿಳಿಸಿದರು.

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯು ವರ್ಷಂಪ್ರತೀಯಂತೆ ಈ ಬಾರಿಯೂ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮ ಇಂದಿಲ್ಲಿ ಶುಕ್ರÀವಾರ ಸಂಜೆ ಸಾಂತಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ನೆರವೇರಿಸಿತು. ಮುಖ್ಯ ಅತಿಥಿüಯಾಗಿದ್ದು ಶಾರದಾ ಕರ್ಕೇರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶಿವ ಮಹಲ್‍ನ ಪ್ರಮೋದಾ ಶಿವಣ್ಣ ಶೆಟ್ಟಿ, ಶ್ರೀಕೃಷ್ಣ ವಿಠಲ ಪ್ರತಿಷ್ಠಾನದ ವಿಶ್ವಸ್ಥ ಸದಸ್ಯೆ ಸುಮಾ ವಿಶ್ವನಾಥ ಭಟ್ ಕೈರಬೆಟ್ಟು, ಸಾಯಿಕೇರ್ ಸಮೂಹದ ನಿರ್ದೇಶಕಿ ದಯಾವತಿ ಸುರೇಂದ್ರ ಪೂಜಾರಿ, ನೀತಾ ಚಾರ್ಕೋಪ್, ಡಾ| ಲಲಿತಾ ಸವರ್ಡೆಕರ್ ಅತಿಥಿüಗಳಾಗಿ ಹಾಗೂ ಸಂಘದ ವಿಶೇಷ ಆಮಂತ್ರಿತ ಸದಸ್ಯೆ ಸುಜತಾ ಸುಧಾಕರ್ ಉಚ್ಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾರದಾ ಎಸ್.ಪೂಜಾರಿ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಆರ್.ಪಿ ಹೆಗ್ಡೆ, ವಿಶೇಷ ಆಮಂತ್ರಿತ ಸದಸ್ಯರಾದ ಶಿವರಾಮ ಎಂ.ಕೋಟ್ಯಾನ್, ಉಷಾ ವಿ.ಶೆಟ್ಟಿ, ಚಂದ್ರಹಾಸ ಬಂಗೇರ, ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಸ್ವಾಗತಿಸಿದರು. ಮಹಿಳಾವೃಂದವು ಪ್ರಾರ್ಥನೆಯನ್ನಾಡಿದರು. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಅತಿಥಿüಗಳನ್ನು ಪರಿಚಯಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ ಕೃತಜ್ಞತೆ ಸಮರ್ಪಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here