Wednesday 1st, May 2024
canara news

ಪೇಜಾವರ ಮಠದಲ್ಲಿ ಜರುಗಿದ ಶ್ರೀಧಾಮ ಮಾಣಿಲದ ಪ್ರತಿಷ್ಠಾ ವರ್ಧಂತ್ಯುತ್ಸವ ಸಭೆ

Published On : 22 Jan 2018   |  Reported By : Rons Bantwal


ಸ್ಫೂರ್ತಿ ತುಂಬವ ಮೂರ್ತಿಗಳಾಗೋಣ: ಮಾಣಿಲ ಮೋಹನದಾಸ ಸ್ವಾಮೀಜಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್).

ಮುಂಬಯಿ, ಜ.22: ಪ್ರಕೃತಿದತ್ತ ಆಹಾರ ಸೇವನೆಯಿಂದ ಆರೋಗ್ಯದಾಯಕ ಬದುಕು ಆದರೆ ಧರ್ಮದತ್ತ ಕರ್ಮಾನು, ಆಚಾರ ವಿಚಾರಗಳಿಂದ ಸನ್ಮಾರ್ಗ ಸಾಧ್ಯ. ಸದ್ಯ ಸಾಧುಸಂತರು, ತಪಸ್ಸಿಗಳ ತ್ಯಾಗ, ತಪಸ್ಸುಗಳಿಂದ ರಾಷ್ಟ್ರದ ಪುನರ್‍ನಿರ್ಮಾಣ ಆಗುತ್ತಿದೆ. ನಮ್ಮ ಮನಸ್ಥಿತಿ ಸ್ಥಿಮಿತಿಯಲ್ಲಿದ್ದಾಗ ಬದುಕು ನೆಮ್ಮದಿಯುತ ಆಗುವುದು. ಆದುದರಿಂದ ಜೀವನ ಬದುಕಾಗಿಸಬೇಕು ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.

ಬಂಟ್ವಾಳ ತಾಲೂಕು ವಿಟ್ಲ ಗ್ರಾಮದ ಮುರುವ ಇಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವೈಭವಗಳೊಂದಿಗೆ ನಡೆಸಲ್ಪಡುವ ಪ್ರತಿಷ್ಠಾ ವರ್ಧಂತ್ಯುತ್ಸವ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ನಡೆಸಲ್ಪಟ್ಟ ಪೂರ್ವಭಾವಿ ಸಿದ್ಧತಾ ಸಮಾಲೋಚನಾ ಸಭೆಗೆ ಚಾಲನೆಯನ್ನೀಡಿ ಭಕ್ತಾಭಿಮಾನಿಗಳನ್ನುದ್ದೇಶಿಸಿ ಮಾಣಿಲಶ್ರೀ ಮಾತನಾಡಿದರು.

ಇಂದು ನಮ್ಮಲ್ಲಿ ಧನಾತ್ಮಕವಾಗಿ ಚಿಂತಿಸುವ ಮನಗಳು ಕ್ಷೀಣಿತವಾಗುತ್ತವೆ. ಕಾರಣ ನಮ್ಮ ಚಿಂತನೆಯೇ ಅವಿಚಾರವಾಗಿರುವುದು. ಆದುದರಿಂದ ಜಾತಿಕ್ಕಿಂತ ನೀತಿಯುತ ಜೀವನಕ್ಕೆ ಮಹತ್ವ ನೀಡಿ ಬಾಳಿರಿ. ಅಧಿಕಾರಕ್ಕಿಂತ ಬದುಕುವ ರೀತಿಗಾಗಿ ಮಾತ್ರ ಜಾತಿ ಮೀಸಲಾಗಿರಿಸಿ. ಆದರೆ ಜಾತಿಗಳು ರಾಷ್ಟ್ರದ ಉದ್ಧಾರಕ್ಕೆ ಪೂರಕವಾಗುವಂತಿರÀಲಿ. ನಮ್ಮ ಮನಸ್ಸುಗಳು ವಿಶಾಲವಾಗಿಸಿದಾಗ ಬಾಂಧವ್ಯ ಪ್ರೀತಿ ತನ್ನಷ್ಟಕ್ಕೆ ಪುಲುಕಿತ ಗೊಳ್ಳುವುದು. ನಾವು ಹಳೆಯ ಬದುಕನ್ನು ದೂರವಾಗಿಸಿ ಏಕಾಂತವನ್ನು ಹರಸುವುದರಲ್ಲಿ ಅರ್ಥವಿಅಲ್ಲ. ಎಂದಿಗೂ ಕೂಡು ಕುಟುಂಬದಿಂದ ಮಾತ್ರ ಸಂಸ್ಕಾರಕ್ಕೆ ಸುಖ ಪ್ರಾಪ್ತಿಯಾಗುವುದು. ಅಂತೆಯೇ ಜೊತೆಯಾಗಿ ಉಣ್ಣುವ ಆಹಾರ ಮತ್ತು ಒಗ್ಗೂಡುವಿಕೆಯಿಂದ ಪೂರೈಸುವ ಆಚರಣೆಗಳಿಂದ ಸಂತೃಪ್ತ ಜೀವನ ಸಾಧ್ಯ. ಇದೇ ಶುದ್ಧ ಜೀವನ ಎಂದೂ ಶ್ರೀಗಳು ಸಂತ್ಸಂಗ ಕಾರ್ಯಕ್ರಮದಲ್ಲಿ ಭಕ್ತರಿಗೆ ಮನವರಿಸಿದರು.

ಮಾಣಿಲ ಕ್ಷೇತ್ರದಲ್ಲಿ ಬರುವ ಫೆ.18 ರಿಂದ ಫೆ.25ರ ತನಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವೈಭವಗಳೊಂದಿಗೆ ಶ್ರೀನಿವಾಸ ಕಲ್ಯಾಣೋತ್ಸವ, ಪ್ರತಿಷ್ಠಾ ವರ್ಧಂತ್ಯುತ್ಸವ, ಅಷ್ಟಪವಿತ್ರ ನಾಗಮಂಡಲೋತ್ಸವ, ಭಜನೋತ್ಸವ, ಮಹಿಳಾ ಸಮಾವೇಶ, ನೇಮೋತ್ಸವ ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ವರ್ಧಂತ್ಯುತ್ಸವದ ಶುಭಾವಸರದಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ, ಪಂಚ ಪರ್ಯಾಯ ಅಲಂಕರಿಸಿದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಗುರುವಂದನೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದು ಸ್ವರ್ಣಸಂಭ್ರಮ ಪೂರೈಸಿದ ಶ್ರೀಕ್ಷೇತ್ರ ಧರ್ಮಸ್ಥಳದ ಪಟ್ಟಾಭಿಷಿಕ್ತ (ಖಾವಂದರು) ಪದ್ಮಶ್ರೀ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನಾ ಸನ್ಮಾನ ನೆರವೇರಿಸಲಾಗುವುದು. ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗಾಗಿ ಸಭೆಯಲ್ಲಿ ಪೂರ್ವಸಿದ್ಧತೆಗಳನ್ನು ನಡೆಸಲಾಗುತ್ತಿದ್ದು ಇದರ ಯಶಸ್ಸಿಗೆ ಮುಂಬಯಿ ಸಮಿತಿ ರಚಿಸಲಾಗುವುದು ಎಂದು ಮಾಣಿಲ ಶ್ರೀಗಳು ಮಾಹಿತಿಯನ್ನಿತ್ತು ನೆರೆದ ಸದ್ಭಕ್ತರಿಗೆ ಪ್ರಸಾದ, ಮಂತ್ರಾಕ್ಷತೆ ನೀಡಿ ಹರಸಿದರು.

ಸಭೆಯಲ್ಲಿ ಅತಿಥಿs ಅಭ್ಯಾಗತರುಗಗಳಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ಉಪಸ್ಥಿತರಿದ್ದು ಶ್ರೀಗಳನ್ನು ಗೌರವಿಸಿದರು. ಕುಲಾಲ್ ಸಂಘದ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್, ಭಾಸ್ಕರ್ ಶೆಟ್ಟಿ ಪುಣೆ, ದಯಾನಂದ ಬಂಗೇರ, ಅರುಣ್‍ಕುಮಾರ್ ರೈ ಚೆಲ್ಲಡ್ಕ, ದಾಮೋದರ ಶೆಟ್ಟಿ ನೆರೂಲ್, ರಾಜೇಶ್ ಪಾಟೇಲ್ ಥಾಣೆ ವೇದಿಕೆಯಲ್ಲಿ ಆಸೀನರಾಗಿದ್ದರು.

ಮಾಣಿಲಶ್ರೀಗಳು ಸಜ್ಜನರಾಗಿದ್ದು ತೆರೆಮರೆಯಲ್ಲಿದ್ದೇ ಸಮಾಜಮುಖಿ ಸೇವೆಗೈದು ಶ್ರೀಹರಿಗೆ ಸಮೀಪಿಗರು. ಎಲ್ಲರನ್ನೂ ಸಮಾನತೆಯಲ್ಲಿ ಕಂಡು ಗೌರವಿಸಿ ಹರಸುವ, ಅಪೇಕ್ಷೆಯನ್ನಿರಿಸದ ಸ್ವಾಮೀಜಿ. ನಮ್ಮ ಸಮಾಜ ಮುಂಬಯಿಗೆ ಬಂದಿದ್ದೇ ಸೇವೆ ಮಾಡಲು. ಸೇವೆಯೇ ನಮ್ಮ ಧರ್ಮವಾಗಿಸಿದ್ದೇವೆ. ಇಂತಹ ಸೇವೆಗೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ನಮ್ಮ ಭಾಗ್ಯವಾಗಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಕೆ.ಡಿ ಶೆಟ್ಟಿ ಮಾತನಾಡಿ ಶ್ರೀ ಕ್ಷೇತ್ರ ಮಾಣಿಲ ಬರೇ ಮಾಣಿಲದಲ್ಲ ಆದರ ಸತ್ವದಲ್ಲೂ ಚೆಲ್ಲಡ್ಕ ಮಣ್ಣಿನ ಗುಣ ಬೆಳಗುಂದಿದೆ. ಹೆತ್ತತಾಯಿ ಮತ್ತು ಸ್ವಾಮೀಜಿ ಅವರ ಆಶೀರ್ವಾದ ಇದ್ದರೆ ನಾವೂ ಎಷ್ಟೂ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ನಾನು ಇವತ್ತು ಈ ಮಟ್ಟಕೆ ಏರಲು ಸ್ವಾಮೀಜಿ ಅವರ ಅನುಗ್ರಹವೂ ಪೂರಕವಾಗಿದೆ. ಯಾರ ಹತ್ತಿರ ಧನವಿಲ್ಲದಿದ್ದರೂ ತನು ಮನದಿಂದ ಸಹಕರಿಸಬೇಕು. ಕನಿಷ್ಠ ಒಂದು ಹಿಂಡು ಅಕ್ಕಿಯಷ್ಟು ನೆರವು ಮಾಡಬೇಕು ಎಂದರು.

ಸ್ವಾಮೀಜಿ ಅವರ ಪರಿಶ್ರಮದಿಂದ ಮಾಣಿಲ ಕ್ಷೇತ್ರ ಕಂಗೊಳಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ನಾವೆಲ್ಲರೂ ಸಹಕರಿಸಬೇಕು. ಶ್ರೀಗಳ ಯೋಜಿತ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ದೇವದಾಸ್ ಕುಲಾಲ್ ಕರೆಯಿತ್ತರು.

ಸಭೆಯಲ್ಲಿ ರಾಜೇಂದ್ರ ದೇವಾಡಿಗ, ವಿಶಾಲಕ್ಷಿ ಆರ್.ಆಳ್ವ, ಅತುಲ್ ಓಝಾ, ಶಶಿಧರ್ ಶೆಟ್ಟಿ, ರಘು ಮೂಲ್ಯ, ಜೀಕ್ಷಿತ್ ಕೆ.ಶೆಟ್ಟಿ, ಹರೀಶ್ ಚೇವಾರ್ ಚಾರ್ಕೋಪ್, ಕ್ಷೇತ್ರದ ರಾಜೇಶ್ ಕೆ.ಪಿ. ಉಪಸ್ಥಿತರಿದ್ದು ನಾಗಮಂಡÀಲೋತ್ಸವ ಸಮಿತಿ ಅಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕರ್ನೂರ್ ಮೋಹನ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here