Wednesday 1st, May 2024
canara news

ವಸಂತ ಬೇಕರಿಯ ತಿಂಡಿಗಳು ಮನೆಯಲ್ಲಿ ಮಾಡಿದಂತೆ ರುಜಿಕರಗಳು

Published On : 22 Jan 2018   |  Reported By : Bernard Dcosta


ಹೆಸರಾಂತ ನ್ಯೂ ವಸಂತ ಬೇಕರಿ ಸ್ಥಳಾಂತರ ಉದ್ಘಾಟನ ಸಮಾರಂಭ

ಕುಂದಾಪುರ, ಜ.22: ಆರು ದಶಕಗಳಿಂದ ಕುಂದಾಪುರದ ಪಟ್ಟಣಕ್ಕೆ ರುಚಿಕರವಾದ, ತಾಜತನದ, ಶುಚಿತ್ವದ, ಗುಣಮಟ್ಟದ ಬೇಕರಿ ತಿಂಡಿಗಳನ್ನು ನೀಡುತ್ತಾ ಬಂದಿರುವ ಇಂದಿರ ಮಹಲನ ಸಂಕಿರ್ಣದಲ್ಲಿರುವ , ನ್ಯೂ ವಸಂತ ಬೇಕರಿಯು ಜನವರಿ 22 ರಂದು ಕುಂದಾಪುರದ ಹೂವಿನ ಮಾರುಕಟ್ಟೆ ಎದುರಿನ ಸಂಕಿರ್ಣದಲ್ಲಿ ತನ್ನ ಬೇಕರಿಯನ್ನು ಸ್ಥಳಾಂತರ ಮಾಡಿತು. ಇದರ ಉದ್ಘಾಟನೆಯನ್ನು ಕುಂದಾಪುರದ ಹಿರಿಯ ವಕೀಲ, ಲೇಖಕರು, ರೋಟರಿ ಶತಾಬ್ದಿ ಗವರ್ನರ್ ಎ.ಎಸ್.ಎನ್. ಹೆಬ್ಬಾರ್ ಉದ್ಘಾಟಿಸಿದರು.

‘ವಸಂತ ಬೇಕರಿ ಕುಂದಾಪುರ ಪರಿಸರದಲ್ಲಿ ಉತ್ತಮ ಗುಣಮಟ್ಟದ ತಿಂಡಿಗಳನ್ನು ತಯಾರಿಸಿ, ಜನರಿಗೆ ಕೊಡುತ್ತಾ ಇದೆ, ಈ ಬೇಕರಿ ಆರು ದಶಕಗಳ ಹಿಂದೆ ಆರಂಭಿಸಿದ ಈ ಸಂಸ್ಥೆ ದೊಡ್ಡ ಹೆಸರು ಗಳಿಸಲು ಕಾರಣ ಇವರ ಉತ್ಪನ್ನಗಳು, ನಮ್ಮ ಮನೆಯಲ್ಲಿ ಶುದ್ದ ಎಣೆಯಿಂದ, ಶುದ್ದ ಇನ್ನಿತರ ಪದಾರ್ಥಗಳಿಂದ ತಯಾರಿಸಿದಂತೆ, ತಯಾರಿ ಮಾಡುವುದೇ ಕಾರಣ. ಹಾಗಾಗಿ ವಸಂತ ಬೇಕರಿಯ ತಿಂಡಿಗಳು ಮನೆಯಲ್ಲಿ ಮಾಡಿದ ತಿಂಡಿಗಳಂತೆ ರುಚಿಕರಗಳಾಗಿರುತ್ತವೆ’ ಎಂದು ಹೇಳುತ್ತಾ ಸಂಸ್ಥೆ ಇನ್ನೂ ಹೆಚ್ಚಿನ ಶ್ರೇಯಸನ್ನು ಪಡೆಯಲೆಂದು ಅವರು ಹಾರೈಸಿದರು.

ಮುಖ್ಯ ಅತಿಥಿಗಳಾದ ಸ್ಥಳಿಯ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ಮಾತಾಡಿ ‘ಈಗ ನಮ್ಮಲ್ಲಿ ಸ್ವಚ್ ಭಾರತ್ ಅಂದೋಲನ ನೆಡೆಯುತ್ತಿದೆ, ಆದರೆ ಸ್ವಚ ತಿಂಡಿ ತಿನಿಸು ಆಹಾರ ಪದಾರ್ಥಗಳು ತಿನ್ನ ಬೇಕಾದರೆ, ನಾವು ವಸಂತ ಬೇಕರಿಗೆ ಬರಲೇ ಬೇಕು. ಈ ಸಂಸ್ಥೆ ಸ್ವಚ್ಚತೆಗೆ, ರುಚಿಗೆ, ತಾಜತನಕ್ಕೆ, ಹೆಚ್ಚು ಆದ್ಯತೆ ನೀಡುತ್ತದೆ ಅದಕ್ಕೆ ಜನರಿಗೆಲ್ಲಾ ಈ ಸಂಸ್ಥೆ ಮೇಲೆ ಅಭಿಮಾನ’ ಎನ್ನುತ್ತಾ ಇನ್ನೂ ಹೆಚ್ಚಿನ ಏಳಿಗಾಗೆ ದೇವರಲ್ಲಿ ಪ್ರಾರ್ಥಸಿದರು.

ಇನ್ನೋರ್ವ ಅತಿಥಿ ಡಾ|ಕಮಲ್ ‘ಸಂಸ್ಥೆಯ ಆರಂಭಕಾರರಾದ ರಂವಿದ್ರನ್‍ರವರನ್ನ ನೆನಪಿಸಿಕೊಂಡು, ಸಂಸ್ಥೆಯ ಬಗ್ಗೆ ಮಾತಾನಾಡಿದರು. ಸ್ಥಳಿಯ ಪುರಸಭಾ ಸದಸ್ಯ ಸತೀಶ್ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಶುಭ ಹಾರೈಸಿದರು. ಪತ್ರಕರ್ತ ಯು.ಎಸ್.ಶೆಣೈ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಮಾಲೀಕರಾದ ಕೆ.ಪಿ.ಶ್ರೀಶನ್ ಧನ್ಯವಾದಗಳನ್ನು ಅರ್ಪಿಸಿದರು. ಮಮತಾ ಶ್ರೀಶನ್ ಮತ್ತು ಕುಟುಂವ ವಲಯ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೋಟೆರಿಯನ್ ಮನೋಜ್ ನಾಯರ್ ನೆಡಿಸಿಕೊಟ್ಟರು

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here