Tuesday 30th, April 2024
canara news

ಬಿಲ್ಲವ ಹಿರಿಯ ಮುಂದಾಳು ಡಿಯುಎಸ್‍ರಿಗೆ ಬಿಲ್ಲವರ ಅಸೋಸಿಯೇಶನ್‍ನಿಂದ ಬಾಷ್ಪಾಂಜಲಿ

Published On : 25 Jan 2018   |  Reported By : Rons Bantwal


ಡಿ.ಯು ಸಾಲ್ಯಾನ್‍ರ ದೂರದೃಷ್ಟಿತ್ವದ ಸೇವೆ ಬಿಲ್ಲವ ಸಮಾಜಕ್ಕೆ ವರದಾನ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ,: ಬೃಹನ್ಮುಂಬಯಿಯಲ್ಲಿ ದಕ್ಷ ಸಂಘಟಕರಾಗಿ ಸಾಮಾಜಿ, ಶೈಕ್ಷಣಿಕ, ಆಥಿರ್üಕ ಕ್ಷೇತ್ರದಲ್ಲಿ ಅನನ್ಯ ಸೇವೆಗೈದು, ಬಿಲ್ಲವರ ಪ್ರಸಿದ್ಧ ಸಮಾಜ ಸೇವಕರೆಣಿಸಿ ಇತ್ತೀಚೆಗೆ ಹರಿಪಾದ ಸೇರಿದ ನಿವೃತ್ತ ಶಿಕ್ಷಕ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ಭಾರತ್ ಬ್ಯಾಂಕ್‍ನ ಸ್ಥಾಪಕ ರೂವಾರಿಯಾಗಿ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷರಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಡಿ.ಯು ಸಾಲ್ಯಾನ್ (ದೇವು ಉಗ್ಗಪ್ಪ ಪೂಜಾರಿ) ಅವÀರಿಗೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಭಾರತ್ ಬ್ಯಾಂಕ್‍ನ ಪರವಾಗಿ ಅಗಲಿದ ಮಹಾನ್ ಚೇತನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲಾದ ಸಂತಾಪ ಸೂಚನಾ ಸಭೆಯಲ್ಲಿ ಅಗಲಿದ ಡಿ.ಯು ಸಾಲ್ಯಾನ್ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಸದ್ಗತಿ ಕೋರಲಾಯಿತು.

ಆದಿಯಲ್ಲಿ ಸಭೆಯಲ್ಲಿ ಉಪಸ್ಥಿತ ಸಾಲ್ಯಾನ್‍ರ ಮಕ್ಕಳಾದ ಹರೀಶ್‍ಸಾಲ್ಯಾನ್, ಆಶಾ ಸಾಲ್ಯಾನ್, ಉಷಾ ಸಾಲ್ಯಾನ್ ಮತ್ತು ಸಾಲ್ಯಾನ್ ಬಂಧುಗಳು ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಅಶ್ರುತಾರ್ಪಣೆಗೈದರು.

ನಿತ್ಯಾನಂದ ಕೋಟ್ಯಾನ್ ಮಾತನಾಡಿ ಓರ್ವ ವ್ಯಕ್ತಿ ಮಾನವೀಯ ಮೌಲ್ಯಗಳೊಂದಿಗೆ ತಾನು ನಿಷ್ಠಾವಂತನಾಗಿ ಬದುಕುವ ಜೊತೆಗೆ ಮತ್ತೊಬ್ಬರ ಬದುಕನ್ನೂ ಪೆÇ್ರೀತ್ಸಹಿಸುವುದಕ್ಕೆ ಡಿ.ಯು ಸಾಲ್ಯಾನ್ ಮೇರು ವ್ಯಕ್ತಿತ್ವವುಳ್ಳವರಾ ಗಿದ್ದರು. ಸುಮಾರು ಒಂಭತ್ತು ದಶಕಗಳ ಹಿಂದೆಯೇ ಭವಿಷ್ಯತ್ತಿನ ಪೀಳಿಗೆಗಾಗಿನ ದೂರದೃಷ್ಟಿತ್ವ ಹೊಂದಿ ಸೇವೆಯಲ್ಲಿ ತೊಡಗಿಸಿ ನಮಗೆಲ್ಲಾ ಆದರ್ಶಪ್ರಾಯರಾದ ಸಾಲ್ಯಾನ್ ಜೀನವನೇ ಅನುಕರಣೀಯ. ತನ್ನೊಂದಿಗೆ ಇಡೀ ಪರಿವಾರವನ್ನೇ ಸಮಾಜ ಸೇವೆಗೆ ಸಮರ್ಪಿಸಿ ಕೊಂಡವರು. ಈ ಬಿಲ್ಲವರ ಭವನ ಮತ್ತು ಕುದ್ರೋಳಿ ಗೋಕರ್ಣಥ ಕ್ಷೇತ್ರ, ಭಾರತ್ ಬ್ಯಾಂಕ್ ಸೇರಿದಂತೆ ಹತ್ತಾರು ಸಂಘಸಂಸ್ಥೆಗಳಿಗೆ ಸಂಗ್ರಹಿಸಿದ ದೇಣಿಗೆ ಮಾತ್ರವಲ್ಲ ಆ ಹಿಂದಿನ ಶ್ರಮವೇ ಬಿಲ್ಲವ ಸಮುದಾಯವನ್ನು ಈ ಮಟ್ಟಕ್ಕೆ ಬೆಳೆಸಿದೆ. ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಜೊತೆಗೆ ಸಾಲ್ಯಾನ್‍ರ ಬಂಧುತ್ವ, ಒಡನಾಟ ಬಿಚ್ಚಿಟ್ಟರು.

ಸಾಲ್ಯಾನ್‍ರ ಶಿಸ್ತುಬದ್ಧ ಜೀವನ ಇಂದು ನಮ್ಮಲ್ಲಿ ರೂಢಿಸಿ ಕೊಂಡಾಗಲೇ ನಾವು ಅವರಿಗೆ ಸಲ್ಲಿಸುವ ಮೊದಲ ಶ್ರದ್ಧಾಂಜಲಿ ಆಗಿದೆ. ಇಂತಹ ಧೀಶಕ್ತಿಯ ಜೀವನ ಶೈಲಿಯನ್ನು ಮೈಗೂಡಿಸಿ ಅವರನ್ನು ಸ್ಮರಿಸೋಣ. ಅಗಲಿದ ಅವರ ಆತ್ಮ ವೈಕುಂಠ ಸೇರಲಿ. ನಮ್ಮನ್ನಗಲಿದ ಸಾಲ್ಯಾನ್ ಸದಾ ಕೀರ್ತಿಶೇಷರಾಗಿರಲಿ ಎನ್ನುತ್ತಾ ಸಮಗ್ರ ಬಿಲ್ಲವರ ಹಾಗೂ ಜಯ ಸುವರ್ಣರ ಪರವಾಗಿ ಸಾಲ್ಯಾನ್ ಕುಟುಂಬಕ್ಕೆ ಸಾಂತ್ವನ ಹೇಳಿ ಸಭೆಯಲ್ಲಿ ಉಪಸ್ಥಿತ ಸಾಲ್ಯಾನ್‍ರ ಮಕ್ಕಳು ಹಾಗೂ ಕುಟುಂಬಕ್ಕೆ ಸಂತೈಸಿದರು.

ಸಭೆಯಲ್ಲಿ ಉಪಸ್ಥಿತ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಜೊತೆ ಕಾರ್ಯದರ್ಶಿಗಳಾದ ಪ್ರೇಮನಾಥ ಪಿ.ಕೋಟ್ಯಾನ್, ಜೆ.ಎಂ ಕೋಟ್ಯಾನ್, ಭಾರತ್ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ವರದ ಉಳ್ಳಾಲ್, ನಿರ್ದೇಶಕರಾದ ವಿ.ಆರ್ ಕೋಟ್ಯಾನ್ (ಮಾಜಿ ಕಾರ್ಯಾಧ್ಯಕ್ಷ), ಎಂ.ಬಿ ಕೋಟ್ಯಾನ್, ಮಾಜಿ ನಿರ್ದೇಶಕರಾದ ನ್ಯಾ| ಶಶಿಧರ್ ಕಾಪು, ಎಲ್.ವಿ ಅವಿೂನ್, ಎನ್.ಎಂ ಸನೀಲ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಿಲ್ಲವ ಮುಂದಾಳುಗಳಾದ ಪದ್ಮನಾಭ ಪೂಜಾರಿ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಜಯಕರ ಡಿ.ಪೂಜಾರಿ, ಚಿತ್ರಾಪು ಕೆ.ಎಂ ಕೋಟ್ಯಾನ್ ಮತ್ತು ಚಿರಾಗ್ ಸಾಲ್ಯಾನ್ ನುಡಿ ನಮನ ಸಲ್ಲಿಸಿ ನಮ್ಮನ್ನಗಲಿದ ಸಾಲ್ಯಾನ್‍ರ ದಿವ್ಯಾತ್ಮಕ್ಕೆ ಶ್ರೀದೇವರು ಮೋಕ್ಷ ಪ್ರಾಪ್ತಿಸಲಿ ಎಂದು ಬಾಷ್ಪಾಂಜಲಿ ಅರ್ಪಿಸಿದರು.

ಸಮಯಪ್ರಜ್ಞೆ ಯ ಕ್ಷೀಣತೆ-ತೀವ್ರ ಅಸಮಾಧಾನ:
ಸಂತಾಪ ಸಭೆಯಲ್ಲಿ ಭಾರೀ ಕಡಿಮೆ ಸಂಖ್ಯೆಯ ಜನರನ್ನು ಕಂಡ ಗಣ್ಯರು ಮತ್ತು ಕುಟುಂಬಸ್ಥರು ತೀವ್ರ ಖೇದ ವ್ಯಕ್ತಪಡಿಸಿದರು. ಕನಿಷ್ಠ ಅವರಿಂದ ನೌಕರಿ ಪಡೆದು ದೊಡ್ಡದೊಡ್ಡ ವ್ಯಕ್ತಿಗಳಾಗಿ, ದುಡಿಸಿ ಗಳಿಸಿಕೊಂಡವರ ಅನುಪಸ್ಥಿತಿ ಬಹುತೇಕರಲ್ಲಿ ಬೇಸರ ತಂದಿತು. ಮನುಷ್ಯ ಜೀವಂತವಿದ್ದಾಗ ಮಾತ್ರ ಹೊಗಳಿ ವ್ಯಕ್ತಿಪೂಜೆ ಮಾಡುವ ಸಂಸ್ಕೃತಿ ಇಂದೂ ಎತ್ತಿಕಾಣುವಂತಾಯಿತು. ಇದು ಸಮಂಜಸವಲ್ಲ. ವ್ಯಕ್ತಿಯೊಬ್ಬರು ಜೀವಂತವಿದ್ದಾಗ ತನ್ನ ಅವಿರತ ಶ್ರಮ, ತ್ಯಾಗ, ಕುಟುಂಬಸ್ಥರಿಗೆ ನೀಡದ ಸಮಯ ಸಮಾಜ ಸೇವೆಗೆ ನೀಡಿ ಸಮಾಜದ ಜೊತೆಗೆ ನೂರಾರು ವ್ಯಕ್ತಿಗಳನ್ನು ಬೆಳೆಸಿ ಕೊನೆಯಲ್ಲಿ ಸ್ಮರಣೀಯರಾದಾಗ ಕನಿಷ್ಠ ಒಗ್ಗೂಡಿ ಆ ವ್ಯಕ್ತಿಗೆ ಇಂತಹ ಸಭೆ ಅವಮಾನಕಾರಿ. ಇದು ಗಣ್ಯವ್ಯಕ್ತಿಯ ದುರದೃಷ್ಟವೇ ಸರಿ ಎಂದು ಭಾವೋದ್ವೆಕÀರಾಗಿಯೇ ನುಡಿದರು. ಇನ್ನಾದರೂ ಸಮಯಪ್ರಜ್ಞೆ ರೂಢಿಸಿ ಮೇರುವ್ಯಕ್ತಿಗಳನ್ನು ಸ್ಮರಿಸೋಣ ಎಂದು ಕಟುವಾಗಿಯೇ ನೊಂದ ಮನಗಳಿಂದ ಸಮಾಜವನ್ನು ಎಚ್ಚರಿಸಿದರು.

ಸಭೆಯಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಉಪಾಧ್ಯಕ್ಷರಾದ ರಾಜ ವಿ.ಸಾಲ್ಯಾನ್, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಮಹೇಂದ್ರ ಸೂರು ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕರಾದÀ ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಜ್ಯೋತಿ ಕೆ.ಸುವರ್ಣ, ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ನಿತ್ಯಾನಂದ ಎಸ್.ಕಿರೋಡಿಯನ್, ಉಪ ಪ್ರಧಾನ ವ್ಯವಸ್ಥಾಪಕರಾದ ಸುರೇಶ್ ಎಸ್.ಸಾಲ್ಯಾನ್ ಮತ್ತಿತರ ಉನ್ನತಾಧಿಕಾರಿಗಳು ಕರ್ಮಚಾರಿಗಳು, ಶೇರುದಾರರು ಹಾಗೂ ಗ್ರಾಹಕರು, ಸಿಎ| ಅಶ್ವಜಿತ್ ಹೆಜ್ಮಾಡಿ, ಮಾಜಿ ನಿರ್ದೇಶಕರಾದ ಡಿ.ಬಿ ಅವಿೂನ್, ಜಗನ್ನಾಥ್ ವಿ.ಕೋಟ್ಯಾನ್, ಸುರೇಶ್ ಆರ್.ಅಂಚನ್, ಶಾರದಾ ಸೂರು ಕರ್ಕೇರ, ಯಶೋಧ ಎನ್.ಟಿ ಪೂಜಾರಿ, ದೇವೇಂದ್ರ ಬಂಗೇರಾ ಖಾರ್, ಎಸ್.ಕೆ ಸುವರ್ಣ, ಅನಿಲ್‍ಕುಮಾರ್ ಆರ್.ಅವಿೂನ್, ಹರೀಶ್ ಜಿ.ಅವಿೂನ್, ಸುರೇಂದ್ರ ಎ.ಪೂಜಾರಿ, ಮೋಹನ್ ಆರ್.ಕೋಟ್ಯಾನ್, ತೋನ್ಸೆ ಸಂಜೀವ ಪೂಜಾರಿ ಮತ್ತಿತರರು ಪುಷ್ಫಗೌರವದೊಂದಿಗೆ ಸದ್ಗತಿ ಕೋರಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here