Tuesday 30th, April 2024
canara news

ಆದಿಗ್ರಾಮೋತ್ಸವದಲ್ಲಿ ನೀಡಲಾಗುವ ಪ್ರತಿಷ್ಠಿತ "ಆದಿಗ್ರಾಮೋತ್ಸವ" ಗೌರವಕ್ಕೆ ಮುಂಬಯಿಯ ಪೂವ ಎಂ. ಸಾಲ್ಯಾನ್ ಆಯ್ಕೆ ಯಾಗಿದ್ದಾರೆ

Published On : 26 Jan 2018   |  Reported By : Rons Bantwal


ಅಜೆಕಾರು, - ಅಜೆಕಾರು ಕುರ್ಪಾಡಿಯಲ್ಲಿ ನಡೆಯುವ ಆದಿಗ್ರಾಮೋತ್ಸವದಲ್ಲಿ ನೀಡಲಾಗುವ ಪ್ರತಿಷ್ಠಿತ "ಆದಿಗ್ರಾಮೋತ್ಸವ" ಗೌರವಕ್ಕೆ ಮುಂಬಯಿಯ ಹಿರಿಯ ಸಮಾಜ ಸೇವಕ- ಕಂಪನಿ ಸೆಕ್ರಟರಿಯಾಗಿ ನಿವೃತ್ತರಾದ ಮೂಲತ ಅಜೆಕಾರಿನವರಾದ ಪೂವ ಎಂ. ಸಾಲ್ಯಾನ್ ಆಯ್ಕೆ ಯಾಗಿದ್ದಾರೆ.

ಸಾಧಕರಿಗೆ ನೀಡುವ ಗ್ರಾಮ ಗೌರವಕ್ಕೆ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಮೂಲಕ ಅತ್ಯುತ್ತಮ ಸಮಾಜ ಸೇವೆಯನ್ನು ಮಾಡುತ್ತಿರುವ ಮುನಿಯಾಲು ಉದಯ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಜ. 25 ರಂದು ಸಂಜೆ ಕರ್ಪಾಡಿ ಶ್ರೀ ಪುರಾತನ ಬೊಬ್ಬರ್ಯ ದೈವಸ್ಥಾನದ ಬಳಿ ಆಕಾಶಬೆಟ್ಟು ಬಾಕಿಮಾರು ಗದ್ದೆಯ ಹಾಡಿಮನೆ ಚಿಕ್ಕಿ ನಾಯ್ಕ್ ವೇದಿಕೆಯಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನಿಸುವರು ಎಂದು ಸಮಿತಿಯ ಗೌರವಾಧ್ಯಕ್ಷ ಡಾ| ಸಂತೋಷ್ ಕುಮಾರ್ ಶೆಟ್ಟಿ ಮತ್ತು ಗ್ರಾಮೋತ್ಸವದ ರುವಾರಿ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

     

Diwakar Shetty Mudrady         Poova M. Salian                      Udayakumar Muniyal

ಮಿಜಾರು ಅಣ್ಣಪ್ಪ, ವಿಜಯನಾಥ ವಿಠಲ ಶೆಟ್ಟಿ, ಐಕಳ ದೇವಿಪ್ರಸಾದ ಶೆಟ್ಟಿ, ಅಂಡಾರು ದೇವಿಪ್ರಸಾದ ಶೆಟ್ಟಿ, ಸವಣೂರು ಸೀತಾರಾಮ ರೈ ಸೇರಿದಂತೆ 20ಕ್ಕೂ ಮಿಕ್ಕ ಗಣ್ಯರಿಗೆ ಈ ಗೌರವ ಸಂದಿದೆ. ಪೂವ ಎಂ. ಸಾಲ್ಯಾನ್: ಅಜೆಕಾರಿನ ದೇವೊಟ್ಟು ಎಂಬಲ್ಲಿನ ಕೃಷಿಕ ಕುಟುಂಬದಲ್ಲಿ ಹುಟ್ಟಿ ಮುಂಬಯಿ ಸೇರಿ 1966 ರಿಂದ ಮುಂಬಯಿಯ ಪ್ರತಿಷ್ಠಿತ ಬೆಹರಾಂಜಿ ಜೀಜಿಬ್‍ಃಆಯಿ ಗ್ರೂಫ್ ಆಫ್ ಕಂಪನಿಗಳಲ್ಲಿ ಕಂಪನಿ ಸೆಕ್ರಟರಿಯಾಗಿ ದುಡಿದು ನಿವೃತ್ತರಾಗಿದ್ದಾg É. ಮುಂಬಯಿಯ ಹಿರಿಯ ಸ್ವ ಸಮಾಜ ಸೇವಾ ಸಂಘಟನೆ 82 ಹರೆಯದ ರಜಕ ಸಂಘದ 1966 ರಿಂದ ಹತ್ತು ವರ್ಷಗಳ ಕಾಲ ಸಂಘಕ್ಕೆ ಒತ್ತಮ ನಾಯಕತ್ವ ಒದಗಿಸಿದ್ದಾರೆ. ಅಧಿಕಾರÀ ಅವಧಿಯ ಬಳಿಕವೂ ಅತ್ಯಂತ ಸಕ್ರಿಯರಾಗಿದ್ದು ಕೊಂಡು ಯುವ ಜನಾಂಗವನ್ನು ತಯಾರಿ ಮಾಡಿ ಸಂಘಕ್ಕೆ ಅತ್ಯುತ್ತಮ ಸೇವೆ ನೀಡಿದ್ದಾರೆ.

ಸಂಘದ ಬಲವರ್ಧನೆಗಾಗಿ ಪ್ರಾದೇಶಿಕ ಸಮಿತಿಗಳ ರಚನೆಯ ಕನಸುಗಾರರಾಗಿ ಸÀಂಘಕ್ಕೆ ಬಹುಮುಖಿ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅಪೂರ್ವ ದೈವಭಕ್ತರಾಗಿರುವ ಅವರು ಸಂಬಂಧಿಸಿದ ದೇವಾಲಯಗಳಿಗೆ ಉತ್ತಮ ದೇಣಿಗೆ ನೀಡಿದ್ದಾರೆ. ಕನ್ನಡ ಭವನ ಸೊಸೈಟಿಯ ಸದಸ್ಯರಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಾಹಿಸಿರುವ ಅವರು ವಿವಿಧ ಸಂಘ ಸಂಸ್ಥೆಗಳ ನಿಕಟ ಸಂಪರ್ಕ ಹೊಂದಿದ್ದಾರೆ.

ಅಜೆಕಾರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮುಂಬಯಿ ಸೇರಿದ ಪೂವ ಎಂ ಸಾಲ್ಯಾನ್ ಅವರು ಮುಂಬಯಿಯ ಬಾಂಬೆ ಪೆÇೀರ್ಟ್ ಹೈಸ್ಕೂಲಿನರ್ ಎಸ್‍ಎಸ್‍ಸಿ ಪಾಸಾದರು. ಪ್ರಸಿದ್ಧ ಸಿದ್ದಾರ್ಥ ಕಾಲೇಜಿನಲ್ಲಿ
ಬಿ.ಎ ಪದವಿ, ಕೆ.ಸಿ ಕಾನೂನು ಮಹಾವಿದ್ಯಾಲಯದಿಂದ ಎಲ್ ಎಲ್ ಬಿ ಪದವಿ ಪಡೆದರು. ಸಿ.ಎ ಒಬ್ಬರ ಬಳಿ ಲೆಕ್ಕ ಶಾಸ್ತ್ರದ ಅನುಭವವನ್ನು ಪಡೆದಿರುವರು.

ಬಳಿಕ ಕಂಪೆನಿಯ ಸೆಕ್ರೆಟರಿಯಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಅವರÀ ಅನುಭವದ ಕಾರಣದಿಂದ ಅವರು ಅದೇ ಕಂಪನಿಯ ಕಾನೂನು ಸಲಹೆಗಾರರಾಗಿ ಮುಂದುವರಿದಿದ್ದಾರೆ. ರಜಕ ಸಂಘಕ್ಕೆ ಉತ್ತಮ ಭವನ ನಿರ್ಮಾಣ ಮತ್ತು ಸಮಾಜ ಬಾಂಧವರಿಗೆ ಅನುಕೂಲವಾಗುವ ಹೌಸಿಂಗ್ ಸೊಸೈಟಿ ಆಗಲೇ ಬೇಕು ಎಂಬ ದೃಢ ನಿಲುವು ಹೊಂದಿದ್ದಾರೆ. ತಾಯಿಯ ಆಶೀರ್ವಾದದಿಂದ ತಾನು ಈ ಸ್ಥಿತಿಗೆ ಬಂದಿದ್ದೇನೆ ಎಂದು ನೆನಪಿಸಿಕೊಳ್ಳುವ ಅವರು ತಮ್ಮ ಹುಟ್ಟೂರನ್ನು ಎಂದೂ ಮರೆತವರಲ್ಲ.ದೋವೊಟ್ಟು ಮೀನು ಮತ್ತು ಸಾಣೂರು ಮೋಂಟು ದಂಪತಿಗಳ ಮಗನಾಗಿ ಜನಿಸಿದರು. ದಿ| ಸತ್ಯವತಿ ಅವರ ಪತ್ನಿ. ಪ್ರವೀಣಾ ಮತ್ತು ಪ್ರದೀಪ್ ಮಕ್ಕಳು ಮುಂಬಯಿಯಲ್ಲಿ ವಾಸವಾಗಿದ್ದಾರೆ. ಉತ್ತಮ ಸಮಾಜ ಸೇವಕ, ಸಂಘಟಕರ ಕಣ್ಮಣಿ ಪೂವ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮುಂಬಯಿಯ ಖ್ಯಾತ ಉದ್ಯಮಿ ಮುದ್ರಾಡಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯ ಮುದ್ರಾಡಿ ಎಸ್ ಎನ್ ಡಿ ಎಂ ಅನುದಾನಿತ ಪ್ರೌಢ ಶಾಲೆ, ಶಿರ್ಲಾಲು ಶ್ರೀ ಮಹಾಮ್ಮಯಿ ಕಲಾ ಕೇಂದ್ರ ಮತ್ತು ವರಂಗ ಗ್ರಾಮ ಸಾಂಸ್ಥಿಕ ಗೌರವನ್ನು ನೀಡಲಾಗುತ್ತಿದೆ.

ಆದಿಗ್ರಾಮೋತ್ಸವ ಯುವ ಗೌರವಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕ್ಷೇತ್ರಗಳ 15 ಮಂದಿ ಯುವ ಸಾಧಕರು ಪಾತ್ರರಾಗಲಿದ್ದಾರೆ. ಆದಿಗ್ರಾಮೋತ್ಸವ ಯುವ ಗೌರವಕ್ಕೆ ಆಯ್ಕೆಯಾದವರು:

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು-ಸಾಹಿತ್ಯ, ಅರುಣ್ ಅಜೆಕಾರು ಮಂಗಳೂರು ಸಂಘಟನೆÉ ಮಮತ ಅಧಿಕಾರಿ ಅಜೆಕಾರು. ರಾಜಕೀಯ/ ವಕಾಲತ್ತು, ರಾಘವೇಂದ್ರ ಕರ್ವಾಲೋ, ಉಡುಪಿ - ಸಂಘಟನೆ, ಆರ್. ಬಿ. ಜಗದೀಶ್ ಕಾರ್ಕಳÀ- ಪತ್ರಿಕೋದ್ಯಮ, ಗಣೇಶ್ ಜಾಲ್ಲೂರು ಕಾರ್ಕಳ- ಶಿಕ್ಷಣ- ನಿರ್ವಹಣೆ, ಸುಪ್ರಿತಾ ಜಾನುವಾರುಕಟ್ಟೆ, ಕುಂದಾಪುರ- ಶಿಕ್ಷಣ/ಸಾಹಿತ್ಯ, ವಾಣಿ ಸುಕುಮಾರ್,ಮುದ್ರಾಡಿ- ರಂಗÀ ಸಂಘಟನೆÉ, ಶಶಿ ಶಿರ್ಲಾಲ್, ಶಿರ್ಲಾಲು- ಸಿನಿಮಾ/ ಧಾರವಾಹಿ, ವಿನುತಾ ಶೆಟ್ಟಿ ದಾಸಗದ್ದೆ ಅಜೆÉಕಾರು- ಸರ್ಕಾರಿ ಸೇವೆ, ಪೂಜಾ ಆಚಾರ್ಯ ಕುರ್ಪಾಡಿ, ಅಜೆಕಾರು- ಉಪನ್ಯಾಸಕಿ, ಕÀವಿತಾ ಕುಲಾಲ್, ದೆಪ್ಪುತ್ತೆ ಅಜೆಕಾರು- ಕಬ್ಬಡಿ ಆಟ, ಪ್ರತೀಶ ಕೆ.ಆಚಾರ್ಯ, ಕುರ್ಪಾಡಿ – ಕ್ರಿಕೆಟ್ ಸಂಘಟನೆ, ಎ.ಆರ್ ಸತೀಶ ಆಚಾರ್ಯ ವರಂಗ - ನಾಟಕ-ಛಾಯಾಗ್ರಾಹಣ,, ಶೇಖರ್ ಶೇರಿಗಾರ್ ಪೆÇೀಲಿಸ್ ಹೆಬ್ರಿ-ಉತ್ಸವ ಸಂಘಟನೆಗಾಗಿ ಗೌರವ ಸ್ವೀಕರಿಸುವರು.

ಟಿವಿ ಕಾರ್ಯಕ್ರಮಗಳಲ್ಲಿ ನಾಡಿಗೆ ಪರಿಚಿತರಾಗಿರುವ ಮಜಾಭಾರತದ ಸೃಷ್ಟಿ ಆರ್ ಶೆಟ್ಟಿ ರೆಂಜಾಳ, ಆರಾಧನಾ ಭಟ್ ನಿಡ್ಡೋಡಿ, ಅಯುಷ್ ಜೆ.ಶೆಟ್ಟಿ, ಸೌರವ್ ಸಾಲ್ಯಾನ್, ತುಷಾರ್ ಗೌಡ ಅಲ್ಲದೆ ಶ್ರೇಯಾ ಎಸ್. ಜೈನ್, ವೃಂದಾ ಕೊನ್ನಾರ್, ಶಿಖಾ, ಅಪೇಕ್ಷಾ ಎ, ಪಂಚಮಿ ಭೋಜರಾಜ್ ವಾಮಂಜೂರು, ಅಭಿನವಿ ಆರ್. ಹೊಳ್ಳ, ಪ್ರಕೃತಿ ಮಾರೂರು, ಸುಜ್ಞಾನ್ ಮೂಡಬಿದಿರೆÉ, ತೀರ್ಥ ಪೆÇಳಲಿ, ಪ್ರತೀಕ್ಷಾ ಎ. ಧನಿಶಾ ಮಂಗಳೂರು,  ಅನ್ವಿಶಾ ಅನಿಲ್ ವಾಮಂಜೂರು, ಅವನಿ ಉಪಾಧ್ಯಾ, ಅಥರ್ವ ಹೆಗ್ಡೆ ಕೆ ಮತ್ತು ಅಮೋಘ ಸಹೋದರರು ಸಹಿತ ಬಾಲ ಪ್ರತಿಭೆಗಳು ಕಾರ್ಯಕ್ರಮ ನೀಡುವರು. ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

ಅತಿಥಿsಗಳು: ಎಚ್.ಗೋಪಾಲ ಭಂಡಾರಿ, ಕ್ಯಾ.ಗಣೇಶ ಕಾರ್ಣಿಕ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸುಧಾಕರ ನಾಯ್ಕ್ ಮುಂಬಯಿ, ಸತೀಶ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಅಧಿಕಾರಿ, ಜಡ್ಡು ಸುಂದರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಮೊದಲಾದವರು ಅತಿಥಿsಗಳಾಗಿರುವರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here