Tuesday 30th, April 2024
canara news

ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಗುರುವರ್ಯರ

Published On : 26 Jan 2018   |  Reported By : Rons Bantwal


ಶಿಷ್ಯ ಸ್ವೀಕಾರ-ಸನ್ಯಾಸ ದೀಕ್ಷೆಯ ವೈಭವದ ಸ್ವರ್ಣಮಹೋತ್ಸವ ಸಂಭ್ರಮ

ಮುಂಬಯಿ, ಜ.26: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಇದರ ಮಠಾಧಿಪತಿ, ಪರ್ತಗಾಳಿ ಜಿವೋತ್ತಮ ಮಠದ 23ನೇ ಯತಿವರ್ಯರಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಪೂಜ್ಯನೀಯ ಶ್ರೀಮದ್ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರ ಸನ್ಯಾಸ ದೀಕ್ಷಾ ಸ್ವರ್ಣಮಹೋತ್ಸವ ಸಂಭ್ರಮವನ್ನು ಇಂದು (ಜ.25) ಗುರುವಾರ ರಾತ್ರಿ 7.00 ಗಂಟೆಗೆ ಶ್ರೀ ರಾಮಮಂದಿರ, ದ್ವಾರಕಾನಾಥ ಭವನ, ವಡಲಾ, ಮುಂಬಯಿ ಇಲ್ಲಿ ಭಕ್ತಿಪೂರ್ವಕವಾಗಿ ನೆರವೇರಿಸಲಾಗುವುದು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ವಡಾಲಾ ಮುಂಬಯಿ ಸಮಿತಿ ಹಾಗೂ ಜಿಎಸ್‍ಬಿ ಗಣೇಶೋತ್ಸವ ಉತ್ಸವ ಸಮಿತಿ, ವಡಾಲಾ ಮುಂಬಯಿ ನೇತೃತ್ವದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಭವ್ಯ ಸಮಾರಂಭದಲ್ಲಿ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ಸನ್ಯಾಸ ದೀಕ್ಷಾ ಸ್ವರ್ಣಮಹೋತ್ಸವ ಆಚರಿಸಿದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಶ್ರೀವರ್ಯರಿಗೆ ಪೂಜ್ಯನೀಯ ಗೌರವದೊಂದಿಗೆ ಸನ್ಮಾನಿಸಲಾಗುವುದು ಎಂದು ಶ್ರೀ ರಾಮ ಮಂದಿರ, ವಡಲಾ, ಮುಂಬಯಿ ಇದರ ಅಧ್ಯಕ್ಷ ಗೋವಿಂದ ಎಸ್.ಭಟ್ ಮತ್ತು ಜಿಎಸ್‍ಬಿ ಗಣೇಶೋತ್ಸವ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ತಿಳಿಸಿದ್ದಾರೆ.

ಶ್ರೀಮದ್ ವಿದ್ಯಾಧಿರಾಜತೀರ್ಥ ಸ್ವಾಮೀಜಿ:
ಮುಂಬಯಿಯ ವಡಾಲಾ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನದಲ್ಲೇ 26.ಫೆಬ್ರವರಿ,1967 (ಮಾಘ ಕೃಷ್ಣ ದ್ವಿತೀಯ) ಈ ದಿನದಂದು ಬೆಳಗ್ಗೆ 11.43 ಶುಭ ಮುಹೂರ್ತದಲ್ಲಿ ತನ್ನ ಗುರುವರ್ಯರಾದ ಪೂಜ್ಯ ಶ್ರೀಮದ್ ದ್ವಾರಕಾನಾಥ ತೀರ್ಥ ಸ್ವಾಮೀಜಿ ಅವರಿಂದ ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಸನ್ಯಾಸದೀಕ್ಷೆ ಪಡೆದು ಕೊಂಡಿರುವುದೇ ಮುಂಬಯಿಗರ ಹಿರಿಮೆ, ವೈಶಿಷ್ಟ ್ಯವಾಗಿದೆ. 12.ಫೆಬ್ರವರಿ,2017 (ಮಾಘ ಕೃಷ್ಣ ದ್ವಿತೀಯ) ಈ ದಿನದಂದು ಶ್ರೀ ವಿದ್ಯಾಧಿರಾಜತೀರ್ಥರು ಸನ್ಯಾಸ ದೀಕ್ಷೆಯ 50ವರ್ಷಗಳನ್ನು ಪೂರೈಸುವುದರೊಂದಿಗೆ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ (ಗೋವಾ) ಇದರ ವೈಭವವನ್ನು ಇಮ್ಮಡಿಗೊಳಿಸಿದ್ದಾರೆ. 2018ನೇ ಜನವರಿ.21 ರಿಂದ ಫೆಬ್ರುವರಿ.11 ರವರೆಗೆ ಶಿಷ್ಯ ಸ್ವೀಕಾರ ಮತ್ತು ಸನ್ಯಾಸ ದೀಕ್ಷೆಯ ವೈಭವದ 50 ವರ್ಷಗಳನ್ನು ಪೂರೈಸಿದ ಬಳಿಕ ಶ್ರೀ ವಿದ್ಯಾಧಿರಾಜತೀರ್ಥ ಶ್ರೀಪಾದ್ ವಡೇರ್ ಸ್ವಾಮೀಜಿ ಅವರ ಮೊದಲ ಶಿಬಿರ, ತಮ್ಮ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಜೊತೆಗೂಡಿ ಇದೇ ಮೊದಲ ಬಾರಿ ತಾನು ದೀಕ್ಷೆ ಸ್ವೀಕರಿಸಿದ ಮುಂಬಯಿ ಮಹಾನಗರದ ವಡಾಲ ಅಲ್ಲಿನ ಶ್ರೀ ರಾಮ ಮಂದಿರದ ದ್ವಾರಕಾನಾಥ ಭವನಕ್ಕೆ ಚರಣಸ್ಪರ್ಶಗೈದು ಭಕ್ತಾಭಿಮಾನಿಗಳನ್ನು ಪುಲಕಿತ ಗೊಳಿಸಿರುವರು.

ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರು 50 ವರ್ಷಗಳ ಸನ್ಯಾಸವನ್ನು ಅನುಕರಣೀಯ ರೀತಿಯಲ್ಲಿ ಮಾರ್ಗದರ್ಶಿಸಿದ್ದಾರೆ. ಅದು ನಮ್ಮ ಗ್ರಂಥಗಳಲ್ಲಿ ವರ್ಣಿಸಲಾಗಿರುವ ಆದರ್ಶ ಯತಿಗಳಿಗೆ ತಕ್ಕುದಾದುದಾಗಿದೆ. ಅವರು ವೈದಿಕ ನಿಯಮಗಳು, ಸಂಪ್ರದಾಯ ಮತ್ತು ಸಂಸ್ಥಾನದ ವಿಧಿವಿಧಾನಗಳ ನಿರ್ವಹಣೆಯಲ್ಲಿ ಸೂಕ್ಷ್ಮ ಮತ್ತು ಶಿಸ್ತುಬದ್ಧ ನಿಲುವುಗಳನ್ನು ತೋರ್ಪಡಿಸಿದ್ದಾರೆ. ಸಂಸ್ಥಾನ ಭಕ್ತರ ಸಾಮಾಜಿಕ ಮತ್ತು ಆಧ್ಯಾತ್ಮಿಕ ಉನ್ನತೀಕರಣಕ್ಕೆ ಸಾಧನವೂ ಆಗಿದ್ದಾರೆ. ಎಚ್ ಎಚ್ ವಿದ್ಯಾಧಿರಾಜ ಸ್ವಾಮೀಜಿ ತಮ್ಮ ಪವಿತ್ರವಾದ ಸ್ಥಾನವನ್ನು ವೈಭವೀಕರಿಸಿದ್ದು ಮಾತ್ರವಲ್ಲದೆ ವಿಶೇಷ ಅನುಸ್ಥಾನಮ್ ಅಥವಾ ಪ್ರಮುಖ ಸ್ಥಳಗಳಲ್ಲಿ ಚತುರ್ಮಾಸ ಅಥವಾ ಕ್ಲಿಷ್ಟ ಯಾತ್ರೆಗಳಿಗಾಗಿ ಅಥವಾ ಪವಿತ್ರ ಗ್ರಂಥ ಪ್ರತಿಪಾದನೆಗಾಗಿ ಅಥವಾ ಯಾವುದೇ ದತ್ತಿ ಕಾರಣಗಳಿಗಾಗಿ ತಮ್ಮನ್ನು ನಿಯೋಜಿಸಿ ಕೊಳ್ಳುತ್ತಿದ್ದಾರೆ. ಈ ಎಲ್ಲಾ ಅಂಶಗಳು ಸಂಸ್ಥಾನದ ವೈಭವವನ್ನು ಹೆಚ್ಚಿಸಿದೆ ಮತ್ತು ಸಮಾಜದ ಬಾಂಧವರ ಯೋಗಕ್ಷೇಮವನ್ನು ವೃದ್ದಿಸಿದೆ.

ಸ್ವಾಮೀಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನಕ್ಕೆ ನಾವು ಸದಾ ಋಣಿಯಾಗಿದ್ದೇವೆ. ಅವರ ಮಾರ್ಗದರ್ಶನ ಮತ್ತು ಅವರ ಅಗ್ರಮಾನ್ಯ ಸಾಧನೆಗಳಿಗೆ ಮನದಾಳದ ಕೃತಜ್ಞತೆ ಮತ್ತು ಗೌರವ ಅರ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸ್ವಾಮೀಜಿಯ ನಿರಂತರ ಆಶೀರ್ವಾದ ನಮಗೆ ಹೀಗೆ ಇರಲಿ ಎಂದು ಆ ಭಗವಂತನ ಕಮಲದ ಪಾದಗಳಿಗೆರಗಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದು ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತಾಭಿಮಾನಿ ಗಳು ತಿಳಿಸುತ್ತಿದ್ದಾರೆ.

ಶ್ರೀವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಅವರು ತಮ್ಮ ಸನ್ಯಾಸ ದೀಕ್ಷ 50ನೇ ವರ್ಷ ಪೂರೈಸಿದ ಶುಭವಸರದಲ್ಲಿ ವಡಲಾದ ದ್ವಾರಕಾನಾಥ ಭವನದ ಶ್ರೀರಾಮ ಅಧ್ಯಾತ್ಮಿಕ ಸಾನಿಧ್ಯದಲ್ಲಿ ಶ್ರೀಪಾದರನ್ನು ನಮಿಸಿ ಗೌರವಿಸಲು ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಭಕ್ತಮಹಾಶಯರು ಸಿದ್ಧತೆ ನಡೆಸಿರುವರು. ಅಂತೆಯೇ ಶ್ರೀಪಾದರಿಗೆ ವಿನಮ್ರ ಶುಭಾಶಯಗಳು ಮತ್ತು ಗೌರವಂದನೆ ಸಲ್ಲಿಸಲು ಆಯೋಜಿಸಿರುವ ಭವ್ಯ ಸಮಾರಭದಲ್ಲಿ ರಾಮ ಸೇವಕರು, ಮಹಿಳಾವೃಂದ ಹಾಗೂ ಭಕ್ತಾಭಿಮಾನಿಗಳು ನಮ್ಮೊಂದಿಗೆ ಸ್ವಪರಿವಾರದೊಂದಿಗೆ ಸಹಭಾಗಿಯಾಗಿ ಶ್ರೀ ಮಹಾಗಣಪತಿ, ಶ್ರೀರಾಮಚಂದ್ರ ಮತ್ತು ಶ್ರೀ ಸ್ವಾಮೀಜಿ ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಸಂಘಟಕರು ಈ ಮೂಲಕ ಕೋರಿದ್ದಾರೆ.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here