Saturday 4th, May 2024
canara news

ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು ದುರಂತ-ವ್ಯಾಲೆಂಟೈನ್ ಡಿ'ಸೋಜಾ

Published On : 29 Jan 2018   |  Reported By : Rons Bantwal


ಪತ್ರಕರ್ತ ಪಿ.ಬಿ ಹರೀಶ್ ರೈ ಅವರಿಗೆ `ಕರ್ನಾಟಕ ಸೌರಭ-2018' ಪ್ರಶಸ್ತಿ

ಮುಂಬಯಿ, ಜ.29: ಬಾಲ್ಯದಿಂದಲೇ ನಾನು ನಾ.ಡಿ'ಸೋಜಾ ಅವರ ಕತೆ ಕಾದಂಬರಿ ಓದಿ ಬೆಳೆದವನು. ದೊಡ್ಡಪ್ಪನ ವೀರ ಎಚ್ಚಮ ನಾಯಕ ನಾಟಕದ ಪಾತ್ರ ನೋಡಿ ಬೆಳೆದವನು.ಇವೆಲ್ಲ ನನ್ನ ಮೇಲೆ ಗಾಢ ಪ್ರಭಾವ ಬೀರಿ ನನ್ನ ವ್ಯಕ್ತಿತ್ವ ರೂಪಿಸಿವೆ.ಮಕ್ಕಳು ಎಳವೆಯಿಂದಲೇ ಸಾಹಿತ್ಯ, ಕಲೆಗಳ ಬಗ್ಗೆ ಒಲವು ಮೂಡಿಸಿ ಕೊಳ್ಳಬೇಕು. ಇವತ್ತು ಕೆಲವು ಮಕ್ಕಳು ದುಶ್ಚಟಗಳ ದಾಸರಾಗುತ್ತಿರುವುದು ದುರಂತ. ಸಾಹಿತ್ಯ ಕಲೆಗಳ ಮುಖಾಂತರ ಅವರ ಮನಸ್ಸನ್ನು ಪರಿವರ್ತಿಸಬೇಕು.ಮಕ್ಕಳ ಯುವಜನರ ಮನಸ್ಸನ್ನು ದುರ್ವ್ಯಸನಗಳಿಂದ ದೂರವಿರಿಸಿ ಸಾಹಿತ್ಯ ಕಲೆಗಳ ಕಡೆಗೆ ಹರಿಸಬೇಕಾದ ಅಗತ್ಯವಿದೆ ಎಂದರು.ಮಂಗಳೂರಿನಲ್ಲಿ ಕನ್ನಡಾಭಿಮಾನ ಜಾಸ್ತಿ ಇರೋದು ಸಂತೋಷ. ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಮನೆ ಮಾಡಿವೆ.ಅವುಗಳನ್ನು ಅನಾವರಣ ಗೊಳಿಸುವ ಕೆಲಸ ನಡೀಬೇಕು ಎಂದÀು ಮಂಗಳೂರು (ಸಿಸಿಬಿ) ಸಹಾಯಕ ಪೆÇೀಲಿಸ್ ಆಯುಕ್ತ ಹಾಗೂ ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ಪಟು ವ್ಯಾಲೆಂಟೈನ್ ಡಿ'ಸೋಜಾ ತಿಳಿಸಿದರು.

ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಮಂಜುನಾಥ ಎಜುಕೇಷನ್ ಟ್ರಸ್ಟ್ (ರಿ.) ಮತ್ತು ಹೃದಯ ವಾಹಿನಿ ಕರ್ನಾಟಕ ಮಂಗಳೂರು ಆಶ್ರಯದಲ್ಲಿ ನಗರದ ಯುವವಾಹಿನಿ ಸಭಾಂಗಣದಲ್ಲಿ ನಡೆಸಲ್ಪಟ್ಟ ಕನ್ನಡ ಚಿಂತನ ಹಾಗೂ ವಾಚನಾಭಿವೃದ್ಧಿ ಕಮ್ಮಟದಲ್ಲಿ ಅಭಿನಂದನಾ ಗೌರವ ಸ್ವೀಕರಿಸಿ ವ್ಯಾಲೆಂಟೈನ್ ಡಿ'ಸೋಜಾ ಮಾತನಾಡಿದರು.

ಇತ್ತೀಚೆಗೆ ಲಾಸ್ ಏಂಜಲಿಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ವಿಜೇತರಾದ ವ್ಯಾಲೆಂಟೈನ್ ಅವರನ್ನು ಹೃದಯವಾಹಿನಿ ಹಾಗೂ ಮಂಜುನಾಥ ಎಜುಕೇಷನ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರಿಗೆ `ಕರ್ನಾಟಕ ಸೌರಭ-2018' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆ ಸಚೇತಕ ಶಶಿಧರ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಮಕ್ಕಳಲ್ಲಿ ತುಂಬಾ ಸಾಮಾಜಿಕ ಸ್ಪಂದನೆ ಇರುತ್ತದೆ. ಇತರರೊಡನೆ ಮುಕ್ತವಾಗಿ ಬೆರೆಯುವ ಪ್ರವೃತ್ತಿ ಅವರಲ್ಲಿ ಹೆಚ್ಚು ಇರುತ್ತದೆ. ಮುಂದೆ ಅವರು ಉದ್ಯೋಗಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಈ ರೀತಿ ಇತರರೊಡನೆ ಸಹಜವಾಗಿ ಬೆರೆಯುವ ಅವರ ಗುಣ ಅವರ ಬದುಕನ್ನು ಕಟ್ಟಿ ಕೊಡುತ್ತದೆ.ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವಂತೆ ಅವರನ್ನು ಪ್ರೇರೇಷಿಸುತ್ತದೆ.ಹಾಗಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಶಾಲೆ ಕಾಲೇಜುಗಳಲ್ಲಿ ನಡೆಯಲಿ ಎಂದು ಹಾರೈಸಿದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪೆÇ್ರ. ತುಕಾರಾಂ ಪೂಜಾರಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿ ಬರೀ ಅಂಕಗಳಿಸಿದರೆ ಏನೂ ಪ್ರಯೋಜನ ಇಲ್ಲ. ಬದುಕನ್ನು ಕಟ್ಟಿ ಕೊಡುವ ಜ್ಞಾನ,ಸಂಸ್ಕಾರ ನಮ್ಮ ಮಕ್ಕಳಿಗೆ ಲಭ್ಯವಾಗಬೇಕು.ದೇಶ ಸುತ್ತುವುದರಿಂದ ಕೋಶ ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ ಎಂದರು.

ಹೃದಯವಾಹಿನಿ ಕರ್ನಾಟಕ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ ಸಾಗರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರತಿ ತಿಂಗಳು ರಾಜ್ಯದ ಮೂಲೆ ಮೂಲೆಗಳಲ್ಲಿ ಅಲ್ಲದೆ ವಿದೇಶಗಳಲ್ಲಿ ಕೂಡ ವಿವಿಧ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕೆಲಸವನ್ನು ತಮ್ಮ ಸಹಕಾರ ದಿಂದ ಮಾಡುತ್ತಿದ್ದೇವೆ. ಮಕ್ಕಳಲ್ಲಿ ವಾಚನಾಭಿವೃದ್ಧಿ ವೃದ್ಧಿಸÀಲು ಕಮ್ಮಟ ಏರ್ಪಡಿಸಲಾಗಿದೆ. ಮುಂದಿನ ಪೀಳಿಗೆಗೆ ಕೂಡ ಕನ್ನಡದ ಬಗ್ಗೆ ಪ್ರೀತಿ ಹುಟ್ಟು ಹಾಕುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ ಶಾಲೆಗಳಿಂದ ವಿದ್ಯಾಥಿರ್üಗಳು ಭಾಗವಹಿಸಿದ್ದು ಅರುಂಧತಿ ರಾವ್ ಪ್ರಾರ್ಥನೆಯನ್ನಾಡಿದರು. ರವಿ ತೊಕ್ಕೊಟ್ಟು ಸ್ವರಸಂಗಮ ಕನ್ನಡ ಗೀತೆಗಳ ಹಾಡುಗಳನ್ನು ಪ್ರಸ್ತುತ ಪಡಿಸಿದರು. ರವಿ ಎಂ. ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here