Friday 3rd, May 2024
canara news

ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ)ನಿಂದ ಗಣರಾಜ್ಯೋತ್ಸವ ಆಚರಣೆ

Published On : 30 Jan 2018   |  Reported By : Rons Bantwal


ನಿಷ್ಠಾವಂತಿಕಾ ಸೇವೆಯ ಋಣ ತೀರಿಸಲಸಾಧ್ಯ : ಡಾ| ಸುರೇಶ್ ಎಸ್.ರಾವ್

ಮಹಾನಗರದಲ್ಲಿನ ಪ್ರತಿಷ್ಠಿತ ಸಂಸ್ಥೆಯಲ್ಲೋಂದಾದ ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಯು ಭಾರತದ 69ನೇ ಗಣರಾಜ್ಯೋತ್ಸವವನ್ನು ಕಳೆದ ಶುಕ್ರವಾರ ನವಿಮುಂಬಯಿ ನೆರೂಲ್ ಪೂರ್ವದ ಸೀವುಡ್ ಅಲ್ಲಿನ ಆಶ್ರಯದ ವಿ.ಹೆಚ್ ಸೋಮೇಶ್ವರ್ ಸಭಾಗೃಹದಲ್ಲಿ ಸಂಭ್ರಮದಿಂದ ಆಚರಿಸಿತು.

ಪ್ರಾತಃಕಾಲ ಸಂಘದ ನೂರಾರು ಕಿರಿ-ಹಿರಿಯ ಸದಸ್ಯರ ಒಗ್ಗೂಡುವಿಕೆಯಲ್ಲಿ ಧ್ವಜಾರೋಹಣ, ಧ್ವಜವಂದನೆ, ರಾಷ್ಟ್ರಗೀತೆ, ವಿವಿಧ ದೇಶ ಭಕ್ತಿ ಗೀತೆಗಳಿಗೆ ನೃತ್ಯಾಭಿನಯ ಪ್ರಸ್ತುತಿಯಲ್ಲಿ ಆಯೋಜಲಾಗಿದ್ದ ಏಕದಿನದ ಕಾರ್ಯಕ್ರಮಕ್ಕೆ ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಕಾರ್ಯಕ್ರಗಳಿಗೆ ಚಾಲನೆನೀಡಿದರು.

ನಂತರ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ ಇವುಗಳ ಸಹಯೋಗದಲ್ಲಿ ಶ್ರೀ ಮಧ್ವ ನವಮಿ ಆಚರಿಸಲಾಯಿತು. ಅಲಂಕೃತ ಮಂಟಪದಲ್ಲಿ ಶ್ರೀ ಗೋಪಾಲಕೃಷ್ಣ ದೇವರು ಹಾಗೂ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಪ್ರತಿಷ್ಠಾಪನೆ ಗೊಳಿಸಿ ಗೋಕುಲ ಭಜನಾ ಮಂಡಳಿ ಶ್ರೀಮನ್ಮಧ್ವಾಚಾರ್ಯ ವಿರಚಿತ ದ್ವಾದಶ ಸ್ತೋತ್ರ ಪಠನೆ ಹಾಗೂ ಭಜನೆ ನೆರವೇರಿಸಿತು. ಬಾಲಾಲಯ ಅರ್ಚಕ ಕೃಷ್ಣಪ್ರಸಾದ ಕೆದಿಲಾಯ ಶ್ರೀದೇವ ರಿಗೆ ಪೂಜೆ, ಮಂಗಳಾರತಿ ಗೈದು, ತೀರ್ಥ ಪ್ರಸಾದ ವಿತರಿಸಿ ಹರಸಿದರು.

ಸಂಜೆ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿಸಲ್ಪಟ್ಟಿದ್ದು ಈ ಶುಭಾವಸರದಲ್ಲಿ ಐದು ದಶಕಗಳಿಂದ ಸಂಘದ ಗೌರವ ಲೆಕ್ಕಪತ್ರ ಪರಿಶೋಧಕರಾಗಿ ಸೇವೆ ಸಲ್ಲಿಸಿದ ಸಿಎ| ಸುಬ್ಬ ರಾವ್ ದÀಂಪತಿಯನ್ನು ಪದಾಧಿಕಾರಿಗಳÉೂಂದಿಗೆ ಅಧ್ಯಕ್ಷರು ಶಾಲು ಹೊದಿಸಿ, ಸ್ಮರಣಿಕೆ , ಸನ್ಮಾನ ಪತ್ರ, ಫಲ ಪುಷ್ಪಗಳನ್ನಿತ್ತು ಸನ್ಮಾನಿಸಿ ಅಭಿವಂದಿಸಿದರು.

ಬಿಎಸ್‍ಕೆಬಿಎ ಸಂಸ್ಥೆಯ ಸೇವೆ ಮಾಡಿರುವ ಬಗ್ಗೆ ತನಗೆ ಅಪಾರ ತೃಪ್ತಿಯಿದೆ ಎಂದು ಸನ್ಮಾನಕ್ಕೆ ಉತ್ತರವಾಗಿ ಸುಬ್ಬರಾವ್ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಡಾ| ಸುರೇಶ್ ರಾವ್ ಅವರು ಸುಬ್ಬರಾವ್ ಅವರನ್ನು ಅಭಿನಂದಿಸುತ್ತಾ 93 ವರ್ಷದ ಚಾಣಕ್ಯ ಸುಬ್ಬರಾವ್. ಈ ಇಳಿವಯಸ್ಸಿನಲ್ಲಿಯೂ ತಮ್ಮ ಕೆಲಸವನ್ನು ಅತಿ ನಿಷ್ಠೆಯಿಂದ ಮಾಡುತ್ತಿದ್ದಾರೆ. ಮನಸ್ಸು ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯ ಎಂಬ ನೀತಿ ಪಾಠವನ್ನು ಇಂದಿನ ಜನಾಂಗಕ್ಕೆ ತಿಳಿಸಿ ಕೊಟ್ಟಿದ್ದಾರೆ. ಅವರು 5 ದಶಕಗಳಿಂದ ಗೋಕುಲಕ್ಕೆ ಮಾಡಿರುವ ಸೇವೆಯ ಋಣ ತೀರಿಸಲಿಕ್ಕೆ ನಮ್ಮಿಂದ ಅಸಾಧ್ಯ. ದೇವರು ಅವರಿಗೆ ಆಯುರಾರೋಗ್ಯವನ್ನಿತ್ತು ಇನ್ನೂ ಹೆಚ್ಚಿನ ಸೇವೆ ಮಾಡುವಂತೆ ಅನುಗ್ರಹಿಸಲಿ ಎಂದು ಹಾರೈಸಿದರು.

ಉಪಾಧ್ಯರುಗಳಾದ ವಾಮನ್ ಹೊಳ್ಳ, ಶೈಲಿನಿ ರಾವ್, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಜತೆ ಕಾರ್ಯದರ್ಶಿ ಗಳಾದ ಚಿತ್ರಾ ಮೇಲ್ಮನೆ, ಪಿ.ಸಿ ಎನ್ ರಾವ್, ಖಜಾಂಚಿ ಸಿಎ| ಹರಿದಾಸ್ ಭಟ್, ಜತೆ ಖಜಾಂಚಿ ಕುಸುಮ್ ಶ್ರೀನಿವಾಸ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಇನ್ನಿತರರು ಉಪಸ್ಥಿತರಿದ್ದು 2016-17ರ ಶೈಕ್ಷಣಿಕ ಅವಧಿಯಲ್ಲಿ ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾಥಿರ್üಗಳಿಗೆ ಸ್ಮರಣ ಫಲಕಗಳನ್ನಿತ್ತು ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಿಂದಿ ಚಿತ್ರಗೀತೆಗಳ ಆಧಾರಿತ ಹಾಡುಗಳ ನೃತ್ಯಾವಳಿ `ಬಾಲಿವುಡ್ ಮಿಕ್ಸ್ಚರ್' ಹಮ್ಮಿಕೊಳ್ಳಲಾಗಿತ್ತು. ಸುಮಾರು 50 ಕಲಾವಿದರು ಹಳೆಹೊಸ ಹಿಂದಿ ಚಿತ್ರಗೀತೆಗಳಿಗೆ ಕುಣಿದು ಕುಪ್ಪಳಿ ನರ್ತಿಸಿ ಮನರಂಜಿಸಿದರು. ಗೀತಾ ಲಕ್ಷಿ ್ಮ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಣೆ ಗೈದರು.

ಅನಂತ ಪಿ.ಪೆÇೀತಿ ಸ್ವಾಗತಿಸಿದರು. ಚಂದ್ರಾವತಿ ರಾವ್ ಮತ್ತು ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಮೇಲ್ಮನೆ ಸುಬ್ಬರಾವ್‍ರ ಕರ್ತವ್ಯನಿಷ್ಠೆ, ಸಲ್ಲಿಸಿದ ಸೇವೆ ಮನವರಿಸಿ ಅಭಿನಂದಿಸಿದರು. ಚಿತ್ರಾ ಮೇಲ್ಮನೆ ಸನ್ಮಾನಪತ್ರ ವಾಚಿಸಿದರು. ಇಂದ್ರಾಣಿ ರಾವ್ ಪ್ರತಿಭಾವಂತರ ಯಾದಿ ವಾಚಿಸಿದರು. ಪಿ.ಸಿ.ಎನ್ ರಾವ್ ಧನ್ಯವಾದಗೈದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿ ಗೊಂಡಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here