Thursday 2nd, May 2024
canara news

ಭಾವ ಶುದ್ಧಿ ಸಹಿತವಾದ ಭಕ್ತಿಯೇ ಮೋಕ್ಷ ಮಾರ್ಗಕ್ಕೆ ದಾರಿ -ಆಚಾರ್ಯಶ್ರೀ 108 ಕುಶಾಗ್ರನಂದಿ ಮುನಿಮಹಾರಾಜರು

Published On : 01 Feb 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ,: ಜೈನಾಗಮದಲ್ಲಿ ಅನೇಕ ಸ್ತೋತ್ರಗಳು, ಪೂರ್ವಾಚಾರ್ಯರು ತಮಗಾದ ಉಪಸರ್ಗದ ಸಮಯದಲ್ಲಿ,ಭಗವಂತನ ಭಕ್ತಿ ಮಾಡಿ ರಚಿಸಲ್ಪಟ್ಟವುಗಳಾಗಿವೆ.ಭಕ್ತಿಯೆದುರು ಯಾವುದೇ ದ್ರವ್ಯಶಕ್ತಿಯು ತನ್ನ ಕಾರ್ಯ ಮಾಡಲು ಸಾದ್ಯವಿಲ್ಲ. ಶಬರಿಯ ಭಕ್ತಿಗೆ ರಾಮನ ದರ್ಶನವಾದಂತೆ, ಸಮಂತ ಭದ್ರಾಚಾರ್ಯ ರ ಭಕ್ತಿಗೆ ಚಂದ್ರನಾಥ ಸ್ವಾಮಿಯ ದರ್ಶನವಾದಂತೆ, ಮಾನತುಂಗಾಚಾರ್ಯರ ಭಕ್ತಿಗೆ ಆದಿನಾಥ ಸ್ವಾಮಿಯ ದರ್ಶನವಾದಂತೆ, ಭಗವಂತನ ಸ್ತುತಿ ಮಾಡುವುದರಿಂದ ನಮ್ಮ ಆತ್ಮನಲ್ಲಿಯೂ ಊರ್ಜಾಶಕ್ತಿಯು ಉತ್ಪನ್ನಗೊಳ್ಳುತ್ತದೆ.ಭಕ್ತಾಮರ ಪಠಣ ಮಾಡುತ್ತಿದ್ದರೂ ನಮ್ಮಲ್ಲಿ ಬದಲಾವಣೆ ಆಗುತ್ತಿಲ್ಲವೆಂದಾದರೆ, ನಮ್ಮ ಲ್ಲಿ ಭಾವ ಶುದ್ದಿಯಿಲ್ಲ ಎಂದರ್ಥ. ಭಾವ ಶುದ್ದಿ ಸಹಿತವಾದ ಭಕ್ತಿ, ನಮ್ಮ ಆತ್ಮನನ್ನು ಶುದ್ದಿಗೊಳಿಸಿ, ಮೋಕ್ಷ ಮಾರ್ಗದತ್ತ ಚಲಿಸುವಂತೆ ಮಾಡುತ್ತದೆ ಎಂದು ಆಚಾರ್ಯಶ್ರೀ 108 ಕುಶಾಗ್ರನಂದಿ ಮುನಿಮಹಾರಾಜರು ತಿಳಿಸಿದರು.

ಕಳೆದ ಶನಿವಾರ ಡೊಂಬಿವಿಲಿ ಅಲ್ಲಿನ ಕಿಡ್‍ಲ್ಯಾಂಡ್ ಶಾಲಾ ಸಭಾಗೃಹದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕರ್ನಾಟಕದ ಶ್ರಾವಕರನ್ನು ಉದ್ದೇಶಿಸಿ ಪ್ರವಚನ ನೀಡಿದ ಆಚಾರ್ಯಶ್ರೀಗಳು ಕರ್ನಾಟಕದ ಜನತೆ ಮಧುರ ಭಾಷಿಗಳಾಗಿದ್ದು ನಿಮ್ಮೆಲ್ಲರ ಭಕ್ತಿಯೇ ನನ್ನನ್ನು ಡೊಂಬಿವಿಲಿಗೆ ಆಗಮಿಸುವಂತೆ ಮಾಡಿತು. ಮುಂದೊಂ ದು ದಿನ ಡೊಂಬಿವಿಲಿ ನಗರದಲ್ಲಿಯೂ ಚಾತುರ್ಮಾಸ ಮಾಡುವ ಭಾವನೆಯಿದೆ. ಯಾರೇ ಮುನಿಗಳು ಬಂದರೂ ನಿಮ್ಮಲ್ಲಿಗೆ ಕರೆಸಿಕೊಂಡು ಕಾರ್ಯಕ್ರಮವನ್ನು ಮಾಡಿ ಎಂದು ಕರೆಯಿತ್ತರು.

ಶುಕ್ರವಾರ ಡೊಂಬಿವಿಲಿ ನಗರದ ಪುರಪ್ರವೇಶಗೈದ ಮುನಿಸಂಘವು ಡೊಂಬಿವಿಲಿ ಪೂರ್ವ-ಪಶ್ಚಿಮದಲ್ಲಿರು ವ ದಿಗಂಬರ ಜಿನಮಂದಿರವನ್ನು ದರ್ಶಿಸಿ ಕೋಪರ್‍ಗಾಂವ್‍ಗೆ ಆಗಮಿಸಿದ್ದು ಆಚಾರ್ಯಶ್ರೀ 108 ಕುಶಾಗ್ರನಂದಿ ಮುನಿಮಹಾರಾಜರು, ಮುನಿಶ್ರೀ 108 ಅಜಯಋಷಿ ಮುನಿಮಹಾರಾಜರು ಹಾಗೂ ವಿಚಾರಪಟ್ಟ ಕ್ಷುಲ್ಲಕ ಅರಿಹಂತ ಋಷಿ ಸ್ವಾಮೀಜಿ ಅವರನ್ನು ಕರ್ನಾಟಕದ ಶ್ರಾವಕರು ಭಕ್ತಿಯಿಂದ ಸುಖಾಗಮನ ಬಯಸಿದರು. ಡೊಂಬಿವಿಲಿಯ ಅಜಿತ್‍ಕುಮಾರ್ ಜೈನ್ ನಿವಾಸದಲ್ಲಿ ಆಹಾರಚರ್ಯೆಯು ನೆರವೇರಿತು. ಬಹುತೇಕ ಶ್ರಾವಕರು ಆಹಾರದಾನ ಗೈದರು.

ಕರ್ನಾಟಕ ಜೈನ ಸಂಘದ ಶ್ರಾವಿಕೆಯರ ಮಂಗಲಾಚರಣೆಯೊಂದಿಗೆ ಡೊಂಬಿವಿಲಿ ಪೂರ್ವ ಮತ್ತು ಪಶ್ಚಿಮದ ಬಸದಿಗಳ ಪದಾಧಿಕಾರಿಗಳು ಮತ್ತು ಅಖಿಲ ಕರ್ನಾಟಕ ಜೈನ ಸಂಘದ ಪದಾಧಿಕಾರಿಗಳು ದೀಪ ಪ್ರಜ್ಜಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ನಂತರ ಆಚಾರ್ಯಶ್ರೀಗಳ ಪಾದ ಪ್ರಕ್ಷಾಲನೆ ಮತ್ತು ಮುನಿಸಂಘಕ್ಕೆ ಶಾಸ್ತ್ರದಾನ ಮಾಡಲಾಯಿತು. ಮುನಿಸಂಘದ ವಿಹಾರದಲ್ಲಿ ಸಹಕರಿಸಿದ ಶ್ರಾವಕರನ್ನು ಕರ್ನಾಟಕ ಜೈನ ಸಂಘದ ವತಿಯಿಂದ ಗೌರವಿಸಲಾಯಿತು. ಆಚಾರ್ಯಶ್ರೀಯವರು ನೆರೆದ ನೂರಾರು ಶ್ರಾವಕರಿಗೆ ತಮ್ಮ ಮಂಗಲ ಆಶಿರ್ವಚನ ದಯಪಾಲಿಸಿದರು.

ಕೊನೆಯಲ್ಲಿ ಮುನಿಸಂಘಕ್ಕೆ ಶ್ರಾವಕರು ಮಂಗಳಾರತಿ ಬೆಳಗಿದರು. ಅಜಿತ್‍ಕುಮಾರ್ ಜೈನ್, ಅನಿತಾ ಅಜಿತ್ ಜೈನ್, ಪದ್ಮಜ ಜೈನ್, ಪದ್ಮಾವತಿ ಪದ್ಮಜ ಜೈನ್, ರತ್ನಾಕರ ಅಥಿüಕಾರಿ, ರಾಜವರ್ಮ ಜೈನ್, ರತ್ನಾಕರ ಅಜ್ರಿ, ಅಖಿಲ ಕರ್ನಾಟಕ ಜೈನ ಸಂಘದ ಕಾರ್ಯದರ್ಶಿ ಪವನಂಜಯ ಬಲ್ಲಾಳ್, ಜೊತೆ ಕಾರ್ಯದರ್ಶಿ ರಘುವೀರ್ ಹೆಗ್ಡೆ ಥಾಣೆ ಪದಾಧಿಕಾರಿಗಳಾದ ರಾಜೇಂದ್ರ ಹೆಗ್ಡೆ ವಡಾಲ, ಮಹಾವೀರ ಜೈನ್, ಡೊಂಬಿವಿಲಿ, ಪ್ರತಿಭಾ ವಾಣಿ ವೈದ್ಯ, ಪ್ರವೀಣಚಂದ್ರ ಜೈನ್ ಕಲ್ಯಾಣ್ ಸಹಕರಿಸಿದರು. ಭರತ್‍ರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಾಸಿಕ್‍ನ ಮಾಂಗಿ ತುಂಗಿ ಸಿದ್ದಕ್ಷೇತ್ರದ ವಿಹಾರದಲ್ಲಿರುವ ಮುನಿಸಂಘ ಕಳೆದ ಭಾನುವಾರ (ಫೆ. 28) ಕಲ್ಯಾಣ್‍ನತ್ತ ವಿಹಾರ ಕೈಗೊಂಡಿತು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here