Thursday 2nd, May 2024
canara news

ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಉಪನ್ಯಾಸ-ಕವಿಸಮಯ-ಗೌರವಾರ್ಪಣೆ

Published On : 03 Feb 2018   |  Reported By : Rons Bantwal


ರಂಗಭೂಮಿಯ ಪುಳಕವೇ ವೈಶಿಷ್ಟ ್ಯಮಯ : ಸದಾನಂದ ಸುವರ್ಣ

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ,ಫೆ.03: ನಾಟಕ ಒಂದು ಕೂಟದ ಕೆಲಸವಾಗಿದ್ದು ರಂಗದ ಹಿಂದೆ ಮುಂದೆ ಇರುವ ಕಲಾಕಾರರ ಸಂಗಮವೇ ನಾಟಕವಾಗಿದೆ. ಇಂತಹ ರಂಗಭೂಮಿಯಲ್ಲಿ ಸದ್ಯ ಪ್ರೇಕ್ಷಕರ ಬದಲಾವಣೆ ಆಗುತ್ತಿದೆ. ನಗಿಸುವ ಜೊತೆಗೆ ಸಂದೇಶ ನೀಡುವುದು ನಾಟಕಗಳ ಉದ್ದೇಶ ಆದಾಗಲೇ ರಂಗ ಭೂಮಿಯಲ್ಲಿ ಮತ್ತೆ ಪ್ರೇಕ್ಷಕರನ್ನು ಸೆಳೆಯ ಬಹುದು. ಆ ಮೂಲಕ ಮನೋರಂಜನೆ ಜೊತೆ ಮನೋವಿಕಾಸ ಸಾಧ್ಯ ಎಂದು ನಾಡಿನ ಪ್ರಸಿದ್ಧ ರಂಗ ನಿರ್ದೇಶಕ, ಸಂಘಟಕ ಸದಾನಂದ ಸುವರ್ಣ ತಿಳಿಸಿದರು.

 

ಇಂದಿಲ್ಲಿ ಗುರುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಜೆ.ಪಿ ನಾಯಕ್ ಭವನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಸಂಸ್ಥೆಯ ಸಹಯೋಗದೊಂದಿಗೆ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಉಪನ್ಯಾಸ, ಕವಿಸಮಯ ಮತ್ತು ಗೌರವಾರ್ಪಣೆ ಕಾರ್ಯಕ್ರಮದ ಮಧ್ಯಾಂತರದಲ್ಲಿ `ರಂಗಭೂಮಿ ನಿನ್ನೆ, ಇಂದು, ನಾಳೆ' ಕುರಿತು ವಿಶೇಷ ಉಪನ್ಯಾಸ ನೀಡಿ ಸುವರ್ಣ ಮಾತನಾಡಿದರು.


ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ತ್ರಿವಳಿ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ, ವಿಜಯ ಕರ್ನಾಟಕ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ಹಿರಿಯ ಉಪ ಸಂಪಾದಕಿ ಡಾ| ಸೀತಾಲಕ್ಷ್ಮೀ ಕರ್ಕಿಕೋಡಿ ಉಪಸ್ಥಿತರಿದ್ದು ಮುಂಬಯಿನ ಹಿರಿಯ ಸಾಹಿತಿಗಳಾದ ಡಾ| ಜಿ.ವಿ ಕುಲಕರ್ಣಿ ಮತ್ತು ಡಾ| ವಿಶ್ವನಾಥ್ ಕಾರ್ನಾಡ್ ಅವರು ಸದಾನಂದ ಸುವರ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ರಂಗಭೂಮಿಯಲ್ಲಿ ಕಲಿಯುವಂತದು ಬೇರೆಲ್ಲೂ ಕಲಿಯಲಸಾಧ್ಯ. ಕಾರಣ ಇಲ್ಲಿನ ಪುಳಕವೇ (ಥಿü್ರಲ್) ಬೇರೆ. ಅಭಿನಯ ನಾಟಕದ ಸುಂದರತೆಯುಳ್ಳದಾಗಿದ್ದು ಬದುಕಿನ ಜೀವನಾನುಭ ಲೋಕಾನುಭವ ರಂಗಭೂಮಿಯಲ್ಲಿ ಮಾತ್ರ ಲಭ್ಯ. ಆದುದರಿಂದ ರಂಗಭೂಮಿಯು ದೇಹಾರೋಗ್ಯಕ್ಕೆ ಪೂರಕವಾಗಿದ್ದು ಇದೊಂದು ಜೀವಂತ ಕಲೆಯಾಗಿದೆ. ನನ್ನ ಜೀವನದ ಸುಮಾರು ಆರು ದಶಕಗಳನ್ನು ನಾನು ಮುಂಬಯಿಯಲ್ಲಿ ಕಳೆದಿದ್ದು ಇಲ್ಲಿನ ರಂಗಭೂಮಿಯ ವಿಶಾಲತೆ ಮತ್ತೊಂದೆಡೆ ಇಲ್ಲ. ಇಲ್ಲಿನ ಪ್ರೇಕ್ಷಕರು, ಕಲಾವಿದರು, ರಂಗಭೂಮಿ ನನ್ನನ್ನು ಇಷ್ಟರ ಮಟ್ಟಿಗೆ ಬೆಳೆಸಿದೆ. ಇಂತಹ ರಂಗಭೂಮಿ ನನ್ನನ್ನು ಬೆಳೆಸಿದ ಕಾರಣ ನಾನು ಇಂದು ಈ ವೇದಿಕೆಯಲ್ಲಿ ಮಾತನಾಡಲು ಸಾಧ್ಯವಾಗಿದೆ. ಇದೇ ರಂಗಸ್ಥಳ ನನಗೆ ದೀರ್ಘಾಯುಷ್ಯ ಪ್ರಾಪ್ತಿಸಿದೆ. ನಾಟಕವೇ ನನ್ನ ಜೀವಾಳವಾಗಿದ್ದು ನನ್ನ ಜೀವನಾರಂಭದ ಪರದೆಯಾಗಿದೆ. ಇಂತಹ ಪರದೆಗಳೇ ನೂರಾರು ನಾಟಕ, ರಂಗಕಲಾಸಕ್ತರವನ್ನು ಸೃಷ್ಟಿಸಿವೆ ಎಂದೂ ಸುವರ್ಣರು ಅಭಿಪ್ರಾಯ ಪಟ್ಟರು.

ಉಪನ್ಯಾಸ ಪ್ರಕಟನೆ ಇತ್ಯಾದಿಗಳ ಮೂಲಕ ಜನರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವುದೇ ನಮ್ಮ ಉದ್ದೇಶ. ಕಳೆದ ಎರಡುವರೆ ದಶಕಗಳಿಂದ ಹೊಸ ರೀತಿಯ ಕಲ್ಪನೆಗಳನ್ನು ಮೂಡಿಸುವ ಕಾಯಕ ಪ್ರಸಾರಾಂಗ ಮಾಡುತ್ತಿದೆ. ಮೂಲಿಕಗಳನ್ನು ಪ್ರಕಟಿಸುತ್ತೇವೆ. ಹೊರನಾಡಿನ ಮುಂಬಯಿಯಲ್ಲಿ ಇಂತಹದೊಂದು ಅವಕಾಶ ನಮ್ಮ ಪಾಲಿನ ವರದಾನ ಎನ್ನುತ್ತಾ ಪ್ರಸಾರಾಂಗ ಸಂಸ್ಥೆಯ ಸೇವಾ ಚಟುವಟಿಕೆಗಳನ್ನು ಸ್ಥೂಲವಾಗಿ ಪರಿಚಯಿಸಿ `ಕವಿ ಸಮಯ' ಕಾರ್ಯಕ್ರಮ ನಡೆಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ| ಜಿ.ಎನ್ ಉಪಾಧ್ಯ ಮುಂಬಯಿಯಲ್ಲಿ ಕನ್ನಡದ ಕಾವಲು ಕಾಯುವ ಕೆಲಸ ಮಾಡುವವರು ಎಸ್.ಕೆ.ಸುಂದರ್ ಅವರು ಅವರ ಕುರಿತಾದ ಕಿರು ಹೊತ್ತಗೆ ಇಂದು ವಿಭಾಗದಲ್ಲು ಲೋಕಾರ್ಪಣೆಯಾಗುತ್ತಿರುವುದು ಸಂತೋಷದ ವಿಷಯ. ಕನ್ನಡ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿ ಈಗ ಮುಂಬಯಿ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯಾಗಿ ನಿವೃತ್ತಿ ಹೊಂದುತ್ತಿರುವ ಕರುಣಾಕರ್ ಉದ್ಯಾವರ್ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.

ಬಳಿಕ ಸಾಹಿತ್ಯ ಬಳಗ ಮುಂಬಯಿ ಇದರ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಇವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಾಶಿತ `ಸಾಹಿತ್ಯ ಸಂಸ್ಕೃತಿ ಪರಿಚಾರಕ ಎಸ್.ಕೆ ಸುಂದರ್' ಅಭಿನಂದನಾ ಕೃತಿಯನ್ನು ಮೂರನೇ ಬಾರಿಗೆ ಸದಾನಂದ ಸುವರ್ಣ ಬಿಡುಗಡೆ ಗೊಳಿಸಿದರು.

ನಂತರ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಗಿದ್ದು ಮುಂಬಯಿ ವಿವಿ ಉನ್ನತಾಧಿಕಾರಿಗಳಾದ ಗುರುನಾಥ್ ಕಲಂಕರ್ ಹಾಗೂ ಕೇತನ್ ಕಾನ್ಹೇರಿ ಅತಿಥಿü ಅಭ್ಯಾಗತರುಗಳಾಗಿ ಉಪಸ್ಥಿತರಿದ್ದು, ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ನಿರಂತರ ಮೂರು ದಶಕಗಳಿಂದ ನಿಸ್ವಾರ್ಥವಾಗಿ ಸೇವೆಗೈದ ಕರುಣಾಕರ ಉದ್ಯವಾರ ಅವರಿಗೆ ಗೌರವಾರ್ಪಣೆಗೈದು ಅಭಿವಂದಿಸಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ, ಕೃತಿಯ ಸಂಪಾದಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ, ಕೃತಿ ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ರಮಾ ಉಡುಪ ಕೃತಜ್ಞತೆ ಸಲ್ಲಿಸಿದರು.

 

 

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here