Thursday 2nd, May 2024
canara news

ಶ್ರೀ ಬಪ್ಪನಾಡು ಕ್ಷೇತ್ರ ಬ್ರಹ್ಮ ಕಲಶೋತ್ಸವ ಸಮಿತಿ ಮುಂಬಯಿ ಸಭೆ

Published On : 03 Feb 2018   |  Reported By : Rons Bantwal


ಮುಂಬಯಿ, ಫೆ.03: ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಸರ್ವ ಧರ್ಮಗಳಿಂದ ಮಾನ್ಯತೆ ಪಡೆಯುವ ಹಾಗೂ ಸರ್ವ ಜಾತಿ ವರ್ಗಗಳಿಂದ ಸಮಾನವಾಗಿ ಆರಾಧಿಸಲ್ಪಡುವ ದೇವಸ್ಥಾನಗಳಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿರುವ ಕ್ಷೇತ್ರವಾಗಿದೆ ಎಂದು ಬಪ್ಪನಾಡು ದೇವಸ್ಥಾನದ ಅನುವಂಶಿಕ ಮತ್ತು ಆಡಳಿತ ಮೊಕ್ತೇಸರ ಎನ್.ಎಸ್ ಮನೋಹರ ಶೆಟ್ಟಿ ತಿಳಿಸಿದರು.

ಇತ್ತೀಚೆಗೆ ನಗರದ ಗೋರೆಗಾಂವ್ ಪಶ್ಚಿಮದಲ್ಲಿನ ಲಲಿತ್ ಹೊಟೇಲ್‍ನ ಕ್ರಿಸ್ಟಲ್ ಸಭಾಗೃಹದಲ್ಲಿ ನೇರವೇರಿದ ಮೂಲ್ಕಿ 9 ಮಾಗನೆಯ ಜನತೆಯ ಸಭೆಯನ್ನುದ್ದೇಶಿಸಿ ಮನೋಹರ ಶೆಟ್ಟಿ ಮಾತನಾಡಿದರು.

ಬಪ್ಪನಾಡು ಕ್ಷೇತ್ರವು ಸುಮಾರು ಸಹಸ್ರ ವರ್ಷಗಳ ಭವ್ಯ ಪರಂಪರೆ ಹೊಂದಿದ್ದು, ಇಲ್ಲಿ ಆರಾಧಿಸಲ್ಪಡುವ ಮಾತೃ ದೇವತೆ ಲಿಂಗ ಸ್ವರೂಪಿಣಿಯಾದ ಪಂಚದುರ್ಗಾ ನಂದಿನಿವನ್ನಿತ್ತು ಶಾಂಭವಿ ನದಿಗಳ ನಡುವಣ ಒಂಭತ್ತು ಮಾಗೆಣಿಯ ಜನರಿಂದ ಪೂಜಿಸಿಕೊಂಡು ಬರುತ್ತಿರುವ ಈ ದೇವಿಯ ಮಹಿಮೆ ಅಪಾರವಾದು ದು, 2006ರಲ್ಲಿ ಜೀರ್ಣೋದ್ಧಾರಗೊಂಡ ಈ ದೇವಸ್ಥಾನದಲ್ಲಿ ಬರುವ ಮಾ.14ರಿಂದ ಪ್ರಾರಂಭವಾಗಿ 23ರ ತನಕ ನಡೆಯುವ ವಿಜೃಂಭಣೆಯ ಬ್ರಹ್ಮಕಲಶೋತ್ಸವಕ್ಕೆ ಸರ್ವರೂ ಸಹಕರಿಸ ಬೇಕು ಎಂದೂ ಮನೋಹರ ಶೆಟ್ಟಿ ಮನವಿಗೈದÀರು.

ಪ್ರಾರಂಭದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಬಗ್ಗೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ದೇವಸ್ಥಾನದಲ್ಲಿ ಪ್ರಸಕ್ತ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಬಗ್ಗೆ ವಿವರಿಸಿದರು. ಸುಮಾರು 4 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಅಗತ್ಯ ಕಾಮಗಾರಿಗಳು ಶ್ರೀದೇವಿಯ ಇಚ್ಛೆಯಂತೆ ತೀವ್ರಗತಿಯಲ್ಲಿ ಸಾಗುತ್ತಿದ್ದು, ಮುಂಬಯಿಯ ದಾನಿಗಳು ಎಂದಿನಂತೆ ಶ್ರೀ ದೇವಿಯ ಈ ಪುಣ್ಯ ಸೇವೆಗೆ ಬೆಂಬಲವಾಗಿ ನಿಂತಿರುವುದು ಸಂತಸದ ಸಂಗತಿ ಎಂದರು.

ದೇವಸ್ಥಾನದ ಮಹತ್ವ ಮತ್ತು ಸೇವೆಯ ಬಗ್ಗೆ ಸಮಿತಿ ಸದಸ್ಯ ಎಳತ್ತೂರು ಸಂತೋಷ್ ಕುಮಾರ್ ಹೆಗ್ಡೆ ವಿವರಿಸಿದರು. ರೇಷ್ಮಾ ಪೂಜಾರಿ, ಸಮಿತಿ ಕಾಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ ಶೆಟ್ಟಿ, ಅಶೋಕ್ ಸುವರ್ಣ ದೇವಸ್ಥಾನದ ಅಭಿವೃದ್ಧಿ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಮಾತನಾಡಿದರು. ದಾನಿಗಳಲ್ಲೋರ್ವರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಧÀ್ವಜಸ್ತಂಭಕ್ಕೆ ಬೆಳ್ಳಿಯ ಹೊದಿಕೆ ತನ್ನ ಸೇವಾರ್ಥವಾಗಿಸಿ ನೀಡಿದರು.

ಚಿತ್ರಾಪು ಲಕ್ಷ್ಮಣ ಪೂಜಾರಿ, ಧನಂಜಯ ಮಟ್ಟು, ಶಿಮಂತೂರು ಉದಯ ಶೆಟ್ಟಿ, ಗಂಗಾಧರ ಅಮೀನ್, ರತ್ನಾಕರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಸುನೀಲ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದು, ಉದ್ಯಮಿ ಪುರುಷೋತ್ತಮ ಎಸ್.ಕೋಟ್ಯಾನ್ ಬ್ರಹ್ಮ ಕಲಶೋತ್ಸವು ನಮ್ಮ ಬದುಕಿನಲ್ಲಿ ಬರುವ ವಿಶೇಷ ಸೌಭಾಗ್ಯವಾಗಿದೆ. ನಾವೆಲ್ಲರೂ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದರು.


ಬ್ರಹ್ಮ ಕಲಶೋತ್ಸವಕ್ಕೆ ದಾನ ನೀಡುವ ಭಕ್ತಾದಿಗಳು ಗೋರೆಗಾಂವ್ ಲಲಿತ್ ಹೊಟೇಲ್‍ನಲ್ಲಿ ತಮ್ಮ ದೇಣಿಗೆಯನ್ನು ತಲುಪಿಸದ್ದಲ್ಲಿ ಅದನ್ನು ಜೀರ್ಣೊದ್ಧಾರ ಸಮಿತಿಗೆ ವರ್ಗಾಯಿಸಲಾಗುವುದು. ಹೆಚ್ಚಿನ ವಿವರಗ ಳಿಗೆ ಪುರುಷೋತ್ತಮ ಎಸ್.ಕೋಟ್ಯಾನ್ (9819800685), ವಾಸುದೇವ ಎಂ.ಕೋಟ್ಯಾನ್ (9867726940), ಅಶೋಕ್ ಸುವರ್ಣ (9769333860) ಅವರನ್ನು ಸಂಪರ್ಕಿಸಲು ಸಮಿತಿ ತಿಳಿಸಿತು.

ಸಮಾವೇಶದ ಸಂಘಟಕ ಜಗನ್ನಾಥ ವಿ.ಕೋಟ್ಯಾನ್ ಹೂಗುಚ್ಛ ನೀಡಿ ಸರ್ವರನ್ನೂ ಗೌರವಿಸಿದರು. ಭಾರತ್ ಬ್ಯಾಂಕ್‍ನ ಉಪ ಮಹಾಪ್ರಬಂಧಕ ವಾಸುದೇವ ಎಂ.ಸಾಲ್ಯಾನ್ ಕಾರ್ಯಕ್ರಮ ನಿರ್ವಾಹಿಸಿದರು

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here