Thursday 2nd, May 2024
canara news

ಸಾಂಸ್ಕೃತಿಕ ಜಾತ್ರೆ-ಬಂಟ ಸಂಸ್ಕೃತಿಯೊಂದಿಗೆ ವಾರ್ಷಿಕೋತ್ಸವ ಸಂಭ್ರಮಿಸಿದ ಜವಾಬ್

Published On : 05 Feb 2018   |  Reported By : Rons Bantwal


ಬಂಟರು ಸಂಸ್ಕೃತಿ-ಸೇವಾ ಭೂಷಣಪ್ರಾಯರು : ಜಯಪ್ರಕಾಶ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.05: ಭಾವೀ ಜನಾಂಗಕ್ಕೆ ನಮ್ಮ ಮೂಲ ಪರಂಪರೆಗಳನ್ನು ತಿಳಿಹೇಳಿ ಸಂಸ್ಕೃತಿಗಳ ಅನುಷ್ಠಾನ ಗೊಳಿಸಿದಾಗ ಸಂಸ್ಕಾರದ ಬದುಕು ಹಸನಾಗುವುದು. ಆದುದರಿಂದ ಬಂಟರು ತಮ್ಮ ಸಂಸ್ಕೃತಿ, ಪರಂಪರೆಗಳ ನ್ನು ರೂಢಿಸಿ ಭಾವೀ ಪೀಳಿಗೆಗೆ ಸಂಸ್ಕಾರಯುತ ಬದುಕನ್ನು ರೂಪಿಸುವುದು ನಮ್ಮ ಕರ್ತವ್ಯವಾಗಬೇಕು. ಬಹುಶಃ ಅದೇ ಉದ್ದೇಸವನ್ನಿರಿಸಿ ಜವಾಬ್ ಉದಯವಾಗಿ ಸಂಸ್ಕಾರಯುತ ಬಾಳಿಗೆ ಮಾದರಿ ಮತ್ತು ಪ್ರೇರಕವಾಗಿದೆ. ಬಂಟ ಸಂಸ್ಕೃತಿಯ ಪೂರ್ಣಜ್ಞಾನದ ಅರಿವು ಮೂಡಿಸÀುವುದೇ ಜವಾಬ್‍ನ ಉದ್ದೇಶವಾಗಿದೆ. ನಮ್ಮ ಮಕ್ಕಳಲ್ಲಿ ನಂಬಿಕಸ್ಥ ಜುಮಾದಿ ಸತ್ಯದೈವದಲ್ಲಿ ಆತ್ಮವಿಶ್ವಾಸ ಮೂಡಿಕೊಳ್ಳುವ ಕೆಲಸ ನಾವು ಮಾಡಬೇಕಾಗಿದೆ. ಸತ್ಯದೈವಗಳಲ್ಲಿ ಯುವಪೀಳಿಗೆಯ ಆತ್ಮವಿಶ್ವಾಸದ ಕೊರತೆ ನೀಗಿಸುವ ನಿಟ್ಟಿನಲ್ಲಿ ಜವಾಬ್ ಶ್ರಮಿಸುತ್ತಿದೆ ಎಂದು ಜವಾಬ್ (ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಎಸೋಸಿಯೇಶನ್ ಆಫ್ ಬಂಟ್ಸ್) ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ತಿಳಿಸಿದರು.

ನಗರದ ಅಂಧೇರಿ ಪರಿಸರದಲ್ಲಿನ ಬಂಟರ ಸಾಂಸ್ಕೃತಿಕ ಚಟುವಟಿಕೆ ಕೇಂದ್ರ ಎಂದೇ ಪ್ರಸಿದ್ಧಿ ಪಡೆದ ಜವಾಬ್ ತನ್ನ 21ನೇ ವಾರ್ಷಿಕ ಸ್ನೇಹಮಿಲನವನ್ನು ಇಂದಿಲ್ಲಿ ಶನಿವಾರ ಸಂಜೆ ಅಂಧೇರಿ ಪಶ್ಚಿಮದ ಲೋಕಂಡ್‍ವಾಲ ಕಾಂಪ್ಲೆಕ್ಸ್‍ನ ರೆಸಿಡೆನ್ಸಿ ಅಸೋಸಿಯೇಶನ್ ಮೈದಾನದಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿದ್ದು, ಬಂಟ ಸಂಸ್ಕೃತಿ ಸಾರುವ ಭವ್ಯ ಸಡಗರದೊಂದಿಗೆ ಮೈದಾನದಲ್ಲಿ ರೂಪಿಸಿದ ಜವಾಬ್ ಗುತ್ತುಮನೆ ಚಾವಡಿಯ ದಿ| ಸಿ.ವಿ ಶೆಟ್ಟಿ ಮತ್ತು ದಿ| ಪ್ರಕಾಶ್ ಎಸ್.ಶೆಟ್ಟಿ ವೇದಿಕೆಗೆ ಸಂಪ್ರದಾಯಿಕ, ಧಾರ್ಮಿಕ ಶಾಸ್ತ್ರಾನುಸಾರ ತುಳುನಾಡ ಜುಮಾದಿ ಸತ್ಯದೈವದ `ಭಂಡಾರ'ವನ್ನು ಬರಮಾಡಿ ಕೊಂಡÀು ಪದಾಧಿಕಾರಿಗಳೊಂದಿಗೆ ದೀಪ ಬೆಳಗಿಸಿ ಸ್ನೇಹಮಿಲನದ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಯಪ್ರಕಾಶ್ ಮಾತನಾಡಿದರು.

ಬಂಟರು ಸೇವಾ ಭೂಷಣಪ್ರಾಯರು. ಕಾರಣ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸೇವೆ ಅದ್ಭುತ ಮತ್ತು ಅನುಪಮ ಮಾತ್ರವಲ್ಲದೆ ದೇಣಿಗೆಯೂ ಅನನ್ಯವಾದುದು. ಏಕಾಗ್ರತೆಯ ಮನೋಭಾವ ರೂಢಿಸಿಕೊಂಡಾಗ ಬಾಳ್ವೆಯಲ್ಲಿ ಯಶಸ್ಸು ಸಾಧ್ಯ. ಜವಾಬ್ ಸಂಸ್ಥೆಯು ಮಕ್ಕಳ ವಿದ್ಯಾಭ್ಯಾಸ, ಉನ್ನತ ಶಿಕ್ಷಣ, ಜನರ ಆರೋಗ್ಯಭಾಗ್ಯಕ್ಕೂ ಸದಾ ಪೆÇ್ರೀತ್ಸಹಿಸುತ್ತಿದ್ದು, ಅವಶ್ಯಕತೆ ಇದ್ದಲ್ಲಿ ನಮ್ಮನ್ನು ಸಂಪರ್ಕಿಸಿ ಸೇವಾ ಸದುಪಯೋಗ ಪಡೆಯಿರಿ ಎಂದೂ ಅಧ್ಯಕ್ಷೀಯ ಭಾಷಣ ವನ್ನುದ್ದೇಶಿಸಿ ಜಯಪ್ರಕಾಶ್ ತಿಳಿಸಿದರು.

ಸ್ನೇಹಮಿಲನದಲ್ಲಿ ಅಶೋಕ್‍ಕುಮಾರ್ ಆರ್.ಶೆಟ್ಟಿ ಸಾಂತೂರು ಮತ್ತು ಸತ್ಯಶಾಲಿನಿ ಅಶೋಕ್ ದಂಪತಿಯನ್ನು ಸನ್ಮಾನಿ ಸಿಮೋಲ್ ಆಳ್ವ ಅವರಿಗೆ ಸಾಧಕ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿ ಗೌರವಿಸಿದರು. ಹಾಗೂ ವಿಶೇಷವಾಗಿ ಉಪಸ್ಥಿತ ಎಂ.ಡಿ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ರಂಜನಿ ಸುಧಾಕರ್ ಹೆಗ್ಡೆ, ಕುಶಲ ಸಿ.ಭಂಡಾರಿ, ಕಲ್ಲಡ್ಕ ಕರುಣಾಕರ ಶೆಟ್ಟಿ ಸೇರಿದಂತೆ ಉಪಸ್ಥಿತ ವಿವಿಧ ಸಂಸ್ಥೆಗಳ ಮುಖ್ಯಸ್ಥರನ್ನು ಮತ್ತು ಗಣ್ಯಮಹಾನೀಯರನ್ನು ಅಧ್ಯಕ್ಷರು ಪುಷ್ಪಗುಚ್ಚವನ್ನೀಡಿ ಸತ್ಕರಿಸಿದರು.

ಸಾಂಸ್ಕೃತಿಕ ಜಾತ್ರೆಯಾಗಿಯೇ ಪರಿಣಮಿಸಿದ ಸಡಗರಕ್ಕೆ ಕೊಂಬು ಕಹಳೆ, ಬ್ಯಾಂಡು ವಾದ್ಯಗಳ ನಿನಾದದೊಂದಿ ಗೆ ಆಹ್ವಾನಿತರಿಗೆ ಸುಖಾಗಮನ ಬಯಸಿದ ಪದಾಧಿಕಾರಿಗಳು ಕುಲದೇವರು ಮತ್ತು ಗಣಪತಿ ದೇವರನ್ನು ಸ್ತುತಿಸಿದರು. ವೇದಿಕೆಯಲ್ಲಿ ಹಾಲಿ ಜೊತೆ ಕಾರ್ಯದರ್ಶಿ ಟಿ.ವಿಶ್ವನಾಥ್ ಶೆಟ್ಟಿ, ಜೊತೆ ಕೋಶಾಧಿಕಾರಿ ಹೆಚ್. ಶೇಖರ್ ಹೆಗ್ಡೆ, ಮಾಜಿ ಅಧ್ಯಕ್ಷರುಗಳಾದ ಬಿ.ವಿವೇಕ್ ಶೆಟ್ಟಿ, ಆನಂದ್ ಪಿ.ಶೆಟ್ಟಿ, ಎನ್.ಸಿ ಶೆಟ್ಟಿ, ರಘು ಎಲ್.ಶೆಟ್ಟಿ (ಪ್ಯಾಪಿಲಾನ್), ವಿಶ್ವನಾಥ್ ಹೆಗ್ಡೆ, ರಮೇಶ್ ಯು.ಶೆಟ್ಟಿ, ನಾಗೇಶ್ ಎನ್.ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿಕಟಪೂರ್ವಧ್ಯಕ್ಷ ಬಿ.ಶಿವರಾಮ ನಾೈಕ್ ಸಂದರ್ಭೋಚಿತವಾಗಿ ಮಾತನಾಡಿ ಜವಾಬ್‍ನ ಸೇವೆಯನ್ನು ಪ್ರಶಂಸಿ ಸಂಸ್ಥೆಯನ್ನು ಮತ್ತಷ್ಟು ಪೆÇ್ರೀತ್ಸಹಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಜಯರಾಮ ಎನ್.ಶೆಟ್ಟಿ, ರತ್ನಕರ್ ರೈ, ಬಿ.ಆರ್ ಪೂಂಜ, ಮಹೇಶ್ ಎಸ್.ಶೆಟ್ಟಿ, ಕೃಷ್ಣ ವೈ.ಶೆಟ್ಟಿ, ಸಿಎ| ರವೀಂದ್ರ ಎನ್.ಶೆಟ್ಟಿ, ದಿವಾಕರ್ ಎಸ್.ಶೆಟ್ಟಿ, ರಘುರಾಮ ಕೆ.ಶೆಟ್ಟಿ, ಪಾಂಡುರಂಗ ಎಸ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಆದಿಯಲ್ಲಿ ಜವಾಬ್‍ನ ಸಕ್ರೀಯ ಕಾರ್ಯಕರ್ತರಾಗಿ ಸೇವೆಸಲ್ಲಿಸಿ ಗತ ಸಾಲಿನಲ್ಲಿ ಸ್ವರ್ಗಸ್ಥ ಸಿ.ವಿ ಶೆಟ್ಟಿ ಮತ್ತು ಪ್ರಕಾಶ್ ಎಸ್.ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಕೋರಲಾಯಿತು. ಕು| ಉನ್ನತಿ ಶೆಟ್ಟಿ, ಕು| ತಶ್ವಿ ಶೆಟ್ಟಿ ಮತ್ತು ಕು| ವೈಷ್ಣವಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಮಧುಕರ್ ಎ.ಶೆಟ್ಟಿ ಭಂಡಾರದ ಸ್ತುತಿಗೈದರು. ಮಾಜಿ ಅಧ್ಯಕ್ಷ ಶಂಕರ್ ಟಿ.ಶೆಟ್ಟಿ ಜುಮಾದಿಗೆ ಪ್ರೆಶ್ನೆಗಳನ್ನು ಕೇಳುತ್ತಾ ಭವಿಷ್ಯತ್ತಿನ್ನುದ್ದಕ್ಕೂ ಜವಾಬ್‍ನ್ನು ಬಲಾಢ್ಯಪಡಿಸಿ ಸಮಾಜ ಸೇವೆಗೆ ಪ್ರೇರೆಪಿಸುತ್ತಾ ಸಾಮರಸ್ಯ, ಸಾಂಘಿಕತೆಯಿಂದ ಸಂಸ್ಥೆಯನ್ನು ಮುನ್ನಡೆಸುವ ಬಲತುಂಬುವಂತೆ `ಭಂಡಾರ'ದ ವಿಧಿವಿಧಾನಗಳನ್ನು ನೆರವೇರಿಸಿದರು.

ಉಪಾಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಶೆಟ್ಟಿ ವಾರ್ಷಿಕ ಚಟುವಟಿಕೆಗಳನ್ನು ಭಿತ್ತರಿಸಿದರು. ಅನುಪಮಾ ಶೆಟ್ಟಿ ಮತ್ತು ರೂಪಾ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕವಿತಾ ಐ.ಆರ್ ಶೆಟ್ಟಿ ಸಭಾಕಾರ್ಯಕ್ರಮ ನಿರೂಪಿಸಿದರು. ಗೌ| ಕೋಶಾಧಿಕಾರಿ ಅಶೋಕ್‍ಕುಮಾರ್ ಆರ್.ಶೆಟ್ಟಿ ಧನ್ಯವದಿಸಿದರು. ಮನೋರಂಜನೆಯ ಸಲುವಾಗಿ ಜವಾಬ್ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ಸಂಗೀತ, ವೈವಿಧ್ಯಮಯ ನೃತ್ಯಾವಳಿಗಳನ್ನು ಹಾಗೂ `ರಾಮಾಯಣ' ಪ್ರಹಸನ ಪ್ರದರ್ಶಿಸಿದರು. ಸದಸ್ಯರು ಸಂಪ್ರದಾಯಿಕ ಉಡುಗೆಯೊಂದಿಗೆ ಆಗಮಿಸಿ ಸಾಂಸ್ಕೃತಿಕ ವೈಭವಕ್ಕೆ ಮೆರುಗು ನೀಡಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here