Thursday 2nd, May 2024
canara news

ಮುಂಬಯಿ ಕನ್ನಡ ಸಂಘ ಜರುಗಿದ ಶ್ರೀ ಪುರಂದರದಾಸರ 454ನೇ ಆರಾಧನಾ ಮಹೋತ್ಸವ

Published On : 06 Feb 2018   |  Reported By : Rons Bantwal


ದಾಸರ ಆರಾಧನೆ ಮತ್ತು ಬಹುಭಾಷಿಗರಿಗೆ ಶ್ರೀ ದೇವರ ನಾಮ ಗಾಯನ ಸ್ಪರ್ಧೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.06: ಮುಂಬಯಿ ಕನ್ನಡ ಸಂಘ ಇದರ ಆಶ್ರಯದಲ್ಲಿ ಶ್ರೀ ಪುರಂದರದಾಸರ 454ನೇ ಆರಾಧನಾ ಮಹೋತ್ಸವ ಇಂದಿಲ್ಲಿ ರವಿವಾರ ಮಾಟುಂಗಾ ಅಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹದಲ್ಲಿ ನೇರವೇರಿಸಲ್ಪಟ್ಟಿತು. ಆರಾಧನಾ ಮಹೋತ್ಸವ ಪ್ರಯುಕ್ತ ಪುರಂದರದಾಸರ ಆರಾಧನೆ ಮತ್ತು ಶ್ರೀ ದೇವರ ನಾಮ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಜಿ.ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಮ ಗಾಯನ ಸ್ಪರ್ಧೆಯನ್ನು ಸ್ಪರ್ಧೆಯ ತೀರ್ಪುಗಾರರಾಗಿದ್ದ ಭಾನುಮತಿ ಸುವರ್ಣ, ರೇಷ್ಮಾ ಗಣಪತಿ ಶಂಕರ ಲಿಂಗ, ಅಮೃತಾ ತಾಂಬೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಂಘದ ಗೌ| ಕಾರ್ಯದರ್ಶಿ ಸತೀಶ್ ಎನ್.ಬಂಗೇರÀ, ಜೊತೆ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ, ಎಸ್.ಕೆ ಪದ್ಮನಾಭ್, ನಾರಾಯಣ ಎ.ಆರ್ ರಾವ್, ರಾಜೇಂದ್ರ ಗಡಿಯಾರ, ಅನುಸೂಯ ಕಾಮತ್, ಮಾಲತಿ ವಿ.ಆಚಾರ್ಯ ಸ್ಪರ್ಧೆ ನಡೆಸಿದರು. ನಗರದ 40ಕ್ಕೂ ಅಧಿಕ ವಿವಿಧ ಭಾಷಾ ಸಂಗೀತಕಾರರು ಗಾಯನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ಪದ್ಮಜಾ ಜೋಶಿ ಕಲಂಬೋಲಿ ಬಳಗವು ದಾಸರ ಭಕ್ತಿಗೀತೆ ಕಾರ್ಯಕ್ರಮ ಜರಗಿತು.

ಸಂಜೆ ನಡೆಸಲ್ಪಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಅವರು ಉಪಸ್ಥಿತರಿದ್ದು ಕಾರ್ಯಕ್ರಮ ಸಹ ಪ್ರಾಯೋಜಕರಾದ ಹೆಚ್.ಎಸ್ ಅಡೂರ್, ಪುರುಷೋತ್ತಮ ವಿ.ಎಸ್, ಪ್ರಫುಲ್ಲಾ ಎಸ್.ಊರ್ವಾಲ್, ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗ ಬೆಂಗಳೂರು, ಭಾರತ್ ಬ್ಯಾಂಕ್, ಸರಸ್ವತಿ ಬ್ಯಾಂಕ್‍ನ ಪ್ರತಿನಿಧಿಗಳಿಗೆ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಸುಖಾಗಮನ ಬಯಸಿದರು. ಅಧ್ಯಕ್ಷ ಜಿ.ಎಸ್.ನಾಯಕ್ ಪ್ರಸ್ತಾವನೆಗೈದರು. ಸತೀಶ್ ಎನ್.ಬಂಗೇರÀ ಅತಿಥಿüಯನ್ನು ಹಾಗೂ ಶಾರದಾ ಯು.ಅಂಬೆಸಂಗೆ ಸ್ಪರ್ಧೆಯ ತೀರ್ಪುಗಾರರನ್ನು ಪರಿಚಯಿಸಿದರು. ಎಸ್.ಕೆ ಪದ್ಮನಾಭ ಪ್ರಾರ್ಥನೆಯನ್ನಾಡಿದರು. ಸೋಮನಾಥ ಎಸ್. ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರಾ ಧನ್ಯವದಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here