Thursday 2nd, May 2024
canara news

ಥಾಣೆ ಬಂಟ್ಸ್ ಅಸೋಸಿಯೇಶನ್ ಸಂಭ್ರಮಿಸಿದ 13ನೇ ವಾರ್ಷಿಕೋತ್ಸವ

Published On : 07 Feb 2018   |  Reported By : Rons Bantwal


ಶ್ರಮವೀಜಿಗಳ ಪ್ರತಿರೂಪವಾಗಿ ಸಂಸ್ಥೆಗಳ ಹುಟ್ಟು ಸಾಧ್ಯ-ಎಂ.ಬಾಲಕೃಷ್ಣ ಶೆಟ್ಟಿ

ಮುಂಬಯಿ, ಫೆ.07: ದೂರದೃಷ್ಠಿತ್ವವುಳ್ಳ ಸಮಾಜ ಬಾಂಧವರು, ಹಿರಿಯರ ಶ್ರಮದಿಂದ ಸಂಸ್ಥೆಯ ಹುಟ್ಟು ಸಾಧ್ಯವಾಗುತ್ತಿದೆ. ಅವರೆಲ್ಲರ ಅಂದಿನ ಶ್ರಮ, ಚಿಂತನೆಯ ಪ್ರತಿ ರೂಪವಾಗಿ ಸಂಸ್ಥೆಯು ಹುಟ್ಟಿಕೊಳ್ಳುತ್ತವೆ. ಇಂದು ಸಂಸ್ಥೆ ಬೆಳೆದಿದ್ದರೆ ಅದಕ್ಕೆ ಹಿರಿಯರು ತೋರಿಸಿದ ಮಾರ್ಗದರ್ಶನ, ಅವರ ಶ್ರಮ ಕಾರಣ ಎಂದು ಎಸ್‍ಡಿಪಿಟಿ ಕಾಲೇಜು ಕಟೀಲು ಇದರ ಪ್ರಾಂಶುಪಾಲ ಎಂ.ಬಾಲಕೃಷ್ಣ ಶೆಟ್ಟಿ ನುಡಿದರು.

ಕಳೆದ ಶುಕ್ರವಾರ ಥಾಣೆ ಪಶ್ಚಿಮದ ಕಾಶಿನಾಥ್ ಘಾಣೇಕರ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇ ಶನ್ ಸಂಭ್ರಮಿಸಿದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿದ್ದು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಥಾಣೆ ಬಂಟ್ಸ್ ಅಧ್ಯಕ್ಷ ಕುಶಲ್ ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ವಿಕೇ ಸಮೂಹದ ಆಡಳಿತ ನಿರ್ದೇಶಕ ಕರುಣಾಕರ ಎಂ.ಶೆಟ್ಟಿ, ವಿಶೇಷ ಆಮಂತ್ರಿತರಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ್ಲ ಕಾರ್ಕಳದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲ್ ಉಪಸ್ಥಿತರಿದ್ದರು.

ಕೆ.ಎಂ ಶೆಟ್ಟಿ ಮಾತನಾಡಿ ಥಾಣೆ ಬಂಟ್ಸ್ ಸಮಾಜ ಪರ ಸೇವಾ ಕಾರ್ಯ ನಿಜವಾಗಿಯೂ ಮೆಚ್ಚುವಂತದ್ದು, ಸಮಾಜ ಬಾಂಧವರ ಮಕ್ಕಳ ವಿದ್ಯಾಥಿರ್sಗಳಿಗೆ ಬದುಕಿಗೆ ವಿದ್ಯಾಥಿರ್sವೇತನ, ವಿಧವೆಯರ ಬದುಕÀು ಬೆಳಗಿಸುವುದು, ಅಸಮರ್ಥರಿಗೆ ವಧುವರ ಅನ್ವೇಷನೆ ಮೂಲಕ ಶ್ರಮಿಸುವ ಕಾಯಕ ನಿಜವಾಗಿಯೂ ಶ್ಲಾಘನೀಯ. ಅದೇ ರೀತಿಯಲ್ಲಿ ಸಂಸ್ಥೆಯಿಂದ ಸಹಾಯ ಪಡೆದ ಯುವ ವರ್ಗ ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ಸಹಾಯ ಮಾಡಿ ಸಮಾಜದ ಋಣ ಸಂದಾಯದ ಕೆಲಸವನ್ನು ಮಾಡಬೇಕು ಎಂದರು.

ಸಮಾರಂಭದಲ್ಲಿ ಥಾಣೆ ಮಾಜಿವಾಡ ಪರಿಸರದ ಹಿರಿಯ ಸಮಾಜ ಸೇವಕ ಆನಂದ ಶೆಟ್ಟಿ ಮತ್ತು ಜಯಂತಿ ಎ.ಶೆಟ್ಟಿ ದಂಪತಿ, ಹಿರಿಯ ಹೊಟೇಲ್ ಉದ್ಯಮಿ ದಿವಾಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿ ತು. ಹಾಗೂ ವಿಶ್ವ ಬಂಟರ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಐಕಳ ಹರೀಶ್ ಶೆಟ್ಟಿ ಪೇಟ ತೋಡಿಸಿ ಫಲಪುಷ್ಪ ನೀಡಿ ಅಭಿನಂದಿಸಿದರು. ಅಂಬರ್ ಕ್ಯಾಟರರ್ಸ್ ತುಳು ಚಿತ್ರ ನಾಯಕ ನಟ ಸೌರಭ್ ಸುರೇಶ್ ಭಂಡಾರಿ ಅವರಿಗೆ ಹೂಗುಚ್ಛ ನೀಡಿ ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಮಹಿಳಾ ಹಾಗೂ ಯುವ ವಿಭಾಗ, ಮಕ್ಕಳು ವಿವಿಧ ನೃತ್ಯಾವಳಿಗಳನ್ನು ಪ್ರದರ್ಶಿಸಿದರು. ಪ್ರಮೋದಾ ಮಾಡ ರಚಿತ, ಬಾಬಾಪ್ರಸಾದ್ ಅರಸ ನಿರ್ದೇಶನದಲ್ಲಿ ಮಹಿಳಾ ಸದಸ್ಯೆಯರು `ಪುಗೆಲ್ ಕೊರಂದಿ ಜೊಕುಲು' ಎಂಬ ಪ್ರಹಸನ ಹಾಗೂ ಜಯಪ್ರಕಾಶ್ ಮಂಗಲ್ಪಾಡಿ ರಚಸಿ ಬಾಬಾಪ್ರಸಾರ್ ಅರಸ ನಿರ್ದೇಶಿತ `ನಮದಾನೆ ಇಂಚ?' ತುಳು ನಾಟಕ ಪ್ರದರ್ಶಿಸಿದರು. ನಿತ್ಯಾನಂದ ಶೆಟ್ಟಿ ಬೆಳುವಾಯಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ವೇಣುಗೋಪಾಲ್ ಎಲ್.ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಭಾಸ್ಕರ್ ಎನ್.ಶೆಟ್ಟಿ ಮತ್ತು ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಎಸ್.ಶೆಟ್ಟಿ ಅತಿಥಿsಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸುನೀಲ್ ಜೆ.ಶೆಟ್ಟಿ ವಾರ್ಷಿಕ ವರದಿ ವಾಚಿಸಿ ದರು. ಮಹಿಳಾ ವಿಭಾಗಧ್ಯಕ್ಷೆ ಸುಮತಿ ಕರುಣಾಕರ ಶೆಟ್ಟಿ ಹಾಗೂ ಯುವ ವಿಭಾಗಧ್ಯಕ್ಷ ರಂಜನ್ ಆರ್.ಶೆಟ್ಟಿ ಕ್ರಮವಾಗಿ ಮಹಿಳಾ ಮತ್ತು ಯುವ ವಿಭಾಗದ ಕಾರ್ಯಚಟುವಟಿಕೆ ತಿಳಿಸಿದರು. ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಪ್ರಮೋದಾ ಮಾಡಾ ಮತ್ತು ಸಾಂಸ್ಕೃತಿಕ ವಿಭಾಗ ಕಾರ್ಯಧ್ಯಕ್ಷ ಜಯ ಪ್ರಕಾಶ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಕುಶಲಾ ಶೆಟ್ಟಿ ಹಾಗೂ ಕರ್ನೂರು ಮೋಹನೆ ರೈ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಅಶೋಕ್ ಎಂ.ಶೆಟ್ಟಿ ಕೃತಜ್ಞತೆ ಸಮರ್ಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here