Thursday 2nd, May 2024
canara news

ಆಕಾಶವಾಣಿ ಪ್ರತಿಭಾನಿಲಯ : ಮನೋರಂಜನಾ ಸಂಘದ ವಾರ್ಷಿಕೋತ್ಸವ ಆಚರಣೆ

Published On : 07 Feb 2018   |  Reported By : Rons Bantwal


ಆಕಾಶವಾಣಿ ಪ್ರತಿಭಾನಿಲಯವಾಗಿದ್ದು ಸಮಾಜದಲ್ಲಿ ಭಾವನಾತ್ಮಕ ಸಂಬಂಧ ಕಟ್ಟಿ ಸಂಸ್ಕøತಿಯನ್ನು ಪಸರಿಸುವ ಕೆಲಸ ಮಾಡುತ್ತಿದೆ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯ ಪಟ್ಟರು.

ಮಂಗಳೂರು ಆಕಾಶವಾಣಿ ಮನೋರಂಜನಾ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಫೆ.6 ರಂದು ಮಂಗಳವಾರ ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಸಂತೊಷ, ಆನಂದಕ್ಕಾಗಿ ಕಸರತ್ತು ಮಾಡಬೇಕಾದ ಇಕ್ಕಟ್ಟಿನ ಬದುಕಿನಲ್ಲಿ ನಾವೆಲ್ಲ ತಂತ್ರಜ್ಞಾನದ ಮೂಲಕ ಜೋಡಣೆಯಾದರೂ ಭಾವನಾತ್ಮಕವಾಗಿ ದೂರಾಗುತ್ತಿರುವುದು ವಿಷಾದನೀಯ.ಪ್ರೀತಿ ಪ್ರೇಮದ ಬದುಕು ನಮ್ಮೊಳಗೆ, ನಮ್ಮ ನಡುವೆ ಇದೆ ಎಂಬುದನ್ನು ಸಾಬೀತು ಮಾಡಲು ವೃತ್ತಿನಿರತರು ವೃತ್ತಿಯ ಜೊತೆಗಿನ ಆಚೆಯ ಒಂದು ಲೋಕವನ್ನು ಕಾಣಲು ಮನೋರಂಜನಾ ಸಂಘದ ಮೂಲಕ ಅವಕಾಶ ಮಾಡಿಕೊಳ್ಳುವುದು ಶ್ಲಾಘನೀಯ. ಪ್ರತೀ ಕ್ಷಣವೂ ಬದುಕುವ ಕೌಶಲ ರೂಢಿಸೋಣ ಎಂದು ಶುಭ ಹಾರೈಸಿದರು.

ಎಕ್ಸ್‍ಪರ್ಟ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ನರೇಂದ್ರನಾಯಕ್ ಮಾತನಾಡಿ ಆಕಾಶವಾಣಿಯ ಪ್ರತಿಭಾ ಸಂಪನ್ನರಿಂದ ಕಾರ್ಯಕ್ರಮಗಳು ಜನಮಾನಸವನ್ನು ಗೆದ್ದಿದೆ ಎಂದರು. ಮುಖ್ಯ ಅತಿಥಿ ಉಷಾ ಪ್ರಭಾ ನಾಯಕ್ ಮಾತನಾಡಿ ಮಂಗಳೂರು ಆಕಾಶವಾಣಿ ಕೇಂದ್ರವು ನನ್ನಂತಹ ಅನೇಕ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಧಾರೆ ಎರೆದಿದೆ. ಸಾಂಸ್ಕøತಿಕ ಮತ್ತು ಪ್ರೀತಿಯ ದೊಡ್ಡ ಕ್ಷೇತ್ರವನ್ನು ಹುಟ್ಟು ಹಾಕಿದೆ ಎಂದು ಆಕಾಶವಾಣಿಯೊಂದಿಗಿನ ಒಡನಾಟವನ್ನು ಹೇಳಿದರು. ಮುಖ್ಯ ಅತಿಥಿ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಮಾತನಾಡಿ ಪ್ರತಿಭಾನ್ವಿತರ ಸೃಷ್ಟಿಗೆ ಶಾಲೆಗಳು ಹೇಗೆ ಮುಖ್ಯವೊ ಹಾಗೆ ಆಕಾಶವಾಣಿ ಪ್ರತಿಭೆಗಳಿಗೆ ಅವಕಾಶ ನೀಡಿದ ಫಲವಾಗಿ ಕೆಎಎಸ್. ಐಎಎಸ್, ಸಂಗೀತ, ಸಾಹಿತ್ಯದ ದಿಗ್ಗಜರ ಹುಟ್ಟಿಗೆ ಕಾರಣವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಲಯದ ಮುಖ್ಯಸ್ಥರಾದ ಜಿ.ರಮೇಶ್ಚಂದ್ರನ್ ಕನ್ನಡದಲ್ಲಿ ಮಾತನಾಡಿ ಹೊರಗಿನವರ ಕಾರ್ಯಕ್ರಮಗಳನ್ನು ಧ್ವನಿ ದಾಖಲಿಸಿ ಪ್ರಸಾರಮಾಡುವ ಕಾಯಕದ ಆಕಾಶವಾಣಿಯು ಮನೋರಂಜನಾ ಸಂಘದ ಮೂಲಕ ನಮ್ಮೊಳಗಿನ ಪ್ರತಿಭಾ ಪ್ರಕಾಶನಕ್ಕೆ ವೇದಿಕೆ ಕಲ್ಪಿಸಿದೆ ಎಂದರು. ಸಂಘದ ಕಾರ್ಯದರ್ಶಿ ಡಾ.ಸದಾನಂದ ಪೆರ್ಲ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪಿ.ಎಸ್.ಸೂರ್ಯನಾರಾಯಣ ಭಟ್ ಧನ್ಯವಾದವಿತ್ತರು. ಕಾರ್ಯಕ್ರಮ ನಿರ್ವಹಣಾಧಿಕಾರಿ ಕನ್ಸೆಪ್ಟಾ ಫೆರ್ನಾಂಡಿಸ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಸದಸ್ಯರಿಗೆ ಏರ್ಪಡಿಸಿದ ಹಲವಾರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಕಾರ್ಯದರ್ಶಿ ಜೇಮ್ಸ್ ಫೆರ್ನಾಂಡಿಸ್ ಹಾಗೂ ಟಿ.ಎಸ್.ಪ್ರಸಾದ್ ನಿರ್ವಹಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಾಲತಿ ಭಟ್ ಹಾಡುಗಾರಿಕೆ, ತಿರುಚ್ಚಿ ಆರ್ ಕುಮಾರ್ ಭಕ್ತಿ ಗಾಯನ, ರಫೀಖ್ ಖಾನ್ ಸಿತಾರ್ ವಾದನ, ಭಾರತೀಶ ಛಾವಣಿ ದಾಸ ಸಂಕೀರ್ತನೆ, ಮನೋಹರ್ ಕದ್ರಿ, ರಮೇಶ್ಚಂದ್ರನ್, ಉಷಾಲತಾ ಸರಪಾಡಿ, ಸದಾನಂದ ಹೊಳ್ಳ, ಶಿಜು ಗೀತ ಗಾಯನ ಪ್ರಸ್ತುತ ಪಡಿಸಿದರು. ಕವನ, ಕೀರ್ತನ, ಸಂಜನಾ, ಸಾನ್ವಿ ನೃತ್ಯ ಪ್ರದರ್ಶಿಸಿದರು. ಮೌನೇಶ್ ಕುಮಾರ್ ಛಾವಣಿ, ಭಾರವಿ ದೇರಾಜೆ ಸಂಗೀತ ಸಹಕಾರ ನೀಡಿದರು. ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಬಿ.ಎಮ್.ಶರಭೇಂದ್ರ ಸ್ವಾಮಿ ಸಾಂಸ್ಕøತಿಕ ಕಾರ್ಯಕ್ರಮ ನಿರೂಪಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here