Wednesday 23rd, May 2018
canara news

ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಭಾಂಡೂಪ್‍ನಲ್ಲಿ ನಡೆಸಲ್ಪಟ್ಟ ಸಾಹಿತ್ಯ-ಸಾಂಸ್ಕೃತಿಕ ಸಂಜೆ

Published On : 14 Feb 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.14: ಮುಂಬೆಳಕು, ಮುಂಬಯಿ ಚುಕ್ಕಿ ಸಂಕುಲ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಕಳೆದ ಸುಮಾರು ಎರಡುವರೆ ದಶಕಗಳಿಂದ ಸಕ್ರೀಯರಾಗಿ ಸೇವ ನಿರತ ಹೆಸರಾಂತ ಸಂಘಟಕ, ಬರಹಗಾರರಾಗಿದ್ದು ಸ್ವರ್ಗಸ್ಥ ನಾವುಂದ ಚಂದ್ರಶೇಖರ್ ರಾವ್ ಸ್ಮರಣಾರ್ಥ ಅವರ ಜನ್ಮದಿನಾಚರಣೆ ಪ್ರಯುಕ್ತ ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕಳೆದ ಶನಿವಾರ ಸಂಜೆ ಸಾಹಿತ್ಯ-ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ದಿ| ಚಂದ್ರಶೇಖರ್ ರಾವ್ ರಚಿತ ಬಹುಮಾನ ವಿಜೇತ ಹರಟೆ-ಕೆಮ್ಮು ಕೃತಿಯನ್ನು ಹಿರಿಯ ಕವಿ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಸಾ.ದಯಾ ವಾಚಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಗಂಗಾಧರ ಚಿತ್ತಾಲ ಮತ್ತು ಅರವಿಂದ ನಾಡಕರ್ಣಿ ಅವರ ಆಯ್ದ ಕವಿತೆಗಳ ವಾಚನಗೈದರು. ಬಳಿಕ ನಡೆಸಲ್ಪಟ್ಟ ಕಾವ್ಯಸಂಜೆ ಕಾರ್ಯಕ್ರಮದಲ್ಲಿ ಕವಿಗಳಾದ ಡಾ| ಜಿ.ಪಿ ಕುಸುಮಾ, ಗೋಪಾಲ ತ್ರಾಸಿ, ಕುಸುಮಾ ಪೂಜಾರಿ, ಅಶೋಕ ವಳದೂರು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಖಿಲ ಹಾಗೂ ಸರೋಜ್ ವೆಲ್ಮೇಕರ್ ಕಾವ್ಯ ಲಹರಿ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಚಂದ್ರಶೇಖರ್ ರಾವ್ ಅವರು ವಹಿಸಿದ್ದು, ಮುಖ್ಯ ಅತಿಥಿsಯಾಗಿ ಪ್ರಥಾಪ್ ಎಂ, ನವೀನ್ ಕದ್ರಿ, ಟ್ರಸ್ಟ್‍ನ ಬೆಂಗಳೂರು ಸದಸ್ಯರಾದ ಸಜ್ಜನ್ ಬಿ.ಅಂಜನ್, ಶಮಂತ್, ಕೆ.ಅನಿಲ್ ಉಪಸ್ಥಿತರಿದ್ದರು.

ಶ್ರೀದೇವಿ ಮಾತನಾಡಿ ಅವರ ಪತಿಯ ಇಚ್ಛೆಯಂತೆ ಅವರ ಹೆಸರಿನ ಟ್ರಸ್ಟ್‍ನ್ನು ಆರಂಭಿಸಿದ್ದೇವೆ. ಈ ಟ್ರಸ್ಟ್ ಮುಖೇನ ಕಳೆದ ಕೆಲವೇ ತಿಂಗಳಲ್ಲಿ ಮುಂಬಯಿ ಹಾಗೂ ಕರ್ನಾಟಕದ ಯೋಗ್ಯ ಅರ್ಹ ಸುಮಾರು 25 ವಿದ್ಯಾಥಿರ್sಗಳಿಗೆ ವಿದ್ಯಾಥಿರ್s ವೇತನ, ಹಿರಿಯ ನಾಗರಿಕರಿಗೆ ಸಹಾಯಧನ ಹಾಗೂ ವೈದ್ಯಕೀಯ ವೆಚ್ಚ ನೀಡಿದೆ. ಈ ರೀತಿಯಿಂದ ಚಂದ್ರಶೇಖರ್ ರಾವ್ ಅವರ ದಿವ್ಯ ಚೇತನಕ್ಕೆ ನಿಜವಾದ ಅರ್ಥಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದೆ ಎಂದರು. ಹಾಗೂ ಉಪಸ್ಥಿತ ಹಿರಿಯ ನಾಗರಿಕರಿಗೆ ಹಾಗೂ ಅಸೌಖ್ಯದಿಂದ ಅಸ್ಪತ್ರೆ ಸೇರಿಕೊಂಡಿರುವ ಅಸಹಾಯಕರಿಗೆ ವೈದ್ಯಕೀಯ ವೆಚ್ಚವನ್ನು ಹಸ್ತಾಂತರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಷನ್ಮಾಂತಾನಂದ ಆರ್ಟ್ಸ್ ಭಾಂಡೂಪ್ ತಂಡವು ನೃತ್ಯ ವೈವಿಧ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕು| ಎಸ್.ಅಖಿಲ ಪ್ರಾರ್ಥನೆಯನ್ನಾಡಿದರು. ಚಂದ್ರಶೇಖರ್ ರಾವ್ ಕುಂದಾಪುರ ನಾವುಂದ ಕಿರಿಮಂಜೇಶ್ವರ ಮೂಲದವರು. ಮುಂಬಯಿ ಕನ್ನಡ ಸಂಘ, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕ, ಜಿ.ಡಿ ಜೋಶಿ ಪ್ರತಿಷ್ಠಾನ ಸೇರಿದಂತೆ ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದರು ಎಂಬುದನ್ನು ಮನವರಿಸಿದ ಕವಿ ಗೋಪಾಲ ತ್ರಾಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದÀರು.
More News

ಪ್ರೀತಿ-ವಿಶ್ವಾಸ ಸಾಮರಸ್ಯದಿಂದ ಸಮಾಜ ಕಟ್ಟುವ ಕೆಲಸ ಮಾಡೋಣ ಧರ್ಮಸ್ಥಳದಲಿ ನಿಯೋಜಿತ ಸಿಎಂ ಕುಮಾರಸ್ವಾಮಿ
ಪ್ರೀತಿ-ವಿಶ್ವಾಸ ಸಾಮರಸ್ಯದಿಂದ ಸಮಾಜ ಕಟ್ಟುವ ಕೆಲಸ ಮಾಡೋಣ ಧರ್ಮಸ್ಥಳದಲಿ ನಿಯೋಜಿತ ಸಿಎಂ ಕುಮಾರಸ್ವಾಮಿ
ಕೇರಳದಲ್ಲಿ ನಿಫಾ ವೈರಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ಕೇರಳದಲ್ಲಿ ನಿಫಾ ವೈರಸ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್
ಮಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿಗರಿಂದ ಸಿದ್ಧತೆ
ಮಂಗಳೂರು ಪಾಲಿಕೆ ಚುನಾವಣೆಗೆ ಬಿಜೆಪಿಗರಿಂದ ಸಿದ್ಧತೆ

Comment Here