Saturday 4th, May 2024
canara news

ಮಲಾಡ್‍ನಲ್ಲಿ ಸ್ವರ್ಗಸ್ಥ ರವಿ ರಾ.ಅಂಚನ್ ಸ್ಮರಣಾರ್ಥ ವೇದಿಕೆಯಲ್ಲಿ ಜರುಗಿದ ಸಾಹಿತ್ಯ ಗೋಷ್ಠಿ

Published On : 20 Mar 2018   |  Reported By : Rons Bantwal


ಬಹುತ್ವದ ನೆಲೆಯು ಬರೇ ಪರಿಕಲ್ಪನೆ ಆಗಿದೆ : ಡಾ| ವಿಶ್ವನಾಥ ಕಾರ್ನಾಡ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.20: `ಭಾರತದ ಬಹುತ್ವದ ನೆಲೆಗಳು' ಇದೊಂದು ಒಳ್ಳೆಯ ವಿಷಯ. ಗಂಭೀರವಾಗಿ ಪರಿಗಣಿಸ ಬೇಕಾದ ವಿಚಾರವೂ ಹೌದು. ಆದರೆ ಬಹುತ್ವ ಅಂದರೆ ಅದೊಂದು ಪರಿಕಲ್ಪನೆ ಆಗಿದೆ. ನಮ್ಮಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳು ಅತೀಯಾಗಿ ತಾಂಡವವಾಡುತ್ತಿದ್ದು, ವಾಸ್ತವಿಕವಾಗಿ ಇಂದು ಬಹುತ್ವ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನಾವು ಬಹುತ್ವದ ಬಗ್ಗೆ ಸಂವಿಧಾನಿಕವಾಗಿ ಮಾತ್ರ ಮಾತನಾಡುತ್ತಿದ್ದ ರೂ ಸ್ವಾರ್ಥ ಮನೋಭಾವಿಗಳಾಗಿ ಕೌಟುಂಬಿಕವಾಗಿ ಕೂಡು ಕುಟುಂಬದಿಂದ ದೂರ ಸರಿದು ಚಿಕ್ಕಸಂಸಾರವಾಗಿ ಬಾಳುವುದರಿಂದ ಬಹುತ್ವ ಅರ್ಥವನ್ನು ಕಳೆದು ಕೊಡಿದೆ. ಬರೇ ಮನೆಯೊಳಗಿನ ಮಾತಾಗಿ ಬರೇ ನುಡಿಯಾಗಿ ಬಹುತ್ವ ಕಾಣುತ್ತಾ ನಡೆಯಲ್ಲಿ ಹಿನ್ನಡೆಯಾಗಿ ಉಳಿದಿದೆ. ರಾಜಕಾರಣಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಬಹುತ್ವದ ನೆಲೆಯನ್ನು ಮುಂದಿಟ್ಟು ನಮ್ಮನ್ನು ಆಟವಾಡಿಸುತ್ತಾ ಜಾತ್ಯಾತೀತರೆಣಿಸಿ ಜಾತಿಕರಣದ ಮೂಲಕ ಮತಯಾಚನಾ ಅಸ್ತ್ರಕ್ಕೆ ಬಹುತ್ವದ ನೆಲೆಯು ಅಳುಗಾಡುವಂತಿದೆ ಎಂದು ನಿವೃತ್ತ ಪ್ರಾಚಾರ್ಯ ಮತ್ತು ಪ್ರಸಿದ್ಧ ಸಾಹಿತಿ ಡಾ| ವಿಶ್ವನಾಥ ಕಾರ್ನಾಡ್ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಲಾಡ್ ಪಶ್ಚಿಮ ಬಜಾಜ್ ಸಭಾಗೃಹದಲ್ಲಿ ಗೋರೆಗಾಂವ್ ಕರ್ನಾಟಕ ಸಂಘವು ಸಂಘದ ಮಾಜಿ ಅಧ್ಯಕ್ಷ ಸ್ವರ್ಗಸ್ಥ ರವಿ ರಾ.ಅಂಚನ್ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ್ದ `ಭಾರತದ ಬಹುತ್ವದ ನೆಲೆಗಳು' ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಕಾರ್ನಾಡ್ ಮಾತನಾಡಿದರು.

`ಧಾರ್ಮಿಕ ನೆಲೆಗಳು' ವಿಷಯದಲ್ಲಿ ಪತ್ರಕರ್ತ, ಕವಿ ಗೋಪಾಲ್ ತ್ರಾಸಿ ಹಾಗೂ `ಸಾಮಾಜಿಕ ನೆಲೆಗಳು' ವಿಷಯದಲ್ಲಿ ಜಿ. ನಾಗರತ್ನ ಕೋಟ ಉಪನ್ಯಾಸ ನೀಡಿದರು.

ನಾಗರತ್ನ ಕೋಟ ಮಾತನಾಡಿ ಎಲ್ಲಿದೆ ಸಮಾನತೆ? ಎಲ್ಲಿದೆ ಸ್ವತಂತ್ರ? ಎಲ್ಲಿದೆ ಪ್ರಜಾಪ್ರಭುತ್ವ? ಎಲ್ಲಿದೆ ಜಾತ್ಯಾತೀತತೆ? ಎಲ್ಲಿದೆ ಎಲ್ಲಿದೆ. ಎಲ್ಲಿದೆ ನಂದನ! ಎಲ್ಲಿದೆ ಬಂಧನ! ಎಲ್ಲಾ ಇವೆ ನಮ್ಮೊಳಗೆ ಎಂಬಂತೆ ಎಲ್ಲವೂ ಇದೆ ಪುಸ್ತಕಗಳೊಳಗೆ. ರಾಜಕೀಯ ಪಟ್ಟಭದ್ರ ಹಿತಾಸಕ್ತಿಯ ಕೈಯೊಳೆಗೆ ಎನ್ನಬಹುದೇನೋ ಎಂದರು. ಭಾರತ ಜಾತ್ಯಾತೀತ ರಾಷ್ಟ್ರ. ಈ ಪರಿಕಲ್ಪನೆಯ ಮೂಲಾಧಾರ ಸಮತೆ. ಇದರ ಆಧಾರದಲ್ಲಿಯೇ ನಮಗೆ ಸ್ವಾತಂತ್ರ್ಯ ದೊರಕಿದ್ದು ಎನ್ನುವುದು ನಮಗೆ ನೆನಪಿರಬೇಕು. ಅಂದರೆ ಈ ಜಾತ್ಯಾತೀತತೆ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಉಳಿದಿದೆಯೇ? ಈ ಪ್ರಶ್ನೆಗೆ ಬಹಳ ವಿಷಾದದಿಂದ ಇಲ್ಲವೆಂದೇ ಹೇಳ ಬೇಕಾಗಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿಕೊಳ್ಳಲು ಈ ಸಮತಾವಾದಕ್ಕೆ ವಿರುದ್ಧವಾದ ಜಾತೀಯತೆಯೇ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ. ಜಾತಿಯ ಆಧಾರದಲ್ಲಿ ಮತಗಳನ್ನು ಎಣೆಕೆ ಮಾಡುವ ಮನಸ್ಥಿತಿಯ ರಾಜಕಾರಣಿಗಳು ಹೇರಳ ಸಂಖ್ಯೆಯಲ್ಲಿದ್ದಾರೆ. ರಾಜಕೀಯ ಪ್ರೇರಿತ ಲಾಲಾಸೆಯ ಕಾರಣದಿಂದ ಸಮಾತಾ ವಾದವನ್ನು ಗಾಳಿಗೆ ತೂರುತ್ತ ಬಂದು ಜಾತೀಯತೆಯ ಭೇದವನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸಾಮಾಜಿಕವಾಗಿಯೂ ಬಹುದೊಡ್ಡದಾದ ವಿಪ್ಲವವನ್ನು ನಾವಿಂದು ಕಾಣುತ್ತೇವೆ. ಇದಕ್ಕೆ ನೇರ ಕಾರಣ ರಾಜಕೀಯ ಪಕ್ಷಗಳಾಗಿವೆ. ಧರ್ಮ ಮತ್ತು ಜಾತಿಯನ್ನು ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲಲು ಪ್ರಮುಖ ಅಸ್ತ್ರವನ್ನಾಗಿ ಉಪಯೋಗಿಸಿ ಕೊಳ್ಳುತ್ತಿರುವುದು ರಾಷ್ಟ್ರದ ದುರದೃಷ್ಟ ಹಾಗೂ ತತ್ವ ಸಿದ್ಧಾಂತಗಳಿಗೆ ಮೀರಿದ ಒಂದಷ್ಟು ಸ್ವಾರ್ಥಗಳು ಇದಕ್ಕೆ ಕಾರಣ. ಇದರ ಕಾರಣದಿಂದ ಧರ್ಮದ ನೆಲೆಯಲ್ಲಿ ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂದರು.

ಗೋಪಾಲ್ ತ್ರಾಸಿ ಮಾತನಾಡಿ ಎಲ್ಲರಿಗೂ ಧರ್ಮಗಳ ಆಯ್ಕೆಯ ಸ್ವತಂತ್ರ್ಯವಿದೆ. ಉದತ್ತವಾದ ಆಶಯವಿದೆ. ಆದರೆ ಯಾವ ಧರ್ಮದೊಳಗೆ ವ್ಯಕ್ತಿಗತವಾದ ಸ್ವತಂತ್ರ್ಯ ನಿಜ ಅರ್ಥದಲ್ಲಿ ಇದೆ? ಕಾರಣ, ಇಲ್ಲಿ ಆ ಧÀರ್ಮ ಅಂತವಿಲ್ಲ. ಸಂವಿಧಾನದ ಮೂಲ ಆಶಯದಲ್ಲಿ ಸಮಾನತೆ ಅಂತಸತ್ವ, ಅಂತರ್ಗತವಾಗಿದೆ. ಆದರೆ ನಿಜದಲ್ಲಿ ಆಚರಣೆಯ ಸಂದರ್ಭದ ಧಾರ್ಮಿಕ ಸೂತ್ರದೊಳಗೆ ಆದೆಲ್ಲಿ ಸಮಾನತೆಯ ನೆಲೆಯಿದೆ. ಪ್ರತಿ ಜಾತಿ ಮತ್ತು ಧರ್ಮದವರು ಕಾನೂನಿನ ಪ್ರಕಾರ ಸಮಾನ ನೆಲೆಯಲ್ಲಿ ಪರಿಗಣಿಸುವವರು. ಗಾಂಧೀಜಿ ಧೋರಣೆ ದಲಿತರೊಳಗೊಂಡು ಸಮಗ್ರ ಸಮಾಜದ ಸರ್ವೊದಯ ಸಮಜೀವನ ಕನಸು ಆಗಿದ್ದರೆ ಗಾಂಧೀಜಿಗೆ ಸ್ವಾತಂತ್ರ್ಯದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ಮಹಾದಾಶೆ. ಆದರೆ ಈ ದೇಶದ ಬಹುಪಾಲು ದಲಿತ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ ಅಂದÀ ಮೇಲೆ ಸರ್ವೊದಯ ಹೇಗೆ ಸಾಧ್ಯ ಎಂಬ ಅನುಮಾನ ಮತ್ತು ಸಂಶಯ ಡಾ| ಅಂಬೇಡ್ಕಕರ್ ಅವರದ್ದಾಗಿತ್ತು ಎಂದರು.

ಸಂಘದ ಅಧ್ಯಕ್ಷ ರಮೇಶ್ ಕೆ.ಶೆಟ್ಟಿ ಪಯ್ಯಾರು ಸ್ವಾಗತಿಸಿದರು. ಇಂದಿರಾ ಮೊೈಲಿ, ಶಾಂತಾ ಎನ್.ಶೆಟ್ಟಿ, ಸ್ನೇಹ ಆರ್.ಕುಲ್ಕರ್ಣಿ ಅತಿಥಿüಗಳನ್ನು ಪರಿಚಯಿಸಿದರು. ಸಚ್ಚೀಂದ್ರ ಕೆ.ಕೋಟ್ಯಾನ್, ಲಕ್ಷಿ ್ಮೀ ಆರ್.ಶೆಟ್ಟಿ ಸ್ಮರಣಿಕೆ, ಪುಷ್ಫಗುಪ್ಚಗಳನ್ನೀಡಿ ಅತಿಥಿüಗಳನ್ನು ಗೌರವಿಸಿದರು. ಗುಣೋದಯ ಐಲ್ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here