Monday 29th, April 2024
canara news

ಶೇಖಡ 60 ರಷ್ಟು ಅನಿಲ ಉಳಿತಾಯದ ಅಡುಗೆ ಒಲೆ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರದಾನ್ .

Published On : 25 Mar 2018   |  Reported By : media release


ಉಡುಪಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರ್ ನ ಸಂಶೋಧಕ ವಿಜಯ್ ಕುಮಾರ್ ಹೆಗ್ಡೆ ನೂತನವಾಗಿ ಸಂಶೋಧನೆ ಮಾಡಿ ತಯಾರಿಸಿದ , ಅಡುಗೆ ಅನಿಲ ಇಂಧನ ಉಳಿತಾಯ ಮಾಡುವಂತಹ , ಹೊಸ ಅಡುಗೆ ಒಲೆಗಳ ಮಾದರಿಯನ್ನ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಧರ್ಮೇಂದ್ರ ಪ್ರಧಾನ್ ವೀಕ್ಷಣೆ ಮಾಡಿದರು.

ಮಂಗಳೂರುನಲ್ಲಿ ಪ್ರವಾಸ ಕೈಗೊಂಡಿದ್ದ ಸಂದರ್ಭ ಸಚಿವರಿಗೆ ನಗರದ ಸರ್ಕಿಟ್ ಹೌಸಿನಲ್ಲಿ ಈ ಹೊಸ ಸಂಶೋಧನೆಯನ್ನು ಪ್ರತ್ಯಕ್ಷಿಕೆಯ ಮೂಲಕ ವಿಜಯ್ ಕುಮಾರ್ ಹೆಗ್ಡೆ ತೋರಿಸಿಕೊಟ್ಟರು.

ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡುವ ಸಂಧರ್ಭದಲ್ಲಿ ,ವ್ಯರ್ಥವಾಗಿ ಹೊರಸೂಸುವ ಬೆಂಕಿಯ ಜ್ವಾಲೆಯನ್ನು,ಹಿಡಿದಿಟ್ಟು ಅದನ್ನು ಹಬೆಯಾಗಿ ಪರಿವರ್ತಿಸಿ (ಸ್ಟೀಮ್ ಮೂಲಕ) ಇತರ ಸ್ಟೀಲ್ ಪಾತ್ರೆಗಳಿಗೆ ಪೈಪಿನ ಮೂಲಕ ಸಂಪರ್ಕ ಕಲ್ಪಿಸಿದಾಗ , ಏಕ ಕಾಲಕ್ಕೆ ಐದಾರು ಅಡುಗೆಗಳನ್ನ ಮಾಡಬಹುದಾದಾ ಸಂಶೋಧನೆ ಇದಾಗಿದೆ.

ಈ ಅಡುಗೆ ಒಲೆಯಿಂದ ಸಮಯದ ಜೊತೆಗೆ ಶೇಖಡ 60 ರಷ್ಟು ಗ್ಯಾಸ್ ಉಳಿತಾಯವೂ ಅಗುತ್ತೆ ,ಅಷ್ಟೇ..ಅಲ್ಲದೇ ಇದೊಂದು ಪರಿಸರ ಸ್ನೇಹಿ ಹಾಗೂ ಅಫಘಾತ ರಹಿತ ಅನ್ನೋದನ್ನ ಸಚಿವರಿಗೆ ಮನವರಿಕೆ ಮಾಡಿ ಕೊಡಲಾಯಿತು.

ಪ್ರತ್ಯಕ್ಷಿಕೆಯನ್ನ ಕಂಡ ಸಚಿವರು ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅನಿಲ ಇಂಧನ ಉಳಿತಾಯ ಮಾಡುವ ಬಗ್ಗೆ ಸರ್ಕಾರ ಹಲವು ಹೆಜ್ಜೆಗಳನ್ನ ಮುಂದಿಟ್ಟಿದೆ.ಈ ನಿಟ್ಟಿನಲ್ಲಿ ವಿಜಯ್ ಕುಮಾರ್ ಸಂಶೋಧನೆ ಕೂಡ ನಮಗೆ ಸಹಕಾರಿಯಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಮುಂಬಯಿ ಸಂಸದರಾದ ಗೋಪಾಲ ಶೆಟ್ಟಿ ,ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್, ಮಾಜಿ ಶಾಸಕ ಯೋಗೇಶ್ ಭಟ್,ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here