Sunday 28th, April 2024
canara news

ನವೀನ್ ಜೆ.ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್' ಸಂಸ್ಥೆಯ

Published On : 26 Mar 2018   |  Reported By : Rons Bantwal


4ನೇ ಶಾಖೆ ಥಾಣೆ ಪಶ್ಚಿಮದ ಗಜಾನನ್ ಕಾಂಪ್ಲೆಕ್ಸ್‍ನಲ್ಲಿ ಸೇವಾರಂಭ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.26: ಉಡುಪಿ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಕೋಣಿ ಮೂಲದವರಾಗಿದ್ದು ಕೇಶ ವಿನ್ಯಾಸ ಹಾಗೂ ಅತಿಗಾಮಿ ಸಾಂಪ್ರದಾಯಿಕ ಕೇಶÀ ಪದ್ಧತಿಯನುಸಾರ ಶಸ್ತ್ರ ಚಿಕಿತ್ಸೆ ರಹಿತ ಕೂದಲುಗಳ ಅಳವಡಿಕೆಯಲ್ಲಿ ಸ್ವಂತಿಕೆಯ ಪ್ರತಿಷ್ಠೆ ರೂಪಿಸಿರುವ ನವೀನ್ ಜೆ.ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್' ಸಂಸ್ಥೆಯ ಮಹಾನಗರ ಮುಂಬಯಿಯೊಳಗಿನ ನಾಲ್ಕನೇ ಶಾಖೆಯು ರಾಮ ನವಮಿ ಶುಭಾವಸರವಾದ ಇಂದಿಲ್ಲಿ ಭಾನುವಾರ ಮಧ್ಯಾಹ್ನ ಉಪನಗರ ಥಾಣೆ ಪಶ್ಚಿಮದ ಗಜಾನನ್ ಕಾಂಪ್ಲೆಕ್ಸ್‍ನಲ್ಲಿ ಸೇವಾರಂಭಿಸಿತು.

ಸಮಾರಂಭದಲ್ಲಿ ವಿಶೇಷ ಸೆಲೆಬ್ರೆಟಿ ಅತಿಥಿüಯಾಗಿ ಉಪಸ್ಥಿತ 2017 ಮತ್ತು 2018ರ ಸಾಲಿನ ಮಿಸೆಸ್ ಏಷಿಯಾ ವಿಜೇತೆ ಪಿಂಕಿ ಪ್ರಶಾಂತ್ ರಾಜ್‍ಗರಿಯಾ ಅವರು ರಿಬ್ಬನ್ ಕತ್ತರಿಸಿ ಹಾಗೂ ದೀಪಪ್ರಜ್ವಲಿಸಿ ನೂತನ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಜಯ ಸಿ.ಪೂಜಾರಿ, ಶಾಂತಾ ಜೆ.ಭಂಡಾರಿ, ವೀಣಾ ಭಂಡಾರಿ, ಕು| ವೃದ್ಧಿ ಭಂಡಾರಿ, ಮಾ| ವಂಶ್ ಭಂಡಾರಿ, ರಾಘವೇಂದ್ರ ಭಂಡಾರಿ, ಸ್ಮೀತಾ ರಾಘವೇಂದ್ರ, ಸುನೀತಾ ಹರೀಶ್ ಕುಂದರ್, ಕೃಷ್ಣಪ್ಪ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.

ಶುಭಾರಂಭ ನಿಮಿತ್ತ ಬೆಳಿಗ್ಗೆ ಗಣೇಶ ಹವನ, ಗಣಹೋಮ ಇತ್ಯಾದಿ ಧಾರ್ಮಿಕ ಪೂಜೆಗಳÀು ನಡೆಸಲ್ಪಟ್ಟಿದ್ದು, ವಿದ್ವಾನ್ ವಿಷ್ಣ ಅಡಿಗ ಬೋರಿವಿಲಿ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ಉಪಸ್ಥಿತ ಗಣ್ಯರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.

ಫಿನಿಶಿಂಗ್ ಟಚ್ ಸಂಸ್ಥೆಯ ಸಂಸ್ಥಾಪಕ ಆಡಳಿತ ನಿರ್ದೇಶಕ ನವೀನ್ ಜೆ.ಭಂಡಾರಿ ಆಹ್ವಾನಿತರಿಗೆ ಸುಖಾಗಮನ ಬಯಸಿ ತನ್ನ ಸಸ್ಥೆಯ ಸೇವಾ ವೈಖರಿಯನ್ನು ಪ್ರಸ್ತಾಪಿಸಿದರು. ಹಾಗೂ ತನ್ನ ಕುಲಕಸುಬು ಕ್ಷೌರಿಕ ವೃತ್ತಿಗೆ ಮಾರ್ಗದರ್ಶಕರಾಗಿ ಪ್ರೇರಕರಾದ ಮಾತಾಪಿತರಾದ ಜಗನ್ನಾಥ್ ಭಂಡಾರಿ ಮತ್ತು ಶಾಂತಾ ಭಂಡಾರಿ, ಮಾವಂದಿರಾದ ಸುರೇಶ್ ಭಂಡಾರಿ ಅಶ್ವಥಪುರ (ಮೂಡಬಿದ್ರೆ) ಹಾಗೂ ಗೋವಿಂದ ಭಂಡಾರಿ ಸುರತ್ಕಲ್ ಅವರನ್ನು ಮನಸಾರೆ ಸ್ಮರಿಸಿ ಅಭಾರ ಮನ್ನಿಸಿದÀರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here