Friday 3rd, May 2024
canara news

ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರ

Published On : 31 Mar 2018   |  Reported By : Bernard J Costa


ಕುಂದಾಪುರ ಮಾ.31: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಯೇಸುವಿನ ಕಶ್ಟ ಮರಣದ ಶುಕ್ರವಾರವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಲಾಯಿತು. ಬೆಳಗ್ಗೆ ಆಯ್ದ ಜನರ ಮುಂದಾಳತ್ವದಲ್ಲಿ ಭಕ್ತರೊಡನೆ ಶಿಲುಭೆ ಮರಣದ ಯಾತ್ರ ವಿಧಿಯನ್ನು ನೆಡೆಸಲಾಯಿತು.

ಸಂಜೆಯ ಹೊತ್ತಿನಲ್ಲಿ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ಪ್ರಥಮ ಭಾಗದಲ್ಲಿ ದೇವರ ವಾಕ್ಯದ ಸಂಭ್ರಮ ಮತ್ತು ಯೇಸುವಿನ ಕಶ್ಟ ಮರಣದ ರೀತಿಯನ್ನು ನೆಡಸಲಾಯಿತು.

ಇದನ್ನು ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ನೆಡೆಸಿಕೊಟ್ಟರು. ಪ್ರಧಾನ ಧರ್ಮಗುರು ವಂ| ಅನಿಲ್ ಡಿಸೋಜಾ ‘ಯೇಸುವಿನ ಕಶ್ಟ ಮರಣವನ್ನು ನೆನೆದು ನಮ್ಮ ಜೀವನದಲ್ಲಿ ಬದಲಾವಣೆ ತರದಿದ್ದರೆ ಎನೇನೂ ಪ್ರಯೋಜಾನವಿಲ್ಲಾ. ಯೇಸುವಿಗೆ ಆ ಸೈನಿಕರು ನೀಡಿದ ಯಾತನೆ, ಅವನಮಾನ ನಾವುಗಳು ತಮ್ಮ ಅಣ್ಣ ತಮ್ಮಂದಿರನ್ನು ಯಾತನೆ ಅವಮಾನ ಮಾಡಿ ಯೇಸುವಿಗೆ ನೋವಾಗುವಂತೆ ಮಾಡಿದ್ದೇವೆ. ಆದರೆ ಯೇಸು ನಮ್ಮನ್ನು ಕ್ಷಮಿಸುತ್ತಾಅನೆ, ಯೇಸುವಿನ ಹತ್ತಿರ ಇದೆ ಕರುಣೆ ದಯೆ ಪ್ರೀತಿ. ಅವನಿಂದ ನಾವು ಅಮರ ಜೀವನವನ್ನು ಪಡೆಯ ಬೇಕು, ಇವತ್ತು ಯೇಸು ಕಶ್ಟಮರಣದ ಯಾತನೆಯನ್ನು ಅನುಭವಿಸಿದ ದಿನ ಆತನಿಗೆ ದುಖದ ದಿನ ಆದರೆ ಆತನ ಶಿಲುಭೆ ಮರಣದಿದಿಂದ ನಮಗೆ ಸ್ವರ್ಗದ ದಾರಿ ಸಿಕ್ಕಿದೆ ಅದಕ್ಕಾಗಿ ನಮಗೆ ಶುಭ ಶುಕ್ರವಾರ‘ ಎಂದು ಅವರು ಸಂದೇಶ ನೀಡಿದರು.

ಎರಡನೆ ಭಾಗದಲ್ಲಿ ವಿಶ್ವಾಸಿಗಳ ಪ್ರಾರ್ಥನೆ ನೆಡೆದು, ಪವಿತ್ರ ಸಭೆಗಾಗಿ, ಕಥೊಲಿಕ್ ಜಗತ್‍ಗುರು ಪೆÇೀಪರಿಗಾಗಿ, ಬಿಶಪರಿಗಾಗಿ, ಧರ್ಮಗುರುಗಳಿಗಾಗಿ, ವಿಶ್ವಾಸಿಗಳಿಗಾಗಿ, ಅನಾಥ ಬಡಬಗ್ಗರಿಗಾಗಿ, ರೋಗಿಗಳಿಗಾಗಿ, ಹೀಗೆ ಅನೆಕ ರೀತಿಯ ಪ್ರಾರ್ಥನೆಯನ್ನು ದೇವರಲ್ಲಿ ಸಮರ್ಪಣೆ ಗೊಂಡವು.

ಮೂರನೇ ಭಾಗದಲ್ಲಿ ಶಿಲುಭೆಯಲ್ಲಿ ಯೇಸುವಿನ ಮರಣದ ವಿಧಿಯನ್ನು ನೆಡಸಿ ಶಿಲುಭೆಗೆ ಮುತ್ತು ನೀಡಿ ನಮಿಸುವ ಕಾರ್ಯ ನೆಡೆಯಿತು. ಕೊನೆಯ ಭಾಗವಾಗಿ ಕ್ರಿಸ್ತ ಪ್ರಸಾದವನ್ನು ಹಂಚಲಾಯಿತು. ಯೇಸುವಿನ ಕಶ್ಟ ಮರಣದ ಶುಭ ಶುಕ್ರವಾರದ ಈ ಧಾರ್ಮಿಕ ವಿಧಿಯಲ್ಲಿ ಹಲವಾರು ಧರ್ಮಭಗಿನಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here