Friday 3rd, May 2024
canara news

ಕುಂದಾಪುರದಲ್ಲಿ ಫಾಸ್ಕ ಹಬ್ಬದ ಸಂಭ್ರಮ – ಇದು ಮರಣದ ಮೇಲಿನ ವಿಜಯ ಸಂಭ್ರಮ - ಫಾ| ಅನಿಲ್ ಡಿಸೋಜಾ

Published On : 01 Apr 2018   |  Reported By : Bernard Dcosta


ಕ್ರಿಸ್ತರ ಪುನರುತ್ಥಾನದ ಕೇವಲ ಕಾಲ್ಪನಿಕವಲ್ಲಾ, ಇದು ನೀಜವಾದ ಚಾರಿತ್ರಿಕ ಘಟನೆ.

ಕುಂದಾಪುರ,ಎ.1: ಸುಮಾರು 448 ವರ್ಷಗಳ ಇತಿಹಾಸ ಇರುವ ಉಡುಪಿ ಧರ್ಮ ಪ್ರಾಂತ್ಯದ ಅತೀ ಪುರಾತನ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ, ಕ್ರಿಸ್ತರು ಕಶ್ಟ ಮರಣದ ಶಿಕ್ಷೆಗೆ ಒಳಪಟ್ಟು, ಅವರು ಶಿಲುಭೆಯ ಮೇಲೆ ಮರಣ ಹೊಂದಿ, ಕ್ರಿಸ್ತರು ಮೊದಲೆ ತಿಳಿಸಿದಂತೆ ಮೂರನೇಯ ದಿವಸ ಜಿವಂತವಾಗಿ ಎದ್ದು, ತಾನು ನೀಜವಾದ ದೇವರೆಂದು ತೊರಿಸಿಕೊಟ್ಟ ಪುನರುತ್ಥಾನದ ಹಬ್ಬ. ಈ ಮಹಾ ಹಬ್ಬವನ್ನು ವಿಶ್ವಾಸಿಗಳು ಹಾಜರತ್ವದಲ್ಲಿ ಬಹಳ ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಂಜೆಯ ಕತ್ತಲಿನಲ್ಲಿ ಚರ್ಚ್ ಮೈದಾನಾದಲ್ಲಿ ಪಾಸ್ಕಾದ ಮುಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಆ ಮುಂಬತ್ತಿಯನ್ನು ಹೊಸ ಬೆಂಕಿಯನ್ನು ಆಶಿರ್ದದಿಸಿ, ಆ ಬೆಂಕಿಯಿಂದ ಫಾಸ್ಕ ಮುಂಬತ್ತಿಯನ್ನು ಬೆಳಗಿಸಲಾಯಿತು. ಯೇಸು ಮರಣ ಹೊಂದಿ ಕತ್ತಲೆಯಲ್ಲಿದ್ದ ನಮಗೆ, ಯೇಸು ಪುನರ್ ಹುಟ್ಟಿ ನಮಗೆ ಬೆಳಕು ನೀಡಿದ್ದಾನೆ ಎಂಬ ಅರ್ಥದಲ್ಲಿ ಈ ಧಾರ್ಮಿಕ ಕ್ರಿಯೆ ನೆಡೆಸುತ್ತಾರೆ. ಈ ಧಾರ್ಮಿಕ ವಿಧಿಯನ್ನು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾರವರು ನೆಡೆಸಿಕೊಟ್ಟರು.
ಫಾಸ್ಕದ ಮುಂಬತ್ತಿಯ ಬೆಳಕಿನಿಂದ ವಿಶ್ವಾಸಿಗರು ತಮ್ಮ ಮುಂಬತ್ತಿಗಳನ್ನು ಬೆಳಗಿಸಿಗೊಂಡು ದೇವಾಲಯದ ಒಳಗೆ ಪ್ರವೇಶಿಸಿದ ತರುವಾಯ, ಎರಡನೆ ಭಾಗವಾಗಿ ದೇವರ ವಾಕ್ಯಗಳ ವಿಧಿ ನೆಡೆಯಿತು.

‘ಇವತ್ತು ನಮಗೆ ನವ ಜೀವನದ ಸಂಭ್ರಮ, ಕ್ರಿಸ್ತರು ಮರಣದ ಮೇಲೆ ವಿಜಯ ಸಾಧಿಸಿದ ಸಂಭ್ರಮ, ಕ್ರಿಸ್ತರ ಪುನರುತ್ಥಾನದ ಸಂಭ್ರಮ, ನೀವು ಪುನರುತ್ಥಾನದಗೊಂಡ ಕ್ರಿಸ್ತರ ಆಶಿರ್ವಾದಾಗಳನ್ನು ಪಡೆಯಲು ಬಂದ್ದಿದಾದರೆ, ನೀವು ನೀಜವಾಗಲು ನಿಮ್ಮ ಜೀವನದಲ್ಲಿರುವ ಕೆಡುಕುಗಳನ್ನು ಬಿಟ್ಟು ಸನ್ಮಾರ್ಗದ ಜೀವನವನ್ನು ನೆಡಸಬೇಕು. ಕ್ರಿಸ್ತರ ಪುನರುತ್ಥಾನದ ಕೇವಲ ಕಾಲ್ಪನಿಕವಲ್ಲಾ, ಇದು ನೀಜವಾದ ಚಾರಿತ್ರಿಕ ಘಟನೆ. ಭೂಲೊಕದಲ್ಲಿ ಈ ತನಕ ಯಾರು ಕೂಡ ಸತ್ತು, ಜೀವಂತವಾಗಿ ಎದ್ದಿಲ್ಲಾ. ಹೀಗೆ ಕ್ರಿಸ್ತರು ಮರಣಿಸಿ ಜೀವಂತವಾಗಿ ಎದ್ದು ತಾನು ದೇವರ ಪುತ್ರನೆಂದು ಶಾಭಿತು ಪಡಿಸಿದ್ದಾರೆ. ಕ್ರಿಸ್ತರು ಪುನರುತ್ಥಾನಗೊಂಡು ನಮಗೆ ಸಮಾಧಾನ ಶಾಂತಿ ತಂದಿದ್ದಾರೆ, ಇವತ್ತು ನಮಲ್ಲಿ ಬೇಕಾದ ಸಿರಿ ಸಂಪತ್ತು ಎಲ್ಲವೂ ಇದೆ, ಆದರೆ ಸಮಾಧಾನ ಮಾತ್ರವಿಲ್ಲಾ, ಅದು ಕ್ರಿಸ್ತರ ಹತ್ತಿರ ಮಾತ್ರ ಸಿಗುತ್ತದೆ, ನಮ್ಮ ಪಾಪಭರಿತ ಜಿವನ ತ್ಯಜಿಸಿ ಕ್ರಿಸ್ತರಲ್ಲಿ ಮರಳಿ ಬನ್ನಿ ಆಗ ಮಾತ್ರ ನಿಜವಾದ ಶಾಂತಿ ನಿಮಗೆ ಸಿಗುತ್ತದೆ’ ಪ್ರಧಾನ ಗುರುಗಳಾದ ಅನಿಲ್ ಡಿಸೋಜಾ ಎಂದು ಫಾಸ್ಕ ಹಬ್ಬದ ಪ್ರಯುಕ್ತ ವೀಶೆಷವಾದ ಪ್ರವಚನವನ್ನು ನೀಡಿದರು.

ಮೂರನೆ ಭಾಗದಲ್ಲಿ ಜಲವನ್ನು ಪವಿತ್ರಿಕರಿಸಿ, ಸ್ನಾನ ದಿಕ್ಷೆಯ ವೇಳೆ ಮಾಡಿದ ಪ್ರತಿಜ್ನೆಗಳನ್ನು ಸಾರ್ವತ್ರಿಕವಾಗಿ ಮತ್ತೊಮ್ಮೆ ಮಾಡಲಾಯಿತು. ನಾಲ್ಕನೆ ಭಾಗವಾಗಿ ಕ್ರಿಸ್ತ ಪ್ರಸಾದದ ಪವಿತ್ರ ಬಲಿ ಪೂಜೆಯನ್ನು ಸಮರ್ಪಿಸಲಾಯಿತು, ಈ ಧಾರ್ಮಿಕ ವಿಧಿಯು ಸಹಾಯಕ ಧರ್ಮಗುರು ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊರ ಸಹಭಾಗಿತ್ವದಲ್ಲಿ ನೆಡೆಯಿತು. ಈ ಧಾರ್ಮಿಕ ಸಂಭ್ರಮದಲ್ಲಿ ಅನೇಕ ಧರ್ಮಭಗಿನಿಯರು ಪಾಲನ ಮಂಡಳಿ ಸದಸ್ಯರು, ಗುರಿಕಾರರು ಹಾಗೂ ಬಹು ಸಂಖ್ಯೆಯಲ್ಲಿ ಭಕ್ತಧಿಗಳು ಪಾಲ್ಗೊಂಡರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here