Friday 3rd, May 2024
canara news

ಪ್ರೀತಿ-ವಿಶ್ವಾಸ ಸಾಮರಸ್ಯದಿಂದ ಸಮಾಜ ಕಟ್ಟುವ ಕೆಲಸ ಮಾಡೋಣ ಧರ್ಮಸ್ಥಳದಲಿ ನಿಯೋಜಿತ ಸಿಎಂ ಕುಮಾರಸ್ವಾಮಿ

Published On : 22 May 2018   |  Reported By : Rons Bantwal


ಮುಂಬಯಿ,ಮೇ.22: ರಾಜ್ಯದಲ್ಲಿಐದು ವರ್ಷ ಸುಭದ್ರ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತ ಪಡಿಸಿದರು.

ಕುಮಾರ ಸ್ವಾಮಿ ಪತ್ನಿ ಅನಿತಾ ಕುಮಾರ ಸ್ವಾಮಿ ಅವರನ್ನೊಳಗೊಂಡು ಇಂದಿಲ್ಲಿ ಮಂಗಳವಾರ ಬೆಳಿಗ್ಗೆ ಹೆಲಿಕಾಪ್ಟರ್ ಮೂಲಕ ಬಂದುದೇವರದರ್ಶನ ಮಾಡಿದರು. ಬಳಿಕ ಬೀಡಿನಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಹುಮತ ದೊರಕದಿದ್ದರೂತಮ್ಮ ಹಿರಿಯರು ಹಾಗೂ ತಾವುದೇವರ ಮೇಲೆ ಇಟ್ಟ ಶ್ರದ್ಧಾ-ಭಕ್ತಿಯ ಫಲವಾಗಿ ಪವಾಡ ಸದೃಶವಾಗಿತನಗೆ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿದೆ. ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರ ಮನ ಒಲಿಸಿ ರಾಜ್ಯದಲ್ಲಿ ಜೆಡಿಎಸ್ ಮತ್ತುಕಾಂಗ್ರೆಸ್ ಸಮ್ಮಿಶ್ರ ಸರ್ಕಾರರಚಿಸಲು ನಿರ್ದೇಶನ ನೀಡಿರುತ್ತಾರೆ.

ಧರ್ಮಸ್ಥಳದಲ್ಲಿ ದೇವರದರ್ಶನ ಮಾಡಿ, ಹೆಗ್ಗಡೆಯವರ ಆಶೀರ್ವಾದ ಪಡೆದು ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗಲಿ. ರೈತರು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲೆಂದು ನಾಡಿನ ಸಮಸ್ತ ಜನತೆಯ ಪರವಾಗಿ ಪ್ರಾರ್ಥಿಸಿರುವುದಾಗಿ ಅವರುತಿಳಿಸಿದರು.
ಉಭಯ ಪಕ್ಷಗಳ ಶಾಸಕರ ವಿಶ್ವಾಸ ಪಡೆದುಚುನಾವಣೆ ಸಂದರ್ಭ ಎರಡೂ ಪಕ್ಷಗಳು ನೀಡಿದ ಪ್ರಣಾಳಿಕೆಯ ಎಲ್ಲಾ ಅಂಶಗಳನ್ನು ಅನುಷ್ಠಾನ ಗೊಳಿಸುವುದಾಗಿ ಅವರು ಭರವಸೆ ನೀಡಿದರು. ಸರ್ಕಾರದ ಆಥಿರ್üಕ ಪರಿಸ್ಥಿತಿ ಸದೃಢವಾಗಲಿದೆ ಜನತೆಯ ಮೇಲೆ ಸಾಲದ ಹೊರೆ ಹಾಗೂ ತೆರಿಗೆಯ ಹೊರೆ ಹಾಕುವುದಿಲ್ಲ. ಪ್ರತಿಯೊಂದು ಕುಟುಂಬದವರೂ ಸುಖ, ಶಾಂತಿ, ನೆಮ್ಮದಿಯಿಂದ ಸ್ವಾವಲಂಬಿ ಜೀವನ ನಡೆಸ ಬೇಕೆಂಬುದೇ ತನ್ನ ಆಶಯವಾಗಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗುವಆಧಾರರಹಿತ ಸುದ್ದಿಗಳನ್ನು ನಂಬಬೇಡಿ.ಸಚಿವ ಸಂಪುಟದ ಬಗ್ಗೆ ನಾವು ಯಾವುದೇ ನಿರ್ಧಾರತೆಗೆದುಕೊಂಡಿಲ್ಲ, ಚರ್ಚೆಯನ್ನೂ ಮಾಡಿಲ್ಲಎಂದುಕುಮಾರ ಸ್ವಾಮಿ ಸ್ಪಷ್ಟ ಪಡಿಸಿದರು.

ಕರಾವಳಿ ಯುವಜನತೆಗೆಕರೆ:
ಕರಾವಳಿ ಜಿಲ್ಲೆಯ ಯುವಜನತೆ ತಮ್ಮ ಭವಿಷ್ಯದ ಬಗ್ಗೆಚಿಂತನೆ ಮಾಡಿ ರಚನಾತ್ಮಕ ಕೆಲಸಗಳಲ್ಲಿ ತೊಡಗಬೇಕು. ಸಮಾಜಬಾಹಿರ ಕೃತ್ಯಗಳಲ್ಲಿ ಭಾಗವಹಿಸ ಬಾರದು ಎಂದು ಕಿವಿಮಾತು ಹೇಳಿದರು. ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೋಮು ಸಾಮರಸ್ಯ ಕೆಡಿಸ ಬಾರದು. ಅಮಾಯಕರು ಬಲಿಯಾಗಬಾರದು. ಯಾವುದೇ ಸಂಘರ್ಷ, ಸಮಸ್ಯೆ ಇದ್ದರೂ ತನ್ನನ್ನು ನೇರವಾಗಿ ಸಂಪರ್ಕಿಸಿದಲ್ಲಿ ತಕ್ಷಣ ಅದನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಬಿಜೆಪಿ ಅವರ ಭಾವನೆಗಳು ಹಾಗೂ ಹೇಳಿಕೆಗಳ ಬಗ್ಗೆ ತನಗೆ ಯಾವುದೇ ರೀತಿಯ ಆಕ್ರೋಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಎತ್ತಿನ ಹೊಳೆ ಯೋಜನೆ ಬಗ್ಗೆ ಗಮನ ಸೆಳೆದಾಗ, ಅದನ್ನು ತಡೆಯುವ ಬಗ್ಗೆ ತಾನು ಎಂದೂ ಹೇಳಿಕೆ ನೀಡಿಲ್ಲ. ಆ ಯೋಜನೆಯಲ್ಲಿ ಅನ್ಯಾಯ,ಅಕ್ರಮವಾಗಿದ್ದರೆ ಅದನ್ನು ತಡೆಗಟ್ಟುವುದಾಗಿ ಭರವಸೆ ನೀಡಿದರು. ಎಲ್ಲರೂ ಒಟ್ಟಾಗಿ ಪ್ರೀತಿ-ವಿಶ್ವಾಸದಿಂದ ಬದುಕಿ ಸಮಾಜ ಕಟ್ಟುವ ಕೆಲಸ ಮಾಡೋಣ, ಕೆಡಹುವ ಕೆಲಸ ಮಾಡುವುದು ಬೇಡಎಂದು ಕಿವಿಮಾತು ಹೇಳಿದರು.

ಹರ್ಷೇಂದ್ರ ಹೆಗ್ಗಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹ್ಮದ್‍ಕುಂಞ, ಮಾಜಿ ಅಧ್ಯಕ್ಷ ಎಂ.ಬಿ ಸದಾಶಿವ, ಸುಮತಿ ಹೆಗ್ಡೆÉ, ರಾಜಶ್ರೀ ಹೆಗ್ಡೆ, ಜಿಲ್ಲಾ ಯುವಧ್ಯಕ್ಷ ಅಕ್ಷಿತ್ ಸುವರ್ಣ, ಪ್ರವೀಣಚಂದ್ರ ಮತ್ತಿತರರು ಉಪಸ್ಥಿತರಿದ್ದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here