Monday 29th, April 2024
canara news

ಬಿಲ್ಲವರ ಭವನದಲ್ಲಿ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮುಡಿಗೇರಿಸಿದ ಸುಬ್ರಾಯ ಚೊಕ್ಕಾಡಿ

Published On : 27 May 2018   |  Reported By : Rons Bantwal


ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ : ಸುಬ್ರಾಯ ಚೊಕ್ಕಾಡಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.27: ಗ್ರಾಮೀಣ ಮತ್ತು ಹೊರನಾಡ ಕನ್ನಡಿಗರು ಮಾತ್ರ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಆದರೆ ಒಳನಾಡ ಕನ್ನಡಿಗರಲ್ಲಿ ಇದು ಮರೆಯಾಗುತ್ತಿರುವುದು ದುರದೃಷ್ಟ. ಹೊರನಾಡಿನ ಜನರಿಂದಲೇ ಭಾಷೆ, ಸಂಸ್ಕೃತಿಯ ಉಳಿವು ಸ್ತುತ್ಯರ್ಹ. ಮುಂಬಯಿ ಕನ್ನಡಿಗರು ಮಾತೃತ್ವವನ್ನು ಉಳಿಸಿದ್ದಾರೆ. ನಾನು ನನಗಾಗಿ, ಬದುಕಿಗಾಗಿ ಬರೆಯುತ್ತಿದ್ದವ. ಆದರೆ ನನ್ನ ಬರವಣಿಗೆ ಓದುವ ಸಾಹಿತ್ಯಸಕ್ತ ಸ್ನೇಹಿತರಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ರಾತ್ರಿ ಬೆಳಗಾಗುವ ಒಳಗೆ ಪುಸ್ತಕಗಳನ್ನು ನಾಡಿನಾದ್ಯಂತ ಹೊತ್ತು ಮಾರಿದ ಕಾರಣ ನನ್ನ ಬರವಣಿಗೆಯು ವಿಸ್ತಾರವಾಯಿತು. ಜೊತೆಗೆ ನನ್ನ ಓದಿನ ಪ್ರೀತಿ ಸಂಪಾದನೆ ಆಯಿತು. ಇವೆಲ್ಲವುಗಳ ಫಲವೇ ಈ ಪ್ರಶಸ್ತಿ ಆಗಿದೆ ಎಂದು ಪ್ರಶಸ್ತಿಗೆ ಉತ್ತರಿಸಿ ಸಾಹಿತಿ, ಪ್ರಸಿದ್ಧ ಕವಿ, ವಿಮರ್ಶಕ ಹಾಗೂ ಶಿಕ್ಷಕ ಸುಬ್ರಾಯ ಚೊಕ್ಕಾಡಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ-2018ನ್ನು ಸ್ವೀಕರಿಸಿ ಸುಬ್ರಾಯ ಚೊಕ್ಕಾಡಿ ಮಾತನಾಡಿದರು.

ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭಕ್ಕೆ ಚೊಕ್ಕಾಡಿ ದೀಪ ಬೆಳಗಿಸಿ ಚಾಲನೆಯನ್ನಿತ್ತರು. ಬಿಲ್ಲವರ ಮಹಾಮಂಡಲ ಅಧ್ಯಕ್ಷ ಜಯ ಸಿ.ಸುವರ್ಣ ಪ್ರಧಾನ ಅಭ್ಯಾಗತರಾಗಿದ್ದು ಚೊಕ್ಕಾಡಿ ಅವರಿಗೆ (ರೂಪಾಯಿ 25,000 ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳೊಂದಿಗೆ) ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.

ನಾಡಿನ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಅವರು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ರಚಿತ `ಪ್ರಗತಿಪರ ಚಿಂತನೆಯ ಸಾಹಿತಿ ಎಂ.ಬಿ ಕುಕ್ಯಾನ್'ಕೃತಿಯನ್ನು ಬಿಡುಗಡೆ ಗೊಳಿಸಿದರು.

ನನ್ನನ್ನು ಸಾಹಿತಿಯಾಗಿಸಿದ್ದೇ ಜಯ ಸುವರ್ಣರು. ಅವರಿಂದಾಗಿ ಸರಸ್ವತಿಯನ್ನು ಮತ್ತು ಸ್ವಂತಿಕೆಯಿಂದ ಲಕ್ಷ್ಮೀಯನ್ನು ಒಲಿಸಿಕೊಂಡಿದ್ದೇನೆ. ಅಕ್ಷಯದೊಂದಿಗೆ ನಾನೂ ಬೆಳೆದಿದ್ದೇನೆ. ಮತ್ತೆನೇಕರೂ ಬೆಳೆದಿದ್ದಾರೆ. ನಾರಾಯಣ ಗುರುಗಳಿಂದ ಪ್ರೇರಿತನಾದ ನಾನು ಬಹಳಷ್ಟು ಸಂಪಾದಿಸಿದ್ದೇನೆ. ಅದ್ದರಿಂದ ಈ ಪ್ರಶಸ್ತಿಯನ್ನು ನಾನು ಗುರುಗಳಿಗೆನೇ ಸಮರ್ಪಿಸಿದ್ದೇನೆ ಎಂದು ಎಂ.ಬಿ ಕುಕ್ಯಾನ್ ಅಭಿಪ್ರಾಯ ಪಟ್ಟರು.
ಈ ಬಾರಿಯೂ ಯೋಗ್ಯ ವ್ಯಕ್ತಿಗೆ ಈ ಪ್ರಶಸ್ತಿ ಸಂದಿದೆ ಎಂದ ಸುನೀತಾ ಶೆಟ್ಟಿ, ಚೊಕ್ಕಾಡಿಯವರ ಬರಹ, ಕವಿತೆಗಳ ಬಗ್ಗೆ ಮೆಲುಕು ಹಾಕಿದರು. ಅಂತೆಯೇ ಎಂ.ಬಿ ಕುಕ್ಯಾನ್ ಬಗ್ಗೆ ಅಲೆವೂರು ಬರೆದ ಕೃತಿಯೂ ಶ್ಲಾಘನೀಯ. ಸಮಾಜದಲ್ಲಿ ಸರ್ವೋತ್ಕೃಷ್ಟ ಸೇವೆಗೈದ ಮಹಾನೀಯರನ್ನು ಗುರುತಿಸುವ ಅಗತ್ಯವಿದೆ. ಇದರಿಂದ ಉದಯೋನ್ಮುಖ ಪ್ರತಿಭೆ, ಸಮಾಜ ಸೇವಕರಿಗೆ ಪೆÇ್ರೀತ್ಸಹದಾಯಕ ಆಗುವುದು ಎಂದರು.


ಗುರು ನಾರಾಯಣ ಆವರ ತತ್ವಾನುಸಾರ ಮುನ್ನಡೆಯುವ ಬಿಲ್ಲವ ಸಮಾಜ ಗುರುಗಳ ಅನುಗ್ರಹದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿ ಕೊಂಡು ಅರ್ಹ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿದೆ. ಇಂತಹ ಪ್ರಶಸ್ತಿ ಒಂದು ಉತ್ತಮ ಮತ್ತು ಆದರ್ಶವಾದ ಕಾಯಕವಾಗಿದೆ. ಭವಿಷ್ಯತ್ತಿನುದ್ದಕ್ಕೂ ಈ ಪ್ರಶಸ್ತಿ ಯೋಗ್ಯವಕ್ತಿಗಳಿಗೆ ಪ್ರಾಪ್ತಿಯಾಗಲಿ. ಇದು ಯುವ ಪೀಳಿಗೆಯೂ ಮಾದರಿಯಾಗಬೇಕು. ಬಿಲ್ಲವ ಸಂಸ್ಥೆಯೂ, ಸಮಾಜವು ಸಾಹಿತಿಕವಾಗಿಯೂ ಸಾಮರಸ್ಯಮಯವಾಗಿ ಮುನ್ನಡೆಯುತ್ತಿರಲಿ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ನ್ಯಾ| ರಾಜ ವಿ.ಸಾಲ್ಯಾನ್, ಶಂಕರ ಡಿ.ಪೂಜಾರಿ, ಡಾ| ಯು.ಧನಂಜ ಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾ ನ್ ವೇದಿಕೆಯಲ್ಲಿ ಆಸೀನರಾಗಿದ್ದು ಬಿಲ್ಲವರ ಭವನದಲ್ಲಿ ಈ ಹಿಂದೆ ಸೇವಾನಿರತರಾಗಿದ್ದು ಇತ್ತೀಚೆಗೆ ಡಾಕ್ಟರೇಟ್ ಸನದು ಪ್ರಾಪ್ತಿಸಿದ ಡಾ| ಮೋಹನ್ ಬೊಳ್ಳಾರು ಅವರನ್ನು ಅಭಿನಂದಿಸಿ ಗೌರವಿಸಿದರು.

ಮಮತಾ ಆರ್.ನಾಯಕ್ ಪ್ರಾರ್ಥನೆಯನ್ನಾಡಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಜಯರಾಮ ಜಿ.ನಾಯಕ್ ಪುರಸ್ಕೃತರನ್ನು ಪರಿಚಯಿಸಿದ ರು. ಅಕ್ಷಯ ಸಹ ಸಂಪಾದಕ ಹರೀಶ್ ಹೆಜ್ಮಾಡಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಸತೀಶ್ ಎನ್.ಬಂಗೇರ ಅಭಾರ ಮನ್ನಿಸಿದರು.

ಮನೋರಂಜನಾ ಕಾರ್ಯಕ್ರಮವಾಗಿ ಶ್ರೀ ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾಥಿರ್üಗಳು ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಡಾ| ರಮೇಶ್ ಕುಬಲ್ ಅವರು ಮರಾಠಿ ಭಾಷೆಯಲ್ಲಿ ರಚಿಸಿ ಕಾವ್ಯ ಕಣಂಜಾರ್ ತುಳು ಭಾಷೆಗೆ ಅನುವಾದಿಸಿ ಗುರುನಾರಾಯಣ ನಾಟಕೋತ್ಸವದಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕøತ `ಕುಡೊಂಜಿ ಕತೆ' ತುಳು ನಾಟಕÀವನ್ನು ಮಧುಕರ್ ಮಾನೆ ನಿರ್ದೇಶನ ಹಾಗೂ ಸದಾಶಿವ ಎ.ಕರ್ಕೇರ ಮತ್ತು ಗಣೇಶ ಸುವರ್ಣ ಇವರ ಪ್ರಾಯೋಜಕತ್ವದಲ್ಲಿ ಅಸೋಸಿಯೇಶನ್‍ನ ನಲ್ಲಸೋಫರಾ-ವಿರಾರ್ ಸ್ಥಳೀಯ ಸಮಿತಿ ಸದಸ್ಯರು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಧರ್ಮೇಶ್ ಎಸ್.ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here