Monday 29th, April 2024
canara news

ಸ್ವಾತಂತ್ರ್ಯ ಹೋರಾಟಗಾರ-ಮಾಜಿ ನಗರ ಸೇವಕ `ಕೃಷ್ಣ ಡಿ.ಶೆಟ್ಟಿ' ನಿಧನ

Published On : 28 May 2018   |  Reported By : Rons Bantwal


ಮುಂಬಯಿ,: ಮುಂಬಯಿ ಉಪನಗರದ ಅಂಧೇರಿ ಪರಿಸರದಲ್ಲಿ ಅನೇಕ ದಶಕಗಳಿಂದ ಸೇವಾ ನಿರತ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ವಿಟ್ ಇಂಡಿಯಾ ಚಳುವಳಿಗಾರ, ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ, ರಾಜಕೀಯ ಧುರೀಣ, ಕಾಂಗ್ರೇಸ್ (ಐ) ಪಕ್ಷದ ಧುರೀಣ, ಮಾಜಿ ನಗರ ಸೇವಕ, ಕೃಷ್ಣ ಡಿ.ಶೆಟ್ಟಿ (95.) ಅವರ ಒಂಬತ್ತುವರೆ ದಶಕಗಳ ಸಾರ್ಥಕ ಬದುಕನ್ನು ಪೂರೈಸಿ ಇಂದಿಲ್ಲಿ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯಲ್ಲಿನ ಕತ್ಯಾಯಿನಿ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನ ನಿವಾಸದಲ್ಲಿ ವಾಸವಾಗಿದ್ದ ಕೃಷ್ಣ ಶೆಟ್ಟಿ ಎಂದಿನಂತೆ ತನ್ನ ದೈನಂದಿನ ಕ್ರಿಯೆಗಳನ್ನು ಪೂರೈಸಿ ಮಕ್ಕಳೊಂದಿ ಗೆ ಮಾತುಕತೆ ನಡೆಸುತ್ತಿದಂತೆಯೇ ತೀವ್ರ ಹೃದಯಾಘಾತಕ್ಕೊಳಪಟ್ಟು ಕೊನೆಯುಸಿರೆಳೆದರು.

ಮೂಲತ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮುದ್ರಾಡಿ ಮೇಲ್ಮನೆ ನಿವಾಸಿ ಆಗಿದ್ದು, ಮುಂಬಯಿಗೆ ಸೇರಿ ಅಂಧೇರಿಯಲ್ಲಿ ಮಂಗ್ಳೂರು ಸ್ಟೋರ್ ನಡೆಸುತ್ತಿದ್ದಂತೆಯೇ ನಿರಂತರ ವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು. ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇವರು ಅಂಧೇರಿ ತಾಲೂಕು ಅಧ್ಯಕ್ಷರಾಗಿ, ಬ್ಲಾಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.1973ರ ಸಾಲಿನಿಂದ ಸುಮಾರು ಇಪ್ಪತ್ತು ವರ್ಷಗಳಿಂದ ಬೃಹನ್ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಅಂಧೇರಿ ಪೂರ್ವದ ನಗರ ಸೇವಕರಾಗಿದ್ದರು. ಅಂಧೇರಿ ಪಶ್ಚಿಮದ ಗ್ಯಾನ್ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ ಇದರ ಸ್ಥಾಪಕ ಟ್ರಸ್ಟಿಯಾಗಿ, ಶ್ರೀಮತಿ ನರ್ಸಮ್ಮ ದುಗ್ಗಯ್ಯ ಶೆಟ್ಟಿ ಹಿರಿಯ ಪ್ರಾಥಮಿಕ ಶಾಲೆ ಮುದ್ರಾಡಿ ಇದರ ಸ್ಮಾರಕ ಸ್ಥಾಪಕಾಧ್ಯಕ್ಷರಾಗಿ ಜನಾನುರೆಣಿಸಿದ್ದರು. ಸಾಮಾಜಿಕ ಸೇವಾಕರ್ತರಾಗಿ ಶ್ರಮಿಸಿದ್ದ ಇವರ ಸೇವೆ ಗೌರವಿಸಿ ಅವರ ಸಾವಿರಾರು ಅಭಿಮಾನಿ ಬಳಗವು 2012ರಲ್ಲಿ ಕೃಷ್ಣ ಶೆಟ್ಟಿ ಅವರ 90ರಹುಟ್ಟು ಸಂಭ್ರಮ ಅದ್ದೂರಿಯಾಗಿ ನಡೆಸಿ ಕೃಷ್ಣ ಡಿ.ಶೆಟ್ಟಿ ಮತ್ತು ಶ್ರೀಮತಿ ಸುಶೀಲಾ ಕೆ.ಶೆಟ್ಟಿ ದಂಪತಿಯನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಿ ಶತಾಯುಷ್ಯದ ಜೀವನಕ್ಕಾಗಿ ಶುಭ ಹಾರೈಸಿದ್ದರು. ಮೃತರು ಸುಧಾಕರ್ ಶೆಟ್ಟಿ, ಮನ್ಮಥ ಶೆಟ್ಟಿ (ಕಾಂಗ್ರೇಸ್ ಧುರೀಣ), ಮೋಹನ್‍ದಾಸ್ ಶೆಟ್ಟಿ, ಗಣೇಶ್ ಶೆಟ್ಟಿ (ನಾಲ್ಕು ಗಂಡು), ಮೂರು ಹೆಣ್ಣು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾೈಕ್ (ಅಳಿಯ) ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಕೃಷ್ಣ ಶೆಟ್ಟಿ ನಿಧನಕ್ಕೆ ಗಣ್ಯರ ಸಂತಾಪ:
ಅಗಲಿದ ಹಿರಿಯ ಚೇತನ ಕೃಷ್ಣ ಶೆಟ್ಟಿ ನಿಧನಕ್ಕೆ ಮಹಾರಾಷ್ಟ್ರ ರಾಜ್ಯದ ಮಾಜಿ ಆರೋಗ್ಯ ಸಚಿವ ಸುರೇಶ್ ಹೆಚ್.ಶೆಟ್ಟಿ, ಎನ್‍ಸಿಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಪೂಜಾರಿ, ಉಳೆಪಾಡಿಗುತ್ತು ರಾಜೇಶ್ ನಾೈಕ್, ಮಾಜಿ ಶಾಸಕ ಕೃಷ್ಣ ಹೆಗ್ಡೆ, ಉದ್ಯಮಿಗಳಾದ ಸುಧೀರ್ ವಿ.ಶೆಟ್ಟಿ (ಚರೀಶ್ಮಾ), ಮುದ್ರಾಡಿ ದಿವಾಕರ ಶೆಟ್ಟಿ, ಚಂದ್ರಹಾಸ ಕೆ.ಶೆಟ್ಟಿ (ಮಹಾರಾಜ್), ರವಿ ಎಸ್.ಶೆಟ್ಟಿ (ಸಾಯಿ ಪ್ಯಾಲೇಸ್), ಕಾಂಗ್ರೇಸ್ ಚಂದ್ರ ಶೆಟ್ಟಿ, , ಶಿವಸೇನಾ ಮಾಜಿ ನಗರ ಸೇವಕ ಸುಭಾಶ್ ಸಾವಂತ್, ಮಾಜಿ ನಗರ ಸೇವಕ ಕ್ಲೈವ್ ಡಾಯಸ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಾರ್ವಜನಿಕ ದರ್ಶನ-ಅಂತ್ಯಕ್ರಿಯೆ
ಇಂದು ಮಂಗಳವಾರ (ಮೇ.29) ಬೆಳಿಗ್ಗೆ ಕೃಷ್ಣ ಶೆಟ್ಟಿ ಪಾರ್ಥೀವ ಶರೀರವನ್ನು ಬೆಳಿಗ್ಗೆ 8.00 ಗಂಟೆಯಿಂದ ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರಸ್ತೆಯಲ್ಲಿನ ಕತ್ಯಾಯಿನಿ ರೆಸಿಡೆನ್ಸಿ ಅಪಾರ್ಟ್‍ಮೆಂಟ್‍ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು. ನಂತರ ಅಂತ್ಯಕ್ರಿಯೆಯು ಪೂರ್ವಾಹ್ನ ಸುಮಾರು 10.30 ಗಂಟೆಗೆ ಅಂಧೇರಿ ಪೂರ್ವದ ಚಕಲಾ ಅಲ್ಲಿನ ಪಾರ್ಸಿವಾಡ ರುಧ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ. (ಚಿತ್ರ / ವರದಿ: ರೋನ್ಸ್ ಬಂಟ್ವಾಳ್)




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here