Monday 29th, April 2024
canara news

ದ ಅಮೇರಿಕಾ TUFTS UNIVERSITY ಯಿಂದ ಮೂರನೇ ಗ್ರಂಥ ಬಿಡುಗಡೆ

Published On : 31 May 2018   |  Reported By : Rons Bantwal


ಮುಂಬಯಿ, ಮೇ.30: ಕಲಾಬದುಕಿನಲ್ಲಿ ಇದು ಬಹಳ ಅಮೂಲ್ಯವಾದ ಮಹತ್ವಪೂರ್ಣವಾಗಿದ್ದು ಕಲೆಗೆ ನ್ಯಾಯ ನೀಡುವ ಕೆಲಸವಾಗಿತ್ತು. ಈ ಕೆಲಸಕ್ಕೆ ಸಂಬಂದಿಸಿದಂತೆ ಮೊದಲು ಪತ್ರ ಬಂದಾಗ ನಾನು ನಂಬಲೇ ಇಲ್ಲ. ವೈದ್ಯಕೀಯ ಕಲೆಯ ಬಗ್ಗೆ ಅಂದು ಪಡೆದ ತರಬೇತಿ ನಿವೃತ್ತಿಯ ಬಳಿಕ ಅಮೇರಿಕಾದಂತಹ ಪ್ರತಿಷ್ಠಿತ ಸಂಸ್ಥೆಯ ಕೆಲಸಕ್ಕೆ ಸಹಕಾರಿಯಾಗುವುದೆಂದು ನಾನು ಎಣಿಸಿರಲಿಲ್ಲ. ವಿಶ್ವಾಸದಿಂದ ಕೊಟ್ಟ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಅದು ಖುಷಿ ತೃಪ್ತಿ ನೀಡಿದೆ.

ಈಜಿಪ್ಟ್, ಆಸ್ಟ್ರೇಲಿಯಾ ಕಲಾವಿದರ ಕಲಾಕೃತಿಗಳು ನಿರೀಕ್ಷಿತ ಮಟ್ಟದಲ್ಲಿ ಮೂಡಿ ಬಾರದ ಹಿನ್ನೆಲೆಯಲ್ಲಿ ಅಮೇರಿಕಾ ವೈದ್ಯಕೀಯ ಪಠ್ಯ ಪುಸ್ತಕಕ್ಕೆ ಜಗತ್ತಿನ ಶ್ರೇಷ್ಠ ಸಂಶೋಧನಾ ವಿಶ್ವವಿದ್ಯಾಲಯ ಅಮೇರಿಕಾ TUFTS UNIVERSITY ? LINUS LEARNING PUBLICATION A REGIONAL APPROACH TO THE DISSECTION OF THE DOG 2nd Edition ಗಾಗಿ ಕಲಾವಿದ ಪಿ. ಎನ್. ಆಚಾರ್ಯರಿಂದ ಚಿತ್ರ ರಚಿಸಲ್ಪಟ್ಟಿದೆ. (ಇದು ಪಿ. ಎನ್. ಆಚಾರ್ಯ ಬರೆದ ಪೂರ್ಣ ಪ್ರಮಾಣದ ಚಿತ್ರ ಇರುವ 3ನೇ ಗ್ರಂಥ) ಈ ಮೂರು ಗ್ರಂಥಗಳು ಜಪಾನ್ ಮತ್ತು ಚೀನಾ ಭಾಷೆಯಲ್ಲಿಯೂ ಪ್ರಕಟಗೊಂಡಿದೆ. A REGIONAL APPROACH TO THE DISSECTION OF THE DOG ಈ ಗ್ರಂಥವು 400 ಪುಟಗಳನ್ನು ಹೊಂದಿದ್ದು 9 ಚಾಪ್ಟರ್ ಹೊಂದಿದ್ದು ಈ 9 ಚಾಪ್ಟರ್ ಗಳಲ್ಲಿ ಸುಮಾರು 450 ರ ಮೇಲೆ ಚಿತ್ರಗಳಿವೆ. ಈ ಚಿತ್ರ ರಚಿಸಲು ಸುಮಾರು ಒಂದು ವರ್ಷ ಅವಧಿ ಬೇಕಾಗಿತ್ತು.

ಕೋರಿಯರ್,ಅಂಚೆ, ಈ-ಮೇಲ್ ಮೂಲಕ ಬರುವ ಫೋಟೋ ಸ್ಕಚ್ ಮಾಹಿತಿ ಅನುಗುಣವಾಗಿ ಚಿತ್ರ ರಚಿಸಲಾಯಿತು. ನಾಯಿಯ ದೇಹದೊಳಗಿನ ಅಂಗಾಂಗಗಳನ್ನು ಅತ್ಯಂತ ನಿಖರವಾಗಿ ಪ್ರಮಾಣ ಬದ್ದವಾಗಿ ಬರೆಯಲಾಗಿದೆ. ಈ ಚಿತ್ರಗಳು ಜಲವರ್ಣದಿಂದ ರಚಿಸಲಾಗಿದೆ. ಎಲ್ಲಾ ಚಿತ್ರಗಳು ಸಕ್ಷ್ಮಾತಿ ಸೂಕ್ಷ್ಮತೆ ಹೊಂದಿದ್ದು ರೋಟರಿ ಪೆನ್ ನಂಬರ್ 1,2,3 ರಲ್ಲಿ ಚಿತ್ರಿಸಲಾಗಿದೆ.
ಪಶು ವೈದ್ಯಕೀಯ ಅಂತಿಮ ಮಾಸ್ಟರ್ ಪದವಿ ಪರೀಕ್ಷೆಯಲ್ಲಿ ಸ್ವರ್ಣ ಪದಕ ಪಡೆದ ಡಾ| ಎಂ. ಎಸ್. ಎ. ಕುಮಾರ್ ನೈಜೀರಿಯಾ ಮಸಾಕ ಬಳಿಕ ಅಮೇರಿಕಾದ ಟಪ್ಫ್ ವಿ.ವಿ ಯಲ್ಲಿ 3 ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಇಂಟರ್ ನ್ಯಾಷನಲ್ ಜರ್ನಲ್ ಆರ್ಫ ಪ್ಲಾಸ್ಟಿನೇಶನ್ ಸಂಪಾದಕೀಯ ಮಂಡಳಿಯಲ್ಲಿ ಇವರ ಸೇವೆ ಅಪಾರವಾದುದು.
P.N.Acharya (Mob : 9449451671)




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here