Monday 29th, April 2024
canara news

ಜಡಿ ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಭೇಟಿ

Published On : 31 May 2018   |  Reported By : Rons Bantwal


ಬಂಟ್ವಾಳ: ಮಂಗಳವಾರ ಸುರಿದ ಜಡಿ ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಈ ಬಗ್ಗೆ ತುರ್ತ ಕ್ರಮಕ್ಕೆ ಸ್ಥಳದಿಂದಲೇ ಅಧಿಕಾರಿಗಳಿಗೆ ಸೂಚಿಸಿದರು.

ನರಿಕೊಂಬು ಗ್ರಾಮದಲ್ಲಿ ವಿಶ್ವನಾಥ ಹಾಗೂ ಬಾಬು ಎಂಬವರ ಮನೆ ಗೋಡೆ ಕುಸಿದು ಹಾನಿಯಾಗಿದ್ದರೆ, ಎರಿಮಲೆ ಕಾಡೆದಿ ದೇವಸ್ಥಾನದ ಮುಂಭಾಗದಲ್ಲಿ ಮಣ್ಣು ಕುಸಿದಿದ್ದು,ಈ ಬಗ್ಗೆ ನಷ್ಟದ ಕುರಿತು ಅಂದಾಜಿಸುವಂತೆ ಸೂಚಿಸಿದರು. ತೋಟದಲ್ಲಿ ತುಂಬಿದ ನೀರು : ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲ್ ಸಂಬಾರಗುರಿ ಎಂಬಲ್ಲಿ ಸುಮಾರು 4.50 ಎಕ್ರೆ ಪ್ರದೇಶದ ಅಡಕೆ ತೋಟದಲ್ಲಿ ನೀರು ತುಂಬಿದೆ.
ಇಲ್ಲಿನ ಸುನೀತ ಚಂದ್ರಶೇಖರ ಎಂಬವರಿಗೆ ಸೇರಿದ 3.50 ಎಕ್ರೆ ಅಡಕೆ ತೋಟದಲ್ಲಿ ನೀರು ನಿಂತಿದ್ದಲ್ಲದೆ ಗಾಳಿಗೆ ಸುಮಾರು 20 ಕ್ಕೂ ಹೆಚ್ಚು ಫಲಭರಿತ ಅಡಕೆ ಗಿಡಗಳು ಧರಾಶಾಹಿಯಾಗಿದೆ.ಹಾಗೆಯೇ ಪಕ್ಕದ ಕೃಷಿಕರ ತೋಟದಲ್ಲೂ ನೀರು ತುಂಬಿದೆ. ಮಂಗಳೂರಿಗೆ ಕುಡಿಯುವ ನೀರು ಪೂರೈಕೆಗಾಗಿ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ನೀರು ಸಂಗ್ರಹಕ್ಕೆ ಆರು ಮೀಟರ್ ಗೆ ಹಾಕಲಾದ ಹಲಗೆಯನ್ನುತೆರವುಗೊಳಿಸದಿರುವುದರಿಂದ ಸಾಂಬಾರಗುರಿ ಪ್ರದೇಶದಲ್ಲಿ ತೋಟಗಳಿಗೆ ನೀರು ನುಗ್ಗಿ ಮುಳುಗಡೆಯಾಗಿದ್ದು, ಅಡಕೆ ತೋಟಕ್ಕೆ ಅಪಾರ ನಷ್ಟ ವುಂಟಾಗುವ ಆತಂಕ ಕೃಷಿಕರನ್ನು ಕಾಡಿದೆ.ಇದನ್ನು ಪರಿಶೀಲಿಸಿ ಸಂತ್ರಸ್ತೆ ಸುನೀತಾ ಚಂದ್ರಶೇಖರ್ ಅವರಿಂದ ಮಾಹಿತಿ ಪಡೆದ ಶಾಸಕ ಯು.ರಾಜೇಶ್ ನಾಯ್ಕ್ ಅವರು,ತಕ್ಷಣ ತಾಲೂಕು ತೋಟಗಾರಿಕಾ ಇಲಾಖಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಷ್ಟದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು. ಡ್ಯಾಂನಿಂದ ನೀರು ನಿಲುಗಡೆಗೊಳಿಸುವ ಸಂದರ್ಭ ಮುಳುಗಡೆಯಾಗುವ ಕೃಷಿ ಭೂಮಿಯ ಸಂತ್ರಸ್ಥ ರೈತರಿಗೆ ಪರಿಹಾರ ನೀಡದ ಕುರಿತು ಶೀಘ್ರವೇ ಜಿಲ್ಲಧಿಕಾರಿಯವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಸಂತ್ರಸ್ಥರಿಗೆ ಭರವಸೆ ನೀಡಿದರು. ಸಜೀಪ ಮುನ್ನೂರುಗ್ರಾಮದ ಅಲಾಡಿ ಜುಮಾದಿ ದೈವಸ್ಥಾನದ ತಡೆಗೋಡೆ ಸಂಪೂರ್ಣ ಕುಸಿದಿದ್ದು, ಇದನ್ನು ಪರಿಶೀಲಿಸಿದ ಶಾಸಕ ರಾಜೇಶ್ ನಾಯ್ಕ್ ಇದರ ನಷ್ಟದ ಬಗ್ಗೆ ಅಂದಾಜಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಕೈ ಕಟ್ಟಿದ ನೀತಿ ಸಂಹಿತೆ:

ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಪರಿಷತ್ತಿನ ಶಿಕ್ಷಕರ ಮತ್ತು ಪಧವೀಧರ ಕ್ಷೇತ್ರದ ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳ ಕೈ ಕಟ್ಟಿದೆ. ಶಾಸಕರು,ಇತರೆ ಜನಪ್ರತಿನಿಧಿಗಳಿದ್ದರೂ ಈಗ ಅಧಿಕಾರಿಗಳದ್ದೆ ಕಾರುಬಾರು ಅಗಿದ್ದು, ಮಳೆಯಿಂದ ಹಾನಿಗೀಡಾದ ಕೆಲವೊಂದು ಪ್ರದೇಶಗಳಿಗೆ ಮಾತ್ರ ತಹಶೀಲ್ದಾರರು ಮತ್ತವರ ಕೈ ಕೆಳಗಿನ ಸಿಬ್ಬಂದಿಗಳ ಜೊತೆಗೂಡಿ ತೆರಳಿ ಪರಿಶೀಲನೆ ನಡೆಸಿದರು.ಬುಧವಾರ ಶಾಸಕರು ಹಾನಿಗೀಡಾದ ಪ್ರದೇಶಕ್ಕೆ ತೆರಳಿದಾಗ ನೀತಿ ಸಂಹಿತೆಯ ನೆಪವನ್ನು ಮುಂದಿಟ್ಟು ಅಧಿಕಾರಿಗಳ್ಯಾರು ಸ್ಥಳಕ್ಕೆ ಬಾರದಿದ್ದು,ಶಾಸಕರು ದೂರವಾಣಿ ಮೂಲಕವೇ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಾರ್ಯಕ್ಕೆ ಸೂಚಿಸಬೇಕಾಯಿತು.

ಶಾಸಕರ ಜೊತೆಗೆ ತಾಪಂ ಸದಸ್ಯ ಪ್ರಭಾಕರ ಪ್ರಭು,ಕ್ಷೇತ್ರ ಬಿಜೆಪಿ ಸಮಿತಿ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ್,ಎಪಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ,ಪ್ರಮುಖರಾದ ಗಣೇಶ್ ರೈ ಮಾಣಿ,ರಮಾನಾಥ ರಾಯಿ,ದಿನೇಶ್ ಅಮ್ಟೂರು, ನರಿಕೊಂಬು ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಮಾಜಿ ತಾಪಂ ಸದಸ್ಯ ಆನಂದ ಶಂಭೂರು,ಪುರುಷೋತ್ತಮ ಟೈಲರ್ ,ಪ್ರವೀಣ ಗಟ್ಟಿ,ಅರವಿಂದ ಭಟ್,ರಮೇಶ್ ರಾವ್ ಸಂತೋಷ ಗುಂಡಿಮಜಲು ಮೊದಲಾದವರಿದ್ದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here