Saturday 4th, May 2024
canara news

ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಶ್ರೇಣಿಗೆ ಚಾಲನೆಯನ್ನಿತ್ತ ಮುಂಬಯಿ ಕನ್ನಡ ಸಂಘ

Published On : 16 Jul 2018   |  Reported By : Rons Bantwal


ಭಾಷಾ ಪರಿಣತಿಯಿಂದ ಜಾಗತಿಕ ಜ್ಞಾನ ಪ್ರಾಪ್ತಿ: ಅಮಿತಾ ಎಸ್.ಭಾಗ್ವತ್     

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.17: ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರಕ್ಕೆ ಪಾತ್ರವಾದ ಕನ್ನಡಿಗರ ಭಾಷೆ ಭೌಗೋಳಿಕವಾಗಿಯೇ ಪಸರಿಸಿದೆ.ಭಾಷಾ ಪರಿಣತಿಯಿಂದ ಜಾಗತಿಕ ಜ್ಞಾನ ಹೆಚ್ಚುತ್ತದೆ ಮತ್ತು ಆಯಾ ಭಾಷೆಗಳಲ್ಲಿನ ಸಾಹಿತ್ಯ ಸಂಸ್ಕೃತಿಯ ಅರಿವು ಆಗುವುದು. ಆದುದರಿಂದ ಅವಕಾಶ ಒದಗಿದಾಗ ಅಧಿಕ ಭಾಷೆಗಳನ್ನು ಒಲಿಸಿಕೊಳ್ಳಬೇಕು. ಅದು ನಮ್ಮ ಭಾಗ್ಯವಾಗಿ ಪರಿಣಮಿಸಬಲ್ಲದು ಎಂದು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ, ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಕಾನೂನು ಸಲಹಾಗಾರ್ತಿ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್ ಅಭಿಪ್ರಾಯ ಪಟ್ಟರು.

ಮುಂಬಯಿ ಕನ್ನಡ ಸಂಘ ವಾರ್ಷಿಕವಾಗಿ ಆಯೋಜಿಸುತ್ತಿರುವ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಉದ್ಘಾಟನೆ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಮಾಟುಂಗದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹಲ್ಲಿ ಜರುಗಿಸಲಾಗಿದ್ದು ಅಮಿತಾ ಭಾಗ್ವತ್ ದೀಪ ಬೆಳಗಿಸಿ 2018-19ನೇ ಸಾಲಿನ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ನ ಚಾಲನೆ ನೀಡಿ ಕನ್ನಡ ಕಲಿಕಾ ವಿದ್ಯಾಥಿರ್üಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿದರು.

ಮುಂಬಯಿ ನೆಲದಲ್ಲಿ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಬೆಳೆಸುತ್ತಾ ಕನ್ನಡದ ಎಲ್ಲಾ ಮನಸ್ಸುಗಳನ್ನು ಒಟ್ಟುಗೂಡಿಸುತ್ತಾ ಕನ್ನಡದ ಸಾಹಿತ್ಯ, ಅಭಿರುಚಿಯನ್ನು ಹುಟ್ಟುಹಾಕುತ್ತಾ ಅದಕ್ಕೆ ನೀರೆರೆದು ಪೆÇೀಷಿಸುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಈ ಸಂಘದ ಭಾಷಾಭಿಮಾನ ಸ್ತುತ್ಯಾರ್ಹ. ಭಾರತೀಯ ಎಲ್ಲಾ ಭಾಷೆಗಳೂ ಬೇರೆಯಾಗಿದ್ದರೂ ಸಂಸ್ಕೃತಿ ಮಾತ್ರ ಒಂದಾಗಿದೆ. ಎಲ್ಲಾ ಭಾಷೆಗಳೂ ಮೌಲ್ಯಯುತವಾಗಿವೆ ಎಂದು ವಿವಿಧತೆಯಲ್ಲಿ ಕನ್ನಡದ ಹಿರಿಮೆಯನ್ನು ಕಾವ್ಯತ್ಮಕವಾಗಿ ಬಣ್ಣಿಸಿ ನೆರೆದ ಕನ್ನಡಾಭಿಮಾನಿಗಳಿಗೆ ಭಾಗ್ವತ್ ಹಿತವಚನಗಳನ್ನಾಡಿದರು.

ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ ಪ್ರಸ್ತಾವನೆಗೈದÀÀು ಕನ್ನಡದ ಕೃಷಿಗೆ ಇದೊಂದು ಪೂರಕ ಕಾಯಕವಾಗಿದೆ. ಸಂಘವು ಸದಾ ಕ್ರೀಯಾಶೀಲವಾಗಿ ಈ ತರಗತಿಗಳನ್ನು ನಡೆಸುತ್ತಾ ಕನ್ನಡಿಗೇತರಲ್ಲೂ ಭಾಷೆಯನ್ನು ಪಸರಿಸುತ್ತಿದೆ. ಇಲ್ಲಿನ ಶಿಕ್ಷಕರಿಗೆ ಶಿಷ್ಯಇಚ್ಛೆಯೇ ಪ್ರೇರಣೆಯಾಗಿದೆ. ನನ್ನ ಸೌಭಾಗ್ಯವತಿಯೂ 15 ವರ್ಷ ತರಗತಿ ನಡೆಸಿ ಕನ್ನಡಾಂಭೆಯ ಸೇವೆಗೈದಿದ್ದರು. ಸುಮಾರು 25 ವರ್ಷಗಳಿಂದ ಹೊರನಾಡಿನಲ್ಲಿ ಭಾಷಾಭಿಮಾನ ಬೆಳೆಸಿ ಉಳಿಸಿ ಕಲಿಸಿ ಮುನ್ನಡೆಯುತ್ತಿರುವುದು ಸ್ವಾಭಿಮಾನವೇ ಸರಿ. ಯಾವ ಭಾಷೆಯನ್ನೂ ಯಾಕೆ ಕಲಿಯಬೇಕು ಎನ್ನುವುದಕ್ಕಿಂತ ಎಲ್ಲಾ ಭಾಷೆಗಳನ್ನು ಕಲಿತು ಬಹುಭಾಷಾ ಮೇಧಾವಿಗಳಾಗಬೇಕು ಎನ್ನುವ ಮನೋಭಾವ ದೊಡ್ಡದು. ಬಹುಭಾಷೆಗಳಿಂದ ಸಹೋದರತೆ ಬೆಳೆಯುತ್ತದೆ. ಆದುದರಿಂದಲೇ ಭಾಷಾ ಮಾಧ್ಯಮ ಸೌಹಾರ್ದತೆಗೆ ಪೂರಕ ಎಂದರು.

ಸಂಘದ ಕನ್ನಡ ತರಬೇತಿ ಶಿಕ್ಷಕಿ ಅರ್ಚನಾ ಪೂಜಾರಿ ಮಾತನಾಡಿ ಮರಾಠಿ ನೆಲದಲ್ಲಿ ಕನ್ನಡಿಗೇತರಿಗೆ ಕನ್ನಡ ಕಲಿಸುವುದು ನನ್ನ ಸೌಭಾಗ್ಯವೇ ಸರಿ. ಅವರಲ್ಲಿನ ಭಾಷಾಭಿಮಾನ ನನ್ನನ್ನು ಪೆÇ್ರೀತ್ಸಾಹಿಸಿದೆ ಎನ್ನುತ್ತಾ ಕನ್ನಡ ಅಭ್ಯಾಸಿಸಿ ತೇರ್ಗಡೆಯಾದ ವಿದ್ಯಾಥಿರ್üಗಳಿಗೆ ಶುಭಾರೈಸಿದರು.

ಇಂಡಿಯನ್ ವ್ಹರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಆ್ಯಂಡ್ ಎಜ್ಯುಕೇಶನ್ ಬೆಂಗಳೂರು ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಗೌರವ ಡಾಕ್ಟರೇಟ್‍ಗೆ ಪಾತ್ರರಾದ ಮತ್ತು ಇತ್ತೀಚೆಗೆ ಬೆಂಗಳೂರುರತ್ನ ಮಾಸಿಕದಿಂದ ಬೆಂಗಳೂರು ರತ್ನ-2018 ಪ್ರಶಸ್ತಿಗೆ ಭಾಜನರಾದ ಕನ್ನಡ ಸಂಘದ ಮಹಿಳಾ ವಿಭಾಗಧ್ಯಕ್ಷೆ ಡಾ| ರಜನಿ ವಿ.ಪೈ ಅವರಿಗೆ ಸಂಘದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.

ಸಂಘದ ವಾಚನಾಲಯ ಮುಖ್ಯಸ್ಥ ಎಸ್.ಕೆ ಪದ್ಮನಾಭ ಸೇರಿದಂತೆ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಹಳೆ ವಿದ್ಯಾಥಿರ್üಗಳೂ ತಮ್ಮ ಕನ್ನಡ ಭಾಷಾ ಕಲಿಕೆಯ ಅನುಭವ ಹಂಚಿಕೊಂಡರು. ಬಳಿಕ ನೂತನ ವಿದ್ಯಾಥಿರ್üಗಳ ಪರಿಚಯ ನಡೆಸಿ ಕನ್ನಡ ಸರ್ಟಿಫಿಕೇಟ್ ಕೋರ್ಸ್‍ಗೆ ಬರಮಾಡಿಕೊಳ್ಳಲಾಯಿತು.

ರಜನಿ ವಿ.ಪೈ ಪ್ರಾರ್ಥನೆ ಹಾಡಿದರು. ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಸ್ವಾಗತಿಸಿ ಅತಿಥಿü ಪರಿಚಯಗೈದರು. ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ ನಗದು ಬಹುಮಾನ ಸ್ವೀಕೃತರ ಹಾಗೂ ಶಾರದಾ ಯು.ಅಂಬೆಸಂಗೆ ಪ್ರಮಾಣಪತ್ರ ಪುರಸ್ಕೃತರ ಪಟ್ಟಿ ವಾಚಿಸಿದರು. ಗೌ| ಜೊತೆ ಕಾರ್ಯದರ್ಶಿ ಸೋಮನಾಥ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ವಂದಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here