Friday 3rd, May 2024
canara news

ಕಲ್ಕಟ್ಟದಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟಿಸಿದ ಸಚಿವ ಯು.ಟಿ.ಖಾದರ್

Published On : 23 Jul 2018   |  Reported By : Rons Bantwal


ಉಳ್ಳಾಲ: ಕಲ್ಕಟ್ಟ ಜಂಕ್ಷನನ್ನು ಸುಸಜ್ಜಿತವಾಗಿ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ರೂಪಿಸಲಾಗುವುದು, ವಿಶೇಷ ಅನುದಾನ ಮಂಜೂರುಗೊಳಿಸಿದ ತಕ್ಷಣವೇ ಜಂಕ್ಷನ್ನಿನ ಚಿತ್ರಣ ಬದಲಾವಣೆಯಾಗಲಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಕಲ್ಕಟ್ಟದ ಎಸ್ಸೆಸ್ಸೆಫ್ ಮತ್ತು ತಕ್ವತುಲ್ ಇಸ್ಲಾಂ ಯಂಗ್‍ಮೇನ್ಸ್ ಅಸೋಶಿಯೆಷನ್ ಇವರು ಮಂಜನಾಡಿ ಗ್ರಾಮದ ಕಲ್ಕಟ್ಟದಲ್ಲಿ ನೂತನವಾಗಿ ನಿರ್ಮಿಸಿದ ಸಾರ್ವಜನಿಕ ಬಸ್ಸು ತಂಗುದಾಣ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಫ್ ಸಂಘಟನೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕವಾಗಿ ತೊಡಗಿಸಿಕೊಂಡು ಪ್ರವಾದಿಯವರ ಸದ್ಗುಣಗಳ ಅಳವಡಿಸಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸುತ್ತಾ ಬಂದಿದೆ. ಇದೀಗ ಎಲ್ಲಾ ಧರ್ಮದ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಬಸ್ಸು ನಿಲ್ದಾಣದ ವ್ಯವಸ್ಥೆಯನ್ನು ಕಲ್ಪಿಸುವ ಮುಖೇನ ವಿವಿಧ ಸಂಘಟನೆಗಳಿಗೆ ಆದರ್ಶವಾಗಿ ನಿಂತಿದೆ. ಕಲ್ಕಟ್ಟ ಪ್ರದೇಶ ಮಂಜನಾಡಿ ಗ್ರಾಮದ ಕೇಂದ್ರ ಭಾಗವಾಗಿದೆ. ಮಂಗಳಾಂತಿ ಎರಡು ಕಣ್ಣುಗಳಾಗಿ ಪರಿವರ್ತನೆಯಾಗಿದೆ. ಪ್ರದೇಶದ ದೇವಸ್ಥಾನ ಮತ್ತು ಮಸೀದಿಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಎಲ್ಲಾ ಧರ್ಮದವರು ಸೇರಿಕೊಂಡು ನಡೆಸುತ್ತಾ ಬರುವುದು ಗ್ರಾಮದ ಜನರ ಸಹೋದರತೆಗೆ ಸಾಕ್ಷಿಯಾಗಿದೆ. ಕಲ್ಕಟ್ಟ ಜಂಕ್ಷನ್ನಿನ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡುವುದು ಹಾಗೂ ಹೈಮಾಸ್ಕ್ ಬೆಳಕು, ಚರಂಡಿ ವ್ಯವಸ್ಥೆ, ಇಂಟರ್‍ಲಾಕ್ ಅಳವಡಿಸಿ ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದರು.

ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಇಝ್ಝುದ್ದೀನ್ ಅಹ್ಸನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಪಿ.ಐ ಮನ್ಸೂರು ರಕ್ಷಿದಿ, ಮಂಜನಾಡಿ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಅಡಳಿತ ಮುಖ್ಯಸ್ಥ ರಾಮ್ ಮೋಹನ್ ಆಳ್ವ ತೆವುನಾಡು ಗುತ್ತು, ಪಾನೀರ್ ದಯಮಾತೆ ಇಗರ್ಜಿಯ ಧರ್ಮಗುರು ಫಾ.ಡೆನಿಸ್ ಸುವಾರಿಸ್, ಅಲ್ಪಸಂಖ್ಯಾತ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಹಾಜಿ ಎನ್.ಎಸ್ ಕರೀಂ, ವಕ್ಫ್ ಸಲಹಾ ಸಮಿತಿ ದ.ಕ ಉಪಾಧ್ಯಕ್ಷ ಅಹ್ಮದ್ ಬಾವಾ, ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಅಸೈ, ಇಲ್ಯಾಸ್ ಜುಮಾ ಮಸೀದಿ ಉಪಾಧ್ಯಕ್ಷರುಗಳಾದ ಹಾಜಿ ಎ.ಎಂ ಕುಂಞ ಬಾವಾ, ಮುಹಮ್ಮದ್ ಅಶ್ರಫ್ ಕಟ್ಟೆ, ಕಾರ್ಯದರ್ಶಿ ಬಶೀರ್, ಮಂಜನಾಡಿ ಗ್ರಾ.ಪಂ ಸದಸ್ಯ ಕೆ.ಪಿ ಅಶ್ರಫ್ , ಅಬ್ದುಲ್ ಖಾದರ್, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ, ಎಸ್‍ವೈಎಸ್ ಕಲ್ಕಟ್ಟ ಶಾಖೆಯ ಅಧ್ಯಕ್ಷ ಮೋನು, ಪ್ರ.ಕಾರ್ಯದರ್ಶಿ ಇಬ್ರಾಹೀಂ ಮದನಿ, ಕೋಶಾಧಿಕಾರಿ ನಾಸೀರ್, ಎಸ್ಸೆಸ್ಸೆಫ್ ಕಲ್ಕಟ್ಟ ಘಟಕದ ಅಧ್ಯಕ್ಷ ಕೆ.ಎಂ ಮುಹಮ್ಮದ್ ಶರೀಫ್, ಕಾರ್ಯದರ್ಶಿ ಬದ್ರುಲ್ ಮುನೀರ್ ತಟ್ಲ ಮುಂತಾದವರು ಉಪಸ್ಥಿತರಿದರು.

ಈ ಸಂದರ್ಭ ನೂತನ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಅಯ್ಕೆಯಾದ ಯು.ಟಿ ಖಾದರ್‍ರವರನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಫ್ ರಾಜ್ಯ ಮುಖಂಡ ಅಬ್ದುರ್ರಹ್ಮಾನ್ ಮುಸ್ಲಿಯಾರ್ ರಝ್ವಿ ಸ್ವಾಗತಿಸಿದರು.ಮುಹಮ್ಮದ್ ಮಾಸ್ಟರ್ ಕಲ್ಕಟ್ಟ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here