Friday 3rd, May 2024
canara news

ಕುದಿ ಕಂಬಳ ಗದ್ದೆಯಲ್ಲಿ ಕೃಷಿ ರೈತಾಪಿ ಮಹಿಳಾ ಮಣಿಯರಿಗೆ ಪುರಸ್ಕಾರ

Published On : 25 Jul 2018   |  Reported By : Rons Bantwal


ಮುಂಬಯಿನ ಸುಧಾಕರ ಶೆಟ್ಟಿ-ಸಂತೋಷ್ ಶೆಟ್ಟಿ ಸಹೋದರರ ಸಾಧನೆ
(ಚಿತ್ರ / ಮಾಹಿತಿ : ರೊನಿಡಾ ಮುಂಬಯಿ)

ಮುಂಬಯಿ, ಜು.25: ಮುಂಬಯಿನಲ್ಲಿ ವೃತ್ತಿಯಲ್ಲಿ ಇಂಟೀರಿಯರ್ ಇಂಜಿನಿಯರ್ ಆಗಿರುವ ಉಡುಪಿ ಸಮೀಪದ ಕುದಿ ಗ್ರಾಮದ ಕುದಿ ಸುಧಾಕರ ಶೆಟ್ಟಿ ಮತ್ತು ಕುದಿ ಸಂತೋಷ್ ಶೆಟ್ಟಿ ಸಹೋದರರ ಪಿತ್ರಾರ್ಜಿತವಾಗಿ ಬಂದ ಒಂದು ಕಾಲದಲ್ಲಿ ನಮಗೆ ಜೀವನಾಡಿ ಆಗಿದ್ದ ತಮ್ಮ ಗದ್ದೆಗಳನ್ನು ಹಡಿಲು ಬಿಡದೆ ಮುಂಬಯಿಯಿಂದ ಆಗಮಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.

ಕೃಷಿ ಪ್ರಧಾನಕಸುಬಾಗಿರುವ ಭಾರತದ ಹಳ್ಳಿಗಳಲ್ಲಿ `ರೈತದೇಶದ ಬೆನ್ನೆಲುಬು' ಎಂಬ ನಾಣ್ಣುಡಿಯಂತೆ ದೇಶ ಸ್ವತಂತ್ರವಾದ ಅಂದಿನಿಂದ ಇವತ್ತಿನವರೆಗೂ ದೇಶದ ರಾಜ್ಯದ ಉದ್ದಗಲಕ್ಕೂ ರೈತರ ಬಗ್ಗೆ ಸಂಸತ್ತಿನಲ್ಲಿ ವಿದಾನ ಸೌಧದಲ್ಲಿ ಬಹಳಷ್ಟು ಚರ್ಚೆಗಳೊಂದಿಗೆ ಸಾಲ ಮನ್ನ ಯೋಜನೆಗಳನ್ನು ಕೈಗೊಂಡರೂ, ಈ ದೇಶದ ಕೃಷಿ ರೈತರ ಸ್ಥಿತಿಗತಿಗಳನ್ನು ಬದಲಾಯಿಸಲು ಸಾಧ್ಯವಾಗಲೇ ಇಲ್ಲ. ಅದರ ಬದಲು ಕೃಷಿ ಪ್ರಧಾನದೇಶವುಕೈಕಾರಿಕಾ ವ್ಯವಹಾರ ಪ್ರಧಾನ ದೇಶವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವುದು.

ಈ ವರ್ಷಉತ್ತಮ ಮುಂಗಾರು ಮಳೆಯಿಂದ ಕೃಷಿಗೆ ಅನುಕೂಲಕರವಾದ ಕರಾವಳಿ ಭಾಗದಲ್ಲಿ ಹಡಿಲು ಬಿದ್ದ ಕೃಷಿಭೂಮಿಯಲ್ಲಿ ಪುನಃ ಭತ್ತದ ನೇಜಿ ನಾಟಿಯಿಂದ ಹಸನು ಗೊಳಿಸಿರುವುದು ಗೋಚರಿಸುತ್ತಿಲ್ಲ. ರೈತಾಪಿ ವರ್ಗದಯುವಜನತೆ ಶೈಕ್ಷಣಿಕ ಸುಶಿಕ್ಷಿತರಾಗುತ್ತಿದ್ದಂತೆ ನಗರ ಪ್ರದೇಶ ಸೇರಿದರು ಅಲ್ಲೊಂದು ಇಲ್ಲೊಂದು ಹಿರಿಯರಿಂದ ಬಂದ ಕೃಷಿಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ.

ಸರಕಾರ ರೈತರ ಋಣ ಪರಿಹಾರಕ್ಕಾಗಿ ಸಾಲಮನ್ನ ಯೋಜನೆಗಳನ್ನು ಜಾರಿಗೆ ತಂದರೂ ಇದರ ಜೊತೆಯಲ್ಲಿ ಕೃಷಿ ಮಹಿಳಾ ಕಾರ್ಮಿಕರನ್ನು ನಾವು ಪೆÇ್ರೀತ್ಸಾಹಿಸ ಬೇಕಾಗಿ ಈ ಸಹೋದರರು 2.5 ಎಕ್ರೆಕೃಷಿಗದ್ದೆಯಲ್ಲಿ 1 ಎಕ್ರೆಯಲ್ಲಿ ಬೀಜ ಬಿತ್ತನೆ ಕೃಷಿಯನ್ನು 1.5 ಎಕ್ರೆಯಲ್ಲಿ ನಾಟಿಯನ್ನು 15 ಮಹಿಳಾ ಕಾರ್ಮಿಕರಿಂದ ಕೃಷಿ ಕಾಯಕವನ್ನು ಕೈಗೊಂಡಿರುವುದು ಸುತ್ಯರ್ಹ ಇದಕ್ಕೆ ಇವರ ಸಹೋದರೀಯ ಮೇಲುಸ್ತುವಾರಿಯೂ ಇದೆ.

ಸುಮಾರು ಮೂರು ತಲೆಮಾರಿನಿಂದ ನಮ್ಮ `ಕುದಿ ಮುಟ್ಟಿಕಲ್ಲುಚೈತ್ರ' ಮನೆಯಲ್ಲಿ ಕೃಷಿ ಕಾರ್ಯಕ್ಕೆ ಸಹಕರಿಸುತ್ತಿದ್ದ ಗಿರಿಜಾ ಸೂರ್ಯ ಮೂಲ್ಯ ಮತ್ತು ಜಲಜ ಪಪ್ಪು ಮೂಲ್ಯ ಇವರು ಸುಮಾರು 75 ರಿಂದ 80 ವರ್ಷದ ವಯಸ್ಸಿನವರಾಗಿದ್ದರೂ ಇಂದಿಗೂ ಕೃಷಿ ಕಾಯಕವನ್ನು ಮಾಡುತ್ತಿದ್ದು ಇವರನ್ನು ಹಸಿರುಸೀರೆ ಕಿಂಚಿತ್ ಧನಸಹಾಯ ಫಲಪುಷ್ಪಗಳಿಂದ ಗೌರವಿಸಲಾಯಿತು. ಸುದೀರ್ಘ ಕಾಲದಿಂದ ಆರೋಗ್ಯವಂತರಾಗಿ ಕೃಷಿ ಕಾಯಕವನ್ನೇ ಜೀವನೋಪಾಯವಾಗಿ ಮಾಡಿಕೊಂಡ ಇವರ ಬೆನ್ನು ಬಾಗಿದೆ. ಕಣ್ಣು ಮಂಜಾಗಿದೆಚರ್ಮ ಸುಕ್ಕುಗಟ್ಟಿದೆ. ಕೈ ಕಾಲಿನಲ್ಲಿ ಶಕ್ತಿ ಗುಂದಿದ ಇವರು ಗೌರವಿಸಿದಕ್ಕೆ ಹರ್ಷ ವ್ಯಕ್ತ ಪಡಿಸುತ್ತಾ ಕೃಷಿ ಕಾರ್ಯದಿಂದ ನಿವೃತ್ತಿಯ ಇಂಗಿತವನ್ನು ವ್ಯಕ್ತಪಡಿಸಿದರು.

ನಾಟಿಯಲ್ಲಿ ತೊಡಗಿದ್ದ ಎಲ್ಲಾ ರೈತಾಪಿ ಮಹಿಳೆಯರನ್ನು ಹಸಿರು ಶಾಲಿನಿಂದ ಗೌರವಿಸಲಾಯಿತು. `ನಮ್ಮಕುಟುಂಬದಿಂದ ಮೂರುತಲೆಮಾರಿನ ಹಿರಿಯರಿಂದ ಕೃಷಿ ಕಾಯಕಕ್ಕೆ ಸಹಕರಿಸುತ್ತಿದ್ದ ಮಹಿಳೆಯರನ್ನು ಗೌರವಿಸುತ್ತಿರುವುದು ನಮ್ಮ ಹಿರಿಯರ ಆಶೀರ್ವಾದದಿಂದ ಅವರಿಗೆ ಸಂದ ಗೌರವ ಎಂದು ಕುದಿ ಸಂತೋಷ್ ಶೆಟ್ಟಿ ಮುಂಬಯಿ ತನ್ನ ಸಾರ್ಥಕತೆಯನ್ನು ನೆನೆದರು.

ಇಂತಹ' ರೈತಾಪಿ ಕೃಷಿ ಕಾರ್ಮಿಕ ಮಹಿಳೆಯರು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿರುವುದು ಹಾಗೂ ಯುವ ಪೀಳಿಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳದಿರುವುದು ಕೃಷಿಯಿಂದರೈತಾಪಿ ವರ್ಗ ಹಿಂಜರಿದರೆ ಮುಂದೆದೇಶದಲ್ಲಿ ಶುದ್ಧ ಆಹಾರದ ಕೊರತೆಯಿಂದ ಜನತೆಯ ಆಯುಷ್ಯಕ್ಕೆ ಕುಂಠಿತ ಆಗಬಹುದು ಎಂದು ಕೃಷಿ ಕಾರ್ಮಿಕ ಮಹಿಳೆಯರನ್ನು ಗೌರವಿಸಿದ ಇಂಜಿನಿಯರ್ ಸೆಲ್ಯೂಶನ್ 1 ಇಂಡಿಯಾ ಲಿಮಿಟೆಡ್ ಮುಖ್ಯಸ್ಥ ಕುದಿ ಸುಧಾಕರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ದೇಶರಕ್ಷಕ, ಶಿಕ್ಷಕ, ವೈದ್ಯ, ರೈತ ಈ ದುಡಿಮೆಯು ಸೇವಾ ಮನೋಭಾವದ ಪವಿತ್ರ ಕಾರ್ಯಗಳು ಎಂದು ನಮ್ಮ ತಂದೆ (ನಿವೃತ್ತ ಮುಖ್ಯ ಶಿಕ್ಷಕರು) ಯಾವಾಗಲೂ ಹೇಳುವರು. ದೇಶದಲ್ಲಿರೈತರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ ರೈತಾಪಿ ಕೃಷಿ ಕಾರ್ಮಿಕರ ಮಹಿಳೆಯರನ್ನು ಕೇಳುವವರೇ ಇಲ್ಲ. ಇಂತಹ ಭೂಮಿ ತಾಯಿಯ ಮಕ್ಕಳಾದ ರಾಮಾಯಣದ ಸೀತಾ ಮಾತೆಯಂತೆ ಮಣ್ಣಿನಕುವರಿಯರ ಬಗ್ಗೆ ಸರಕಾರ ಗಮನ ಹರಿಸಬೇಕು ಎನ್ನುತ್ತಾ ಮುಂದಿನ ದಿನಗಳಲ್ಲಿ ನಮ್ಮ ಕುದಿ ಮುಟ್ಟಿಕಲ್ಲು ಮನೆಯಲ್ಲಿ ಪ್ರತಿ ಆದಿತ್ಯವಾರ ಹಿರಿಯ ಕೃಷಿ ಕಾರ್ಮಿಕ ಮಹಿಳೆಯರಿಗೆ ಆರೋಗ್ಯ ತಪಾಸಣೆ, ಔಷಧ, ಆರೋಗ್ಯ ಮಾಹಿತಿ ಸೇವಾ ರೂಪವಾಗಿ ನೀಡಲಾಗುವುದು ಎಂದು ಡಾ| ತ್ರಿಶಾ ಎಸ್.ಶೆಟ್ಟಿ ತಿಳಿಸಿದರು.

ನಾಡಿದ ಹೆಸರಾಂತ ಕೃಷಿಕ, ಚಿಂತಕ, ಸಾಹಿತಿ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುದಿ ವಸಂತ ಶೆಟ್ಟಿ ಅವರ ಸಹೋದರರರಾದ ಸುಧಾಕರ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಇವರು ಸದಾ ತೆರೆಮರೆಯ ಸಾಧಕರು. ಇವರ ಸಾಧನೆ ಗುರುತಿಸಿ ಬಂಟ್ಸ್ ಸಂಘ ಮುಂಬಯಿ ಬಂಟರ ಭವನದಲ್ಲಿ ಸನ್ಮಾನಿಸಿದೆ.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here