Thursday 2nd, May 2024
canara news

ಕನ್ನಡ ಸಂಘ ಸಾಂತಾಕ್ರೂಜ್ ಸಂಸ್ಥೆಯಿಂದ ವಾರ್ಷಿಕ ಆಷಾಢೋತ್ಸವ ಸಂಭ್ರಮ

Published On : 28 Jul 2018   |  Reported By : Rons Bantwal


ಆಷಾಢ ಮಾತೃಸಂಸ್ಕೃತಿ ಜೀವಾಳವಾಗಿಸುವ ಆಚರಣೆ : ಎಲ್.ವಿ ಅವಿೂನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.28: ವಾರ್ಷಿಕ ಆಷಾಢ ಮಾಸ ಇದೀಗಲೇ ನಮ್ಮ ಬದುಕು ಸೇರಿದೆ. ಪೂರ್ವಜರು ಆ ಕಾಲದ ಅನಾನುಕೂಲತೆ ತಿಳಿದು ಬದುಕು ಮಾರ್ಪಡು ಮಾಡಿದ್ದರೇ ಹೊರತು ದೋಷಗಳಿಂದÀಲ್ಲ. ಏಕೆಂದರೆ ಆಷಾಢ ಮಾಮೂಲಿ ಮಾಸವಲ್ಲ. ಈ ತಿಂಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಹಿಂದೇಟು ಹಾಕುವುದು ಉಚಿತವಲ್ಲ. ಆಚರಣೆಗಳು ಸಂಸ್ಕೃತಿ ರಕ್ಷಣೆಗೆ ಪೂರಕವಾಗಿವೆ. ಇವು ಮಾನವ ಜೀವನ ಸಮತೋಲನೆ ಕಾಯ್ದುಕೊಳ್ಳಲು ಸಹಕಾರಿಯಾಗಿವೆ. ಮಕ್ಕಳನ್ನು ಬರೇ ಸಾಮಾಜಿಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಬೆಳೆಸುವುದು ಉಚಿತವಲ್ಲ. ಬದಲಾಗಿ ಮಕ್ಕಳಲ್ಲಿ ಉತ್ತಮ ಭವಿಷ್ಯ ರೂಪಿಸಲು ಆಷಾಢದಲ್ಲಿನ ವಿಶೇಷ ಆಚರಣೆಗಳನ್ನು ರೂಢಿಸಬೇಕು. ಇಂತಹ ಸಂಸ್ಕೃತಿ ರಕ್ಷಣೆ ಎಲ್ಲರ ಹೊಣೆಯಾಗಬೇಕು. ನಮ್ಮ ಅಮ್ಮ ಆಷಾಢದ ಪ್ರಾಕೃತಿಕ ಸೊಬಗನ್ನು ನಮ್ಮಲ್ಲಿ ರೂಢಿಸಿ ಅದರ ಮಹತ್ವ ನಮ್ಮಲ್ಲಿ ಬೆಳೆಸಿ ಪೆÇೀಷಿಸಿದ್ದಾರೆ. ಇದನ್ನೇ ನಮ್ಮ ಮಹಿಳೆಯರು ಮುನ್ನಡೆಸಬೇಕು ಎಂದು ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಅಭಿಪ್ರಾಯ ಪಟ್ಟರು.

ಕನ್ನಡ ಸಂಘ ಸಾಂತಾಕ್ರೂಜ್ (ರಿ.) ಇಂದಿಲ್ಲಿ ಬುಧವಾರ ಸಂಜೆ ಬಾಂದ್ರಾ ಪೂರ್ವದ ಖೇರ್‍ವಾಡಿ ಅಲ್ಲಿನ ರಾಜಯೋಗ್ ಸಭಾಗೃಹದಲ್ಲಿ ವಾರ್ಷಿಕ ಆಷಾಢೋತ್ಸವ ಆಚರಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವಿೂನ್ ಮಾತನಾಡಿದರು ಹಾಗೂ ಉಪಸ್ಥಿತ ಶಿಕ್ಷಣ ಪ್ರೇಮಿಗಳೂ, ಸಂಘದ ಪೆÇ್ರೀತ್ಸಹಕರೂ ಆದ ಸದಾನಂದ ಸಫಲಿಗ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ (ಬಿಸಿಸಿಐ) ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಸಾಯಿಕೇರ್ ಸಮೂಹದ ಸುರೇಂದ್ರ ಎ.ಪೂಜಾರಿ, ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಇವರಿಗೆ ಸಂಘದ ಪರವಾಗಿ ಪುಷ್ಪಗುಪ್ಛವನ್ನಿತ್ತು ಅಭಿನಂದಿಸಿದರು.

ಸಂಘದ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಗೋವಿಂದ ಆರ್.ಬಂಗೇರಾ, ಸುಮಾ ಎಂ.ಪೂಜಾರಿ, ಶಾಲಿನಿ ಎಸ್.ಶೆಟ್ಟಿ, ಸಲಹಾ ಸಮಿತಿ ಸದಸ್ಯರಾದ ಬಿ.ಆರ್ ಪೂಂಜಾ, ಎನ್.ಎಂ ಸನೀಲ್, ವಿಶೇಷ ಆಮಂತ್ರಿತ ಸದಸ್ಯರಾದ ವಿಜಯಕುಮಾರ್ ಕೆ.ಕೋಟ್ಯಾನ್, ಉಷಾ ವಿ.ಶೆಟ್ಟಿ, ಹರೀಶ್ ಜೆ.ಪೂಜಾರಿ, ಸುಜತಾ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಮತ್ತು ದೊಡ್ಡಗುತ್ತು ಭುಜಂಗ ಶೆಟ್ಟಿ, ಭೋಜಾ ಎಂ.ಶೆಟ್ಟಿ, ವಿ.ಕೆ ಶೆಟ್ಟಿ (ಟೆಂಡರ್ ಫ್ರೆಶ್), ಸುಜತಾ ಗುಣಪಾಲ್ ಶೆಟ್ಟಿ, ಬಿಸಿಸಿಐ ನಿರ್ದೇಶಕ ಪುರುಷೋತ್ತಮ ಎಸ್.ಕೋಟ್ಯಾನ್, ರತ್ನಾ ಕೆ.ಶೆಟ್ಟಿ, ಪ್ರಮೋದಾ ಎಸ್.ಶೆಟ್ಟಿ ಸೇರಿದಂತೆ ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.

ಪೂರ್ವಜರು ಅನಾನುಕೂಲದ ದೃಷ್ಠಿಯಿಂದ ಶುಭಕಾರ್ಯ ನಿಷೇಧಿಸಿದ್ದರು. ಶಾಸ್ತ್ರದಲ್ಲೇ ಆಷಾಡ ಮಾಸ ಅಶುಭ ಎಂದು ಉಲ್ಲೇಕೆಸಿಲ್ಲ. ಮದುವೆಯ ಮೊದಲ ವರ್ಷದ ಮೊದಲ ಆಷಾಢದಲ್ಲಿ ಅತ್ತೆಸೊಸೆ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎನ್ನುವ ಕಾರಣ ಮತ್ತು ಆಷಾಢದಲ್ಲಿ ಅಧಿಕ ಮಳೆ ಆಗುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆ ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುವುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಹಿಂದೆಯಿತ್ತು ಎನ್ನುವುದಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ಎನ್.ಕೋಟ್ಯಾನ್ ಆಷಾಢ ಬಗ್ಗೆ ಸ್ಥೂಲವಾಗಿ ವಿವರಿಸಿದರು.

ಸುಧಾ ಎಲ್ವೀ ಅವಿೂನ್ ಅವರು ಸಾಂಪ್ರದಾಯಿಕ ಅಮವಾಸ್ಯೆ ಕಷಾಯ ನೀಡಿದÀರು. ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here