Thursday 2nd, May 2024
canara news

ವಿದುಷಿ ಸರೋಜಾ ಶ್ರೀನಾಥ್ ಮತ್ತು ಗೀತಾ ಮಂಜುನಾಥ್‍ರ ಕೃತಿಗಳ ಬಿಡುಗಡೆ

Published On : 28 Jul 2018   |  Reported By : Rons Bantwal


ಸಂಗೀತ ಹಾಡು ಕುಣಿತಗಳ ಮೂಲ ಬೇರು `ಭಾವನೆ' - ಡಾ. ಬಿ. ಆರ್. ಮಂಜುನಾಥ್

ಮುಂಬಯಿ: - ಕಲೆಗಳು ಹುಟ್ಟೋದೇ ಭಾವನೆಯಿಂದ. ಹಾಡು-ಸಂಗೀತ-ಕುಣಿತ... ಇವುಗಳ ಮೂಲ ಬೇರು ನಮ್ಮ ಒಳಗಡೆ ಇದೆ. ನಮ್ಮ ಎದೆ ಬಡಿತ ನಿಮಿಷಕ್ಕೆ ಎಂಭತ್ತು ಬಾರಿ ಬಡಿಯುತ್ತದೆ. ಆ ಬಡಿತವೇ ನಮ್ಮನ್ನು ಕುಣಿಯೋ ಹಾಗೆ ಮಾಡುತ್ತದೆ. ಹಾಡು-ಪಾಡು ಎಂದಾಗ ಆ ತೊಳಲಾಟ ಅಲ್ಲಿ ಸುಖ ದುಃಖ ಎಲ್ಲವೂ ಇರಬಹುದು. ಹೀಗಾಗಿ ಭಾವ ಎನ್ನುವುದು ಎದೆಯಾಳದಿಂದ ಹೊಟ್ಟೆಯಿಂದ ಬರಬೇಕು. ಕರುಳ ಸಂಬಂಧ ಇರಬೇಕು. ಆರ್ಯ ಸಂಸ್ಕøತಿಯಲ್ಲಿ ಎದೆಯೊಳಗೆ ಭಾವನೆ ಇರುತ್ತದೆ. ಅದು ನಾದ. ನಾದದ ಬಡಿತಕ್ಕೆ ಕುಣಿಯಬೇಕು. ಭಾವನೆ ಇರದವರಿಗೆ ಹಾಡು-ಕುಣಿತ ಬರಲಾರದು. ಹಾಗಾಗಿ ಮೂಲ ಬೇರಿಗೆ ನಾವು ಅನು ಸಂಧಾನ ಮಾಡಿಕೊಳ್ಳೋಣ ಎಂದು ಹೆಸರಾಂತ ರಂಗಕರ್ಮಿ, ನೇಸರು ಪತ್ರಿಕೆಯ ಸಂಪಾದಕ ಮಂಡಳಿಯ ಡಾ. ಬಿ.ಆರ್. ಮಂಜುನಾಥ್ ನುಡಿದರು.

ಕನ್ನಡ ವಿಭಾಗ ಮುಂಬಯಿ ವಿ.ವಿ. ಮತ್ತು ಕನಕ ಸಭಾ ಪರ್‍ಫಾರ್ಮಿಂಗ್ ಆಟ್ರ್ಸ್ ಸೆಂಟರ್ ಚೆಂಬೂರ್ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 14 ರಂದು ಮಧ್ಯಾಹ್ನ ಚೆಂಬೂರ್‍ನ ಆರ್.ಸಿ.ಎಫ್. ಅಕಾಡೆಮಿ ಹಾಲ್ (ಫೈನ್ ಆಟ್ರ್ಸ್ ಸೊಸೈಟಿ, ಚೆಂಬೂರ್) ಇಲ್ಲಿ ಜರಗಿದ ಮೂರು ಕೃತಿಗಳ ಬಿಡುಗಡೆ ಮತ್ತು ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಮಂಜುನಾಥ್ ಅವರು ವಿದುಷಿ ಸರೋಜಾ ಶ್ರೀನಾಥ್ ರಚಿಸಿದ `ಸಂಗೀತ, ಸಾಹಿತ್ಯ, ಅನುಸಂಧಾನ' ಮತ್ತು `ಜಗದಗಲ ಕುತೂಹಲ' ಎಂಬೆರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಭಾವನೆ ಹೊರ ಹಾಕಿದಾಗ ಅದು ಹಾಡು ಆಗುವುದು. ದಾಸ ಕೀರ್ತನೆ ಗಳಲ್ಲಿ ಬರುವಂತೆ ಭಾವನೆಯೇ ಭಗವಂತ. ಭಾವನೆಯನ್ನು ಬಿಟ್ಟು ಹಾಡು-ಕುಣಿತಗಳಿಲ್ಲ. ಹೃದಯ ಬಡಿತಕ್ಕೆ ಹಾಡಬೇಕು. ಕಸರತ್ತು ಭಾವನೆ ಅಲ್ಲ, ಇಂದಿನ ಹಲವು ಟೀಚರ್‍ಗಳು ಕೆಲವೊಮ್ಮೆ ಕಸರತ್ತು ಮಾಡ್ತಾರೆ. ಎದೆಯೊಳಗಿಂದ ಬಂದಾಗ ಮಾತ್ರ ಅದು ನಿಜವಾದ ಕಲೆಯಾಗುವುದು. ಹೆಜ್ಜೆ ಸದ್ದು ಕೇಳಬಾರದು, ಇಂಪು ನೀಡುವ ಗೆಜ್ಜೆ ಸದ್ದು ಕೇಳಬೇಕು. ಅದೇ ನೃತ್ಯದ ಮೊದಲ ಪಾಠ. ಬೇರು ಭಾವನೆ. ಈ ಮಿಡಿತದಿಂದ ದೂರ ಹೋಗ ಬಾರದು ಎಂದು ಮಂಜುನಾಥ್ ಇಲ್ಲಿ ಆಶಿಸಿದರು.

ಇದೇ ವೇದಿಕೆಯಲ್ಲಿ ಮುಂಬಯಿ ವಿ.ವಿ. ಕನ್ನಡ ವಿಭಾಗ ಪ್ರಕಟಿಸಿದ ಗೀತಾ ಮಂಜುನಾಥ್ ರಚಿಸಿದ `ಕಲಾ ಸೌರಭ ಸರೋಜಾ ಶ್ರೀನಾಥ್' ಕೃತಿಯನ್ನು ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಕಾರ್ಯದರ್ಶಿ, ರಂಗ ನಿರ್ದೇಶಕ ಡಾ. ಭರತ್‍ಕುಮಾರ್ ಪೆÇಲಿಪು ಬಿಡುಗಡೆಗೊಳಿಸಿದರು.

ಅಧ್ಯಕ್ಷತೆಯನ್ನು ಕನ್ನಡ ವಿಭಾಗ ಮುಂಬಯಿ ವಿ.ವಿ. ಇದರ ಮುಖ್ಯಸ್ಥ ಡಾ.ಜಿ.ಎನ್. ಉಪಾಧ್ಯ ವಹಿಸಿ ದ್ದರು. ಕಲೆ, ಸಾಹಿತ್ಯ, ಸಂಗೀತ ಇವೆಲ್ಲವೂ ಬದುಕನ್ನು ಸಮೃದ್ಧ ಗೊಳಿಸಲು ಸಹಾಯಕವಾಗಿದೆ. ಇವುಗಳ ಸಂಸರ್ಗದಿಂದ ಬದುಕು ಸಹ್ಯವಾಗುತ್ತದೆ. ವಿದುಷಿ ಸರೋಜಾ ಶ್ರೀನಾಥ್, ಮಗಳು ಡಾ. ಸಿರಿರಾಮ ಅವರ ಸಾಧನೆ ನಾಡಿಗೆ ಮಾದರಿ ಯಾಗಿದೆ. ಸರೋಜಾ ಶ್ರೀನಾಥ್ ಅವರದ್ದು ಬಹು ಬಗೆಯ ವ್ಯಕ್ತಿತ್ವ. ಅವರ ಎರಡು ಕೃತಿಗಳ ಜೊತೆ ಗೀತಾ ಮಂಜುನಾಥ್ ರಚಿಸಿದ ಸರೋಜಾ ಶ್ರೀನಾಥ್‍ರ ಜೀವನ ಸಾಧನೆಯ ಕೃತಿ ಇಂದು ಬಿಡುಗಡೆಗೊಂಡಿರುವುದು ಸಂತೋಷವಾಗಿದೆ. ಕನ್ನಡ ವಿಭಾಗ ಈಗ ನಲುವತ್ತರ ಸಂಭ್ರಮದಲ್ಲಿದೆ. ವಿಭಾಗ ತನ್ನ ಚಲನಶೀಲತೆಯನ್ನು ಕಾಯ್ದುಕೊಂಡಿದೆ. ಇಂದಿನ ಕೃತಿಗಳ ಬಿಡುಗಡೆ, ನೃತ್ಯ ಸಂಭ್ರಮ ಇದಕ್ಕೆ ಸಾಕ್ಷಿಯಾಗಿದೆ ಎಂದರು ಉಪಾಧ್ಯ.

ಡಾ. ಭರತ್‍ಕುಮಾರ್ ಪೆÇಲಿಪು ಅವರು ಗೀತಾ ಮಂಜುನಾಥ್ ರಚಿತ `ಕಲಾಸೌರಭ ಸರೋಜಾ ಶ್ರೀನಾಥ್' ಕೃತಿ ಬಿಡುಗಡೆಗೊಳಿಸಿ ಮಾತ ನಾಡುತ್ತಾ ಕನ್ನಡ ನಾಡಿನಿಂದ ಬಂದ ವರಿಗೆ ಇಲ್ಲಿ (ಮುಂಬಯಿ ಆಗಲಿ, ಸಿಂಗಾಪುರ ಆಗಲಿ). ಪರಕೀಯ ಪ್ರಜ್ಞೆ ಕಾಡಿದಾಗ ಇದರಿಂದ ವಿಮುಖರಾಗಲು ಲೇಖನಗಳನ್ನು ಬರೆಯುವ ಮೂಲಕ ಪರಕೀಯ ಪ್ರಜ್ಞೆಯಿಂದ ಹೊರ ಬರುವ ಪ್ರಯತ್ನ ಮಾಡುತ್ತಾರೆ. ಸರೋಜಾ ಶ್ರೀನಾಥ್ ಕೂಡಾ ತಮ್ಮ ಬರಹಗಳಿಂದ ಖ್ಯಾತರಾದವರು. ಅವರ ಗ್ರಹಿಕೆಯ ವ್ಯಾಪ್ತಿ ಬಹಳ ವಿಶಾಲವಾದುದು ಎಂದು ಶ್ಲಾಘಿ ಸುತ್ತಾ ಗೀತಾ ಮಂಜುನಾಥ್‍ರು ಈ ಕೃತಿಯಲ್ಲಿ ಸರೋಜಾ ಅವರ ಸಾಧನೆ ಗಳನ್ನು ಸಮರ್ಪಕವಾಗಿ ತಿಳಿಸಿದ್ದಾರೆ ಎಂದರು. ಕಲೆ-ಸಾಹಿತ್ಯ ನಮ್ಮಲ್ಲಿನ ಅಹಂಕಾರ ಅಳಿಸಿ ಪ್ರೀತಿಯನ್ನು ಹುಟ್ಟಿಸುತ್ತದೆ. ಸಂಬಂಧಗಳು ವಿಘಟನೆಗೊಳ್ಳುವ ಈ ಕಾಲದಲ್ಲಿ ಸಂಬಂಧ ಮೂಡಿಸುವುದು ಕಲೆ ಸಾಹಿತ್ಯ ಮಾತ್ರ ಎಂದರು ಡಾ. ಭರತ್.

ಸರೋಜಾ ಶ್ರೀನಾಥ್ ಅವರ `ಜಗದಗಲ ಕುತೂಹಲ' ಮತ್ತು `ಸಂಗೀತ ಸಾಹಿತ್ಯ ಅನುಸಂಧಾನ' ಕೃತಿಗಳನ್ನು ಪರಿಚಯಿಸಿದ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಯವರು ಇಲ್ಲಿನ ಲೇಖನಗಳೆಲ್ಲ ಹೃದಯದಿಂದ ಬಂದಿರುವ ಮಾತು ಗಳೇ ಆಗಿವೆ. ಹಲವು ಲೇಖನಗಳ ನಡುವೆ ಉಪಕತೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಕ್ರಮವನ್ನು ಅಲ್ಲಲ್ಲಿ ಅನುಸರಿಸಿದ್ದಾರೆ. ಹೊಸ ವಿಷಯಗಳ ಜ್ಞಾನ ಸರೋಜಾ ಶ್ರೀನಾಥ್ ಲೇಖನಗಳಲ್ಲಿ ಸಿಗುವುದು ಎಂದರು.

ಮುಖ್ಯ ಅತಿಥಿ ಸಂಘಟಕ, ಕತೆಗಾರ ಓಂದಾಸ್ ಕಣ್ಣಂಗಾರ್ ಮಾತನಾಡುತ್ತಾ, ವಿದುಷಿ ಸರೋಜಾ ಶ್ರೀನಾಥ್ ಬಹುಮುಖ ಪ್ರತಿಭಾವಂತರು. ಕರ್ನಾಟಕ ಸಂಘದ ಜೊತೆ ನಂಟು ಇರಿಸಿದ ವರು. ಗಹನವಾದಂತಹ ಹೊಸ ಹೊಸ ವಿಷಯಗಳ ಬಗ್ಗೆ ಸದಾ ಕುತೂಹಲ ಹೊಂದಿದ್ದು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡ ವರು. ಗೀತಾ ಮಂಜುನಾಥ್ ತಮ್ಮ `ಕಲಾ ಸೌರಭ ಸರೋಜಾ ಶ್ರೀನಾಥ್' ಕೃತಿಯಲ್ಲಿ ಸರಳ ಭಾಷೆಯ ಮೂಲಕ ಬಹಳ ಸಮರ್ಥವಾಗಿ ಸರೋಜಾ ಶ್ರೀನಾಥ್‍ರ ಬದುಕನ್ನು ಕಟ್ಟಿಕೊಟ್ಟಿ ದ್ದಾರೆ ಎಂದರು.

`ಅಕ್ಷಯ' ಸಂಪಾದಕ ಡಾ. ಈಶ್ವರ ಅಲೆವೂರು ಮಾತನಾಡಿ ನಾವು ಭಾರತೀಯರು ವಿದೇಶೀ ಸಂಸ್ಕøತಿ ಯತ್ತ ಆಸಕ್ತರಾಗುತ್ತಿದ್ದರೆ, ಅತ್ತ ವಿದುಷಿ ಸರೋಜಾ ಶ್ರೀನಾಥ್ ಸಿಂಗಾಪುರದಲ್ಲಿದ್ದೂ ಭಾರತೀಯ ಸಂಸ್ಕøತಿಯನ್ನು ಅನುಸರಿಸುತ್ತಿದ್ದಾರೆ. ಕಲಾವಿದರನ್ನು ಲೇಖನಗಳ ಮೂಲಕ ಪರಿಚಯಿಸುವುದು ನಮಗೆ ಆ ದಿನಗಳಲ್ಲಿ ಪ್ರಮುಖ ಕೆಲಸ ಆಗಿತ್ತು. ಅಂತಹ ಕಲಾವಿದರಲ್ಲಿ ನಮಗೆ ಪರಿಚಯವಾದವರು ಸರೋಜಾ ಶ್ರೀನಾಥ್. ಇಂದು ಅವರ ಸಾಧನೆಗಳ ಕುರಿತಂತೆ ಕೃತಿ ಬಂದಿದೆ. ಮುಂದೆ ಅವರ ಆತ್ಮಚರಿತ್ರೆ ಬರಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ರಂಗಕರ್ಮಿ ಮಂಜುನಾಥಯ್ಯ ಮಾತನಾಡುತ್ತಾ ಕರ್ನಾಟಕ- ಕನ್ನಡಿಗರು ಕಲೆ-ಸಾಹಿತ್ಯ-ಸಂಗೀತ ಸಂಸ್ಕøತಿಯನ್ನು ಬೆಳೆಸಿದರು. ಆದರೆ ಇಂದು ಮೂಲ ಸಂಸ್ಕøತಿಯನ್ನು ತೊಡೆಯುವ ಕೆಲಸ ಆಗುತ್ತಿದೆ. ನಾವು ನಮ್ಮ ಮಕ್ಕಳನ್ನು ಈ ಸಂಸ್ಕøತಿ ಯತ್ತ ಸೆಳೆಯಬೇಕಾಗಿದೆ. ನಮ್ಮ ಜನರಿಗೆ ನಮ್ಮ ಸಂಸ್ಕøತಿಯ ಬಗ್ಗೆ ಅನಾದರಣೆ ಬೆಳೆಯಬಾರದು. ಸರೋಜಾ ಶ್ರೀನಾಥ್‍ರಿಗೆ ಕಲೆ- ಸಾಹಿತ್ಯ-ಸಂಗೀತದಲ್ಲಿ ಆಸಕ್ತಿ ಇದ್ದುದರಿಂದ ತಮ್ಮ ಮಕ್ಕಳನ್ನೂ ತೊಡಗಿಸಿಕೊಳ್ಳಲು ಪ್ರೇರೇಪಿ ಸಿದರು. ಇಂತಹ ಪ್ರೇರಣೆ ಎಲ್ಲೆಡೆಯೂ ಹರಡಲಿ ಎಂದು ಆಶಿಸಿದರು.

`ಕಲಾ ಸೌರಭ ಸರೋಜಾ ಶ್ರೀನಾಥ್' ಕೃತಿಯನ್ನು ಪರಿಚಯಿಸಿದ ವಿ.ವಿ. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ಮಾತನಾಡುತ್ತಾ, ಗೀತಾ ಅವರು ಸರೋಜಾ ಶ್ರೀನಾಥ್‍ರ ಜೀವನದ ಹಲವು ಮಹತ್ವದ ಘಟ್ಟ ಗಳನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಸರೋಜಾ ಅವರು ಬೆಳೆದು ಬಂದ ಸಾಂಸ್ಕøತಿಕ ಪರಿಸರ, ಪೆÇ್ರೀತ್ಸಾಹ ನೀಡುತ್ತಿದ್ದ ಪರಿವಾರ... ಹೀಗೆ ವ್ಯಕ್ತಿತ್ವ ಅರಳಿದ ಬಗೆಯನ್ನು ಸುಂದರ ವಾಗಿ ಚಿತ್ರಿಸಿದ್ದಾರೆ. ಗೀತಾ ನಡೆಸಿದ ಸಂದರ್ಶನವೂ ಅರ್ಥವತ್ತಾಗಿದೆ ಎಂದರು.

ಕೃತಿಕಾರರಾದ ವಿದುಷಿ ಸರೋಜಾ ಶ್ರೀನಾಥ್ ಮಾತಾಡಿ ತನ್ನ ಜೀವನದಲ್ಲಿ ಗೊತ್ತಿಲ್ಲದೆಯೇ ಏನೇನೋ ಆಗುತ್ತಾ ಬಂದಿದೆ. ಅದರಲ್ಲಿ ಈ ಪುಸ್ತಕ ಬಿಡುಗಡೆಯೂ ಸೇರಿಕೊಂಡಿರುವುದು. ತನ್ನ ಈ ತನಕದ ನಾಲ್ಕು ಕೃತಿಗಳನ್ನೂ ಅಭಿಜಿತ್ ಪ್ರಕಾಶನವೇ ತಂದಿರು ವುದು ಸಂತೋಷ ತಂದಿದೆ. ನನ್ನದು ಮಾತ್ರವಲ್ಲ, ಎಲ್ಲರೂ ಇತರರ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಒಳ್ಳೆಯದಾಗಲಿ, ಪ್ರಪಂಚದಲ್ಲಿ ಶಾಂತಿ ನೆಲೆಸಲಿ ಎಂದರು.

ಇನ್ನೋರ್ವ ಕೃತಿಕಾರರಾದ ಗೀತಾ ಮಂಜುನಾಥ್ ಮಾತನಾಡಿ ತಾನು ಬರಹಗಾರ್ತಿಯಾಗುವುದ ಕ್ಕಿಂತಲೂ ಉತ್ತಮ ಓದುಗಳಾಗಿ ಇರಲು ಇಷ್ಟಪಟ್ಟವಳು. ಕನ್ನಡ ಕಲಿಕಾ ತರಗತಿಯಲ್ಲಿ ತಾನು ಕೆಲವು ಶಬ್ದಗಳ ಅರ್ಥಕ್ಕಾಗಿ ತೊಡಕುಗಳು ಎದುರಿಸಿದ್ದೆ. ಅಲ್ಲಿನ ಅನುಮಾನ ಗಳನ್ನು ಬಗೆಹರಿಸಲು ಭಾಷೆ- ಸಾಹಿತ್ಯದ ಅಧ್ಯಯನಕ್ಕಾಗಿ ವಿ.ವಿ. ಕನ್ನಡ ವಿಭಾಗ ಸೇರಿಕೊಂಡಿದ್ದೆ. ಅಲ್ಲಿ ನಾನು ಹೊಸತಾದ ಜಗತ್ತನ್ನು ಕಂಡು ಕೊಂಡೆ. ಮುಂಬಯಿಯ ಸಾಹಿತ್ಯಾಸಕ್ತರು, ಕನ್ನಡಾಸಕ್ತರು ನನ್ನ ಆಸಕ್ತಿ ಹೆಚ್ಚಿಸಿದ್ದಾರೆ ಎಂದರು.

`ಜಗದಗಲ ಕುತೂಹಲ' ಮತ್ತು `ಸಂಗೀತ-ಸಾಹಿತ್ಯ-ಅನುಸಂಧಾನ' ಕೃತಿಗಳನ್ನು ಅಭಿಜಿತ್ ಪ್ರಕಾಶನ ಪ್ರಕಟಿಸಿದರೆ, `ಕಲಾಸೌರಭ ಸರೋಜಾ ಶ್ರೀನಾಥ್' ಕೃತಿಯನ್ನು ಮುಂಬಯಿ ಕನ್ನಡ ವಿಭಾಗ ಪ್ರಕಟಿಸಿದೆ.

ಸ್ವಾಗತ ಪ್ರಾಸ್ತಾವಿಕ ನುಡಿಗಳನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಆಡಿದರು. ಡಾ. ಸಿರಿರಾಮ ಮತ್ತು ಡಾ.ಜಿ.ಎನ್. ಉಪಾಧ್ಯ ವೇದಿಕೆಯ ಗಣ್ಯರನ್ನು ಗೌರವಿಸಿದರು. ಶ್ಯಾಮಲಾ ರಾಧೇಶ್ ಪ್ರಾರ್ಥನೆ ಹಾಡಿದರು. ನಳಿನಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿ ದರು. ಅನಿತಾ ಶೆಟ್ಟಿ ವಂದಿಸಿದರು.

ಆರಂಭದಲ್ಲಿ ಕನಕ ಸಭಾ ಪರ್‍ಫಾರ್ಮಿಂಗ್ ಆಟ್ರ್ಸ್, ಚೆಂಬೂರ್ ಇದರ ವಿದ್ಯಾರ್ಥಿ ಗಳಿಂದ ಡಾ. ಸಿರಿ ರಾಮ ನಿರ್ದೇಶನ ದಲ್ಲಿ ವಿವಿಧ ನೃತ್ಯ ಕಾರ್ಯಕ್ರಮಗಳು ಜರಗಿದವು. ಮೈಸೂರು, ಬೆಂಗಳೂರಿ ನಿಂದ ಈ ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಕನ್ನಡ ವಿಭಾಗದ ಸಂಶೋಧನ ಸಹಾಯಕರಾದ ಸುರೇಖಾ ದೇವಾಡಿಗ, ಕುಮುದಾ ಆಳ್ವ, ಅನಿತಾ ಶೆಟ್ಟಿ ಸಹಕರಿಸಿದರು.

 

 




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here